id
stringlengths
3
6
url
stringlengths
33
779
title
stringlengths
1
95
text
stringlengths
3
190k
802
https://kn.wikipedia.org/wiki/%E0%B2%B6%E0%B2%BF%E0%B2%B5%E0%B2%AE%E0%B3%8A%E0%B2%97%E0%B3%8D%E0%B2%97
ಶಿವಮೊಗ್ಗ
ಶಿವಮೊಗ್ಗ ಭಾರತ ದೇಶದ ಕರ್ನಾಟಕ ರಾಜ್ಯದ ಒಂದು ನಗರ (ಸಂಪರ್ಕ : ೧೩.೫೬ ಉ /೭೫.೩೮ ಪೂ). ಇದು ಕರ್ನಾಟಕದ ರಾಜಧಾನಿಯಾದ ಬೆಂಗಳೂರು ನಗರದಿಂದ ೨೬೬ ಕಿ.ಮೀ. ದೂರದಲ್ಲಿದೆ. ಶಿವಮೊಗ್ಗ ಮಹಾನಗರವು ಈ ಜಿಲ್ಲೆಯ ರಾಜಧಾನಿಯಾಗಿದೆ. ಶಿವಮೊಗ್ಗ ಜಿಲ್ಲೆ ಕರ್ನಾಟಕದ ನಿಸರ್ಗಭರಿತ ಮಲೆನಾಡಿನ ಒಂದು ಭಾಗವಾಗಿದೆ. ಸಹ್ಯಾದ್ರಿ ಪರ್ವತಶ್ರೇಣಿ ಮತ್ತು ಅಲ್ಲಿ ಉಗಮಗೊಳ್ಳುವ ನದಿ-ಉಪನದಿಗಳು ಶಿವಮೊಗ್ಗಕ್ಕೆ ಯಥೇಚ್ಛ ನೈಸರ್ಗಿಕ ಸೌಂದರ್ಯವನ್ನು ತಂದುಕೊಟ್ಟಿವೆ. ಶಿವಮೊಗ್ಗದಿಂದ ೧೧೩ ಕಿಮೀ ದೂರದಲ್ಲಿರುವ ಜಗತ್ಪ್ರಸಿದ್ಧ ಜೋಗದ ಜಲಪಾತ ಪ್ರಕೃತಿಯ ಒಂದು ಅಪೂರ್ವ ದೃಶ್ಯ. ಇಲ್ಲಿ ಶರಾವತಿ ನದಿ ೨೩೫ ಮೀ ಎತ್ತರದಿಂದ ಸುಮನೋಹರವಾಗಿ ಧುಮುಕುತ್ತದೆ. ರಾಜ, ರಾಣಿ, ರೋರರ್ ಮತ್ತು ರಾಕೆಟ್ ಎಂಬ ನಾಲ್ಕು ವಿಭಿನ್ನ ಪ್ರವಾಹಗಳಾಗಿ ಧುಮುಕುವ ಶರಾವತಿ ಏಷ್ಯದ ಅತಿ ಎತ್ತರದ ಜಲಪಾತವನ್ನು ನಿರ್ಮಿಸಿದೆ. ಮಳೆಗಾಲದ ಸಮಯದಲ್ಲಿ ಕಾಮನ ಬಿಲ್ಲುಗಳನ್ನು ನಿರ್ಮಿಸಿಕೊಂಡು ಅತ್ಯದ್ಭುತ ದೃಶ್ಯವನ್ನು ಜಲಪಾತ ಪ್ರದರ್ಶಿಸುತ್ತದೆ. ತುಂಗಭದ್ರಾ, ಶರಾವತಿ, ಕುಮುದ್ವತಿ ಮತ್ತು ಇತರ ನದಿಗಳಿಂದ ಜಲಸರಬರಾಜಿನ ಸೌಕರ್ಯವುಳ್ಳ ಶಿವಮೊಗ್ಗ ಜಿಲ್ಲೆ ಕರ್ನಾಟಕದ ಅನ್ನದ ಬಟ್ಟಲು ಎನ್ನಿಸಿಕೊಂಡಿದೆ. ಚರಿತ್ರೆ ಶಿವಮೊಗ್ಗ ಎಂಬ ಹೆಸರು 'ಶಿವ-ಮುಖ' ಎಂಬ ಪದಪುಂಜದಿಂದ ಬಂದದ್ದು. ಇನ್ನೊಂದು ವ್ಯುತ್ಪತ್ತಿಯಂತೆ ಇದು 'ಸಿಹಿ-ಮೊಗೆ' (ಸಿಹಿಯಾದ ಮೊಗ್ಗು) ಎಂದಿದ್ದು ಅದು 'ಶಿವಮೊಗ್ಗ'ವಾಗಿ ಮಾರ್ಪಾಟುಹೊಂದಿದೆ.ಈ ಪ್ರದೇಶವು ಕ್ರಿ.ಪೂ. ೩ನೇ ಶತಮಾನದಲ್ಲಿ ಸಾಮ್ರಾಟ್ ಅಶೋಕನ ಮೌರ್ಯ ಸಾಮ್ರಾಜ್ಯದ ದಕ್ಷಿಣದ ತುದಿಯಾಗಿದ್ದಿತು. ಮುಂದಿನ ಶತಮಾನಗಳಲ್ಲಿ ಅನೇಕ ರಾಜಮನೆತನಗಳ ಆಳ್ವಿಕೆಯಲ್ಲಿ ಈ ಪ್ರದೇಶ ಇದ್ದಿತು: ೪ನೇ ಶತಮಾನದಲ್ಲಿ ಕದಂಬರು, ೬ನೇ ಶತಮಾನದಲ್ಲಿ ಚಾಲುಕ್ಯರು ಮತ್ತು ಅವರ ಸಾಮಂತರಾದ ಗಂಗರು, ೮ನೇ ಶತಮಾನದಲ್ಲಿ ರಾಷ್ಟ್ರಕೂಟರು, ೧೧ನೇಯದರಲ್ಲಿ ಹೊಯ್ಸಳರು ಮತ್ತು ೧೫ನೇ ಶತಮಾನದಲ್ಲಿ ವಿಜಯನಗರದ ಅರಸರು ಈ ಪ್ರದೇಶವನ್ನು ಆಳಿದೆ ರಾಜಮನೆತನಗಳಲ್ಲಿ ಪ್ರಮುಖರು. ಶಿವಮೊಗ್ಗ ನಗರಕ್ಕೆ ಸ್ವತಂತ್ರ ವ್ಯಕ್ತಿತ್ವ ಬಂದದ್ದು ೧೬ನೇ ಶತಮಾನದ ಕೆಳದಿ ನಾಯಕರ ಆಳ್ವಿಕೆಯಲ್ಲಿ. ೧೭ನೇ ಶತಮಾನದ ನಂತರ ಭಾರತ ಸ್ವಾತಂತ್ರ್ಯದ ವರೆಗೂ ಶಿವಮೊಗ್ಗ ಮೈಸೂರು ಸಂಸ್ಥಾನದ ಭಾಗವಾಗಿತ್ತು. ಪ್ರವಾಸೀ ತಾಣಗಳು ಜೋಗದ ಜಲಪಾತ ಚಂದ್ರಗುತ್ತಿ "ಶ್ರೀ ರೇಣುಕಾಂಬ ದೇವಸ್ಥಾನ" ಮತ್ತು ಕೋಟೆ ​​ ೧೨ನೇ ಶತಮಾನದ ಲಕ್ಷ್ಮೀ ನರಸಿಂಹ ಸ್ವಾಮೀ ದೇವಸ್ಥಾನ, ಭದ್ರಾವತಿ ಲಿಂಗನಮಕ್ಕಿ ಅಣೆಕಟ್ಟು ಒನಕೆ-ಅಬ್ಬೆ ಜಲಪಾತ ಭದ್ರಾ ನದಿ ಯೋಜನೆ, ಲಕ್ಕವಳ್ಳಿ ತು೦ಗಾ ನದಿ ಯೋಜನೆ, ಗಾಜನೂರು ಅಣೆಕಟ್ಟು ಆಗುಂಬೆ ಮಂಡಗದ್ದೆ ಪಕ್ಷಿದಾಮ. ಅ೦ಬುತೀರ್ಥ, ಶರಾವತಿಯ ಉಗಮ ಸ್ಥಾನ ಕು೦ದಾದ್ರಿ ಬೆಟ್ಟ ಕುಪ್ಪಳ್ಳಿಯ ಕವಿಶೈಲ ಕೋಟೆ ಶ್ರೀ ಸೀತಾರಾಮಾ೦ಜನೇಯ ಸ್ವಾಮಿ ದೇವಸ್ಥಾನ, ಶಿವಮೊಗ್ಗ ಕೂಡ್ಲಿ - ತುಂಗಾ ಮತ್ತು ಭದ್ರಾ ನದಿಗಳ ಸಂಗಮ ಆಗುವ ಸ್ಠಳ ಹಿಡ್ಲುಮನೆ ಜಲಪಾತ (ನಿಟ್ಟೂರು) ದಬ್ಬೆ ಜಲಪಾತ ಚೀಲನೂರು ಗ್ರಾಮದ ಜೋಗದ ಜಲಪಾತ ಕೊಡಚಾದ್ರಿ ಬೆಟ್ಟ ಶಿವಪ್ಪನಾಯಕನ ಕೋಟೆ (ಬಿದನೂರು ನಗರ) ಸಿಗಂದೂರು ತಾವರೆ ಕೊಪ್ಪದ ಸಿಂಹ ಧಾಮ ಚೀಲನೂರು ಸೊರಬ ತಾಲ್ಲೂಕು ಸೊರಬ ತಾಲ್ಲೂಕಿನಲ್ಲಿರುವ ಗುಡವಿ ಪಕ್ಷಿಧಾಮ (ಕರ್ನಾಟಕದ ೨ನೇ ಅತಿದೊಡ್ಡ ಪಕ್ಷಿಧಾಮ) ಕವಲೇದುರ್ಗ ಕೋಟೆ ಕೆಳದಿ ಕೋಟೆ ಸಕ್ರೇಬೈಲು ಬಿಡಾರ ಆನೆಗಳ ಬಿಡಾರ ಕೊಡಚಾದ್ರಿ ಬೆಟ್ಟ ವರದಹಳ್ಳಿ ಶ್ರೀಧರ ಆಶ್ರಮ, ಶ್ರೀ ದುರ್ಗಾಂಬಾ ದೇವಾಲಯ ವಿಮಾನ ನಿಲ್ದಾಣ ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿ ೨೦೧೧ರಲ್ಲಿ ಪ್ರಾರಂಭವಾಯಿತು. ಗುತ್ತಿಗೆದಾರರು ಮತ್ತು ಪಾಲುದಾರರ ಜೊತೆ ಅಭಿಪ್ರಾಯಭೇದ ತಲೆದೋರಿ ಕೆಲಸವು ೨೦೧೫ರಲ್ಲಿ ನಿಂತುಹೋಯಿತು. ೨೦೨೦ರಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ಕಾಮಗಾರಿ ಆರಂಭಕ್ಕೆ ಅನುಮೋದನೆ ನೀಡಿದರು. ೨೮ ಫೆಬ್ರವರಿ ೨೦೨೩ರಂದು ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆಗೊಂಡಿತು. ಕುವೆಂಪು ವಿಶ್ವವಿದ್ಯಾನಿಲಯ ಕುವೆಂಪು ವಿಶ್ವವಿದ್ಯಾನಿಲಯವು ಶಿವಮೊಗ್ಗದಿ೦ದ ೨೭ ಕಿ.ಮಿ, ಶಿವಮೊಗ್ಗದಿಂದ ಭದ್ರಾ ಅಣೆಕಟ್ಟೈಗೆ (ಬಿ.ಆರ್.ಪಿ) ಗೆ ಹೋಗುವ ಮಾರ್ಗದಲ್ಲಿ ಶಂಕರ ಘಟ್ಟ ದಲ್ಲಿದೆ. ಶಿವಮೊಗ್ಗ ಜಿಲ್ಲೆಯ ಪ್ರಸಿಧ್ಹ ಸಾಹಿತಿ ಕೆ. ವಿ. ಪುಟ್ಟಪ್ಪ (ಕುವೆಂಪು) ರವರ ಸ್ಮರಣಾರ್ಥ್ಹ ವಾಗಿ ಈ ವಿಶ್ವ ವಿದ್ಯಾನಿಲಯಕ್ಕೆ ಅವರ ಹೆಸರನ್ನು ಇಡಲಾಗಿದೆ. ಗಿರಿ-ಶಿಖರಗಳು ಆಗುಂಬೆ, ಸೂರ್ಯಾಸ್ತಕ್ಕೆ ವಿಶ್ವಪ್ರಸಿದ್ದ ಕೊಡಚಾದ್ರಿ ಕುಂದಾದ್ರಿ ಬೆಟ್ಟ. ~ಜೈನ ಕ್ಷೇತ್ರ ಬರೆಕಲ್ ಬತೆರಿ ನಿಶಾನೆ ಗುಡ್ಡ ಹೆದ್ದಾರಿಖಾನ್ ಮೊಳಕಾಲ್ಮುರಿ ಗುಡ್ಡ ಜೊಗಿ ಗುಡ್ಡ ಮುಪ್ಪಾನೆ ನದಿಗಳು ತುಂಗಾ ಭದ್ರಾ ಶರಾವತಿ ಕುಮುದ್ವತಿ ವೇದಾವತಿ ವರದ ನದಿ ಕುಶಾವತಿ ದ೦ಡಾವತಿ ನದಿ ಮಾಲತಿ ಸೀತಾ ಚರಿತ್ರೆ ಮತ್ತು ಧರ್ಮ ಕೆಳದಿ-ಇಕ್ಕೇರಿ, ಕೆಳದಿ ನಾಯಕರ ರಾಜಧಾನಿಗಳು. ಸಾಗರ ತಾಲ್ಲೂಕು ನಗರ, ಬಿದನೂರು ಸಂಸ್ಥಾನದ ರಾಜಧಾನಿ ಬಳ್ಳಿಗಾವಿಯ ಕೇದಾರೇಶ್ವರ ದೇವಾಲಯ ಶಿವಪ್ಪ ನಾಯಕನ ಅರಮನೆ ಸೇಕ್ರೆಡ್ ಹಾರ್ಟ್ ಚರ್ಚ್, ಭಾರತದಲ್ಲಿ ಎರಡನೆ ಅತಿ ದೊಡ್ಡ ಚರ್ಚ್ ಕವಲೇದುರ್ಗದ ಕೋಟೆ, ಕೆಳದಿ ಸಂಸ್ಥಾನದ ರಾಜಧಾನಿ. ಈಗ ಕೋಟೆಯ ಪಳಯುಳಿಕೆ ಮಾತ್ರ ಇದೆ. ತೀರ್ಥಹಳ್ಳಿ ತಾಲ್ಲೂಕಿನ ಬೆಟ್ಟಬಸರವಾನಿ ಮತ್ತು ಮರಹಳ್ಳಿ ಗ್ರಾಮಗಳಲ್ಲಿ ಜೈನ ಸಂಪ್ರದಾಯದ ಪಳಿಯುಳಿಕೆ ಇವೆ. ಹೊಸನಗರ ತಾಲ್ಲೂಕಿನ ಹುಂಚ ಗ್ರಾಮದಲ್ಲಿ ಜೈನ ಸಂಪ್ರದಾಯದ ಮಠ ಮತ್ತು ಪದ್ಮಾವತಿ ದೇವಿಯ ದೇವಸ್ಥಾನವಿದೆ ಹಣಗೇರೆಕಟ್ಟೆ ಹಿಂದು ಮುಸ್ಲಿಂ ಧರ್ಮಗಳ ಪವಿತ್ರ ಸ್ಥಳವಾಗಿದೆ. ನಾಡಕಲಸಿ ಸಾಗರ ತಾಲ್ಲೂಕು; ಪ್ರಾಚೀನ ದೇವಾಲಯ ಉರುಗನಹಳ್ಳಿ- ಸೊರಬ ತಾಲ್ಲೂಕು - ಶಿವಮೊಗ್ಗ ಜಿಲ್ಲಾ, ಹಿಂದೂ ಮುಸ್ಲಿಂ ಭಾವೈಕ್ಯತೆಯ ಕೇಂದ್ರ ತವನಂದಿ- ಸೊರಬ ತಾಲ್ಲೂಕು - ಕದಂಬರ ಕಾಲದ ಕೋಟೆ ಮೃಗವಧೆ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ,ತೀರ್ಥಹಳ್ಳಿ ಬಳಿ. ಶ್ರೀರಾಮನು ಚಿನ್ನದ ಜಿಂಕೆಯ ರೂಪದಲ್ಲಿ ಬಂದ ಮಾರೀಚನನ್ನು ವಧೆ ಮಾಡಿದ ಸ್ಥಳ. ವನ್ಯಜೀವಿ ತಾವರೆಕೊಪ್ಪ, ಹುಲಿ ಮತ್ತು ಸಿಂಹಧಾಮ ಸಕ್ಕರೆಬೈಲು, ಆನೆ ತರಬೇತಿ ಶಿಬಿರ ಮಂಡಗದ್ದೆ ಪಕ್ಷಿಧಾಮ, ಕುಕ್ಕನ ಗುಡ್ಡಾ, ಗುಡವಿ ಸೊರಬ ತಾಲ್ಲೂಕಿನ ಚೀಲನೂರು ಕಾಡು ನವಿಲುಗಳ ವಾಸಸ್ಥಾನ ಐತಿಹಾಸಿಕ ವ್ಯಕ್ತಿಗಳು ಕೆಳದಿಯ ಚೆನ್ನಮ್ಮಾಜಿ ಅಲ್ಲಮಪ್ರಭು ದೇವರು ಕೆಳದಿ ಶಿವಪ್ಪ ನಾಯಕ ಅಕ್ಕಮಹಾದೇವಿ ಪ್ರಮುಖ ವ್ಯಕ್ತಿಗಳು ರಾಷ್ಟ್ರಕವಿ ಕುವೆಂಪು, ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿ ಮತ್ತು ಲೇಖಕ. ಡಾ.ಎಸ್.ಆರ್. ರಾವ್ (ಶಿಕಾರಿಪುರ ರಂಗನಾಥ ರಾವ್) ಭಾರತದ ಹೆಸರಾಂತ ಪ್ರಾಚ್ಯವಸ್ತುತಜ್ಞ ಯು ಆರ್ ಅನಂತಮೂರ್ತಿ, ಕನ್ನಡ ಲೇಖಕರು ಹಾಗು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಪಿ.ಲಂಕೇಶ್, ಲೇಖಕ-ಪತ್ರಕರ್ತರು ನಾ. ಡಿಸೋಜ, ಸಾಹಿತಿ ಎಮ್.ಕೆ. ಇ೦ದಿರ, ಕಾದ೦ಬರಿಕಾರ್ತಿ ಕೆ.ವಿ.ಸುಬ್ಬಣ್ಣ, ಸಾಹಿತಿ ಮತ್ತು ನಾಟಕಕಾರ ಜಿ. ಎಸ್. ಶಿವರುದ್ರಪ್ಪ, ಕವಿ ಎನ್ ಎಸ್ ಲಕ್ಷ್ಮಿನಾರಾಯಣ ಭಟ್ಟ, ಕವಿ ಗಿರೀಶ್ ಕಾಸರವಳ್ಳಿ, ರಾಷ್ಟ್ರಪ್ರಶಸ್ತಿ ವಿಜೇತ ಸಿನೆಮಾ ನಿರ್ದೇಶಕ ಡಾ.ಟಿ.ಎಂ.ಶಿವಾನಂದಯ್ಯ ಹಿರಿಯ ಆಯುರ್ವೇದ ವೈದ್ಯರು ಸುದೀಪ್, ಚಲನಚಿತ್ರ ನಟ ತಾಲ್ಲೂಕುಗಳು ಜನಸಂಖ್ಯೆ ೨೦೧೧ರ ಜನಗಣತಿಯ ಪ್ರಕಾರ ಉಲ್ಲೇಖಗಳು ಇದನ್ನೂ ನೋಡಿ ಶಿವಮೊಗ್ಗ (ಲೋಕ ಸಭೆ ಚುನಾವಣಾ ಕ್ಷೇತ್ರ) ಹೊರಗಿನ ಸಂಪರ್ಕಗಳು ಶಿವಮೊಗ್ಗ ಗ್ಲೋರಿ ಶಿವಮೊಗ್ಗ ಮಹಾನಗರಪಾಲಿಕೆ ಶಿವಮೊಗ್ಗ ಜಿಲ್ಲಾ ಪಂಚಾಯತ್ ಶಿವಮೊಗ್ಗದ ಬಗ್ಗೆ ಮಾಹಿತಿ ಶಿವಮೊಗ್ಗ ಜಿಲ್ಲೆಯ ನಕ್ಷೆ ಕರ್ನಾಟಕದ ಪ್ರಮುಖ ಸ್ಥಳಗಳು ಕರ್ನಾಟಕದ ಜಿಲ್ಲೆಗಳು
803
https://kn.wikipedia.org/wiki/%E0%B2%AD%E0%B2%BE%E0%B2%B0%E0%B2%A4
ಭಾರತ
ಭಾರತ, ಅಧಿಕೃತವಾಗಿ ಭಾರತ ಗಣರಾಜ್ಯ, ಅಥವಾ ಇಂಡಿಯಾ (India), ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದು, ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಹಾಗೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವವಿರುವ ರಾಷ್ಟ್ರವಾಗಿದೆ. ಭಾರತವು ೧೩೦ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು (೨೦೧೮ ಅಂದಾಜು) ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ. ಆಗ್ನೇಯದಲ್ಲಿ ಬಂಗಾಳ ಕೊಲ್ಲಿ,ದಕ್ಷಿಣದಲ್ಲಿ ಹಿಂದೂ ಮಹಾ ಸಾಗರ, ನೈಋತ್ಯದಲ್ಲಿ ಅರಬ್ಬಿ ಸಮುದ್ರಗಳಿಂದ ಸುತ್ತುವರಿದಿದ್ದು, ಪಶ್ಚಿಮದಲ್ಲಿ ಪಾಕಿಸ್ತಾನ, ಈಶಾನ್ಯದಲ್ಲಿ ಚೀನಾ,ನೇಪಾಳ ಹಾಗೂ ಭೂತಾನ, ಪೂರ್ವದಲ್ಲಿ ಮಯನ್ಮಾರ್ ಹಾಗೂ ಬಾಂಗ್ಲಾದೇಶ ಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ ಶ್ರೀಲಂಕಾ, ಮಾಲ್ಡೀವ್ಸ್ ನಂತಹ ದ್ವೀಪ ರಾಷ್ಟ್ರಗಳಿಗೆ ಹತ್ತಿರವಾಗಿದೆ. ಕೊಳ್ಳುವ ಶಕ್ತಿಯ ಮೇರೆಗೆ, ಪ್ರಪಂಚದ ನಾಲ್ಕನೇ ಅತಿ ದೊಡ್ಡ ಆರ್ಥಿಕ ವ್ಯವಸ್ಥೆಯನ್ನು ಹೊಂದಿದೆ. ಭಾರತ ದೇಶವು ಪ್ರಾಚೀನ ಸಿಂಧೂತಟದ ನಾಗರೀಕತೆಯ ತವರು ಮನೆಯಾಗಿದೆ. ಅನೇಕ ಐತಿಹಾಸಿಕ ವಾಣಿಜ್ಯ ಮಾರ್ಗಗಳು ಹಾಗೂ ಪ್ರಾಚೀನ ಸಾಮ್ರಾಜ್ಯಗಳು ಭಾರತ ದೇಶದಲ್ಲಿ ಉಗಮಿಸಿವೆ. ಪ್ರಪಂಚದ ನಾಲ್ಕು ಪ್ರಮುಖ ಧರ್ಮಗಳಾದ ಹಿಂದೂ, ಬೌದ್ಧ, ಜೈನ ಮತ್ತು ಸಿಖ್ ಗಳು ಭಾರತದಲ್ಲಿ ಆರಂಭವಾಗಿವೆ. ಝೊರಾಷ್ಟ್ರಿಯನಿಜ಼ಂ, ಕ್ರಿಶ್ಚಿಯನ್ ಧರ್ಮ ಮತ್ತು ಇಸ್ಲಾಂ ಧರ್ಮ ಕ್ರಿ.ಶ ೭ನೇ ಸಹಸ್ರಮಾನದಲ್ಲಿ ಆಗಮಿಸಿ ಈ ಪ್ರದೇಶದ ಸಂಸ್ಕೃತಿಯನ್ನು ವೈವಿಧ್ಯಮಯವಾಗಿಸಿವೆ. ೧೬ನೇ ಶತಮಾನದಲ್ಲಿ ಭಾರತ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯಿಂದ ಆಕ್ರಮಣಗೊಂಡು ಇಂಗ್ಲೆಂಡಿನ ಆಡಳಿತಕ್ಕೊಳಪಟ್ಟಿತು. ೧೯ನೇ ಶತಮಾನದ ಮಧ್ಯದಲ್ಲಿ ಭಾರತ ಅನೇಕ ಸ್ವಾತಂತ್ರ್ಯ ಹೋರಾಟದ ಫಲವಾಗಿ ಬ್ರಿಟೀಷರಿಂದ ಸ್ವತಂತ್ರವಾಯಿತು. ಹೆಸರಿನ ಉಗಮ ಭಾರತ ಎಂಬ ಹೆಸರು "ಭರತವರ್ಷ" ಎಂಬ ಹೆಸರಿನಿಂದ ಉಗಮಗೊಂಡದ್ದು. ಪುರಾತನ ಪೌರಾಣಿಕ ಆಕರಗಳಿಂದಲೂ ಈ ಹೆಸರು ಭಾರತಕ್ಕೆ ಸೂಚಿತವಾಗಿದೆ. ವೃಷಭದೇವನ ಮಗ ಭರತ ಚಕ್ರವರ್ತಿಯಿಂದ ಅಥವಾ ಮಹಾರಾಜ ದುಶ್ಯಂತನ ಪುತ್ರನಾದ ಭರತ ಮಹಾರಾಜನ ಹೆಸರಿನಿಂದ ಬಂದದ್ದು. "ಇಂಡಿಯಾ" ಎಂಬ ಹೆಸರು ಸಿಂಧೂ ನದಿಯ ಪರ್ಷಿಯನ್ ರೂಪಾಂತರ "ಇಂಡಸ್" ಎಂಬುದರಿಂದ ಬಂದದ್ದು. ಭಾರತವನ್ನು ನಿರ್ದೇಶಿಸಲು ಉಪಯೋಗಿಸಲಾಗಿರುವ ಇತರ ಹೆಸರುಗಳಲ್ಲಿ ಒಂದು ಹಿಂದೂಸ್ಥಾನ ಕೂಡ ಒಂದು. ಚರಿತ್ರೆ ಭಾರತದಲ್ಲಿ ಜನವಸತಿಯ ಮೊದಲ ಕುರುಹುಗಳೆಂದರೆ ಈಗಿನ ಮಧ್ಯ ಪ್ರದೇಶ ರಾಜ್ಯದ ಬಿಂಭೇಟ್ಕಾದಲ್ಲಿ ದೊರೆತಿರುವ ಶಿಲಾಯುಗದ ಪಳೆಯುಳಿಕೆಗಳು. ಸುಮಾರು ೯೦೦೦ ವರ್ಷಗಳ ಹಿಂದೆ ನಾಗರೀಕತೆಯ ಕುರುಹುಗಳು ಕಂಡು ಬಂದು ಕ್ರಿ.ಪೂ ೨೬೦೦ ರಿಂದ ಕ್ರಿ.ಪೂ. ೧೯೦೦ ರ ವರೆಗೆ ಸಿಂಧೂ ಕಣಿವೆ ನಾಗರೀಕತೆ ಅಸ್ತಿತ್ವದಲ್ಲಿತ್ತು. ನಂತರ ವೇದಗಳನ್ನು ಆಧರಿಸಿ ಹಿಂದೂ ಧರ್ಮ ಬೆಳೆಯಿತು. ಆ ಸಂದರ್ಭದಲ್ಲಿ ಬೌದ್ಧ ಧರ್ಮ ಮತ್ತು ಜೈನ ಧರ್ಮಗಳು ಸಹ ಉಗಮಗೊಂಡವು. ಕ್ರಿ.ಪೂ ೫೦೦ ರ ನಂತರ ಅನೇಕ ಸ್ವತಂತ್ರ ರಾಜ್ಯಗಳು ತಲೆಯೆತ್ತಲಾರಂಭಿಸಿದವು. ಮೌರ್ಯ ಸಾಮ್ರಾಜ್ಯ ಭಾರತವನ್ನು ಸರಿ ಸುಮಾರಾಗಿ ಒಗ್ಗೂಡಿಸಿದ ಮೊದಲ ಸಾಮ್ರಾಜ್ಯ. ನಂತರ ಗುಪ್ತ ಸಾಮ್ರಾಜ್ಯ ಭಾರತದ "ಸುವರ್ಣ ಯುಗ"ದಲ್ಲಿ ಆಡಳಿತ ನಡೆಸಿತು. ಈ ಕಾಲದಲ್ಲಿ ಸಾಹಿತ್ಯ, ವಿಜ್ಞಾನ, ತತ್ವಶಾಸ್ತ್ರ ಮೊದಲಾದ ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಭಾರತ ಸಾಧಿಸಿತು. ಎರಡನೆಯ ಸಹಸ್ರಮಾನದ ಆರಂಭದಲ್ಲಿ ಅನೇಕ ಮುಸ್ಲಿಮ್ ರಾಜರ ದಾಳಿ ಆರಂಭವಾಗಿ ೧೨ ನೆಯ ಶತಮಾನದಿಂದ ಮುಂದಕ್ಕೆ ಉತ್ತರ ಭಾರತದ ಅನೇಕ ಭಾಗಗಳು ಮತ್ತು ದಕ್ಷಿಣ ಭಾರತದ ಕೆಲ ಭಾಗಗಳು ಮುಸ್ಲಿಮ್ ಆಡಳಿತಕ್ಕೆ ಒಳಪಟ್ಟವು. (ಉದಾಹರಣೆಗೆ ದೆಹಲಿ ಸುಲ್ತಾನೇಟ್, ಬಹಮನಿ ಸುಲ್ತಾನರು, ಮೊಘಲ್ ಸಾಮ್ರಾಜ್ಯ). ೧೭ ನೆಯ ಶತಮಾನದಿಂದ ಮುಂದಕ್ಕೆ ಪೋರ್ಚುಗೀಸ್, ಫ್ರೆಂಚ್ ಮತ್ತು ಬ್ರಿಟಿಷ್ ವ್ಯಾಪಾರಿಗಳು ಭಾರತಕ್ಕೆ ಬರಲಾರಂಭಿಸಿದರು. ಹಂಚಿಹೋಗಿದ್ದ ಭಾರತದ ರಾಜಕೀಯ ಪರಿಸ್ಥಿತಿಯ ಲಾಭ ಪಡೆದು ಭಾರತದ ಅನೇಕ ಪ್ರದೇಶಗಳನ್ನು ಇವರು ವಶಪಡಿಸಿಕೊಳ್ಳಲಾರಂಭಿಸಿದರು. ಎಲ್ಲರಿಗಿಂತ ಪ್ರಬಲವಾಗಿ ಬೆಳೆದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಹೆಚ್ಚು ಕಡಿಮೆ ಸಂಪೂರ್ಣ ಭಾರತದ ಮೇಲೆ ಅಧಿಪತ್ಯ ಸ್ಥಾಪಿಸಿತು. ೧೮೫೭ ರಲ್ಲಿ ಭಾರತದ ಅನೇಕ ರಾಜ್ಯಗಳು ಬ್ರಿಟಿಷರ ವಿರುದ್ಧ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡವು. ಇದರ ನಂತರ ನೇರ ಬ್ರಿಟಿಷ್ ಆಡಳಿತಕ್ಕೆ ಭಾರತ ಸಾಗಿತು. ಸ್ವಲ್ಪ ಕಾಲದಲ್ಲಿಯೇ ಭಾರತ ಸ್ವಾತಂತ್ರ್ಯ ಚಳುವಳಿ ಆರಂಭವಾಗಿ ಆಗಸ್ಟ್ ೧೫, ೧೯೪೭ ರಲ್ಲಿ ಭಾರತ ಸ್ವಾತಂತ್ರ್ಯ ಪಡೆಯಿತು. ಸ್ವಾತಂತ್ರ್ಯಾ ನಂತರ ನೆರೆಯ ದೇಶಗಳೊಂದಿಗೆ ಒಟ್ಟು ನಾಲ್ಕು ಯುದ್ಧಗಳು ನಡೆದಿವೆ. ೧೯೭೪ ರಲ್ಲಿ ಭಾರತ ಅಣುಶಕ್ತಿ ಉತ್ಪಾದನಾ ಸಾಮರ್ಥ್ಯವನ್ನು ಪಡೆಯಿತು. ೧೯೭೫ ರಿಂದ ೭೭(77) ರ ವರೆಗೆ ಇಂದಿರಾ ಗಾಂಧಿಯವರ ಸರ್ಕಾರದಲ್ಲಿ ತುರ್ತು ಪರಿಸ್ಥಿತಿ ಏರ್ಪಟ್ಟಿತ್ತು. ೯೦ ರ ದಶಕದಿಂದ ಆರ್ಥಿಕ ಉದಾರೀಕರಣ ನೀತಿಯನ್ನು ಭಾರತ ಪಾಲಿಸುತ್ತಾ ಬಂದಿದೆ. ಭೂಗೋಳ ಭಾರತದ ಭೌಗೋಳಿಕ ಭಾಗಗಳಲ್ಲಿ ಮುಖ್ಯವಾದವು: ಹಿಮಾಲಯ ಪರ್ವತಶ್ರೇಣಿ ಉತ್ತರದ ಸಮತಟ್ಟು ಪ್ರದೇಶ ಥಾರ್ ಮರುಭೂಮಿ ದಖನ್ ಪ್ರಸ್ತಭೂಮಿ ಭಾರತದಲ್ಲಿ ಹರಿಯುವ ಮುಖ್ಯವಾದ ನದಿಗಳಲ್ಲಿ ಕೆಲವೆಂದರೆ ಸಿಂಧೂ, ಗಂಗಾ, ಬ್ರಹ್ಮಪುತ್ರ, ಯಮುನಾ, ನರ್ಮದಾ, ಗೋದಾವರಿ, ಕೃಷ್ಣಾ, ಕಾವೇರಿ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಭಾರತವನ್ನು ಕೆಳಗಿನ ಮುಖ್ಯ ಭಾಗಗಳಾಗಿ ವಿಂಗಡಿಸಲಾಗಿದೆ: ರಾಜ್ಯಗಳು ಕೇಂದ್ರಾಡಳಿತ ಪ್ರದೇಶಗಳು ಆರ್ಥಿಕ ವ್ಯವಸ್ಥೆ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ವ್ಯವಸ್ಥೆಯನ್ನು ಭಾರತ ಹೊಂದಿದ್ದು, ಒಟ್ಟು ರಾಷ್ಟ್ರೀಯ ಉತ್ಪಾದನೆಯ ದೃಷ್ಟಿಯಿಂದ ಪ್ರಪಂಚದಲ್ಲಿ ಹನ್ನೆರಡನೆಯ ಸ್ಥಾನವನ್ನು ಹೊಂದಿದೆ. ಕೊಳ್ಳುವ ಶಕ್ತಿಯ ಮೇರೆಗೆ ಮೂರನೆ ಸ್ಥಾನವನ್ನು ಹೊಂದಿದೆ. ಆದರೆ ಭಾರತದ ಜನಸಂಖ್ಯೆಯನ್ನು ಗಮನಿಸಿ ಸರಾಸರಿ ಒಬ್ಬ ವ್ಯಕ್ತಿಯ ಆದಾಯ ಸುಮಾರು ವರ್ಷಕ್ಕೆ ೧೧,೦೦೦ ರೂಪಾಯಿಗಳಷ್ಟು. ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ಬೆಳೆದ ನಂತರ ಭಾರತೀಯ ಮಧ್ಯಮ ವರ್ಗ ಹೆಚ್ಚುತ್ತಾ ಬಂದಿದೆ. ಭಾರತದ ಮುಖ್ಯ ವೃತ್ತಿಗಳಲ್ಲಿ ಕೆಲವೆಂದರೆ ಕೃಷಿ, ಬಟ್ಟೆಗಳ ತಯಾರಿಕೆ, ಪೆಟ್ರೋಲಿಯಮ್ ಉತ್ಪನ್ನಗಳು, ಮಾಹಿತಿ ತಂತ್ರಜ್ಞಾನ, ಚಲನ ಚಿತ್ರಗಳು ಹಾಗೂ ಕುಶಲ ಕೈಗಾರಿಕೆ. ವಾರ್ಷಿಕವಾಗಿ ಸುಮಾರು ೨೦ ಲಕ್ಷ ಅಂತರರಾಷ್ಟ್ರೀಯ ಪ್ರವಾಸಿಗಳು ಭಾರತಕ್ಕೆ ಬರುತ್ತಾರೆ. ಭಾರತದೊಂದಿಗೆ ಹೆಚ್ಚಾಗಿ ಅಂತಾರಾಷ್ಟ್ರೀಯ ವ್ಯಾಪಾರ ನಡೆಸುವ ದೇಶ-ಸಂಸ್ಥೆಗಳೆಂದರೆ ಅಮೆರಿಕದ ಸಂಯುಕ್ತ ಸಂಸ್ಥಾನ, ರಷ್ಯಾ, ಯುರೋಪಿಯನ್ ಒಕ್ಕೂಟ, ಚೀನಾ ಮತ್ತು ಜಪಾನ್. ಜನಸಂಖ್ಯಾ ಅಂಕಿ ಅಂಶಗಳು ಭಾರತ ಪ್ರಪಂಚದಲ್ಲಿ ಎರಡನೆ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಭಾರತೀಯ ಸಮಾಜದಲ್ಲಿ ಭಾಷೆ, ಧರ್ಮ, ಜಾತಿ ಮೊದಲಾದ ಅನೇಕ ಅಂಶಗಳು ವಿವಿಧ ಪಾತ್ರಗಳನ್ನು ವಹಿಸುತ್ತವೆ. ಭಾರತದ ಅತಿ ದೊಡ್ಡ ನಗರಗಳೆಂದರೆ ಮುಂಬಯಿ, ದೆಹಲಿ, ಬೆಂಗಳೂರು, ಕೋಲ್ಕತ್ತ ಮತ್ತು ಚೆನೈ ಭಾರತದ ಸಾಕ್ಷರತಾ ಪ್ರಮಾಣ ಶೇ. ೬೪.೮. ಧರ್ಮದ ದೃಷ್ಟಿಯಿಂದ, ಜನಸಂಖ್ಯೆಯ ವಿಂಗಡಣೆ ಹೀಗಿದೆ: ಹಿಂದೂ (೮೦.೫ %), ಮುಸ್ಲಿಮ್ (೧೩.೪ %), ಕ್ರೈಸ್ತ (೨.೩೩ %), ಸಿಖ್ (೧.೮೪ %), ಬೌದ್ಧ (೦.೭೬ %), ಜೈನ (೦.೪ %). ಭಾರತದಲ್ಲಿರುವ ಇತರ ಧಾರ್ಮಿಕ ವರ್ಗಗಳಲ್ಲಿ ಕೆಲವೆಂದರೆ ಯಹೂದಿ, ಪಾರ್ಸಿ, ಅಹ್ಮದಿ ಮತ್ತು ಬಹಾ-ಈ. ಭಾರತದಲ್ಲಿರುವ ಎರಡು ಮುಖ್ಯ ಭಾಷಾ ಬಳಗಗಳೆಂದರೆ ಉತ್ತರ ಭಾರತದ ಇಂಡೋ-ಆರ್ಯನ್ ಭಾಷಾ ಬಳಗ ಮತ್ತು ದಕ್ಷಿಣ ಭಾರತದ ದ್ರಾವಿಡ ಭಾಷಾ ಬಳಗ. ಭಾರತ ೨೨ ಅಧಿಕೃತ ಭಾಷೆಗಳನ್ನು ಹೊಂದಿದೆ. ೧೯೦೧ ಮತ್ತು ನಂತರದ ಗಣತಿ 1901 ಮತ್ತು ನಂತರದ ಜನಗಣತಿ 2011 ಜನಗಣತಿಯ ಅಂಕಿಅಂಶಗಳು ಜನಸಂಖ್ಯೆಯ ಬೆಳವಣಿಗೆ ಮತ್ತು ಹೋಲಿಕೆ ಇದು ಜನಸಂಖ್ಯಾ ವಿವರ ಮತ್ತು ಹೋಲಿಕೆ : 1947 ರಲ್ಲಿ ಭಾರತ ವಿಭಜನೆ ಗೊಂಡಾಗ ವಿಭಜಿತ ಭಾರತದ ಜನಸಂಖ್ಯೆ ಕೇವಲ 350 ಮಿಲಿಯನ್. (35 ಕೋಟಿ) 1947 ಪೂರ್ವ ಪಾಕಿಸ್ತಾನ 4.26 ಮಿಲಿಯನ್ +3.40ಮಿ ಪಶ್ಚಿಮ ಪಾಕಿಸ್ತಾನ =(7ಕೋಟಿ 66 ಲಕ್ಷ) 1947 ರಲ್ಲಿ ಜನಸಂಖ್ಯೆ ಪಶ್ಚಿಮ + ಪೂರ್ವ ಪಾಕಿಸ್ತಾನ :76 ಮಿಲಿಯನ್ ಪಶ್ಚಿಮ ಪಾಕಿಸ್ತಾನ 3400000 ಪೂರ್ವ ಪಾಕಿಸ್ತಾನ 42600000 1967 ರಲ್ಲಿ ಜನಸಂಖ್ಯೆ ಪಶ್ಚಿಮ + ಪೂರ್ವ ಪಾಕಿಸ್ತಾನ :94 ಮಿಲಿಯನ್ ಪಶ್ಚಿಮ ಪಾಕಿಸ್ತಾನ 43000000 ಪೂರ್ವ ಪಾಕಿಸ್ತಾನ 51000000 2011 / 2012 ರಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಒಟ್ಟು ಜನಸಂಖ್ಯೆ 331 ಮಿಲಿಯನ್ :(33 ಕೋಟಿ 10ಲಕ್ಷ ) ಪಶ್ಚಿಮ ಪಾಕಿಸ್ತಾನ (170,000000) 180440005; ಬಾಂಗ್ಲಾದೇಶ (ಹಿಂದಿನ ಪೂರ್ವ ಪಾಕಿಸ್ತಾನ) 161,083,804/ 161083804 1947ವಿಭಜಿತ ಭಾರತದ ಜನಸಂಖ್ಯೆ 350,000,000 (35ಕೋಟಿ) 2011 (ವಿಭಜಿತ) ಈಗಿನ ಭಾರತದ ಜನಸಂಖ್ಯೆ 121,01,93,422 (121 ಕೋಟಿ). ದೇಶದ ಮೂರನೇ ಸಿರಿವಂತ ನಗರ 27 Feb, 2017 ಭಾರತದ ಅತ್ಯಂತ ಶ್ರೀಮಂತ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಮೂರನೇ ಸ್ಥಾನ ಪಡೆದಿದೆ. ದೇಶದ ಅತ್ಯಂತ ಶ್ರೀಮಂತ ನಗರ ಎಂಬ ಹೆಗ್ಗಳಿಕೆಗೆ ವಾಣಿಜ್ಯ ನಗರಿ ಮುಂಬೈ ಪಾತ್ರವಾಗಿದ್ದರೆ, ದೆಹಲಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮುಂಬೈನ ಸಂಪತ್ತಿನ ಮೊತ್ತ ರೂ.54.6 ಲಕ್ಷ ಕೋಟಿ. ಇನ್ನು ದೆಹಲಿ ಮತ್ತು ಬೆಂಗಳೂರಿನ ಸಂಪತ್ತು ಕ್ರಮವಾಗಿ ರೂ.29.9 ಲಕ್ಷ ಕೋಟಿ ಮತ್ತು ರೂ.21.3 ಲಕ್ಷ ಕೋಟಿಯಷ್ಟಿದೆ. ಮಾರುಕಟ್ಟೆ ಸಂಶೋಧನಾ ಸಂಸ್ಥೆ, ನ್ಯೂ ವರ್ಲ್ಡ್‌ ವೆಲ್ತ್‌ ಬಿಡುಗಡೆ ಮಾಡಿರುವ 2016ನೇ ಸಾಲಿನ ವರದಿಯಲ್ಲಿ ಈ ಮಾಹಿತಿ ಇದೆ. ವಲಸೆ ಸ್ವದೇಶದಿಂದ ವಲಸೆ ಹೋಗುತ್ತಿರುವ ಸಿರಿವಂತರ ಸಂಖ್ಯೆಯಲ್ಲಿ ಭಾರಿ ಏರಿಕೆ ಆಗಿದೆ. 2016ರಲ್ಲಿ ವಿಶ್ವದಾದ್ಯಂತ 82 ಸಾವಿರ, ಅತಿ ಸಿರಿವಂತರು ವಲಸೆ ಹೋಗಿದ್ದಾರೆ. ಈ ರೀತಿ ಅತಿ ಹೆಚ್ಚು ವಲಸೆ ಹೋದ ಮೊದಲ ಐದು ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೂ ಇದೆ. ಈ ಸಾಲಿನಲ್ಲಿ ಒಟ್ಟು 6 ಸಾವಿರ ಸಿರಿವಂತರು ತಮ್ಮ ವಾಸ್ತವ್ಯವನ್ನು ಭಾರತದಿಂದ ಬೇರೆ ದೇಶಗಳಿಗೆ ಬದಲಿಸಿದ್ದಾರೆ. 2015ನೇ ಸಾಲಿನಲ್ಲಿ ಹೀಗೆ ವಲಸೆ ಹೋದವರ ಸಂಖ್ಯೆ 4 ಸಾವಿರ. ಹಿಂದಿನ ವರ್ಷಕ್ಕೆ ಹೋಲಿಸಿದರೆ 2016ರಲ್ಲಿ ವಲಸೆ ಹೋದ ಸಿರಿವಂತರ ಸಂಖ್ಯೆಯಲ್ಲಿ ಶೇ 50 ರಷ್ಟು ಹೆಚ್ಚಳವಾಗಿದೆ. ಶತ ಕೋಟ್ಯಧಿಪತಿಗಳು 10 ಲಕ್ಷ ಅಮೆರಿಕನ್ ಡಾಲರ್‌ನಿಂದ 100 ಕೋಟಿ ಅಮೆರಿಕನ್ ಡಾಲರ್‌ವರೆಗೆ (ಸುಮಾರು ₹ 6.6 ಕೋಟಿಯಿಂದ ₹ 6.6 ಸಾವಿರ ಕೋಟಿ) ಸಂಪತ್ತು ಹೊಂದಿರುವವರನ್ನು ಮಿಲಿಯನೇರ್ ಅಥವಾ ಶತ ಕೋಟ್ಯಧಿಪತಿ ಎಂದು ನ್ಯೂ ವರ್ಲ್ಡ್‌ ವೆಲ್ತ್‌ ವರದಿಯಲ್ಲಿ ಪರಿಗಣಿಸಲಾಗಿದೆ. 100 ಕೋಟಿ ಅಮರಿಕನ್‌ ಡಾಲರ್‌ಗಿಂತ (ಸು. ₹ 6.6 ಸಾವಿರ ಕೋಟಿ) ಹೆಚ್ಚು ಸಂಪತ್ತು ಇದ್ದವರನ್ನು ಬಿಲಿಯನೇರ್‌ ಅಥವಾ ಸಹಸ್ರ ಕೋಟ್ಯಾಧಿಪತಿಗಳು ಎಂದು ಕರೆಯಲಾಗಿದೆ. ರಾಜಕೀಯ ೧೯೯೮ ರಿಂದ ೨೦೧೯/2019ರ ವರೆಗಿನ ಲೋಕಸಭೆ ಚುನಾವಣೆ ಸಾರಾಂಶ ದಪ್ಪಗಿನ ಅಕ್ಷರ ನೋಡಿ ಭಾರತದ ಇತಿಹಾಸ ಭಾರತ ಗಣರಾಜ್ಯದ ಇತಿಹಾಸ ೨೦೧೪ ಭಾರತದ ಸಾರ್ವತ್ರಿಕ ಲೋಕಸಭಾ ಚುನಾವಣೆ ಮತ್ತು ಫಲಿತಾಂಶ ಭಾರತದ ಕೇಂದ್ರ ಮಂತ್ರಿ ಮಂಡಲ ೨೦೧೪ ಭಾರತದ ಸಾರ್ವತ್ರಿಕ ಚುನಾವಣೆ, ೨೦೦೯ ೨೦೦೯ರ ಭಾರತದ ಸಾರ್ವತ್ರಿಕ ಚುನಾವಣೆ ಭಾರತದ ಜನಸಂಖ್ಯೆಯ ಬೆಳವಣಿಗೆ ಲೋಕಸಭೆ ಟೆಲಿಗ್ರಾಂ-ಟೆಲಿಗ್ರಾಂ ರಾಜ್ಯಸಭೆ ಭಾರತ ಮತ್ತು ಪಾಕೀಸ್ತಾನಗಳ ಆರ್ಥಿಕ ಬಲ ಮತ್ತು ಸೈನ್ಯ ಬಲ ಹೊರ ಸಂಪರ್ಕ ಫ್ರಾನ್ಸ್ ಹಿಂದಿಕ್ಕಿದ ಭಾರತ, ಈಗ ವಿಶ್ವದ 6ನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರ;11 Jul 2018 ಉಲ್ಲೇಖಗಳು ಬಾಹ್ಯ ಸಂಪರ್ಕಗಳು ಭಾರತ ಸರ್ಕಾರದ ಅಧಿಕೃತ ತಾಣಗಳು ಭಾರತದ ಪ್ರಧಾನ ಮಂತ್ರಿ ಭಾರತದ ಅಧ್ಯಕ್ಷರು ಭಾರತೀಯ ಸಂಸತ್ತು ರಕ್ಷಣಾ ಸಚಿವಾಲಯ ಭಾರತದ ಜನಗಣತಿ ಭಾರತದ ಸರ್ವೋಚ್ಚ ನ್ಯಾಯಾಲಯ ವಿದೇಶ ವ್ಯವಹಾರಗಳ ಸಚಿವಾಲಯ ಚುನಾವಣಾ ಆಯೋಗ ವಿದ್ಯುನ್ಮಾನ ವಿಭಾಗ ಪ್ರವಾಸೋದ್ಯಮ ಶಿಕ್ಷಣಾ ವಿಭಾಗ ಏಷ್ಯಾ ಖಂಡದ ದೇಶಗಳು ದೇಶಗಳು ದಕ್ಷಿಣ ಏಷ್ಯಾ ಭಾರತೀಯ ಉಪಖಂಡ
817
https://kn.wikipedia.org/wiki/%E0%B2%9C%E0%B3%8B%E0%B2%97
ಜೋಗ
ಜೋಗ ಅಥವಾ 'ಗೇರುಸೊಪ್ಪಿನ ಜಲಪಾತ' ಪ್ರಪಂಚದ ಪ್ರಸಿದ್ಧ ಜಲಪಾತಗಳಲ್ಲೊಂದು. ಇದು ಭಾರತದ ಎರಡನೆಯ ಅತಿ ಎತ್ತರದ ಜಲಪಾತ. ಇದು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ದಟ್ಟವಾದ ಕಾಡು ಹಾಗು ಗುಡ್ಡಗಳಿಂದ ಆವೃತ್ತವಾದ ಸ್ಥಳದಲ್ಲಿದೆ. ಜೋಗ ಜಲಪಾತವನ್ನು ವೀಕ್ಷಿಸುವ ತಾಣ ಜೋಗವು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ. ಇದು ಒಂದು ಪ್ರಮುಖ ಪ್ರವಾಸಿ ತಾಣ. ಜೋಗ ಜಲಪಾತವು ಸುಮಾರು ೨೯೨ ಮೀ ಎತ್ತರದಿಂದ ಭೋರ್ಗರೆಯುತ್ತಾ ಶರಾವತಿ ನದಿಯು ನಾಲ್ಕು ಸೀಳಾಗಿ ಧುಮುಕುತ್ತದೆ. ವೈಭವದಿಂದ ಅವ್ಯಾಹತವಾಗಿ ಧುಮಕುವ ರಾಜ, ಜೋರಾಗಿ ಆರ್ಭಟಿಸುತ್ತ ಹಲವಾರು ಭಾರಿ ಚಿಮ್ಮುತ್ತ ಧುಮಕುವ ರೋರರ್, ಬಳಕುತ್ತಾ ಜಾರುವ ರಾಣಿ(ಲೇಡಿ) ಮತ್ತು ರಭಸದಿಂದ ಹಲವಾರು ಬಂಡೆಗಳನ್ನು ಚಿಮ್ಮುತ್ತಾ ನುಗ್ಗುವ ರಾಕೆಟ್ ಈ ನಾಲ್ಕು ಜಲ ಭಾಗಗಳಾಗಿವೆ. ಮಳೆಗಾಲದಲ್ಲಿ ಅತ್ಯ೦ತ ರಮಣೀಯರೂಪ ತೊಡುವ ಈ ಜಲಪಾತ ಬಿಳಿ ಮೋಡಗಳ ಹಿಂದೆ ಕಣ್ಣಾಮುಚ್ಚಾಲೆ ಆಡುತ್ತ ನೋಡುಗರ ಕಣ್ಮನ ಸೆಳೆಯುವುದು. ಲಿಂಗನಮಕ್ಕಿ ಜಲಾಶಯದ ನಿರ್ಮಾಣದ ನಂತರ ಜೋಗ ತನ್ನ ಮೊದಲಿನ ಸೌಂದರ್ಯ ಹಾಗು ವೈಭವವನ್ನು ಕಳೆದುಕೊಂಡಿದೆ ಎಂದು ಅನೇಕರು ಹೇಳುತ್ತಾರೆ. ಜಲಪಾತ ವಿವರಣೆ ಶರಾವತಿ ನದಿಯ ಜಲಪಾತ ಗೇರುಸೊಪ್ಪೆ ಎಂದೂ ಪ್ರಸಿದ್ಧ. ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಗಡಿ ಮಧ್ಯೆ ಇರುವ ಈ ಜಲಪಾತ ಸಾಗರ ತಾಲ್ಲೂಕಿನ ತಾಳಗುಪ್ಪ ರೈಲು ನಿಲ್ದಾಣಕ್ಕೆ ೧೬ ಕಿಮೀ ದೂರದಲ್ಲಿದೆ. ಜಲಪಾತ ಶಿವಮೊಗ್ಗದಿಂದ ೧೦೦ ಕಿಮೀ ದೂರದಲ್ಲೂ, ಹೊನ್ನಾವರದಿಂದ ೫೬ ಕಿಮೀ ದೂರದಲ್ಲೂ ಇದೆ. ಇಲ್ಲಿ ಶರಾವತಿ ನದಿ ೨೫೨.೭ ಮೀ (೮೨೯ ಅಡಿ) ಆಳದ ಪ್ರಪಾತಕ್ಕೆ ಧುಮುಕುತ್ತದೆ. ಸೌಂದರ್ಯಪೂರ್ಣ ಔನ್ನತ್ಯದಲ್ಲಿ ಗೇರುಸೊಪ್ಪೆಯನ್ನು ಮೀರಿಸುವ ಜಲಪಾತ ಜಗತ್ತಿನಲ್ಲೆಲ್ಲೂ ಇಲ್ಲ. ಆಲ್ಪ್ಸ್ ಪರ್ವತದಲ್ಲಿರುವ ಸೆರೊಸೊಲಿ (೨೪೦೦ ಅಡಿ), ಎವಾನ್ಸನ್ (೧೨೦೦ ಅಡಿ) ಮತ್ತು ಆರ್ವೆ (೧೧೦೦ ಅಡಿ) ಜೋಗ ಜಲಪಾತಕ್ಕಿಂತ ಎತ್ತರವಾಗಿವೆಯಾದರೂ ಅವುಗಳಲ್ಲಿ ಜೋಗದಷ್ಟು ಜಲಸಮೃದ್ಧಿ ಇಲ್ಲ. ನಯಾಗರ ಜಲಪಾತದ ನೀರಿನ ಮೊತ್ತ ಜೋಗದ್ದಕ್ಕಿಂತ ಅಧಿಕವಾಗಿದ್ದರೂ, ಅದರ ಎತ್ತರ (೧೬೪ ಅಡಿ) ಗೇರುಸೊಪ್ಪೆಯಷ್ಟು ಇಲ್ಲ. ಶರಾವತಿ ನದಿ ಹರಿದು ಧುಮುಕುವ ಕಮರಿಯ ಬಂಡೆ ೨೫೦ ಗಜಗಳಷ್ಟು ಉದ್ದವಾಗಿದೆ. ನಾಲ್ಕು ಪ್ರತ್ಯೇಕ ಬಿರುಕುಗಳಿಂದ ನದಿ ರಭಸದಿಂದ ಇಳಿದು ಕಮರಿಗೆ ಬೀಳುತ್ತದೆ. ಅದು ಧುಮುಕುವ ಠೀವಿ ಮನಮೋಹಕವಾದ್ದು. ಜಲಪಾತದ ನಾಲ್ಕು ಕವಲುಗಳ ಪೈಕಿ ರಾಜಾ ಸುಮಾರು ೮೨೯ ಅಡಿ ಆಳಕ್ಕೆ ಧುಮುಕುತ್ತದೆ. ರಾಜಾ ಬೀಳುತ್ತಿರುವಂತೆಯೇ ಸ್ವಲ್ಪ ಕೆಳಗೆ, ಬಂಡೆಯ ಬಿರುಕಿನಿಂದ ಹರಿದು ಬೀಳುವ ರೋರರ್ ಜಲಪಾತವನ್ನು ಅಪ್ಪಿಕೊಂಡು, ಅದರೊಂದಿಗೆ ಕಮರಿಗೆ ಬೀಳುತ್ತದೆ. ಮೂರನೆಯ ಜಲಪಾತ ರಾಕೆಟ್ ಬಂಡೆಯ ಮೇಲಿನಿಂದ ಹಲವು ಧಾರೆಗಳಲ್ಲಿ ಚಿಮ್ಮಿ ತಳಕ್ಕೆ ಕುಪ್ಪಳಿಸುತ್ತದೆ. ನಾಲ್ಕನೆಯ ರಾಣಿ ಜಲಪಾತ (ಲೇಡಿ ಬ್ಲಾಂಚೆ) ಬೀಳುವ ರಭಸದಿಂದೇಳುವ ನೊರೆಯಿಂದ ತುಂಬಿ ಸೊಗಸುಗಾತಿಯಂತೆ ಪ್ರಪಾತಕ್ಕೆ ಇಳಿಯುತ್ತದೆ. ಮಳೆಗಾಲದಲ್ಲಿ ಹೆಚ್ಚು ನೀರು ರಭಸದಿಂದ ಬೀಳುವ ಕಾರಣ ನೀರಿನಿಂದ ಏಳುವ ಧೂಮ ಪ್ರಪಾತವನ್ನು ಆವರಿಸಿದ್ದು ನೀರಿನ ಭೋರ್ಗರೆತದ ಶಬ್ದ ಹೃದಯವನ್ನು ಕಂಪಿಸುವಂತಿರುತ್ತದೆ. ಮಳೆಗಾಲದ ಅನಂತರದ ತಿಂಗಳುಗಳಲ್ಲಿ ನದಿಯ ಪ್ರವಾಹ ಸರಿಯಾದ ಗಾತ್ರದಲ್ಲಿರುವುದರಿಂದ ಜಲಪಾತ ನೋಡಲು ರಮ್ಯವಾಗಿರುತ್ತದೆ. ಜಲಪಾತದ ಪೂರ್ಣ ದೃಶ್ಯವನ್ನು ಶಿವಮೊಗ್ಗ ಗಡಿ ಭಾಗದಿಂದ ನೋಡಬಹುದು. ಜಲಪಾತದ ಬಂಡೆಯ ಅಂಚುಗಳಲ್ಲಿರುವ ಪೊಟರೆಗಳಲ್ಲಿ ಕಾಡು ಪಾರಿವಾಳಗಳು ಮನೆ ಮಾಡಿಕೊಂಡು ಪ್ರಪಾತದ ಬಳಿ ಗುಂಪುಗುಂಪಾಗಿ ಹಾರುತ್ತಿರುತ್ತವೆ. ಸೂರ್ಯಕಿರಣಗಳಿಂದ ಜಲಪಾತದ ದಿನದ ವಿವಿಧ ಕಾಲಗಳಲ್ಲಿ ಕಾಮನ ಬಿಲ್ಲು ಅನೇಕ ವೈವಿಧ್ಯ ತಾಳುತ್ತದೆ. ಜಲಪಾತದ ಏಕತಾನದ ನಾದ ಹತ್ತಿರ ನಿಂತು ಕೇಳುವವರ ಕಿವಿಗಳಿಗೆ ಘನಗರ್ಜನೆಯಂತೆ ಕೇಳಿಸುತ್ತದೆ. ಅದರ ಮೇಘನಾದದ ಗಾಂಭೀರ್ಯ ನಿಸರ್ಗ ಸಂಗೀತದ ಒಂದು ನಿರುಪಮ ಮಾದರಿ. ಮೌನವನ್ನು ಸೀಳುವ ಆ ನಿತ್ಯನಾದವನ್ನು ಆಲಿಸುತ್ತ ನಿಂತವರಿಗೆ ಒಮ್ಮೆ ನಾದಸಮಾಧಿಯನ್ನು ಉಂಟುಮಾಡಬಹುದು. ಜೊತೆಗೆ ಬಿಸಿಲು ಹರಿದಂತೆ ಜಲಧರೆಗಳ ಮೇಲಿನ ಕಾಮನಬಿಲ್ಲುಗಳು ನಿತ್ಯ ನವ್ಯವಾಗಿ ಕಾಣಿಸುವುವು : ಬೆಳದಿಂಗಳ ರಾತ್ರಿಯಲ್ಲೂ ಕಾಮನಬಿಲ್ಲು ಕಾಣಿಸುವುದುಂಟು. ಈ ಜೀವಂತ ಪ್ರವಾಹದ ಸೌಮ್ಯ-ಭೀಕರತೆಗಳ ವರ್ಣನೆ ಮಾತಿಗೆ ನಿಲುಕದ್ದು. ಗೇರುಸೊಪ್ಪೆ ಜಲಪಾತದ ಮಾಹಿತಿ ಗಳನ್ನು ಸಂಗ್ರಹಿಸಲು ಮಾರ್ಚ್ ೧೮೫೬ರಲ್ಲಿ ಬಂದ ಇಬ್ಬರು ಬ್ರಿಟಿಷ್ ನೌಕಾಧಿಕಾರಿಗಳ ವರದಿಯಂತೆ- ಪ್ರಪಾತದ ಆಳ ೮೨೯ ಅಡಿಗಳು. ಪ್ರಪಾತದ ತಳದಲ್ಲಿ ನದಿ ಕೊರೆದಿರುವ ಮಡುವಿನ ಆಳ ೧೩೯ ಅಡಿಗಳು. ನದಿಯ ಆಡ್ಡಗಲ ಉತ್ತರ ಕನ್ನಡ ಮತ್ತು ಶಿವಮೊಗ್ಗ ದಂಡೆಗಳ ಮೇಲಿರುವ ಬಂಗಲೆಗಳ ನಡುವೆ ೨೧೩೦ ಅಡಿಗಳು. ೧೮೬೯ರ ಜನವರಿಯಲ್ಲಿ ಜಲಪಾತ ಪ್ರದೇಶಕ್ಕೆ ಭೇಟಿ ನೀಡಿದ್ದ ಶ್ರೀಮತಿ ಲೂಯಿ ಬ್ರೌನಿಂಗ್ ತಿಳಿಸುವಂತೆ- ಆಗ ಶಿವಮೊಗ್ಗ ಜಿಲ್ಲೆಯ ಅಂಚಿನ ಕಡೆ ಜಲಪಾತದ ಸಮೀಪದಲ್ಲಿ ಡೇರೆಯನ್ನು ಹಾಕಲು ಸಹ ಸಾಧ್ಯವಿಲ್ಲದಂತೆ ಒತ್ತಾದ ಕಾಡು ಬೆಳೆದಿತ್ತು. ಈಗ ಜಲಪಾತದ ಎದುರಿಗೆ, ನದಿ ಭೋರ್ಗರೆದು ಸಾಗುವ ಸುಂದರವಾದ ಸ್ಥಳದಲ್ಲಿ ಪ್ರವಾಸಿ ಬಂಗಲೆ, ಉಪಹಾರ ಗೃಹ ಮತ್ತು ಅಂಚೆ ಕಚೇರಿ ಇವೆ. ಅಕ್ಟೋಬರಿನಿಂದ ಫೆಬ್ರವರಿಯವರೆಗೆ ಸಹಸ್ರಾರು ಪ್ರವಾಸಿಗಳು ಜಗತ್ಪ್ರಸಿದ್ಧವಾದ ಈ ಮನೋಹರ ಸ್ಥಳಕ್ಕೆ ಭೇಟಿ ನೀಡುವುದುಂಟು. ಶರಾವತಿ ನದಿಯು ನಾಲ್ಕು ಹೋಳಾಗಿ ಕಣಿವೆಗೆ ಧುಮುಕುತ್ತದೆ. ನದಿಯ ನಾಲ್ಕೂ ಝರಿಗಳಿಗೆ ಹೆಸರುಗಳಿವೆ. ನೋಡುಗರ ಎಡದಿಂದ ಬಲಕ್ಕೆ ಹಸರುಗಳು ಈ ಕೆಳಗಿನಂತಿವೆ: ರಾಜ: ಈ ಝರಿಯು ರಾಜಗಾಂಭೀರ್ಯದಿಂದ ಧುಮುಕುತ್ತದೆ. ರೋರರ್: ಕಲ್ಲು ಬಂಡೆಗಳ ನಡುವಿನಿಂದ ನುಗ್ಗುವ ಈ ಝರಿಯು ಅತಿ ಹೆಚ್ಚಿನ ಶಬ್ದ ಮಾಡುತ್ತದೆ. ರಾಕೆಟ್: ಹೆಚ್ಚಿನ ಪ್ರಮಾಣದ ನೀರು ಸಣ್ಣ ಕಿಂಡಿಯಿಂದ ರಭಸವಾಗಿ ಧುಮುಕುತ್ತದೆ. ರಾಣಿ: ಈ ಝರಿಯ ಆಕಾರವು ಹೆಣ್ಣು ನರ್ತಕಿಯ ತಳುಕು-ಬಳುಕಿಗೆ ಹೋಲುತ್ತದೆ. ಮಹಾತ್ಮ ಗಾಂಧಿ ಜಲ ವಿದ್ಯುತ್ ಯೋಜನೆ ಮಹಾತ್ಮ ಗಾಂಧಿ ಜಲ ವಿದ್ಯುತ್ ಯೋಜನೆ ಜೋಗ ಜಲಪಾತದ ಬಳಿ ಇರುವ ವಿದ್ಯುತ್ ಸ್ಥಾವರ. ಸ್ವಾತಂತ್ರಪೂರ್ವದಲ್ಲಿ ಸರ್ ಎಂ ವಿಶ್ವೇಶ್ವರಯ್ಯನವರು ಮೊದಲ ಬಾರಿ ಜೋಗಕ್ಕೆ ಭೇಟಿಯಿತ್ತಾಗ ಜೋಗ ಜಲಪಾತವನ್ನು ನೋಡಿ "ಎಂತಹ ವ್ಯರ್ಥ" ಎಂದು ಉದ್ಗರಿಸಿದರಂತೆ. ಅವರ ಈ ಮಾತಿನ ಫಲಶ್ರುತಿ ಈ ಜಲವಿದ್ಯುತ್ ಆಗಾರ. ೧೯೩೦ರ ದಶಕದ ಪೂರ್ವಭಾಗದಲ್ಲಿ ಮೈಸೂರು ಲೋಕೋಪಯೊಗಿ ಇಲಾಖೆಯಿಂದ ಜಲವಿದ್ಯುತ್ ಯೋಜನಾ ಕಾರ್ಯ ಶುರುವಾಯಿತು. ಮೊದಲ ಹಂತದ ಕೆಲಸ ೧೯೩೯ರಲ್ಲಿ ಜೋಗ ಜಲಪಾತದಿಂದ ೨೪ ಕಿ. ಮಿ. ದೂರದಲ್ಲಿರುವ ಹಿರೆಭಾಸ್ಕರ ಎಂಬ ಸ್ಥಳದಲ್ಲಿ ಶುರುವಾಯಿತು. ಮೊದಲು ಕೃಷ್ಣರಾಜೇಂದ್ರ ಜಲವಿದ್ಯುತ್ ಯೋಜನೆಯೆಂದು ಕರೆಯಲ್ಪಡುತಿದ್ದ ಈ ಯೋಜನೆಯನ್ನು ನಂತರ ಮಹಾತ್ಮ ಗಾಂಧಿ ಜಲವಿದ್ಯುತ್ ಯೊಜನೆಯೆಂದು ನಾಮಕರಣ ಮಾಡಲಾಯಿತು. ಫೆಬ್ರುವರಿ ೨೧ ೧೯೪೯ರಲ್ಲಿ ಉದ್ಘಾಟನೆಯಾದ ಈ ವಿದ್ಯುತ್ ಸ್ಥಾವರ ೧೨೦ ಮೆಗಾವ್ಯಾಟ್ ವಿದ್ಯುಚ್ಛಕ್ತಿ ಉತ್ಪಾದಿಸುವ ಕ್ಷಮತೆಯನ್ನು ಹೊಂದಿದೆ. ಮೊದಲು ಹಿರೆಭಾಸ್ಕರ ಜಲಾಶಯದಿಂದ ಈ ಯೊಜನೆಗೆ ನೀರಿನ ಸರಬರಾಜಾಗುತ್ತಿತ್ತು. ೬೦ರ ದಶಕದಲ್ಲಿ ಲಿಂಗನಮಕ್ಕಿ ಜಲಾಶಯ ಪ್ರಾರಂಭವಾದ ನಂತರ ಅದೆ ಈ ಯೋಜನೆಗೆ ನೀರಿನ ಮೂಲ. ಪ್ರವಾಸಿಗರಿಗೆ ಮಾರ್ಗದರ್ಶನ ಆಗಸ್ಟ್-ಡಿಸೆಂಬರ್ ಅವಧಿಯ ಜೋಗ ಜಲಪಾತವನ್ನು ವೀಕ್ಷಿಸಲು ಅತಿ ಸೂಕ್ತ ಸಮಯ. ಸಿದ್ದಾಪುರದಿಂದ ಜೋಗವು ೨೪ ಕಿಲೋಮೀಟರ್ ಹಾಗು ಬೆಂಗಳೂರಿನಿಂದ ೩೭೯ ಕಿಲೋಮೀಟರ್ ದೂರದಲ್ಲಿದೆ. ಬೆಂಗಳೂರಿನಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸಿನಲ್ಲಿ ಸಿದ್ದಾಪುರ ತಲುಪಿ, ಸಿದ್ದಾಪುರದಿಂದ ಖಾಸಗಿ ಬಸ್ಸಿನಲ್ಲಿ ಜೋಗ ತಲುಪಬಹುದು. ರೈಲಿನಲ್ಲಿ ಬರುವುದಾದರೆ ಬೆಂಗಳೂರಿನಿಂದ ಸಾಗರ ತಲುಪಿ,ಸಾಗರದಿಂದ ಜೋಗಕ್ಕೆ ಬಸ್ಸಿನಲ್ಲಿ ತಲುಪಬಹುದು. ಸಾಗರದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಇದೆ. ಜೋಗದ ಜಲಪಾತ ಎಡದಲ್ಲಿ ನೇರವಾಗಿ ಬೀಳುತ್ತಿರುವುದು 'ರಾಜ' ;ಅದರ ಪಕ್ಕದಲ್ಲಿ ಸಂದಿಯಿಂದ ಧುಮುಕುತ್ತಿರುವುದು 'ರೋರರ್'-ಆರ್ಭಟ ಅದರದ್ದೇ ;ನಂತರದಲ್ಲಿ ಕೆಳಭಾಗಲ್ಲಿ ಮೂರು ಸೀಳು ಮೇಲೆ ಒಂದೇಇರುವ-ರಾಕೆಟ್ ಹಾರಿದಾಗ ಉಗುಳುವ ಹೊಗೆಯಂತಿರುವುದು 'ರಾಕೆಟ್'; ನಂತರ ಕೊನೆಯ ಬಲಭಾಗದಲ್ಲಿರುವುದು 'ಲೇಡಿ', ಮೆಲ್ಲಗೆ ಇಳಿಜಾರಿನಲ್ಲಿ ಜಾರುತ್ತಿದೆ. ಛಾಯಾಂಕಣ ಬಾಹ್ಯ ಸಂಪರ್ಕ ಮಳೆಗಾಲದ ಜಲಪಾತ ಮತ್ತು ಹೆಚ್ಚಿನ ವಿವರ:ಧುಮ್ಮಿಕ್ಕುವ ಜಲಪಾತ - ಜೋಗ;d: 27 ಆಗಸ್ಟ್ 2019 ಉಲ್ಲೇಖಗಳು ಜಲಪಾತಗಳು ಕರ್ನಾಟಕದ ಪ್ರಮುಖ ಸ್ಥಳಗಳು ಸಾಗರ ತಾಲೂಕಿನ ಪ್ರವಾಸಿ ತಾಣಗಳು ಕರ್ನಾಟಕದ ಜಲಪಾತಗಳು ಕರ್ನಾಟಕದ ಏಳು ಅದ್ಭುತಗಳು
821
https://kn.wikipedia.org/wiki/%E0%B2%95%E0%B3%81%E0%B2%B5%E0%B3%86%E0%B2%82%E0%B2%AA%E0%B3%81
ಕುವೆಂಪು
ಕುವೆಂಪು, ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಡಿಸೆಂಬರ್ ೨೯, ೧೯೦೪ - ನವೆಂಬರ್ ೧೧, ೧೯೯೪), ಕನ್ನಡದ ಅಗ್ರಮಾನ್ಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಮತ್ತು ಚಿಂತಕರಾಗಿದ್ದರು. ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ವರಕವಿ ಬೇಂದ್ರೆಯವರಿಂದ 'ಯುಗದ ಕವಿ ಜಗದ ಕವಿ' ಎನಿಸಿಕೊಂಡವರು. ವಿಶ್ವಮಾನವ ಸಂದೇಶ ನೀಡಿದವರು. ಕನ್ನಡದ ಎರಡನೆಯ 'ರಾಷ್ಟ್ರಕವಿ. ಜ್ಞಾನಪೀಠ ಪ್ರಶಸ್ತಿಯನ್ನೂ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟವರು. ಕರ್ನಾಟಕ ಸರ್ಕಾರ ಕೊಡಮಾಡುವ ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಪಂಪ ಪ್ರಶಸ್ತಿಗಳನ್ನು ಮೊದಲ ಬಾರಿಗೆ ಪಡೆದವರು. ಜೀವನ ಬಾಲ್ಯ ಕುವೆಂಪು ಅವರು ತಮ್ಮ ತಾಯಿಯ ತವರೂರಾದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆ ಎಂಬಲ್ಲಿ ಡಿಸೆಂಬರ್ ೨೯, ೧೯೦೪ ರಲ್ಲಿ ಜನಿಸಿದರು. ತಂದೆ ವೆಂಕಟಪ್ಪ; ತಾಯಿ ಸೀತಮ್ಮ. ಅವರ ಬಾಲ್ಯ ತಮ್ಮ ತಂದೆಯ ಊರಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ ಕಳೆಯಿತು. ಶಿಕ್ಷಣ ಕುವೆಂಪು ಅವರ ಆರಂಭಿಕ ವಿದ್ಯಾಭ್ಯಾಸ ಕೂಲಿಮಠದಲ್ಲಿ ಆಯಿತು. ಮಾಧ್ಯಮಿಕ ಶಿಕ್ಷಣ ತೀರ್ಥಹಳ್ಳಿಯಲ್ಲಿ ನಡೆಯಿತು. ನಂತರ ಮೈಸೂರಿನ ವೆಸ್ಲಿಯನ್ ಮಿಷನ್ ಹೈಸ್ಕೂಲಿನಲ್ಲಿ ತಮ್ಮ ಶಿಕ್ಷಣ ಮುಂದುವರಿಸಿದರು. ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎ. ಪದವಿಯನ್ನೂ, ಕನ್ನಡದಲ್ಲಿ ಎಂ. ಎ. ಪದವಿಯನ್ನೂ ಪಡೆದರು. ಟಿ. ಎಸ್. ವೆಂಕಣ್ಣಯ್ಯನವರು ಇವರಿಗೆ ಗುರುಗಳಾಗಿದ್ದರು. ವೃತ್ತಿಜೀವನ ಕುವೆಂಪು ಅವರು ಮೈಸೂರಿನ ಮಹಾರಾಜ ಕಾಲೇಜಿನ ಪ್ರಾಧ್ಯಾಪಕರೂ, ಪ್ರಾಂಶುಪಾಲರೂ ಆಗಿದ್ದರು. ನಂತರ ಉಪಕುಲಪತಿಗಳಾದರು. ತಮ್ಮ ಕಲ್ಪನೆಯ ಕೂಸಾದ ಮಾನಸ ಗಂಗೋತ್ರಿಯನ್ನು ಕಟ್ಟಿ ಬೆಳೆಸಿದರು. ವಿಶ್ವವಿದ್ಯಾನಿಲಯವನ್ನು ಅಧ್ಯಯನಾಂಗ, ಸಂಶೋಧನಾಂಗ ಹಾಗೂ ಪ್ರಸಾರಾಂಗ ಎಂಬುದಾಗಿ ವಿಭಾಗಿಸಿದರು. ಕಡಿಮೆ ಅವಧಿಯಲ್ಲಿ ಕನ್ನಡದಲ್ಲಿ ಪಠ್ಯಪುಸ್ತಕಗಳನ್ನು ಬರೆಸಿ ಕನ್ನಡ ಮಾಧ್ಯಮದ ತರಗತಿಗಳನ್ನು ಆರಂಭಿಸಿದರು. ವೈವಾಹಿಕ ಜೀವನ ಕುವೆಂಪು ಅವರು ಹೇಮಾವತಿ ಅವರನ್ನು ವಿವಾಹವಾದರು. ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ ಹಾಗೂ ತಾರಿಣಿ ಅವರ ಮಕ್ಕಳು. ಪೂರ್ಣಚಂದ್ರ ತೇಜಸ್ವಿ ಅವರು ಕನ್ನಡದ ಅಗ್ರಮಾನ್ಯ ಸಾಹಿತಿಗಳಲ್ಲಿ ಒಬ್ಬರಾಗಿದ್ದಾರೆ. ಕೋಕಿಲೋದಯ ಚೈತ್ರ ಅವರು ಇಂಜಿನಿಯರ್ ಆಗಿ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಚಿದಾನಂದಗೌಡ ಅವರು ಕುವೆಂಪು ಅವರ ಅಳಿಯ. ನಿಧನ ಕುವೆಂಪು ಅವರು ನವೆಂಬರ್ ೧೧, ೧೯೯೪ರಂದು ಮೈಸೂರಿನಲ್ಲಿ ನಿಧನರಾದರು. ತಮ್ಮ[ಅವರ] ಹುಟ್ಟೂರಾದ ಕುಪ್ಪಳಿಯಲ್ಲಿ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು. ಕುಪ್ಪಳಿಯಲ್ಲಿರುವ ಅವರ ಸಮಾಧಿ ಒಂದು ಸ್ಮಾರಕವಾಗಿದೆ. ಸಾಹಿತ್ಯ ಕೃಷಿ ಕುವೆಂಪು ಅವರು ೨೦ನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ಅವರೊಬ್ಬ ರಸಋಷಿ. ತಮ್ಮ ಮೇರು ಕೃತಿ 'ಶ್ರೀ ರಾಮಾಯಣ ದರ್ಶನಂ'ನಲ್ಲಿ ಈ ಕಾಲಕ್ಕೆ ಅಗತ್ಯವಾದ ದರ್ಶನವನ್ನು ನೀಡಿದ್ದಾರೆ. ಅವರ ಎರಡು ಬೃಹತ್ ಕಾದಂಬರಿಗಳಾದ 'ಕಾನೂರು ಹೆಗ್ಗಡತಿ' ಹಾಗೂ 'ಮಲೆಗಳಲ್ಲಿ ಮದುಮಗಳು' ಅವರನ್ನು ಜಗತ್ತಿನ ಮಹಾನ್ ಕಾದಂಬರಿಕಾರರ ಸಾಲಿನಲ್ಲಿ ನಿಲ್ಲುವಂತೆ ಮಾಡಿವೆ. ಅವರ ನಾಟಕಗಳಿಗೆ ವೈಚಾರಿಕತೆಯ ಸ್ಪರ್ಶವಿದೆ. ಕೃತಿಗಳು ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂ (೧೯೪೯) ಖಂಡಕಾವ್ಯಗಳು ಚಿತ್ರಾಂಗದಾ (೧೯೩೬) ಕವನ ಸಂಕಲನಗಳು ಕೊಳಲು (೧೯೩೦) ಪಾಂಚಜನ್ಯ (೧೯೩೩) ನವಿಲು (೧೯೩೪) ಕಲಾಸುಂದರಿ (೧೯೩೪) ಕಥನ ಕವನಗಳು (೧೯೩೭) ಕೋಗಿಲೆ ಮತ್ತು ಸೋವಿಯಟ್ ರಷ್ಯಾ (೧೯೪೪) ಪ್ರೇಮ ಕಾಶ್ಮೀರ (೧೯೪೬) ಅಗ್ನಿಹಂಸ (೧೯೪೬) ಕೃತ್ತಿಕೆ (೧೯೪೬) ಪಕ್ಷಿಕಾಶಿ (1946) ಕಿಂಕಿಣಿ (ವಚನ ಸಂಕಲನ) (೧೯೪೬) ಷೋಡಶಿ (೧೯೪೬) ಚಂದ್ರಮಂಚಕೆ ಬಾ ಚಕೋರಿ (೧೯೫೭) ಇಕ್ಷುಗಂಗೋತ್ರಿ (೧೯೫೭) ಅನಿಕೇತನ (೧೯೬೩) ಜೇನಾಗುವ (೧೯೬೪) ಅನುತ್ತರಾ (೧೯೬೫) ಮಂತ್ರಾಕ್ಷತೆ (೧೯೬೬) ಕದರಡಕೆ (೧೯೬೭) ಪ್ರೇತಕ್ಯೂ (೧೯೬೭) ಕುಟೀಚಕ (೧೯೬೭) ಹೊನ್ನ ಹೊತ್ತಾರೆ (೧೯೭೬) ಕೊನೆಯ ತೆನೆ ಮತ್ತು ವಿಶ್ವಮಾನವ ಸಂದೇಶ (೧೯೮೧) ಕಥಾ ಸಂಕಲನ ಸಂನ್ಯಾಸಿ ಮತ್ತು ಇತರ ಕಥೆಗಳು (1936) ನನ್ನ ದೇವರು ಮತ್ತು ಇತರ ಕಥೆಗಳು (1940) ಕಾದಂಬರಿಗಳು ಕಾನೂರು ಹೆಗ್ಗಡತಿ (1936) ಮಲೆಗಳಲ್ಲಿ ಮದುಮಗಳು (1967) ನಾಟಕಗಳು ಯಮನ ಸೋಲು (1928) ಜಲಗಾರ (1928) ಬಿರುಗಾಳಿ (1930) ವಾಲ್ಮೀಕಿಯ ಭಾಗ್ಯ (1931) ಮಹಾರಾತ್ರಿ (1931) ಸ್ಶಶಾನ ಕುರುಕ್ಷೇತ್ರಂ (1931) ರಕ್ತಾಕ್ಷಿ (1933) ಶೂದ್ರ ತಪಸ್ವಿ (1944) ಬೆರಳ್‍ಗೆ ಕೊರಳ್ (1947) ಬಲಿದಾನ (1948) ಚಂದ್ರಹಾಸ (1963) ಕಾನೀನ (1974) ಪ್ರಬಂಧ ಮಲೆನಾಡಿನ ಚಿತ್ರಗಳು (1933) ವಿಮರ್ಶೆ ಕಾವ್ಯವಿಹಾರ (1946) ತಪೋನಂದನ (1950) ವಿಭೂತಿಪೂಜೆ (1953) ದ್ರೌಪದಿಯ ಶ್ರೀಮುಡಿ (1960) ರಸೋ ವೈ ಸಃ (1963) ಇತ್ಯಾದಿ (1970) ಆತ್ಮಕಥೆ ನೆನಪಿನ ದೋಣಿಯಲ್ಲಿ: ಕುವೆಂಪು ಮದುವೆ ಪ್ರಸಂಗ ಜೀವನ ಚರಿತ್ರೆಗಳು ಸ್ವಾಮಿ ವಿವೇಕಾನಂದ ರಾಮಕೃಷ್ಣ ಪರಮಹಂಸ ಅನುವಾದ ಗುರುವಿನೊಡನೆ ದೇವರಡಿಗೆ (ಭಾಗ 1, 2) (1954) ಕೊಲಂಬೋ ಇಂದ ಆಲ್ಮೋರಕೆ ಭಾಷಣ-ಲೇಖನ ಸಾಹಿತ್ಯ ಪ್ರಚಾರ (1930) ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ (1944) ಷಷ್ಠಿನಮನ (1964) ಮನುಜಮತ-ವಿಶ್ವಪಥ (1971) ವಿಚಾರ ಕ್ರಾಂತಿಗೆ ಆಹ್ವಾನ (1976) ಶಿಶು ಸಾಹಿತ್ಯ ಅಮಲನ ಕಥೆ (1924) ಮೋಡಣ್ಣನ ತಮ್ಮ (ನಾಟಕ) (1926) ಹಾಳೂರು (1926) ಬೊಮ್ಮನಹಳ್ಳಿಯ ಕಿಂದರಿಜೋಗಿ (1928) ನನ್ನ ಗೋಪಾಲ (ನಾಟಕ) (1930) ನನ್ನ ಮನೆ (1946) ಮೇಘಪುರ (1947) ಮರಿವಿಜ್ಞಾನಿ (1947) ನರಿಗಳಿಗೇಕೆ ಕೋಡಿಲ್ಲ (1977) ಇತರೆ ಜನಪ್ರಿಯ ವಾಲ್ಮೀಕಿ ರಾಮಾಯಣ ಆಯ್ದ ಸಂಕಲನಗಳು ಕನ್ನಡ ಡಿಂಡಿಮ (1968) ಕಬ್ಬಿಗನ ಕೈಬುಟ್ಟಿ (1973) ಪ್ರಾರ್ಥನಾ ಗೀತಾಂಜಲಿ (1972) ನುಡಿನಮನ ಜ್ಞಾನಪೀಠ ಪ್ರಶಸ್ತಿ ಉಲ್ಲೇಖ ಕುವೆಂಪು ಅವರು ಸಾಹಿತ್ಯ ಬೃಹನ್ಮೂರ್ತಿ; ಕಾವ್ಯಮೀಮಾಂಸೆಯ ಯಾವೂಂದು ಸರಳ ಸೂತ್ರವೂ ಅವರನ್ನು ಸಂಪೂರ್ಣವಾಗಿ ವಿವರಿಸಲಾರದು - ಏಕೆಂದರೆ, ಅವರ ಕೃತಿಗಳು ನಗ್ನ ಸತ್ಯವನೆಂತೊ ಅಂತೇ ಅತೀತ ಸತ್ಯವನ್ನೂ ಅನಾವರಣಗೊಳಿಸುತ್ತವೆ. ಸೃಜನಾತ್ಮಕ ಜೀವನಚರಿತ್ರೆ, ಸಾಹಿತ್ಯ ವಿಮರ್ಶೆ, ಕಾವ್ಯಮೀಮಾಂಸೆ, ನಾಟಕ ಮತ್ತು ಕತೆ ಕಾದಂಬರಿಯ ಕ್ಷೇತ್ರಗಳಿಗೆ ಪುಟ್ಟಪ್ಪನವರ ಕೊಡುಗೆ ಸ್ಮರಣೀಯವಾದುದು. ಅವರದು ವ್ಯಷ್ಠಿ ವಾಣಿಯಲ್ಲ; ಯುಗಧರ್ಮ, ಜನಾಂಗ ಧರ್ಮಗಳ ವಾಣಿ. ಅವರು ಬಹುಕಾಲ ತಮ್ಮ ಸಾಹಿತ್ಯದ ಮೂಲಕ ಚಿರಂಜೀವಿಯಾಗಿ ಇರುತ್ತಾರೆ. ಬಿ.ಎಂ.ಶ್ರೀ. ನೂರು ದೋಷಗಳಿದ್ದರೂ ಕಾವ್ಯವು ಕಾವ್ಯವೇ, ಒಂದು ತಪ್ಪಿಲ್ಲದಿದ್ದರೂ ಜೀವವಿಲ್ಲದ ಕಾವ್ಯ ಕಾವ್ಯವೇ ಅಲ್ಲ, ಪುಟ್ಟಪ್ಪನವರ ಉತ್ತಮ ಕವನಗಳಲ್ಲಿ ಈ ಜೀವವಿದೆ; ಇರುವುದರಿಂದಲೇ ಅವುಗಳಲ್ಲಿ ಅಮೃತತ್ವದ ಸಾರವಿದೆ. ದ.ರಾ.ಬೇಂದ್ರೆ ಯುಗದ ಕವಿಗೆ ಜಗದ ಕವಿಗೆ ಶ್ರೀ ರಾಮಾಯಣ ದರ್ಶನದಿಂದಲೇ ಕೈ ಮುಗಿದ ಕವಿಗೆ – ಮಣಿಯದವರು ಯಾರು? ರಾಮಕೃಷ್ಣ ವಚನೋದಿತ ಪ್ರತಿಭೆ ತೆರೆದ ಕವನ ತತಿಗೆ ತಣಿಯದವರು ಆರು? ಮಲೆನಾಡಿನ ಸೌಂದರ್ಯಕೆ ಕುಣಿದಾಡಿದ ಕವಿಯ ಜತೆಗೆ ಕುಣಿಯದವರು ಆರು? ಕನ್ನಡಿಸಲಿ ಶಿವ ಜೀವನ ಮುನ್ನಡೆಸಲಿ ಯುವ-ಜನ-ಮನ ಇದೆ ಪ್ರಾರ್ಥನೆ ನಮಗೆ ತಮವೆಲ್ಲಿದೆ ರವಿಯಿದಿರಿಗೆ? ಉತ್ತಮ ಕವಿ ನುಡಿ – ಚದುರಗೆ ಚಾರುತ್ವದ ಕುಂದಣದಲಿ ಚಾರಿತ್ರ್ಯದ ರತ್ನ ಚಾತುರ್ಯದ ಮಂತಣದಲಿ ಸತ್ಸಂಗದ ಯತ್ನ ಇದೆ ತೃಪ್ತಿಯು ನಿಮಗೆ ಸ.ಸ.ಮಾಳವಾಡ ಹೊಸಗನ್ನಡ ಸಾಹಿತ್ಯವನ್ನು ಹಲವಂದದಲಿ ಸಿರಿವಂತಗೊಳಿಸಿದ ಧೀಮಂತ ಸಾಹಿತಿ ಕುವೆಂಪು. ಅವರು ಸಾಹಿತ್ಯ ಸೃಷ್ಟಿಯಲ್ಲಿ ಲೌಕಿಕ ಬಾಳಿನಲ್ಲಿ ಉನ್ನತ ಸ್ಥಾನ ಪಡೆದವರಾಗಿದ್ದಾರೆ. ಅವರು ಏಕಾಂತ ಜೀವಿ, ಧ್ಯಾನಶೀಲರು, ಭಾವಸಮಾಧಿಯಲ್ಲಿ ವಿರಮಿಸುವವರು. ಆದರೆ ಕನ್ನಡ ನಾಡು ನುಡಿಗಳ ಹಿತರಕ್ಷಣೆಗಾಗಿ ಸತತವೂ ಹೋರಾಟದಲ್ಲಿ ತೊಡಗಿದವರು. ಜನಸಂಪರ್ಕದಿಂದ ದೂರವುಳಿದರೂ ಜನ ಹಿತಕಾರ್ಯದಿಂದ ವಿಮುಖರಾಗಿಲ್ಲ. ಸನಿಹದಲ್ಲಿ ಅವರನ್ನು ಕಂಡಾಗ ಅವರು ಸ್ನೇಹಪರರು, ಕುಟುಂಬವತ್ಸಲರು ಎಂಬುದು ಸ್ಪಷ್ಟವಾಗಿ ತಿಳಿದುಬರುತ್ತದೆ. ಡಿ.ಎಲ್.ನರಸಿಂಹಾಚಾರ್ ಪುಟ್ಟಪ್ಪನವರಂತೆ ಕಾವ್ಯವನ್ನು ಯಾರು ಬರೆಯಬಲ್ಲರು? ಅವರ ಕಾವ್ಯದಲ್ಲಿ ಕಾಣುವ ಮೃದು ಮಧುರ ಪದಬಂಧ, ಬಗೆಯ ಭಾವದ ಐಸಿರಿ, ಭಾವದ ರಸಪ್ರವಾಹ, ಕಾವ್ಯಾಲಂಕಾರ, ಉಕ್ತಿ ಚಮತ್ಕಾರಗಳ ವೈಭವವು ಸಹೃದಯರನ್ನು ರೋಮಾಂಚನಗೊಳಿಸಿ ಸಂತೋಷದ ಕಣ್ಣೀರನ್ನು ಕೋಡಿವರಿಸುತ್ತದೆ. ಪಾಶ್ಚಿಮಾತ್ಯ ಕಾವ್ಯ ವಿಮರ್ಶಕ ಮಾನದಂಡದಿಂದ ಅಳೆದು ನೋಡಿದರೂ ಪುಟ್ಟಪ್ಪನವರು ಮಹಾಕವಿಗಳಾಗಿ ತೇರ್ಗಡೆ ಹೊಂದುತ್ತಾರೆ. ಹಾ.ಮಾ.ನಾಯಕ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕುವೆಂಪು ಅವರ ಮಾಂತ್ರಿಕ ಲೇಖನಿ ಅಲಂಕರಿಸದ ಸಾಹಿತ್ಯ ಪ್ರಕಾರವಿಲ್ಲ. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಹೆಚ್ಚು ಕಡಿಮೆ ಒಂದೇ ಬಗೆಯಾದ ಯಶಸ್ಸನ್ನು ಗಳಿಸಿದ ಲೇಖಕರು ಯಾವುದೇ ಭಾಷೆಯಲ್ಲಾದರೂ ಹೆಚ್ಚಾಗಿ ಸಿಕ್ಕುವುದಿಲ್ಲ. ಆ ಬಗೆಯ ವಿರಳರ ಪಂಕ್ತಿಯಲ್ಲಿ ಕನ್ನಡದ ಕುವೆಂಪು ಒಬ್ಬರೆನ್ನುವುದು ಅಭಿಮಾನದ ಸಂಗತಿ. ಸುಜನಾ ಶ್ರೀ ಕುವೆಂಪು ದರ್ಶನದ ವೈಶಿಷ್ಟ್ಯ ಪರಂಪರೆ-ಯುಗ ಪ್ರಜ್ಞೆಗಳೆರಡರ ಸಮನ್ವಯದಿಂದ ಬಂದದ್ದು. ಈ ಅತಿಶಯ ಸಿದ್ಧಿ ಸಾಹಿತ್ಯಲೋಕದಲ್ಲಿ ವಿರಳ. ಜಿ.ಎಸ್.ಶಿವರುದ್ರಪ್ಪ ಕುವೆಂಪು ಅವರು ಮೂಲತಃ ಕ್ರಾಂತಿಕವಿ. ಸಾಮಾಜಿಕ ಅನ್ಯಾಯಗಳ ಬಗ್ಗೆ ಮೊದಲಿನಿಂದಲೂ ಇವರಷ್ಟು ನಿರ್ಭಯವಾಗಿ ಪ್ರತಿಭಟಿಸಿದ ಕನ್ನಡ ಕವಿ ಲೇಖಕರು ಇಲ್ಲವೇ ಇಲ್ಲ ಎಂದರೂ ಸಲ್ಲುತ್ತದೆ. ಉಚ್ಚ ವರ್ಣದ ಸಮಸ್ತ ಬೌದ್ಧಿಕ ಉಪಕರಣಗಳನ್ನು ಕೈವಶ ಮಾಡಿಕೊಂಡು, ಅವುಗಳನ್ನು ಉಪಯೋಗಿಸಿ ಉಚ್ಚವರ್ಣದ ಮೇಲೆ ಧಾಳಿ ಮಾಡಿದ್ದು, ಮತ್ತು ಅಪ್ರತಿಷ್ಠಿತ ವರ್ಗಕ್ಕೆ ಆತ್ಮಗೌರವನ್ನೂ, ಕೆಚ್ಚನ್ನೂ ತುಂಬುವುದರ ಜತೆಗೆ ಉಚ್ಚ ವರ್ಗದವರೊಂದಿಗೆ ಸಮಸ್ಪರ್ಧಿಯಾಗಿ ನಿಂತದ್ದು ಕುವೆಂಪು ಅವರ ಸಾಹಿತ್ಯಕ ಧೋರಣೆಯ ವಿಶೇಷತೆಯಾಗಿದೆ. ದೇ.ಜ.ಗೌ ಐದು ದಶಕಗಳಿಂದ ಶ್ರೀ ಕುವೆಂಪು ಸಾಹಿತ್ಯ ಕನ್ನಡ ನಾಡಿನ ಜನಮನವನ್ನು ತಣಿಸುತ್ತಾ, ಹುರಿದುಂಬಿಸುತ್ತಾ, ಹಸನುಗೊಳಿಸುತ್ತಿದೆ, ಅವರ ವಿಚಾರಶಕ್ತಿಯನ್ನು ಕೆರಳಿಸುತ್ತಾ, ನಿರಂಕುಶ ಮತಿತ್ವದ ಅವಶ್ಯಕತೆ, ಅನಿವಾರ್ಯತೆಯನ್ನು ನೆನಪಿಗೆ ತಂದುಕೊಡುತ್ತಿದೆ, ಅವರ ಬದುಕಿಗೊಂದು ತಾರಕಮಂತ್ರವಾಗಿ ಧ್ರುವತಾರೆಯಾಗಿ ಸಂಜೀವನಶಕ್ತಿಯಾಗಿ ಅದನ್ನು ತಿದ್ದುತ್ತಿದೆ, ಉನ್ನತಗೊಳಿಸುತ್ತಿದೆ, ಸಚೇತನಗೊಳಿಸುತ್ತಿದೆ, ಪುಷ್ಟಿಗೊಳಿಸುತ್ತಿದೆ. ಸಾವಿರಾರು ವರ್ಷಗಳಿಂದ ಭಾರತೀಯ ಧರ್ಮದ ಸುತ್ತ ಬೆಳೆದುಕೊಂಡು, ಅದರ ಮೂಲ ಸ್ವರೂಪವನ್ನು ಮರೆಸಿರುವ ಮೌಢ್ಯಗಳಿಗೆ ಶುಷ್ಕ ಚಾರಗಳಿಗೆ ಕಂದಾಚಾರದ ಸಂಪ್ರದಾಯಗಳಿಗೆ ಅಗ್ನಿ ಸಂಸ್ಕಾರ ಮಾಡುವಲ್ಲಿ, ಜಾತೀಯತೆಯನ್ನು ಸಾಧ್ಯವಾದಷ್ಟು ತೊಡೆಯುವಲ್ಲಿ, ಪುರೋಹಿತ ಹಾಗೂ ಸಾಮ್ರಾಜ್ಯಶಾಹಿಯನ್ನು ಅಂತ್ಯಗೊಳಿಸುವಲ್ಲಿ ಅದು ಯಶಸ್ವಿಯಾಗಿದೆ. ಭಾರತೀಯರ ಸುಖ ದುಃಖ, ಆಶೆ ಆಕಾಂಕ್ಷೆ, ಕನಸು ನನಸು ಗಳನ್ನು ಪ್ರತಿಬಿಂಬಿಸುವ ಮೂಲಕ ಅವರ ನಾಡಿಯನ್ನು ಮಿಡಿದಿದೆ. ಕೀರ್ತಿನಾಥ ಕುರ್ತಕೋಟಿ ಕುವೆಂಪು ಈ ತಲೆಮಾರಿನ ಹಿರಿಯ ಕವಿಗಳಲ್ಲೊಬ್ಬರಾಗಿದ್ದಾರೆ. ರಚನಾ ಕ್ರಮದಲ್ಲಿ ದೋಷಗಳನ್ನು ತೋರಿಸಬಹುದಾದರೂ ಅವರ ಕಾವ್ಯಶಕ್ತಿ ಸಹಜವಾದದ್ದು. ಅದು ಮುಖ್ಯವಾಗಿ 'ರೊಮ್ಯಾಂಟಿಕ್' ಜಾತಿಯ ಪ್ರತಿಭೆಯಾಗಿದ್ದರಿಂದ ಭಾವಾವೇಶ ಅಲ್ಲಿ ಅನಿವಾರ್ಯವಾಗುತ್ತದೆ. ಆದರೆ ಕುವೆಂಪು ರವರ ಕಾವ್ಯದ ಶ್ರೇಷ್ಠತೆಯಿರುವುದು ಅದು ಸಮಕಾಲೀನ ಜೀವನದ ಎಲ್ಲ ಅಂಶಗಳಿಗೂ ಪ್ರತಿಸ್ಪರ್ಧಿಯಾಯಿತೆಂಬುದೇ. ನಿಸರ್ಗದ ಚೆಲುವು, ದೇಶ ಪ್ರೇಮ, ಆದರ್ಶಪ್ರಿಯತೆ, ಕ್ರಾಂತಿಯ ವೀರಭಾವ, ಆಧ್ಯಾತ್ಮಿಕತೆ ವೊದಲಾದ ಎಲ್ಲ ವಿಷಯಗಳಿಗೂ ಅವರ ಕಾವ್ಯ ಇಂಬುಕೊಟ್ಟಿದೆ. ಹೀಗಾಗಿ ಹೊಸಗನ್ನಡ ಕಾವ್ಯದ ಇತಿಹಾಸದಲ್ಲಿ ಅವರ ಸ್ಥಾನ ಭದ್ರವಾಗಿದೆಯೆಂಬುದರಲ್ಲಿ ಯಾವ ಸಂಶಯವೂ ಇಲ್ಲ. ಕೋ.ಚೆನ್ನಬಸಪ್ಪ ಮೊದಲಿನಿಂದಲೂ ಪುಟ್ಟಪ್ಪನವರ ಪ್ರಮುಖ ಪ್ರವೃತ್ತಿ, ಪ್ರಥಮ ಆಸಕ್ತಿ ಅಧ್ಯಾತ್ಮ. ಅವರು ಜನ್ಮ ತಾಳಿದ್ದು ಇತರ ಕೋಟ್ಯಂತರ ಜನರಂತೆ ಸುಮ್ಮನೆ ಬದುಕಿ, ಬಾಳಿ ಹೋಗಲಿಕ್ಕಲ್ಲ ಎಂಬ ಆತ್ಮ ಪ್ರತ್ಯಯ - ಆತ್ಮಜ್ಞಾನ - ಪುಟ್ಟಪ್ಪನವರಿಗೆ ಚಿಕ್ಕಂದಿನಿಂದಲೇ ಉಂಟಾಗಿತ್ತು. ಆದ್ದರಿಂದ ಮಾನವ ಜನ್ಮೋದ್ದೇಶವಾದ ಆತ್ಮಸಾಕ್ಷಾತ್ಕಾರವೇ ಅವರ ಬಾಳ ಗುರಿ; ಜೀವನೋದ್ದೇಶದ ಆದಿ ಅಂತ್ಯ. ಅವರಿಗೆ ಜೀವನದಲ್ಲಿ ಮತ್ತಾವ ಉಪಾಧಿಗಳೂ ಇರಲಿಲ್ಲ. ಇಂಥ ಅವರ ಜೀವನೋದ್ದೇಶಕ್ಕೆ ನೆರವಾದುದು ಅವರ ಕಾವ್ಯಶಕ್ತಿ. ಅದನ್ನವರು ಎಂದೂ ಮರೆಮಾಚಿಲ್ಲ. ಆದರೂ ಕನ್ನಡ, ಕರ್ನಾಟಕ ಅವರ ಜೀವದ ಎರಡು ಶ್ವಾಸಕೋಶಗಳು. ಆ ಶ್ವಾಸಕೋಶಗಳ ಚಲನೆ ನಿಂತರೆ ಅವರ ಬಾಳುಸಿರೇ ನಿಂತಂತೆ. ಕೆ. ಸಚ್ಚಿದಾನಂದನ್ ಕುವೆಂಪು ಕೇವಲ ಕರ್ನಾಟಕದವರಲ್ಲ, ಭಾರತದ ಮಹಾ ಲೇಖಕ. ಅವರ 'ರಾಮಾಯಣ ದರ್ಶನಂ' ಆಧುನಿಕ ಭಾರತೀಯ ಸಾಹಿತ್ಯದ ಶ್ರೇಷ್ಠ ಕೃತಿ. ಇಲ್ಲಿ ಬರುವ ರಾಮ, ಸೀತೆ ಯೊಂದಿಗೆ ಅಗ್ನಿ ಪ್ರವೇಶ ಮಾಡುತ್ತಾನೆ. ಎಲ್ಲೆಡೆ ಮಹಿಳೆಯ ಮೇಲೆ ದೌರ್ಜನ್ಯ, ಹಿಂಸೆಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ ಕುವೆಂಪು ಕಟ್ಟಿಕೊಟ್ಟ ಈ ಚಿತ್ರಣ ಪ್ರಸ್ತುತ ಮತ್ತು ಆದರ್ಶ. ಅವರ ಶೂದ್ರ ತಪಸ್ವಿ ನಾಟಕ, ಶೋಷಣೆ ಮತ್ತು ತಾರತಮ್ಯದ ವರ್ಣ ನೀತಿಗೆ ಮುಖಾಮುಖಿಯಾದ ನಾಟಕ. ಸಾರ್ವಕಾಲಿಕ ಕಾವ್ಯ ಮೀಮಾಂಸೆಯ ಅಧ್ವರ್ಯುಗಳಲ್ಲಿ ಕುವೆಂಪು ಒಬ್ಬರು. ತಾವು ನಂಬಿದ ಕಾವ್ಯ ತತ್ವವನ್ನು ತಮ್ಮ 'ರಸೋ ವೈ ಸಃ'ದಲ್ಲಿ ಹೇಳಿದ್ದಾರೆ. ಕನ್ನಡಕ್ಕೆ ಹೊಸ ನುಡಿಗಟ್ಟು ಮತ್ತು ಹೊಸ ಕಲ್ಪನೆಗಳನ್ನು ನೀಡಿದವರು. ಕಲ್ಪನಾಶಕ್ತಿಯೊಂದಿಗೆ, ಬೌದ್ಧಿಕ ಸಾಮರ್ಥ್ಯವನ್ನು ಮೇಳೈಸಿ, ನೈತಿಕ ಮತ್ತು ಸೌಂದರ್ಯ ಮೀಮಾಂಸೆಯನ್ನು ಉನ್ನತ ಸ್ಥಾನಕ್ಕೆ ಒಯ್ದವರು. ಸ್ಮಾರಕಗಳು ಕುಪ್ಪಳಿಯಲ್ಲಿರುವ ಕುವೆಂಪು ಅವರು ಹುಟ್ಟಿದ ಮನೆ ವಸ್ತು ಸಂಗ್ರಹಾಲಯವಾಗಿದೆ. ಅಲ್ಲೇ ಇರುವ ಅವರ ಸಮಾಧಿ ಸ್ಥಳವಾದ 'ಕವಿಶೈಲ' ಒಂದು ವಿಶಿಷ್ಟ ಸ್ಮಾರಕ. ಶಿವಮೊಗ್ಗದ ಬಳಿ ಇರುವ ವಿಶ್ವವಿದ್ಯಾಲಯಕ್ಕೆ ಕುವೆಂಪು ಅವರ ಹೆಸರಿಡಲಾಗಿದೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿರುವ ಕನ್ನಡ ಅಧ್ಯಯನ ಸಂಸ್ಥೆಗೆ ಕುವೆಂಪು ಅವರ ಹೆಸರಿಡಲಾಗಿದೆ. ಅನುವಾದ ಕಾರ್ಯವನ್ನು ಪ್ರೋತ್ಸಾಹಿಸಲು ಬೆಂಗಳೂರಿನಲ್ಲಿ ಸ್ಥಾಪಿಸಲಾಗಿರುವ ಭಾಷಾ ಭಾರತಿ ಸಂಸ್ಥೆಗೆ ಕುವೆಂಪು ಅವರ ಹೆಸರಿಡಲಾಗಿದೆ. ಮೈಸೂರಿನ ಕುವೆಂಪು ನಗರದಲ್ಲಿರುವ ರಸ್ತೆಗಳಿಗೆ ಕುವೆಂಪು ಅವರ ಪರಿಕಲ್ಪನೆಗಳ, ಪಾತ್ರಗಳ ಹೆಸರುಗಳನ್ನು ಇಡಲಾಗಿದೆ. ಕುವೆಂಪು ಕುರಿತ ಕೃತಿಗಳು ಮಗಳು ಕಂಡ ಕುವೆಂಪು - ಲೇ: ತಾರಿಣಿ ಚಿದಾನಂದ ಪ್ರಕಾಶಕರು:ಪುಸ್ತಕ ಪ್ರಕಾಶನ ಅಣ್ಣನ ನೆನಪು - ಲೇ: ಕೆ ಪಿ ಪೂರ್ಣಚಂದ್ರ ತೇಜಸ್ವಿ ಪ್ರಕಾಶಕರು:ಪುಸ್ತಕ ಪ್ರಕಾಶನ ಕುವೆಂಪು - ಲೇ: ದೇಜಗೌ ಯುಗದ ಕವಿ - ಲೇ: ಡಾ.ಕೆ.ಸಿ.ಶಿವಾರೆಡ್ಡಿ ಹೀಗಿದ್ದರು ಕುವೆಂಪು - ಲೇ: ಪ್ರಭುಶಂಕರ ಕುವೆಂಪು - ಲೇ: ಎಸ್.ವಿ.ಪರಮೇಶ್ವರಭಟ್ಟ ಶ್ರೀ ಕುವೆಂಪು ಸಂಭಾಷಣೆ ಮತ್ತು ಸಂದರ್ಶನ - ಲೇ: ಎಸ್.ವೃಷಭೇಂದ್ರಸ್ವಾಮಿ ತರಗತಿಗಳಲ್ಲಿ ಕುವೆಂಪು - ಲೇ: ಎಸ್.ವೃಷಭೇಂದ್ರಸ್ವಾಮಿ ಕುವೆಂಪು ಕಾವ್ಯಯಾನ - ಲೇ: ಬಿ.ಆರ್. ಸತ್ಯನಾರಾಯಣ ಕುವೆಂಪು ನುಡಿತೋರಣ - ಸಂ: ಬಿ.ಆರ್.ಸತ್ಯನಾರಾಯಣ ನಾಟಕ-ಚಲನಚಿತ್ರ-ಧಾರಾವಾಹಿ "ಬೆರಳ್‌ಗೆ ಕೊರಳ್" ನಾಟಕವು ಚಲನಚಿತ್ರವಾಗಿದೆ. "ಕಾನೂರು ಹೆಗ್ಗಡಿತಿ" ಕಾದಂಬರಿ ಚಲನಚಿತ್ರವಾಗಿದೆ. "ಮಲೆಗಳಲ್ಲಿ ಮದುಮಗಳು" ಕಾದಂಬರಿ ಧಾರಾವಾಹಿಯಾಗಿದೆ ಹಾಗೂ ೯ ಗಂಟೆಗಳ ಅವಧಿಯ ನಾಟಕವಾಗಿಯೂ ಮೈಸೂರಿನ ರಂಗಾಯಣದಲ್ಲಿ ಮತ್ತು ಬೆಂಗಳೂರಿನ ಕಲಾಗ್ರಾಮದಲ್ಲಿ ಪ್ರದರ್ಶನಗೊಂಡಿದೆ. ಕೊಡುಗೆ ಕುವೆಂಪು ಅವರು ಯುಗಪ್ರವರ್ತಕ ಕವಿ. ಕುವೆಂಪು ಅವರು 'ಶ್ರೀ ರಾಮಾಯಣ ದರ್ಶನಂ' ರಚಿಸುವ ಮೂಲಕ ಆಧುನಿಕ ಕಾಲದಲ್ಲಿ ಮಹಾಕಾವ್ಯ ರಚನೆಗೆ ನಾಂದಿ ಹಾಡಿದರು. ಕುವೆಂಪು ಅವರು ತಮ್ಮ ಮೇರು ಕೃತಿ 'ಶ್ರೀ ರಾಮಾಯಣ ದರ್ಶನಂ'ನಲ್ಲಿ ಹೊಸ ಕಾಲಕ್ಕೆ ಅಗತ್ಯವೆನ್ನಿಸಿದ ದರ್ಶನವನ್ನು ಕಟ್ಟಿಕೊಟ್ಟಿದ್ದಾರೆ. ಕುವೆಂಪು ಅವರು ವಿಶ್ವಮಾನವ ಸಂದೇಶ ನೀಡಿದ್ದಾರೆ. ಕುವೆಂಪು ಅವರು ಮಂತ್ರಮಾಂಗಲ್ಯ ಎಂಬ ಸರಳ ವಿವಾಹ ಪದ್ಧತಿಯನ್ನು ರೂಢಿಗೆ ತಂದರು. ಕುವೆಂಪು ಅವರು ತಮ್ಮ ಕನಸಿನ ಕೂಸಾದ ಮಾನಸ ಗಂಗೋತ್ರಿಯನ್ನು ಕಟ್ಟಿ ಬೆಳೆಸಿದ್ದಾರೆ. ಕುವೆಂಪು ಅವರು ದಲಿತ ಹಾಗೂ ಬಂಡಾಯ ಚಳವಳಿಗಳಿಗೆ ಸ್ಫೂರ್ತಿಯಾಗಿದ್ದಾರೆ. 1985ರಲ್ಲಿ ಮೈಸೂರಿನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನವನ್ನು ಉದ್ಘಾಟಿಸಿದರು. ಗೌರವ/ ಪ್ರಶಸ್ತಿ ಪುರಸ್ಕಾರಗಳು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ - (ಶ್ರೀರಾಮಾಯಣ ದರ್ಶನಂ) (1955) ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಿ.ಲಿಟ್. (1956) ಪದ್ಮಭೂಷಣ (೧೯೫೮) ರಾಷ್ಟ್ರಕವಿ ಪುರಸ್ಕಾರ (೧೯೬೪) ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಿ.ಲಿಟ್. (೧೯೬೬) ಜ್ಞಾನಪೀಠ ಪ್ರಶಸ್ತಿ (ಶ್ರೀ ರಾಮಾಯಣ ದರ್ಶನಂ) (೧೯೬೮) ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಿ.ಲಿಟ್. (೧೯೬೯) ಕೇಂದ್ರ ಸಾಹಿತ್ಯ ಅಕಾಡೆಮಿಯು ಫೆಲೋಷಿಪ್ (1979) ಪಂಪ ಪ್ರಶಸ್ತಿ (೧೯೮೮) ಪದ್ಮವಿಭೂಷಣ (೧೯೮೮) ಕರ್ನಾಟಕ ರತ್ನ (೧೯೯೨) ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ (ಮರಣೋತ್ತರ) ಕುವೆಂಪು ಅವರ 113 ನೇ ಜನ್ಮ ದಿನದಂದು, ಗೂಗಲ್ ಇಂಡಿಯಾ ಅವರ ಗೌರವಾರ್ಥ ಡೂಡಲ್ ಪ್ರದರ್ಶಿಸಿತು.(2017 ಡಿಸೆಂಬರ್ 29) ಅಧ್ಯಕ್ಷತೆ, ಇತ್ಯಾದಿ 1928ರಲ್ಲಿ ಸೆಂಟ್ರಲ್ ಕಾಲೇಜು ಕರ್ಣಾಟಕ ಸಂಘದ ಆಶ್ರಯದಲ್ಲಿ ನಡೆದ ವಿದ್ಯಾರ್ಥಿ ಕವಿ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷರಾಗಿದ್ದರು. 1957ರಲ್ಲಿ ನಡೆದ 39ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ವಿಶ್ವ ಮಾನವ ದಿನ ಕರ್ನಾಟಕ ಸರ್ಕಾರವು ೨೦೧೫ರ ಡಿಸೆಂಬರ್‌ನಲ್ಲಿ ಕುವೆಂಪು ಜನ್ಮದಿನವಾದ ಡಿಸೆಂಬರ್‌ ೨೯ ಅನ್ನು "ವಿಶ್ವ ಮಾನವ" ದಿನವನ್ನಾಗಿ ಆಚರಿಸುವುದಾಗಿ ಆದೇಶ ಹೊರಡಿಸಿತು. ಈ ಮೂಲಕ ವಿಶ್ವಮಾನವ ಸಂದೇಶ ಸಾರಿದ ಕವಿಗೆ ಮತ್ತೊಂದು ಗೌರವ ಸಂದಾಯವಾದಂತಾಯ್ತು. ಹೊರಗಿನ ಸಂಪರ್ಕಗಳು ಕುವೆಂಪು ಅವರ ಅಧಿಕೃತ ತಾಣ (ಉದಯರವಿ ಪ್ರಕಾಶನ) NIC ಪುಟದಲ್ಲಿ ಕುವೆಂಪು ವಿಚಾರಮಂಟಪ.ನೆಟ್ http://kannadaratna.com/achievers/kuvempu.html ಕುವೆಂಪು ವಿಶ್ವವಿದ್ಯಾನಿಲಯ - ಶಿವಮೊಗ್ಗ ಪೂರ್ಣಚಂದ್ರ ತೇಜಸ್ವಿ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪುಟ್ಟಪ್ಪ ಕೆ ವಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಕನ್ನಡ ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು ೧೯೦೪ ಜನನ ೧೯೯೪ ನಿಧನ ಪಂಪ ಪ್ರಶಸ್ತಿ ಪುರಸ್ಕೃತರು ಕರ್ನಾಟಕದ ಏಕೀಕರಣಕ್ಕಾಗಿ ದುಡಿದ ಮಹನೀಯರು ಕವಿಗಳು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಮೈಸೂರಿನ ಬರಹಗಾರರು ಉಲ್ಲೇಖಗಳು
828
https://kn.wikipedia.org/wiki/%E0%B2%9F%E0%B2%BF.%E0%B2%AA%E0%B2%BF.%E0%B2%95%E0%B3%88%E0%B2%B2%E0%B2%BE%E0%B2%B8%E0%B2%82
ಟಿ.ಪಿ.ಕೈಲಾಸಂ
ಟಿ.ಪಿ.ಕೈಲಾಸಂ "ನಕ್ಕು ನಗಿಸುವಾತ ಸಾವಿರ್ಜನಕ್ತ್ರಾತ" ."ಕರ್ನಾಟಕ ಪ್ರಹಸನ ಪಿತಾಮಹ". ತಂಜಾವೂರು ಪರಮಶಿವ ಕೈಲಾಸಂ ಕನ್ನಡದ ಜನರ ಮನ ಮನೆಗಳಲ್ಲಿ ಚಿರಕಾಲ ಉಳಿಯುವ, ಜನಪ್ರಿಯ ಹೆಸರು. ಇವರು ಕನ್ನಡ ರಂಗಭೂಮಿಗೆ ನೀಡಿದ ಕೊಡುಗೆ ಅಪಾರ. ಆಧುನಿಕ ಕನ್ನಡ ರಂಗಭೂಮಿಯ ಹರಿಕಾರರೆಂದೇ ಕರೆಯಲ್ಪಟ್ಟ ಇ‌ವರ ಹಾಸ್ಯ ಚಟಾಕಿಗಳು ಇಂದಿಗೂ ಜನರನ್ನು ನಗಿಸುತ್ತಾ ನಲಿಸುತ್ತಾ ಇವೆ. ಕನ್ನಡ ರಂಗಭೂಮಿಯನ್ನು ಸಾಂಪ್ರದಾಯಿಕತೆಯ ಸಂಕೋಲೆಗಳಿಂದ ಹೊರಗೆಳೆದು ತಂದು ಅದಕ್ಕೆ ಹೊಸ ತಿರುವನ್ನು ಆಯಾಮಗಳನ್ನು ತಂದು ಕೊಟ್ಟವರು. ಬಾಲ್ಯ ಜೀವನ ಕೈಲಾಸಂರವರು (೨೯.೦೭.೧೮೮೪-೧೯೪೬) ಮೈಸೂರು ರಾಜ್ಯದಲ್ಲಿ ಸರ್ಕಾರಿ ಸೇವೆಯಲ್ಲಿದ್ದ ತಮಿಳು ಮೂಲದ ಮನೆತನದಿಂದ ಬಂದವರು. ಅವರ ತಂದೆ ಆಗಿನ ಕಾಲಕ್ಕೆ ಬಹು ದೊಡ್ಡ ಹೆಸರು ಮಾಡಿದ್ದ ಜಸ್ಟಿಸ್ ಪರಮಶಿವ ಅಯ್ಯರ್, ತಾಯಿ ಕಮಲಮ್ಮ. ಬೆಂಗಳೂರಿನಲ್ಲಿ ಹುಟ್ಟಿದ ಕೈಲಾಸಂ ಅವರ ಬಾಲ್ಯ ಜೀವನ ಅತ್ಯಂತ ಶಿಸ್ತಿನಿಂದ ಕಳೆಯಿತು. ವಿದ್ಯಾಭ್ಯಾಸ ನಡೆದುದು ಬೆಂಗಳೂರು, ಮೈಸೂರು, ಹಾಸನಗಳಲ್ಲಿ. ಮೆಟ್ರಿಕ್ಯುಲೇಷನ್ ಪಾಸು ಮಾಡಿದ್ದು ಮದರಾಸಿನ ಹಿಂದು ಹೈಸ್ಕೂಲಿನಲ್ಲಿ. ಮುಂದೆ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಭೂವಿಜ್ಞಾನ ಓದಿ ಬಿ.ಎ. ಪದವಿ. ಎಂ.ಎ.ಪದವಿಗಳನ್ನು ಪಡೆದು ಸರಕಾರದ ವಿದ್ಯಾರ್ಥಿವೇತನದೊಂದಿಗೆ ಲಂಡನ್ನಿಗೆ ತೆರಳಿ ರಾಯಲ್ ಕಾಲೇಜ್ ಆಫ್ ಸೈನ್ಸ್ ಸೇರಿ ಏಳು ವಿಷಯಗಳಲ್ಲಿ ಮೊದಲ ದರ್ಜೆಯಲ್ಲದೆ ಪ್ರಶಸ್ತಿಗೂ ಭಾಜನರಾದರು. ರಾಯಲ್ ಜಿಯಾಲಜಿಕಲ್ ಸೊಸೈಟಿಗೆ ಪ್ರಬಂಧ ಸಲ್ಲಿಸಿ ಫೆಲೋಷಿಪ್ ಪಡೆದರು. ಜ್ಞಾನಾರ್ಜನೆಯಂತೆ ಕ್ರೀಡೆಯಲ್ಲೂ ಆಸಕ್ತಿ. ಫುಟ್‌ಬಾಲ್‌ನಲ್ಲಿ ಅಜೇಯ ಗೋಲ್ ಕೀಪರ್. ಯೂಜಿನ್ ಸ್ಯಾಂಡೋರ ನೆಚ್ಚಿನ ಶಿಷ್ಯರಾಗಿ ವ್ಯಾಯಾಮ ಪಟುವಾಗಿದ್ದರು. ನಾಟಕಕಾರರಾಗಿ ಇಂಗ್ಲೆಂಡಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಜಾರ್ಜ್ ಬರ್ನಾಡ್ ಶಾ ಅವರ ನಾಟಕಗಳು ಕೈಲಾಸಂರವರ ಮೇಲೆ ಅಪಾರ ಪ್ರಭಾವ ಬೀರಿದ್ದವು. ಅದೇ ತಂತ್ರಗಾರಿಕೆ ಬಳಸಿ ಹಲವು ನಾಟಕಗಳನ್ನು ರಚಿಸಿದರು. ರವೀಂದ್ರನಾಥರು ಬೆಂಗಳೂರಿಗೆ ಬಂದಾಗ ಅವರ ಸಮ್ಮುಖದಲ್ಲಿ ಪ್ರದರ್ಶಿಸಿದ ನಾಟಕ ಟೊಳ್ಳುಗಟ್ಟಿ ಪ್ರಥಮ ಬಹುಮಾನ ಗಳಿಸಿತಲ್ಲದೆ ಕನ್ನಡ ರಂಗಭೂಮಿಯಲ್ಲಿ ಕ್ರಾಂತಿ ಎಬ್ಬಿಸಿತು. ಕೃತಿಗಳು ನಾಟಕಗಳು ಟೊಳ್ಳುಗಟ್ಟಿ ಅಥವಾ ಮಕ್ಕಳಸ್ಕೂಲ್ ಮನೇಲಲ್ವೇ! ಹೋಂರೂಲು, ಬಹಿಷ್ಕಾರ, ಗಂಡಸ್ಕತ್ರಿ, ನಮ್ ಬ್ರಾಹ್ಮಣ್ಕೆ, ಬಂಡ್ವಾಳಿಲ್ಲದ ಬಡಾಯಿ, ನಮ್ ಕ್ಲಬ್ಬು, ಅಮ್ಮಾವ್ರಗಂಡ, ಸತ್ತವನ ಸಂತಾಪ, ಅನುಕೂಲಕ್ಕೊಬ್ಬಣ್ಣ, ಸೀಕರ್ಣೆ ಸಾವಿತ್ರಿ, ಶೂರ್ಪನಖಾ ಕುಲವೈಭವ ಅಥವಾ ನಂಕಂಪ್ನಿ, ತಾಳಿ ಕಟ್ಟೋಕ್ಕೂಲೀನೇ, ಪೋಲಿಕಿಟ್ಟಿ, ವೈದ್ಯನವ್ಯಾಧಿ, ಸೂಳೆ . -ಮೊದಲಾದ ನಾಟಕಗಳ ಜೊತೆಗೆ ನಾಲ್ಕು ಇಂಗ್ಲಿಷ್ ನಾಟಕಗಳೂ ರಚನೆಯಾದವು. (ಟೊಳ್ಳುಗಟ್ಟಿ; BY ಕೈಲಾಸಂ ಟಿ ಪಿಪೋಲೀ ಕಿಟ್ಟಿ. BY ಕೈಲಾಸಂ ಟಿ ಪಿ) ಕಥೆಗಳು ತಾವರೆಕೆರೆ ಸಮಶ್ಪೋಯಿನ ದಂಬ್ಡಿ ಮುದ್ದೋ ಇಲ್ಲಾ ಕದ್ದೋ ಸುಂಕದ ಕಟ್ಟೆ ಶಾಮಿಯ ಸೇಡು ಕವನಗಳು ತಿಪ್ಪಾರಳ್ಳಿ ಕೋಳಿಕೆ ರಂಗ ನಂಜಿ ನನ್ ಅಪರಂಜಿ ಕಾಶಿಗ್ ಹೋದ ನಂ ಬಾವ ಬೋರನ ಭಾರ ಅಲ್ಪಜ್ಞನ ಪದ ಅರಿವು ಇಂಗ್ಲಿಷ್ ಕವನಗಳು ದಿ ಡ್ರಮಾಟಿಸ್ಟ್ (The Dramatist) ಎಟೆರ್ನಲ್ ಕೆಯಿನ್ (Eternal Cain) ಟ್ರುತ್ ನೆಕೆಡ್ (Truth Naked) ದಿ ಲೇಕ್ (The Lake) ಕೈಕೇಯೀ ದ್ರೋಣ ಕಮಿಸರೇಶನ್ (Commiseration) ಮದರ್-ಲವ್ (Mother-Love) ದಿ ಸಿಕ್ಸತ್ ಕಾಲಮಿಸ್ಟ್ ೧೯೪೩ (The Sixth columnist 1943) ಎ ಮೋನೋಲಾಗ್ (A Monolougue) ದಿ ರೆಸಿಪಿ (The Recipe) ದಿ ಸ್ಮಿಲಿನ್ ಸೆವೆನ್ ೧೯೩೦ (The Smilin' Seven 1930) ಕೃಷ್ಣ (Krishna) ಸುಭದ್ರಾ (Subhadra) ದಿ ಆರ್ಟಿಸ್ಟ್ (The Artist) ಇಂಗ್ಲಿಷ್ ನಾಟಕಗಳು ದಿ ಬರ್ಡನ್ (The Burden) ಫುಲ್ಫಿಲ್ಮೆಂಟ್ (Fulfilment) ದಿ ಪರ್ಪಸ್ (The Purpose) ದಿ ಬ್ರಾಹ್ಮಿನ್ಸ್ ಕರ್ಸ್ (The Brahmin's Curse)(Karna ; Murder of Mercy?) ಕೈಲಾಸಂ ಎಂದೂ ಪೆನ್ನು ಹಿಡಿದವರಲ್ಲ. ಕನ್ನಡಾಂಗ್ಲಾ ಭಾಷೆಯಲ್ಲಿ ಹೇಳಿದ್ದನ್ನು ಸ್ನೇಹಿತರು ಬರೆದು ಕೊಂಡರು. ಅವರ 'ಕೋಳಿಕೆ ರಂಗ' ಕವನ ಅವರು ಇಂಗ್ಲೆಂಡಿನಲ್ಲಿದ್ದಾಗ 'ಕಾನ್ಸ್ಟಂಟಿನೊಪಲ್' ಕವನವನ್ನು ಒಬ್ಬ ಇಂಗ್ಲಿಷ್ ಸಂಗೀತಗಾರ ಹೊಸ ರಾಗದಲ್ಲಿ ಹಾಡಿ, ಇದೇ ರಾಗದಲ್ಲಿ ಬೇರೆ ಹಾಡು ಹಾಡಿದರ ಅವರಿಗ ಬಹುಮಾನ ಕೊಡುವುದಾಗಿ ಸವಾಲು ಹಾಕುತ್ತಾನೆ. ಆಗ ಕೈಲಾಸಂ ಅದೇರಾಗದಲ್ಲಿ 'ಕೋಳಿಕೆ ರಂಗಾ' ಹಾಡು ಹೇಳಿ ಬಹುಮಾನ ಗಿಟ್ಟಿಸಿಕೊಳ್ಳುತ್ತಾರೆ ಎಂದು ಕಥೆ ಇದೆ(ಪ್ರತಿ ೬ಗ್ರಾಂ ಗಳ ೧೦ ಪೌಂಡು). ಆ ಹಾಡು ಹೀಗಿದೆ (ಸುಮಾರು ೧೯೨೦ ರಲ್ಲಿ ರಚನೆ.) ಕೋಳಿಕೆ ರಂಗ ನಾನು ಕೋಳಿಕೆ ರಂಗ ‘ಕೋ’ನು ‘ಳಿ’ನು ‘ಕೆ’ನು ‘ರ’ನು ಸೊನ್ನೆ ಗ ಕಕೋತ್ವ ಳಿ ಕಕೆತ್ವ ರ ಮತ್ ಸೋನ್ನೆಯುನು ಗ ಇದ್ನ ಹಾಡೋಕ್ ಬರ್ದೆ ಬಾಯ್ ಬಿಡೋವ್ನು ಹಃ ಹಃ ಹಃ ಬೆಪ್ಪು ನನ್ ಮಗ ನಾನು ಕೋಳಿಕೆ ರಂಗ ‘ಕೋ’ನು ‘ಳಿ’ನು ‘ಕೆ’ನು ‘ರ’ನು ಸೊನ್ನೆ ಗ ಕಕೊತ್ವ ಳಿ ಕಕೆತ್ವ ರ ಮತ್ ಸೋನ್ನೆಯುನು ಗ ನಮ್ಮ ತಿಪ್ಪಾರಳ್ಳಿ ಬೋರನ್ ಅಣ್ಣನ್ ತಮ್ಮನ್ ದೊಡ್ಡ್ ಮಗ ನಾ ಹುಟ್ಟಿದ್ ದೊಡ್ದ್ರಳ್ಳಿ, ಬೆಳ್ದಿದ್ ಬ್ಯಾಡ್ರಳ್ಳಿ, ಮದುವೆ ಮಾರ್ನಳ್ಳಿ ಬೆಳೆಗಳ್ ಹಾರ್ನಳ್ಳಿ; ನಮ್ ಶಾನ್ಬ್ಹೊಗಯ್ಯ, ಅಲ್ದೆ ಶೆಕ್ದಾರಪ್ಪ ಇವ್ರೆಲ್ರು ಕಂಡವ್ರೆ ನನ್ನಾ. ಹೆಂಡರ್ನು ಮಕ್ಕಳ್ನು ಬಿಟ್ಟು, ಹಟ್ಟಿ ಅದನ್ನು ಬಿಟ್ಟು, ಬಂದಿವ್ನಿ ನಾ, ನಿಮ್ಮುಂದೆ ನಿಂತಿವ್ನಿ ನಾ ನಂಹಳ್ಳಿ ಕಿಲಾಡಿ ಹುಂಜಾ! ನಾನು ಕೋಳಿಕೆ ರಂಗ ‘ಕೋ’ನು ‘ಳಿ’ನು ‘ಕೆ’ನು ‘ರ’ನು ಸೊನ್ನೆ ಗ ಕಕೋತ್ವ ಳಿ ಕಕೆತ್ವ ರ ಮತ್ ಸೋನ್ನೆಯುನು ಗ ಇದ್ನ ಹಾಡೋಕ್ ಬರ್ದೆ ಬಾಯ್ ಬಿಡೋವ್ನು ಹಃ ಹಃ ಹಃ ಬೆಪ್ಪು ನನ್ ಮಗ ಎತ್ತಿಲ್ಲದ್ ಬಂಡಿಗಳುವೆ ಎಣ್ಣೆಲ್ಲದ್ ದೀಪಗಳುವೆ, ತುಂಬಿದ್ ಮೈಸೂರಿಗ್ ಬಂದೆ; ದೊಡ್ಡ್ ಚೌಕದ ಮುಂದೆ, ದೊಡ್ಡ್ ಗಡಿಯಾರದ ಹಿಂದೆ ಕಟ್ ತಂದಿದ್ ಬುತ್ತಿನ್ ತಿಂತಿದ್ದೆ. ಅಲ್ ಕುದ್ರೆಮೇಲ್ ಕುಂತಿದ್ದೊಬ್ಬ್ ಸವಾರಯ್ಯ, ಕೆದ್ರಿದ್ ತನ್ ಮೀಸೆಮೇಲ್ ಹಾಕ್ದ ತನ್ ಕೈಯ್ಯ, ಕೇಳ್ತಾನ್ ನನ್ನಾ ಗದ್ರುಸ್ತಾಲಿ ಬೆದ್ರುಸ್ತಾಲಿ “ಲೇ, ಯಾರೋ ಯಾಕೋ ಇಲ್ಲಿ” ಅಂತ! ಹಃ ನಾನು.. ನಾನು ಕೋಳಿಕೆ ರಂಗ ‘ಕೋ’ನು ‘ಳಿ’ನು ‘ಕೆ’ನು ‘ರ’ನು ಸೊನ್ನೆ ಗ ಕಕೊತ್ವ ಳಿ ಕಕೆತ್ವ ರ ಮತ್ ಸೋನ್ನೆಯುನು ಗ ಇದ್ನ ಹಾಡೋಕ್ ಬರ್ದೆ ಬಾಯ್ ಬಿಡೋವ್ನು ಬೆಪ್ ನನ್ ಮಗ. - ಟಿ. ಪಿ. ಕೈಲಾಸಂ* ಕನ್ನಡಕ್ಕೊಬ್ನೆ ಕೈಲಾಸಂ ಕೈಲಾಸಂ ಅವರು ೧೯೪೫ರಲ್ಲಿ ಮದರಾಸಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಅವರು ಮಾಡಿದ ಭಾಷಣ ಇಡೀ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಭಾಷಣಗಳಲ್ಲೆಲ್ಲಾ ಅತ್ಯಂತ ಚಿಕ್ಕದೆಂದು, ಜೊಕ್ಕವಾಗಿತ್ತೆಂದೂ ಪ್ರಸಿದ್ಧವಾಗಿದೆ. ಏಕೆಂದರೆ ಅದರಲ್ಲಿ ಪದೇ ಪದೇ ಹೇಳಿದ್ದನ್ನೇ ಹೇಳುವ ಪರಿಪಾಠವಿರಲಿಲ್ಲ. ಪ್ರತಿಪದ, ಪ್ರತಿವಾಕ್ಯಗಳೂ ಮೊದಲೇ ನಿರ್ಧಾರಿತವಾಗಿದ್ದು, ಸಭಿಕರಿಗೆ ಮತ್ತು ಆ ದಿನದ ಸನ್ನಿವೇಶಕ್ಕೆ ಬೇಕಾದ್ದನ್ನು ಮಾತ್ರ ಹೇಳಿದ್ದರಿಂದ ಇದು ಎಲ್ಲರಿಗೂ ಅತ್ಯಂತ ಪ್ರಿಯವಾಯಿತು. ಅತಿ ಕ್ಲುಪ್ತ, ಮತ್ತು ಪ್ರಭಾವಿ ಭಾಷಣಕ್ಕೆ , ಮಾತುಕತೆಗೆ ಅವರು ಪ್ರಸಿದ್ಧರಾಗಿದ್ದರು. ಮೊದಲ ತಯಾರಿಯಿಲ್ಲದೆ ಯಾವ ಸಮಾರಂಭಕ್ಕೂ ಅವರು ಹೋಗುತ್ತಿರಲಿಲ್ಲ. ಕನ್ನಡಕ್ಕೊಬ್ನೆ ಕೈಲಾಸಂ’, ಎಂದು ಎಲ್ಲರ ಕೈಲೂ, ಭೇಷ್ ಎನ್ನಿಸಿಕೊಂಡ ಕೈಲಾಸಂ, ಕನ್ನಡ ಸಾರಸ್ವತ ಲೋಕಕ್ಕೆ ಕೊಟ್ಟ ಕೊಡುಗೆ ಅನನ್ಯ! ಯಾರೋ ಅವರನ್ನು ಸಂಬೋಧಿಸಿ, ಟಿ.ಪಿ.ಕೈಲಾಸ್,ಎಂದಾಗ ತಮ್ಮನ್ನು ತಾವೆ, ಟಿಪಿಕಲ್ ಆಸ್, ಎಂದು ಕರೆದುಕೊಂಡು, ನಗೆ ಯಾಡಿದ್ದರಂತೆ. ಪಾಶ್ಚಾತ್ಯ ಸಂಗೀತಾಸಕ್ತರಾಗಿ ಅವರು ಇಂಗ್ಲಿಷ್ ರಾಗಕ್ಕೆ ಕನ್ನಡದಲ್ಲಿ ಹಾಡು ಬರೆದು ಕೇಳುಗರಿಗೆ ಅಚ್ಚರಿ ಹುಟ್ಟಿಸುತ್ತಿದ್ದರಂತೆ. ಕೈಲಾಸಂರ ಪದ್ಯದ ತುಣುಕೊಂದು ಹೀಗಿದೆ. "ಕಲ್ಲಲ್ಲಿ ಸಿಗುವುದೇ ಕಲ್ಲಿದ್ದಿಲೆಂದೆನಿಸಿ ಕಲ್ಲನ್ನು ಕೊರೆಯಲು--ಎಲ್ಲೆಲ್ಲಿ ಕೊರೆದರೂ ಕಲ್ಲಲ್ಲದೊಂದಿಲ್ಲ ! ಬಲ್ಲೆ-- ಕಲ್ಲೇ ಇದ್ದಿಲೆಂದನಲ್ಪಜ್ಞ ". ಕೈಲಾಸಂ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಭಾಷಣದ ಕೊನೆಯಲ್ಲಿ ಹೇಳಿದ ಇಂಗ್ಲಿಷ್ ಕವನದ ಕನ್ನಡಾನುವಾದ ಹೀಗಿದೆ, "ಹೊನ್ನೆ ? ಬಲ್ ಬಿರುದುಗಳೆ ? ಹಾಲುಗಲ್ ವಿಗ್ರಹವೆ ? ಕವಿ ಬಯಸನಿಂಥದೇ ಪ್ರತಿಫಲವೆ ಬೇಕು ! ಹಿರಿಯರುಂ ಕಿರಿಯರುಂ ಕಿಲಕಿಲನೆ ನಕ್ಕೆರೆಡು ಕಣ್ಣ ಹನಿಯಿತ್ತರೆನಗದು ಅನಿತೆ ಸಾಕು" !.(ಕಣ್ಣ ಹನಿಯಿತ್ತರೆ+ ಎನಗದು ಅನಿತೆ ಸಾಕು") ನಿಧನ ಕೂತಲ್ಲಿ ಕಂಪನಿ…ನಿಂತಲ್ಲಿ ನಾಟ್ಕ ಎಂದು ಹೋದೆಡೆಯಲ್ಲೆಲ್ಲಾ ಜನರನ್ನು ನಕ್ಕು ನಗಿಸಿದ ಕೈಲಾಸಂ ನಿಜಜೀವನದ ರಂಗದಿಂದ ಮರೆಯಾದದ್ದು ೨೩.೧೧.೧೯೪೬ರಲ್ಲಿ. ಹೊರಗಿನ ಕೊಂಡಿಗಳು ಚಿಲುಮೆ - http://chilume.com/?author=43 ಕೈಲಾಸಂ @ ನಂಜನಗೂಡು: ಮರೆತ ಅಧ್ಯಾಯದ ನೆನಪು;ಪದ್ಮಾ ಶ್ರೀರಾಮ;18 Sep, 2016 ಟಿ.ಪಿ.ಕೈಲಾಸಂ ಟಿಪಿಕೈಲಾಸಂ ಉಲ್ಲೇಖಗಳು ಟಿ.ಪಿ.ಕೈಲಾಸಂ ಟಿ.ಪಿ.ಕೈಲಾಸಂ ಟಿ.ಪಿ.ಕೈಲಾಸಂ ೧೮೮೪ ಜನನ ೧೯೪೬ ನಿಧನ ಮೈಸೂರಿನ ಬರಹಗಾರರು
832
https://kn.wikipedia.org/wiki/%E0%B2%A1%E0%B2%BF.%E0%B2%B5%E0%B2%BF.%E0%B2%97%E0%B3%81%E0%B2%82%E0%B2%A1%E0%B2%AA%E0%B3%8D%E0%B2%AA
ಡಿ.ವಿ.ಗುಂಡಪ್ಪ
ಡಿ ವಿ ಜಿ(ಮಾರ್ಚ್ ೧೭, ೧೮೮೭ - ಅಕ್ಟೋಬರ್ ೭, ೧೯೭೫) ಎಂಬ ಹೆಸರಿನಿಂದ ಪ್ರಸಿದ್ಧರಾದ ಡಾ. ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರು ಕರ್ನಾಟಕದ ಪ್ರಸಿದ್ಧ ಸಾಹಿತಿ, ಪತ್ರಕರ್ತರು. ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಇವರು ಕನ್ನಡದ ಆಧುನಿಕ ಸರ್ವಜ್ಞ ಎಂದೇ ಪ್ರಸಿದ್ಧರಾದವರು. ಬಾಲ್ಯ ಜೀವನ ಡಿ.ವಿ.ಜಿ ಅವರು ೧೮೮೭, ಮಾರ್ಚ್ ೧೭ರಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ದೇವನಹಳ್ಳಿಯಲ್ಲಿ ಜನಿಸಿದರು. ವೃತ್ತಿ ಜೀವನ ಪ್ರೌಢಶಾಲೆಯಲ್ಲಿ ಸಾಹಿತ್ಯ ಕೃಷಿ ದಿವಾನ್ ರಂಗಾಚಾರ್ಯ ಅವರ ಬಗ್ಗೆ ಇಂಗ್ಲಿಷಿನಲ್ಲಿ ಬರೆದ ಲೇಖನ ಡಿ.ವಿ.ಜಿ ಅವರ ಬದುಕಲ್ಲಿ ಹೊಸ ತಿರುವು ಪಡೆಯಿತು. ಮುಂದೆ ಪುಸ್ತಕ ರೂಪಕ್ಕೆ ತರಲು ಹಲವು ಮಾರ್ಪಾಡು ಮಾಡಿದರು. ಇದು ಪ್ರಕಟವಾಗುತ್ತಿದ್ದಂತೆ ಕೃತಿ ಪ್ರಕಟಣೆ ಮೂಲಕವೂ ಹಣ ಬರುವಂತಾಯಿತು. ಗುಂಡಪ್ಪನವರ ಸಮಗ್ರ ಸಾಹಿತ್ಯ ಸಾಹಿತ್ಯ ಮಾತ್ರವಲ್ಲದೆ ಚರಿತ್ರೆ, ರಾಜನೀತಿ, ತತ್ವಜ್ಞಾನ, ಪ್ರಜಾಪ್ರಭುತ್ವ, ಸಮಾಜ ವಿಜ್ಞಾನ, ಸಾರ್ವಜನಿಕ ಜೀವನ, ಮುಂತಾದ ಹಲವಾರು ವಿಷಯಗಳನ್ನು ಕುರಿತು ಅವರು 66 ಕನ್ನಡ ಕೃತಿಗಳನ್ನು ರಚಿಸಿರುವುದರ ಜೊತೆಗೆ, ಇಂಗ್ಲಿಷ್ – ಕನ್ನಡ ಭಾಷೆಗಳೆರಡರಲ್ಲಿಯೂ ನೂರಾರು ಉಪಯುಕ್ತ ಲೇಖನಗಳನ್ನೂ ಬರೆದಿರುತ್ತಾರೆ. ಇವರ ಇಂಗ್ಲಿಷ್ ಕೃತಿಗಳು ಹಾಗೂ ಲೇಖನಗಳನ್ನು ವಿಶ್ವವಿಖ್ಯಾತ ವಿದ್ವಾಂಸರಾದ ಡಾ. ಎ.ಬಿ. ಕೀತ್ ಹಾಗೂ ಸಿ.ಎಫ್. ಆಂಡ್ರ್ಯೂಸ್ ಮತ್ತು ನಮ್ಮ ದೇಶದ ಅಗ್ರಗಣ್ಯ ವ್ಯಕ್ತಿಗಳಾಗಿದ್ದ ಎಸ್. ಕವಿತೆಗಳು ನಿವೇದನ (1942) ಉಮರನ ಒಸಗೆ ಮಂಕುತಿಮ್ಮನ ಕಗ್ಗ - I ಮರುಳ ಮುನಿಯನ ಕಗ್ಗ - II ಶ್ರೀರಾಮ ಪರೀಕ್ಷಣಂ ಅ೦ತಃಪುರಗೀತೆ ಗೀತ ಶಾಕುಂತಲಾ ಜ್ಞಾಪಕ ಚಿತ್ರಶಾಲೆ ನಿಬಂಧ ಜೀವನ ಸೌಂದರ್ಯ ಮತ್ತು ಸಾಹಿತ್ಯ ಸಾಹಿತ್ಯ ಶಕ್ತಿ ಸಂಸ್ಕೃತಿ ಬಾಳಿಗೊಂದು ನಂಬಿಕೆ ಜೀವವನಧರ್ಮ ಯೋಗ (ದೈನಂದಿನ ಜೀವನದ ಯೋಗ)-(ಗೀತೆಯ ಮೇಲೆ ಪ್ರವಚನ ಸಂಗ್ರಹ) ನಾಟಕ ವಿದ್ಯಾರಣ್ಯ ವಿಜಯ ಜಾಕ್ ಕೇಡ್ ಮ್ಯಾಕ್ ಇಂಗ್ಲಿಷಿನಲ್ಲಿ Vedanta and Nationalism (1909) The Problems of Indian Native States (1917) The Native States in the Empire (1918) The Indian Native States and the Montagu-Chelmsford Report (1918) The Government of India and the Indian States, The Indian States Committee : A Note on its Terms of Reference and Their Implications (1928) All About Mysore (1931) The States and their People in the Indian Constitution (1931) ಸಾಧನೆ ೧೯೩೫ ರಲ್ಲಿ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಸ್ಥಾಪಿಸಿದರು. ಡಿ.ವಿ.ಜಿ. ಅವರು, ಮೈಸೂರು ವಿಶ್ವವಿದ್ಯಾನಿಲಯ ಪ್ರಕಟಿಸಿದ ‘ಇಂಗ್ಲಿಷ್–ಕನ್ನಡ ನಿಘಂಟು’ ಕೃತಿಯ ಸಂಪಾದಕ ಸಮಿತಿಯಲ್ಲಿದ್ದರು. 1939ರಲ್ಲಿ ಮೈಸೂರು ರಾಜ್ಯಾಂಗ ಸುಧಾರಣಾ ಸಮಿತಿ ಸದಸ್ಯರಾಗಿದ್ದರು. ರಾಜಕೀಯ ದೃಷ್ಟಿಕೋನ ಅವರ ಈ ಮಾತುಗಳು: ‘ರಾಜದಂಡ ಹುಟ್ಟಿದ್ದು ಮನುಷ್ಯನಿಗೆ ಮನುಷ್ಯನ ವಿಷಯದಲ್ಲಿರುವ ಹೆದರಿಕೆಯಿಂದ. ರಾಜ್ಯನಿಬಂಧನೆಯಾದದ್ದೂ ಮನುಷ್ಯನಿಗೆ ಮನುಷ್ಯನಲ್ಲಿರುವ ಅಪನಂಬಿಕೆಯಿಂದ. ಮನುಷ್ಯರು ಅನ್ಯೋನ್ಯ ಸಹವಾಸದಲ್ಲಿರಬೇಕಾಗಿಬಂದ ಮೇಲೆ, ಒಬ್ಬನನ್ನೊಬ್ಬನು ನಂಬದಿದ್ದರೆ ಬದುಕು ಸಾಗದು; ಪೂರ್ತಿ ನಂಬುವುದೆಂದರೆ ವಂಚನೆಯ ಶಂಕೆ. ಹೀಗೆ ನಂಬಿಕೆ–ಅಪನಂಬಿಕೆಗಳ ಬೆರಕೆಯೇ ರಾಜ್ಯಸಂಬಂಧಗಳ ಒಳತಿರುಳು... ಸಾರ್ವಜನಿಕ ಕಾರ್ಯಕ್ಕೆಂದು ಮುಂದೆ ಬರುವವರ ಮನಸ್ಸುಗಳಲ್ಲಿ ಪ್ರತ್ಯಕ್ಷವಾಗಲ್ಲದಿದ್ದರೆ ಪರೋಕ್ಷವಾಗಿಯಾದರೂ, ಸಮೀಪದಲ್ಲಿ ಅಲ್ಲದಿದ್ದರೆ ದೂರವಾಗಿಯಾದರೂ, ಸ್ವಪ್ರಯೋಜನದ ನಿರೀಕ್ಷೆ ಅಷ್ಟೋ ಇಷ್ಟೋ ಇರುವುದು ಅಸ್ವಾಭಾವಿಕವಲ್ಲ. ಆದರೆ ಎಲ್ಲಿ ಅವರು ನೂರಕ್ಕೆ ನೂರು ಮಂದಿಯೂ ಅಂಥವರೇ ಆಗಿದ್ದಾರೆಯೋ ಆ ದೇಶ ತೀರ ಬಡದೇಶವೆನ್ನಬೇಕು. ಸ್ವಾಭಾವಿಕವಾದ ಆಶಾಪ್ರವೃತ್ತಿಯ ಮಟ್ಟದಿಂದ ಮೇಲೇರಿ ನಡೆಯಬಲ್ಲವನು ದೇಶದ ನೂರರಲ್ಲಿ ಹತ್ತು ಮಂದಿಯಾದರೂ ಎಲ್ಲಿ ದೊರೆಯುತ್ತಾರೆಯೋ ಅದೇ ಪ್ರಜಾರಾಜ್ಯವನ್ನು ಅನರ್ಥದಿಂದ ಉಳಿಸಿಕೊಳ್ಳಬಲ್ಲ ದೇಶ’. ರಾಜಕೀಯ ಒಂದು ಉದ್ಯಮವಾಗಿ ಪರಿವರ್ತನೆಯಾಗುವುದರ ಅಪಾಯದ ಬಗ್ಗೆಯೂ ಡಿವಿಜಿ ಎಚ್ಚರಿಸಿದ್ದರು. ‘ಅನ್ನ ವಸ್ತು ಸಂಪಾದನೆಗಾಗಿ ಬೇರೆ ವೃತ್ತಿಯನ್ನಿರಿಸಿಕೊಂಡು, ಕೇವಲ ಸಾರ್ವಜನಿಕ ಹಿತದೃಷ್ಟಿಯಿಂದ ರಾಜಕೀಯಕ್ಕೆ ಕೈ ಹಚ್ಚುವವರೆಲ್ಲ ನಿಷ್ಪಾಕ್ಷಿತ ರಾಜ್ಯಸ್ಥರೇ. ಅಂಥವರ ಸ್ವತಂತ್ರ ಪೋಷಣೆಯಿಂದ ಬೆಳೆಯಬೇಕಾದದ್ದು ನಮ್ಮ ರಾಜಕೀಯ’ ಎಂದು ಆಶಿಸಿದರು. ಗೌರವಗಳು / ಪ್ರಶಸ್ತಿಗಳು ಡಿ.ವಿ.ಗುಂಡಪ್ಪನವರು ೧೯೩೨ ರಲ್ಲಿ ಮಡಿಕೇರಿಯಲ್ಲಿ ನಡೆದ ೧೮ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರಾಗಿದ್ದರು. ೧೯೬೧ ರಲ್ಲಿ ಡಿ.ವಿ.ಜಿ ಅವರಿಗೆ ಮೈಸೂರು ವಿಶ್ವವಿದ್ಯಾಲಯ ಗೌರವ ಡಿ. ಲಿಟ್. ಪದವಿ ನೀಡಿ ಗೌರವಿಸಿತು. ಇದು ಡಿ.ವಿ.ಜಿ ಅವರು ಪತ್ರಿಕೋದ್ಯಮ ಹಾಗೂ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆಗಾಗಿ ಸಂದ ಪುರಸ್ಕಾರ. ೧೯೬೭ ರಲ್ಲಿ ಶ್ರೀಮದ್ಭಗವದ್ಗೀತಾ ತಾತ್ಪರ್ಯ ಎಂಬ ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು. ೧೯೭೩ ರಲ್ಲಿ ಡಿ.ವಿ.ಜಿ ಸನ್ಮಾನ ಸಮಿತಿ ಇವರಿಗೆ ಒಂದು ಲಕ್ಷ ರೂಪಾಯಿಗಳ ಗೌರವಧನ ಸಮರ್ಪಿಸಿತು. ಇದನ್ನು ತಾವೇ ಸ್ಥಾಪಿಸಿದ ಗೋಖಲೆ ಸಂಸ್ಥೆಗೆ ದಾನ ಮಾಡಿದರು. ೧೯೭೪ರಲ್ಲಿ ಭಾರತ ಸರ್ಕಾರ "ಪದ್ಮಭೂಷಣ ಪ್ರಶಸ್ತಿ" ನೀಡಿ ಗೌರವಿಸಿತು. ಭಾರತೀಯ ಅಂಚೆ ಸೇವೆ ಡಿವಿಜಿಯವರ ನೆನಪಿಗಾಗಿ ೧೯೮೮ರಲ್ಲಿ ಅಂಚೆಚೀಟಿ ಬಿಡುಗಡೆ ಮಾಡಿತು. ಅವರ ಹಾಸ್ಯಪ್ರಜ್ಞೆ ಜೀವನದಲ್ಲಿ ತೊಂದರೆಗಳಿದ್ದರೂ ಅವರಲ್ಲಿ ಹಾಸ್ಯ ಪ್ರವೃತ್ತಿಯೂ ಇತ್ತು. ಅವರು ವ್ಯಾಕರಣಕಲಿಯಲು ಗರಣಿಕೃಷ್ಣಾಚಾರ್ಯರಲ್ಲಿ ಹೋದಾಗ ಅವರಿಗೆ ಶಬ್ದಶಾಸ್ತ್ರ ಒಲಿಯದೆ ಸೂಪಶಾಸ್ತ್ರದಲ್ಲಿ ಪರಿಣತಿ ಪಡೆದುದಾಗಿ ಒಂದು ಹಾಸ್ಯ ಭರಿತ ಸಂಸ್ಕೃತ ಶ್ಲೋಕದಲ್ಲಿ ಹೇಳುತ್ತಾರೆ: ನ ವೇದಾಂತೇ ಗಾಢಾ ನಚ ಪರಿಚಿತಂ ಶಬ್ದಶಾಸ್ತ್ರಂ| ನ ವಾ ತರ್ಕೇ ವೇದೇ ನ ಚ ಸರಸತಾ ಕಾವ್ಯನಿಹವೇ| ವಯಂ ಶ್ರೀಮದ್ಬ್ಯಾಳೀಹುಳಿ ಪಳದ್ಯ ಕೊಸುಂಂಬ್ರಿತೊವ್ವೀ| ಹಯಗ್ರೀವಾಂಬೋಡೀ ಕರಿಗಡಬು ದಧ್ಯನ್ನ ರಸಿಕಾಃ|| ಅರ್ಥ: ನಾವು ವೇದಂತದಲ್ಲಿ ನುರಿತವರಲ್ಲ, ವ್ಯಾಕರಣವನ್ನೂ ಅರಿತವರಲ್ಲ, ತರ್ಕವೇದಗಳನ್ನೂ ತಿಳಿದವರಲ್ಲ, ಸಾಹಿತ್ಯದಲ್ಲಿ ಸರಸತೆಇಲ್ಲ, ಆದರೆ ಕೇವಲ ಶ್ರೀಮದ್ ಬೇಳೇಹುಳಿ,ಪಳದ್ಯ, ಕೋಸಂಬರಿ, ತೊವ್ವೆ,ಹಯಗ್ರೀವ, ಅಂಬೊಡೆ, ಕರಿಗಡಬು ಮತ್ತು ಮೊಸರನ್ನದಲ್ಲಿ ರಸಿಕರು. ಸ್ಮಾರಕ ೨೦೦೩ರಲ್ಲಿ ಬೆಂಗಳೂರಿನ ಬಸವನಗುಡಿ ಬ್ಯೂಗಲ್ ರಾಕ್ ಪಾರ್ಕಿನಲ್ಲಿ ಡಿವಿಜಿಯವರ ಪ್ರತಿಮೆಯನ್ನು ಸ್ಥಾಪಿಸಲಾಯಿತು. ನಿಧನ ೧೯೭೫ ರ ಅಕ್ಟೋಬರ್ ೭ ರಂದು ಡಿ ವಿ ಜಿ ನಿಧನರಾದರು. ಹೆಚ್ಚಿಗೆ ಓದಲು ಬಿ. ಜಿ. ಎಲ್. ಸ್ವಾಮಿ ಮಂಕುತಿಮ್ಮನ ಕಗ್ಗ ಮರುಳ ಮುನಿಯನ ಕಗ್ಗ ಕನ್ನಡ ನೆಲದಲ್ಲಿ ಗಾಂಧಿ ಡಿ.ವಿ.ಜಿ.ಗಾಂಧೀಜಿಯವರನ್ನು ಮೊಟ್ಟಮೊದಲಿಗೆ ಕರ್ನಾಟಕಕ್ಕೆ ಕರೆತಂದಿದ್ದರು. ಡಿ.ವಿ. ಗುಂಡಪ್ಪನವರ ಚೊಚ್ಚಿಲ ಕೃತಿ ‘ವೇದಾಂತ ಅಂಡ್ ನ್ಯಾಷನಲಿಸಂ ಡಿವಿಜಿ:ಪ್ರಜಾಪ್ರಭುತ್ವದ ಬೆಳಕು;ಎಸ್‌. ಸೂರ್ಯಪ್ರಕಾಶ ಪಂಡಿತ್‌;17 Mar, 2017 ; ಕಣಜ-ಡಿವಿಗುಂಡಪ್ಪ. ‘ಡಿ.ವಿ.ಗುಂಡಪ್ಪ: ಹೃದಯವಂತ ಧೀಮಂತ;Nateshababu H | Vijaya KarnatakaUpdated: 17 Mar 2012;ಅ.ರಾ.ಮಿತ್ರ ಉಲ್ಲೇಖಗಳು ಬಾಹ್ಯ ಸಂಪರ್ಕಗಳು ಡಿ.ವಿ.ಜಿ. ಅವರ ಪತ್ರಗಳು ಮರುಳ ಮುನಿಯನ ಕಗ್ಗ ಕನ್ನಡ ಸಾಹಿತ್ಯ ಡಿ.ವಿ.ಗುಂಡಪ್ಪ ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಕನ್ನಡ ಕವಿಗಳು
842
https://kn.wikipedia.org/wiki/%E0%B2%95%E0%B3%82%E0%B2%A1%E0%B3%8D%E0%B2%B2%E0%B2%BF
ಕೂಡ್ಲಿ
ಕೂಡ್ಲಿ (ಕೂಡಲಿ) ಶಿವಮೊಗ್ಗ ಜಿಲ್ಲೆಯ ಒಂದು ಪುಟ್ಟ ಊರು. ಈ ಊರು ಭಾರತ ದೇಶದ ಕರ್ನಾಟಕ ರಾಜ್ಯಕ್ಕೆ ಸೇರುತ್ತದೆ. ತುಂಗಾ ಮತ್ತು ಭದ್ರಾ - ನದಿಗಳು, ಬೇರೆ ಬೇರೆಯಾಗಿ ಉಗಮಿಸಿ, ಕೂಡ್ಲಿ (ಕೂಡಲಿ) ಎಂಬಲ್ಲಿ ಈ ಜೀವನದಿಗಳ ಸಂಗಮವಾಗುತ್ತವೆ. ಈ ಊರು ತುಂಗಭದ್ರಾ ನದಿಗೆ ಜನ್ಮ ನೀಡುವ ಸ್ಥಳ. ಪ್ರಾಮುಖ್ಯತೆ ಆದಿ ಕಾಲದ ಸಂಗಮೇಶ್ವರ ದೇವಾಲಯ, ಸಂಗಮ ಹಾಗೂ ಪರಿಸರದ ವಿಹಂಗಮ ನೋಟ ಈ ಪ್ರದೇಶವನ್ನು ಸುಂದರಗೊಳಿಸಿದೆ. ಮಗದೊಂದು ಪ್ರವಾಸಿ ತಾಣವೆಂದೂ ಹೇಳಿದರೆ ತಪ್ಪಾಗದು. ಇಲ್ಲಿಯ ರಂಗನಾಥ ಸ್ವಾಮಿ ದೇವಾಲಯವೂ ಜನಪ್ರಿಯ. ಸಂಗಮ ಸ್ಥಳದಲ್ಲಿ ಸಂಗಮೇಶ್ವರನ ಗುಡಿ ಇದೆ. ಈ ಪುಟ್ಟ ಗುಡಿ ಸಂಗಮ ಸ್ಥಳವನ್ನು ಸೂಚಿಸುತ್ತದೆ. ಸಂಗಮೇಶ್ವರ ದೇವಾಲಯಕ್ಕೆ ಮಹತ್ತರ ಇತಿಹಾಸವಿರುವುದು. ಈ ದೇವಾಲಯ ಹೊಯ್ಸಳರ ಕಾಲದ್ದೆಂದು ಹೇಳಲಾಗುತ್ತದೆ. ಪ್ರಾಚೀನ ಶಿಲ್ಪಕಲೆಗಳಿಂದ ರಾರಾಜಿಸುವ ಈ ದೇವಾಲಯ ಕೂಡ್ಲಿಯ ಪ್ರಮುಖ ಆಕರ್ಷಣೆಗಳಲ್ಲೊಂದು. ಇತಿಹಾಸ ಇಲ್ಲಿಯ ಪ್ರಾಚೀನ ಸಂಗಮೇಶ್ವರ ದೇವಾಲಯ ಹೊಯ್ಸಳರ ಕಾಲದ್ದೆಂದು ಹೇಳಲಾಗುತ್ತದೆ. ಇಲ್ಲಿ ಕೆಲವು ಪ್ರಾಚೀನ ಶಾಸನಗಳಿರುವುದುಂಟು. ದೇವಾಲಯದ ಸುಂದರ ಶಿಲ್ಪಕಲೆ ಜನರ ಮನ ಸೂರೆಗೊಳಿಸುತ್ತದೆ. ಇದಲ್ಲದೆ ಇನ್ನೂ ಕೆಲವು ಚಿಕ್ಕ ಪುಟ್ಟ ಪ್ರಾಚೀನ ದೇವಾಲಯಗಳು ಇಲ್ಲಿ ಇರುವುದುಂಟು. ಕೂಡಲಿಯಲ್ಲಿ ಶಾರದ ಪೀಠವಾದ ಕೂಡಲಿ ಶೃಂಗೇರಿ ಮಠ. ಕೂಡ್ಲಿಯಲ್ಲಿ ಆರ್ಯ ಅಕ್ಷೋಭ್ಯ ತೀರ್ಥರ ಮಠವಿದೆ. ಕೂಡ್ಲಿ ಜಾತ್ರೆ ಪ್ರತಿ ವರ್ಷ ಯುಗಾದಿ ಹಬ್ಬದ ಸಂದರ್ಭ ಕೂಡ್ಲಿಯಲ್ಲಿ ಶ್ರೀ ಸಂಗಮೇಶ್ವರ ಜಾತ್ರೆ ನಡೆಯಲಿದೆ. ಸುಮಾರು 200 ಗ್ರಾಮದ ಜನರು ಜಾತ್ರೆಯಲ್ಲಿ ಪಾಲ್ಗುಳ್ಳುತ್ತಾರೆ. ನೂರಕ್ಕು ಹೆಚ್ಚು ದೇವರುಗಳು ಕೂಡ ಜಾತ್ರೆಗೆ ಬರುತ್ತವೆ. ತುಂಗಾ, ಭದ್ರಾ ಸಂಗಮ ಸ್ಥಳದಲ್ಲಿ ದೇವರುಗಳನ್ನು ಶುಚಿಗೊಳಿಸಿ, ಪೂಜೆ ಸಲ್ಲಿಸಲಾಗುತ್ತದೆ. ಸಹಸ್ರಾರು ಭಕ್ತರು ಇಲ್ಲಿ ಬಂದು ಪುಣ್ಯ ಸ್ನಾನ ಮಾಡಿ, ಶ್ರೀ ಸಂಗಮೇಶ್ವರ ಸ್ವಾಮಿ ಪೂಜೆ ಸಲ್ಲಿಸುತ್ತಾರೆ. ಹೊಳೆಯ ನಡುಗಡ್ಡೆಯ ಮೇಲೆ ಜಾತ್ರೆಯ ಅಂಗಡಿಗಳನ್ನು ತೆಗೆಯಲಾಗುತ್ತದೆ. ತೆಪ್ಪದ ಮೂಲಕ ನಡುಗಡ್ಡೆಗೆ ಹೋಗಬೇಕಾಗುತ್ತದೆ. ಭೂಗೋಳ ಐತಿಹಾಸಿಕ ಸ್ಥಳಗಳು ಪ್ರವಾಸೋದ್ಯಮ ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣಗಳು
850
https://kn.wikipedia.org/wiki/%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B3%81
ಬೆಂಗಳೂರು
ಬೆಂಗಳೂರು ಕರ್ನಾಟಕ ರಾಜ್ಯದ ದೊಡ್ಡ ನಗರ ಮತ್ತು ರಾಜಧಾನಿ ಕೇಂದ್ರ, ಜಿಲ್ಲಾಕೇಂದ್ರ ಮತ್ತು ತಾಲ್ಲೂಕು ಕೇಂದ್ರ ಹಾಗೂ ಕಸಬಾ ಹೋಬಳಿಯ ಕೇಂದ್ರ ಬೆಂಗಳೂರು ನಗರ. ಬೆಂಗಳೂರು ತಾಲೂಕು 392 ಚ.ಕಿ.ಮೀ ವಿಸ್ತೀರ್ಣ ಹೊಂದಿದೆ. 1956ರಲ್ಲಿ ಬೆಂಗಳೂರು 3 ತಾಲ್ಲೂಕುಗಳನ್ನು ಹೊಂದಿದ್ದು, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಆನೇಕಲ್. 2020ರಲ್ಲಿ ಬೆಂಗಳೂರು 5 ತಾಲ್ಲೂಕು ಹೊಂದಿದ್ದು, ಬೆಂಗಳೂರು ತಾಲೂಕುನ್ನು ವಿಭಜಸಿ ಯಲಹಂಕ ತಾಲೂಕು ರಚನೆ, ಬೆಂಗಳೂರು ದಕ್ಷಿಣ ತಾಲೂಕನ್ನು ಕೆಂಗೇರಿ ಎಂದು ಮರು ನಾಮಕರಣ ಮಾಡಲಾಗಿದೆ, ಕೆಂಗೇರಿ ತಾಲ್ಲೂಕು ವಿಭಜಸಿ ಕೃಷ್ಣರಾಜಪುರ ತಾಲೂಕು ರಚನೆ ಮಾಡಲಾಗಿದೆ, ಮತ್ತು ಆನೇಕಲ್ ತಾಲೂಕು ಹೊಂದಿದೆ. ಆಡಳಿತದ ಅನುಕೂಲಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿ.ಬಿ.ಎಂ.ಪಿ)ಯನ್ನು ತಾಲೂಕುವಾರು ರಚನೆ ಮಾಡಲಾಗಿದೆ. ಬೆಂಗಳೂರು ಮಹಾನಗರ ಪಾಲಿಕೆ ರಚನೆ ಮಾಡಲಾಗುವುದು. 01.ಬೆಂಗಳೂರು ಮಹಾನಗರ ಪಾಲಿಕೆ 02.ಕೆಂಗೇರಿ ಮಹಾನಗರ ಪಾಲಿಕೆ 03.ಕೃಷ್ಣರಾಜ ಪುರ ಮಹಾನಗರ ಪಾಲಿಕೆ 04.ಯಲಹಂಕ ಮಹಾನಗರ ಪಾಲಿಕೆ ಬೆಂಗಳೂರು ನಗರವು ಕ್ರಿ.ಶ.೧೫೩೭ರಲ್ಲಿ ಯಲಹಂಕ ನಾಡಪ್ರಭು ಕೆಂಪೇಗೌಡರಿಂದ ನಿರ್ಮಾಣವಾಯಿತು. ಇದು ದಕ್ಷಿಣ ಪ್ರಸ್ಥಭೂಮಿಯ ಮೇಲಿದ್ದು, ಕರ್ನಾಟಕದ ಆಗ್ನೇಯ ದಿಕ್ಕಿನಲ್ಲಿದೆ. ಭಾರತದ ೫ನೇ ದೊಡ್ಡ ಮಹಾನಗರವಾಗಿರುವ ಬೆಂಗಳೂರು ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ೩ನೇ ಸ್ಥಾನದಲ್ಲಿದೆ. ಜಗತ್ತಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಮಹತ್ತರವಾದ ಕಾಣಿಕೆ ನೀಡುತ್ತಾ ಬಂದಿರುವ ಕಾರಣ ಬೆಂಗಳೂರು ವಿಶ್ವಾದ್ಯಂತ ಭಾರತದ 'ಸಿಲಿಕಾನ್ ವ್ಯಾಲಿ' ಎಂದೇ ಪ್ರಸಿದ್ಧ. ಸಮುದ್ರ ಮಟ್ಟದಿಂದ ಸುಮಾರು ೩೦೦೦ ಅಡಿ (೯೧೪.೪ ಮೀ) ಗಳಿಗಿಂತ ಎತ್ತರದಲ್ಲಿರುವ ಬೆಂಗಳೂರು ನಗರವು ವರ್ಷವಿಡೀ ಆಹ್ಲಾದಕರ ವಾತಾವರಣ ಹೊಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕೆರೆಗಳನ್ನು ಹೊಂದಿದೆ. 'ಕಬ್ಬನ್ ಪಾರ್ಕ್', 'ಲಾಲ್ ಬಾಗ್'ಗಳಂತಹ ದೊಡ್ಡ ಉದ್ಯಾನವನಗಳನ್ನು ಹೊಂದಿರುವ ಈ ನಗರವು 'ಉದ್ಯಾನ ನಗರಿ' ಎಂದೂ ಪ್ರಸಿದ್ಧ. ವಿಶ್ವದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯಮಿಗಳ ಅಚ್ಚುಮೆಚ್ಚಿನ ೧೦ ನಗರಗಳಲ್ಲಿ ಬೆಂಗಳೂರು ಕೂಡ ಒಂದು. ಬೆಂಗಳೂರು ಜಿಲ್ಲೆಯ ತಾಲ್ಲೂಕುಗಳು ಮತ್ತು ವಿಸ್ತೀರ್ಣ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯು ವಿಸ್ತೀರ್ಣದಲ್ಲಿ ಚಿಕ್ಕದಾಗಿರುವ ಕಾರಣ ಒಂದು ಜಿಲ್ಲೆಯಾಗಿ ಮಾಡಲಾಗಿದೆ ಮತ್ತು ಹೆಚ್ಚು ಜನಸಂಖ್ಯೆ ಹೊಂದಿರುವ ಕಾರಣ ಏರಡು ಜಿಲ್ಲಾ ಕೇಂದ್ರಗಳನ್ನೂ ಒಳಗೊಂಡಿದೆ. ಬೆಂಗಳೂರು ಜಿಲ್ಲೆಯ ಹೋಬಳಿಗಳು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯು ವಿಸ್ತೀರ್ಣದಲ್ಲಿ ಚಿಕ್ಕದಾಗಿರುವ ಕಾರಣ ಒಂದು ಜಿಲ್ಲೆಯಾಗಿ ಮಾಡಲಾಗಿದೆ ಮತ್ತು ಹೆಚ್ಚು ಜನಸಂಖ್ಯೆ ಹೊಂದಿರುವ ಕಾರಣ ಏರಡು ಜಿಲ್ಲಾ ಕೇಂದ್ರಗಳನ್ನೂ ಒಳಗೊಂಡಿದೆ. ಭೂಗೋಳ ಬೆಂಗಳೂರು ಸಮುದ್ರ ಮಟ್ಟ ದಿಂದ ೯೦೦ ಮೀ ಎತ್ತರದಲ್ಲಿದೆ. ಭೌಗೋಳಿಕವಾಗಿ ೧೨° ೩೯' ಉ ಹಾಗೂ ೧೩° ಉ ಅಕ್ಷಾಂಶದಲ್ಲಿದ್ದರೂ ಕೂಡ ಬೆಂಗಳೂರಿನಲ್ಲಿ ಸದಾಕಾಲ ತಂಪು ವಾತಾವರಣವಿರುವುದು, ಸುಮಾರು ೨೪°C ರಿಂದ ೩೫°C ರವರೆಗೆ ಉಷ್ಣಾಂಶವಿರುವುದು. ಸದಾಶಿವನಗರದ ರಮಣಶ್ರೀ ಪಾರ್ಕ್ ಬೆಂಗಳೂರಿನ ಅತೀ ಎತ್ತರದ ಪ್ರದೇಶವಾಗಿದೆ. ಈ ಮೊದಲು ಮಲ್ಲೇಶ್ವರದ ವಯ್ಯಾಲಿ ಕಾವಲ್ ಎತ್ತರದ ಪ್ರದೇಶವಾಗಿತ್ತು. ಬೆಂಗಳೂರಿನ ಹೊಸಕೆರೆಹಳ್ಳಿ ಅತಿ ತಗ್ಗಿನ ಪ್ರದೇಶವಾಗಿದೆ. ಡೆಕ್ಕನ್ ಪ್ರಸ್ತಭೂಮಿಯ ಒಂದು ಭಾಗವಾದ ಮೈಸೂರು ಪ್ರಸ್ತಭೂಮಿಯ ಹೃದಯ ಭಾಗದಲ್ಲಿ ನೆಲೆಸಿರುವ ಈ ನಗರವು, ಕರ್ನಾಟಕದ ಆಗ್ನೇಯ ಭಾಗದಲ್ಲಿದೆ. ೭೪೧ ಚ.ಕಿ.ಮೀ. ವಿಸ್ತೀರ್ಣವುಳ್ಳ ಈ ಪ್ರದೇಶವು ೫.೮ ಮಿಲಿಯನ್ (ಅತಿ ಹೆಚ್ಚು ಜನಸಂಖ್ಯೆಯುಳ್ಳ ಮೂರನೆ ನಗರ) ಜನಸಂಖ್ಯೆಯನ್ನು ಹೊಂದಿದೆ. ಮುಖ್ಯವಾಗಿ ಇದು ಸಮುದ್ರ ಮಟ್ಟದಿಂದ ೩೧೧೩ ಅಡಿ(೯೪೯ ಮಿ.) ಎತ್ತರದಲ್ಲಿ ಸ್ಥಿತವಾಗಿರುವುದರಿಂದ, ಸುಂದರವಾದ ವಾತಾವರಣವನ್ನು ಹೊಂದಿದೆ. ಉಷ್ಣವಲಯದ ವಾತಾವರಣವಿರುವುದರಿಂದ, ಈ ಪಟ್ಟಣವು ಪದೇ ಪದೇ ಮಳೆಯನ್ನು ಅನುಭವಿಸುತ್ತ ಬೇಸಿಗೆಗಾಲದಲ್ಲಿ ಬೆಚ್ಚಗಿದ್ದು ಚಳಿಗಾಲದಲ್ಲಿ ತಂಪಾಗಿರುತ್ತದೆ. ಇಂತಹ ಸುಂದರ ವಾತಾವರಣವು ಒಂದೊಮ್ಮೆ ನಿವೃತ್ತಿ ಹೊಂದಿದವರನ್ನು ಆಕರ್ಷಿಸಿದ್ದು, ನಿವೃತ್ತಿ ಹೊಂದಿದವರ ಸ್ವರ್ಗ ಎಂದೂ ಕೂಡ ಇದಕ್ಕೆ ಕರೆಯಲಾಗುತ್ತಿತ್ತು. ಬೇಸಿಗೆಯಲ್ಲಿ ತಾಪಮಾನವು ೨೦ ರಿಂದ ೩೬ ಡಿಗ್ರಿಯಿದ್ದು, ಚಳಿಗಾಲದಲ್ಲಿ ೧೭ ರಿಂದ ೨೭ ಡಿಗ್ರಿಯಾಗಿರುತ್ತದೆ. ಇತಿಹಾಸ ಕ್ರಿಸ್ತ ಶಕ ೧೫೩೭ರ ತನಕ ಬೆಂಗಳೂರು ದಕ್ಷಿಣ ಭಾರತದ ಸಂಸ್ಥಾನಗಳಾದ ಗಂಗ, ಚೋಳ ಮತ್ತು ಹೊಯ್ಸಳರ ಆಳ್ವಿಕೆಗೆ ಒಳಪಟ್ಟಿದೆ. ನಂತರ ವಿಜಯನಗರ ಸಾಮ್ರಾಜ್ಯದ ನಾಡ ಪ್ರಭು ಕೆಂಪೇಗೌಡರು ಬೆಂಗಳೂರಿನಲ್ಲಿ ಮಣ್ಣಿನ ಕೋಟೆ ಕಟ್ಟಿ ಆಧುನಿಕ ಬೆಂಗಳೂರಿನ ಉದಯಕ್ಕೆ ಕಾರಣಕರ್ತರಾದರು. ಮರಾಠರು ಮತ್ತು ಮುಘಲರ ಅಲ್ಪಾವಧಿ ಆಡಳಿತಕ್ಕೆ ಒಳಪಟ್ಟಿದ್ದ ಬೆಂಗಳೂರು, ಮೈಸೂರು ರಾಜರ ಆಧಿಪತ್ಯದಲ್ಲೇ ಉಳಿದಿತ್ತು. ನಂತರ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರ ಆಡಳಿತಕ್ಕೆ ಒಳಪಟ್ಟ ಬೆಂಗಳೂರು, ನಾಲ್ಕನೇ ಆಂಗ್ಲೋ ಮೈಸೂರು ಯುದ್ಧ (೧೭೯೯) ದಲ್ಲಿ ಬ್ರಿಟೀಷರ ಪಾಲಾಯಿತು. ತದನಂತರ ಬ್ರಿಟೀಷರು ಮೈಸೂರು ಸಂಸ್ಥಾನವನ್ನು ತಮ್ಮ ಆಡಳಿತದ ಒಂದು ರಾಜ್ಯವನ್ನಾಗಿಸಿ, ಬೆಂಗಳೂರನ್ನು ಅದರ ರಾಜಧಾನಿಯಾಗಿ ಘೋಷಿಸಿ, ಮೈಸೂರು ಒಡೆಯರ ಆಡಳಿತಕ್ಕೊಪ್ಪಿಸಿದರು. ಬೆಂಗಳೂರು ೧೫೩೭|೧೫೩೭ರಲ್ಲಿ ಕೆಂಪೇಗೌಡರ (೧೫೧೦ - ೧೫೭೦) ರಾಜಧಾನಿಯಾಗಿತ್ತು.ಈ ನಗರವನ್ನು ಕೆಂಪೇಗೌಡರು ನಿರ್ಮಿಸಿದರು. ಕೆಂಪೇಗೌಡ (೧೫೧೦-೧೫೭೦) ಈ ನಗರವನ್ನು "ಗಂಡು ಭೂಮಿ" ಮತ್ತು "ನಾಯಕರ ರಾಜ್ಯ" ಎಂದು ಹೇಳುತಿದ್ದರು. ಹದಿನೆಂಟನೇ/ಹತ್ತೊಂಬತ್ತನೇ ಶತಮಾನದಲ್ಲಿ ಬೆಂಗಳೂರು ಒಂದು ನಗರವಾಗಿ ಬೆಳೆಯಿತು. ಆಗ ಪ್ರಮುಖವಾಗಿ ನಗರದಲ್ಲಿ ಎರಡು ಮುಖ್ಯ ರಸ್ತೆಗಳಿದ್ದವು. ಅವು "ಚಿಕ್ಕಪೇಟೆ" ಮತ್ತು "ದೊಡ್ಡಪೇಟೆ" ರಸ್ತೆಗಳು. ಸ್ವಾತಂತ್ರ್ಯಾನಂತರ ಬೆಂಗಳೂರು ಬಹು ದೊಡ್ಡ ಕೈಗಾರಿಕಾ ಉತ್ಪಾದನಾ ಕ್ಷೇತ್ರಗಳಿಗೆ ಮನೆಯಾಯಿತು. ಶಾಂತಿ ಸಮೃದ್ಧಿಯೂ, ಪರಿಸರ ಸಮೃದ್ಧಿಯೂ ಜನರನ್ನು ಈ ಊರಿನೆಡೆಗೆ ಆಕರ್ಷಿಸಿತು. ಹೆಚ್ ಎ ಎಲ್, ಬಿ ಇ ಎಲ್, ಐ ಟಿ ಐ, ಇಸ್ರೋ ನಂತಹ ಬಹು ದೊಡ್ಡ ಉತ್ಪಾದನಾ ಘಟಕಗಳಿಗೆ ಮನೆಯಾಯಿತು. ಕೆಂಪೇಗೌಡರ ಮಗನಾದ ಕೆಂಪೇಗೌಡ-೨ ಅನೇಕ ದೇವಸ್ಥಾನ ಮತ್ತು ಗೋಪುರಗಳನ್ನು ನಿರ್ಮಿಸಿದನು. ಅವುಗಳಲ್ಲಿ ಪ್ರಮುಖವಾದ ನಾಲ್ಕು ಗೋಪುರಗಳನ್ನು ಈಗಿನ ಈ ಸ್ಥಳಗಳಲ್ಲಿ ಕಾಣಬಹುದಾಗಿದೆ. ಲಾಲಭಾಗ್ ಕೆಂಪಾಂಬುಧಿ ಕೆರೆ ಹಲಸೂರು ಕೆರೆ ಮೇಖ್ರಿ ವೃತ್ತ ಸಂಸ್ಕೃತಿ ಮತ್ತು ವಿದ್ಯಾಭ್ಯಾಸ ಕಲೆ ಮತ್ತು ಸಂಸ್ಕೃತಿಯ ಬೀಡಾಗಿರುವ ಬೆಂಗಳೂರು ವಿದ್ಯಾಭ್ಯಾಸಕ್ಕೆ ಬಹಳ ಹೆಸರುವಾಸಿ. ಇಲ್ಲಿಯ ಸಂಸ್ಕೃತಿಯೂ ಹಲವು ಪರದೇಶೀಯರನ್ನು ಶತಮಾನಗಳಿಂದ ಆಕರ್ಷಿಸಿದೆ. ಬೆಂಗಳೂರು ನಗರವು ಬಹುಮುಖ ಸಂಸ್ಕೃತಿಯನ್ನು ಹೊಂದಿದ್ದರೂ ಕೂಡ, ಬಹುಪಾಲು ಜನರು ಹಿಂದುಗಳಾಗಿದ್ದಾರೆ. ಇಲ್ಲಿ ವೈವಿಧ್ಯಮಯ ಸಂಸ್ಕೃತಿ ಇದೆ . ಕನ್ನಡವು ಇಲ್ಲಿಯ ಅಧಿಕೃತ ಭಾಷೆ‌. ಇಲ್ಲಿ ಬಳಕೆಯಲ್ಲಿರುವ ಇತರ ಭಾಷೆಗಳೆಂದರೆ ಉರ್ದು, ತೆಲುಗು ಮತ್ತು ಮಲಯಾಳಮ್. ಮುಂಬಯಿ ನಂತರ ಹಚ್ಚಿನ ಸಾಕ್ಷರತಾ ಪ್ರಮಾಣ (೮೩%) ಹೊಂದಿದ ಪ್ರದೇಶ ಇದಾಗಿದೆ. ನಗರದ ಶ್ರೀಮಂತ ಸಂಸ್ಕೃತಿಯು, ರಂಗ ಶಂಕರ, ಚೌಡಯ್ಯ ಮೆಮೋರಿಯಲ್ ಹಾಲ್ ಮತ್ತು ರವೀಂದ್ರ ಕಲಾಕ್ಷೇತ್ರಗಳಂತಹ ಸಂಸ್ಥೆಗಳನ್ನು ಪ್ರೋತ್ಸಾಹಿಸುತ್ತ ಸಾಂಸ್ಕೃತಿಕ ಮತ್ತು ಆಧುನಿಕ ರಂಗಭೂಮಿಯಾಗಿ ಬೆಳೆಯಲು ಭದ್ರ ಬುನಾದಿಯಾಗಿದೆ. "ಬೆಂಗಳೂರು ಹಬ್ಬ"ವು ವರ್ಷಕ್ಕೊಮ್ಮೆ ನಡೆಯುವ ಉತ್ಸವವಾಗಿದ್ದು, ಜನರು ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಇದೊಂದು ಉತ್ತಮವಾದ ಅವಕಾಶ ಒದಗಿಸುತ್ತದೆ. ದೀಪಾವಳಿ ಮತ್ತು ಗಣೇಶ ಚತುರ್ಥಿಯು ಇನ್ನೆರಡು ಪ್ರಮುಖ ಹಬ್ಬಗಳಾಗಿದ್ದು ಜೊತೆಗೆ ರಂಝಾನ್, ಬಕ್ರೀದ್, ಕ್ರಿಸ್ಮಸ್ ಹಬ್ಬ ಗಳ್ಳನ್ನು ಆಚರಿಸುತ್ತಾರೆ ಶ್ರೀಮಂತ ಧಾರ್ಮಿಕ ಸಂಪ್ರದಾಯಕ್ಕೆ ಸಾಕ್ಷಿಯಾಗಿವೆ. ಬೆಂಗಳೂರಿನ ವೆಂಕಟ್ಟಪ್ಪ ಚಿತ್ರ ಕಲಾ ಪರಿಷತ್ತು, ಭಾರತೀಯ ವಿದ್ಯಾ ಭವನ , ಭಾರತೀಯ ವಿಜ್ಞಾನ ಮಂದಿರ, ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ಮತ್ತಿತರ ವಿವಿಧ ರೀತಿಯ ಶಿಕ್ಷಣದಲ್ಲಿ ಮಂಚೂಣಿಯಲ್ಲಿವೆ. ಬೆಂಗಳೂರಿನಲ್ಲಿ ಹಲವು ದೇಶೀಯ ಮತ್ತು ಪಾಶ್ಚ್ಯಾತ್ಯ ಸಂಸ್ಕೃತಿಗಳು ಮಿಲನಗೊಂಡಿವೆ. ಆದುದರಿಂದ ಇದು ಈಗ ಕಾಸ್ಮೊಪಾಲಿಟನ್ ಸಿಟಿ ಎಂತಲೂ ಕರೆಯಲ್ಪಡುತ್ತಿದೆ. ಇಲ್ಲಿನ ದೂರದರ್ಶನ ಹಾಗೂ ಆಕಾಶವಾಣಿ ಕೇಂದ್ರಗಳು ಹೆಸರುವಾಸಿ. ದೇಶದ ಮೊದಲ ಖಾಸಗಿ ಎಫ್. ಎಮ್. ರೇಡಿಯೋ, ರೇಡಿಯೋ ಸಿಟಿ ಪ್ರಾರಂಭವಾಗಿದ್ದು ಇಲ್ಲೇ. ಹಾಗೂ ಕರ್ನಾಟಕದ ಮೊಟ್ಟಮೊದಲ ಸಮುದಾಯ ರೇಡಿಯೋಗೆ ಪರವಾನಗಿ ಸಿಕ್ಕಿ ತರಂಗಗಳಲ್ಲಿ ಪ್ರಸಾರವಾದದ್ದು ಇಲ್ಲಿಯೇ. ರೇಡಿಯೋ ಹೆಸರು ರೇಡಿಯೋ ಆಕ್ಟೀವ್ ತರಂಗಾಂತರ ೧೦೭.೮ ಪ್ರತಿಷ್ಠೆಯ ವಿದ್ಯಾ ಸಂಸ್ಥೆಗಳಾದ ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆ(ಐ.ಐ.ಎಮ್) ಗಳನ್ನು ಇಲ್ಲಿ ಕಾಣಬಹುದು. ಇಷ್ಟೇ ಅಲ್ಲದೆ, ಬಹು ಸಂಖ್ಯೆಯಲ್ಲಿ ಇಂಜಿನೀಯರಿಂಗ್, ಮೆಡಿಕಲ್ ಮತ್ತು ಮ್ಯಾನೇಜಮೆಂಟ್ ಕಾಲೇಜುಗಳು ಕೂಡ ಇಲ್ಲಿವೆ. ಕೈಗಾರಿಕೆ ಹಿಂದುಸ್ತಾನ ಏರೊನಾಟಿಕ್ಸ್ ಲಿಮಿಟೆಡ್ (ಎಚ್.ಎ.ಎಲ್), ಭಾರತ ಎಲೆಕ್ಟ್ರೊನಿಕ್ಸ್ ಲಿಮಿಟೆಡ್ (ಬಿ.ಇ.ಎಲ್), ಭಾರತ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿ.ಇ.ಎಮ್.ಎಲ್), ಹಿಂದುಸ್ತಾನ ಮಷೀನ್ ಟೂಲ್ಸ್ (ಎಚ್.ಎಮ್.ಟಿ) ಮತ್ತು ಇಂಡಿಯನ್ ಸ್ಪೆಸ್ ರಿಸರ್ಚ್ ಒರ್ಗನೈಸೆಷನ್ (ಇಸ್ರೊ) ಇವುಗಳು ತಮ್ಮ ಪ್ರಧಾನ ಕಛೇರಿಗಳನ್ನು ಇಲ್ಲಿ ತೆರೆದಿದುದರಿಂದ, ನಗರವು ಒಂದು ಉತ್ಪಾದನಾ ಕೇಂದ್ರವಾಗಿ ಬೆಳೆಯಿತು. ಕಂಪನಿಗಳಾದ ಇನ್ಫೊಸಿಸ್, ವಿಪ್ರೊ ಮತ್ತು ಟಿಸಿಎಸ್ ಗಳು ಇಲ್ಲಿ ತಮ್ಮ ಪ್ರಧಾನ ಕಛೇರಿಗಳನ್ನು ತೆರೆದಿದುದರಿಂದ, ನಗರದ ಆರ್ಥಿಕ ಪ್ರಗತಿಯು ಮಹತ್ತರವಾಗಿ ಬೆಳೆಯಿತು. ಬೆಂಗಳೂರಿನಲ್ಲಿರುವ ಇತರ ಪ್ರಮುಖ ಕಂಪನಿಗಳೆಂದರೆ ಇಂಟೆಲ್, ಟೆಕ್ಸಸ್ ಇನ್ಸ್ತ್ರುಮೆನ್ತ್ಸ್, ಕ್ವಾಲ್ಕಾಮ್, ಆರ್ಮ್, ಬ್ರಾಡ್ಕಾಮ್, ಇ.ಎಮ್.ಸಿ. ಸ್ಕುವೆರ್, ನೆಟ್ ಆಪ್, ಸ್ಯಾನ್ ಡಿಸ್ಕ್, ಎಲ್.ಜಿ, ಸ್ಯಾಮ್ಸಂಗ್ ಮತ್ತು ಐ.ಬಿ.ಎಮ್. ಇಲ್ಲಿ ಸೃಷ್ಟಿಯಾದಂತಹ ಉದ್ಯೋಗ ಮಾರುಕಟ್ಟೆಯು ಜಗತ್ತಿನಾದ್ಯಂತ ಎಲ್ಲರನ್ನೂ ಆಕರ್ಷಿಸುತ್ತದೆ, ಇದೊಂದು ಬಹುಸಂಸ್ಕೃತಿ ಹಾಗೂ ಬಹುಜನಾಂಗೀಯ ಸಮಾಜವನ್ನಾಗಿ ಪರಿವರ್ತಿಸಲು ಸಹಾಯವಾಯಿತು. ಬೆಂಗಳೂರು ಯಾವುದೇ ಭಾರತೀಯ ನಗರಕ್ಕಿಂತ ಭಿನ್ನವಾಗಿದೆ, ಇದು ತನ್ನ ಪರಿಪೂರ್ಣ ವರ್ಷಪೂರ್ತಿ ಹವಾಮಾನ, ರಾತ್ರಿಜೀವನ ಮತ್ತು ಆಧುನಿಕ ಜೀವನಶೈಲಿಗೆ ಹೆಸರುವಾಸಿಯಾಗಿದೆ. ಬೆಂಗಳೂರು ಅನಿಯಮಿತ ವ್ಯಾಪಾರ ಅವಕಾಶಗಳು, ಅಭಿವೃದ್ಧಿ ಹೊಂದುತ್ತಿರುವ ಸ್ಟಾರ್ಟ್-ಅಪ್‌ಗಳು ಮತ್ತು ಉತ್ತಮ ಹವಾಮಾನವನ್ನು ಸಹ ಹೊಂದಿದೆ. ಅನೇಕ ಜನರು ಬೆಂಗಳೂರಿಗೆ ಸ್ಥಳಾಂತರಗೊಳ್ಳುವ ಮೂಲ ಕಾರಣ ಮಿತಿಯಿಲ್ಲದ ಉದ್ಯೋಗ ಅವಕಾಶಗಳು ಮತ್ತು ವ್ಯಾಪಾರ ಅವಕಾಶಗಳು. ಈ ನಗರವು ಕೆಲವು ಉನ್ನತ ಐಟಿ ಬ್ರ್ಯಾಂಡ್‌ಗಳ ಪ್ರಧಾನ ಕಛೇರಿಯಾಗಿದೆ. ಇದು ಜಾಗತಿಕವಾಗಿ ವಿಪ್ರೋ, ಗೂಗಲ್, ಇನ್ಫೋಸಿಸ್ ಮುಂತಾದ ಕೆಲವು ಅತ್ಯುತ್ತಮ ಐಟಿ ಕಂಪನಿಗಳಿಗೆ ಕೇಂದ್ರವಾಗಿದೆ. ಮಾಧ್ಯಮ ಬೆಂಗಳೂರಿನಲ್ಲಿ ಮೊದಲ ಮುದ್ರಣಾಲಯವನ್ನು ೧೮೪೦ರಲ್ಲಿ ಸ್ಥಾಪಿಸಲಾಯಿತು. ೧೮೫೯ ರಲ್ಲಿ "ಪಂಜಾಬ್ ಕೇಸರಿ" ಎಂಬ ಮೊದಲ ಇಂಗ್ಲಿಷ್ ವಾರ ಪತ್ರಿಕೆ ಪ್ರಕಟವಾಗಿತ್ತು ಮತ್ತು ೧೮೬೦ ರಲ್ಲಿ "ಮೈಸೂರು ವ್ರಿತ್ತಂತ ಬೋಧಿನಿ" ಎಂಬ ಕನ್ನಡ ಪತ್ರಿಕೆ ಪ್ರಕಟವಾಗಿತ್ತು. ಈಗ "ವಿಜಯ ಕರ್ನಾಟಕ" ಮತ್ತು "ದಿ ಟೈಂಸ್ ಆಫ್ ಇಂಡಿಯಾ" ತುಂಬಾ ಜನಪ್ರಿಯವಾಗಿದೆ ಹಾಗೂ "ಪ್ರಜಾವಾಣಿ" ಮತ್ತು "ಡೆಕ್ಕನ್ ಹೆರಾಲ್ಡ್" ಅತಿ ದೊಡ್ಡ ಮುದ್ರಣಾಲಯಗಳನ್ನು ಹೊಂದಿದೆ. ಬೆಂಗಳೂರು ಟಿವಿ ಮಾಧ್ಯಮ ಮೊದಲ ಬಾರಿಗೆ ನವೆಂಬರ್ ೧ ೧೯೮೧ ರಂದು "ದೂರದರ್ಶನ" ಮುಖಾಂತರ ಪ್ರಾರಂಭವಾಯಿತು. ೧೯ ನವೆಂಬರ್ ೧೯೮೩ ರಂದು ದೂರದರ್ಶನ ನಿರ್ಮಾಣ ಕೇಂದ್ರವನ್ನು ಸ್ಥಾಪಿಸಿ ವಾರ್ತಾ ಪ್ರಸಾರವನ್ನು ಪ್ರಾರಂಭಿಸಿತು. ನಂತರ ೧೯೯೧ ರಂದು ಕನ್ನಡ ದೂರದರ್ಶನ "ಡಿಡಿ ಚಂದನ" ಪ್ರಾರಂಭವಾಯಿತು. ಈಗ ಅನೇಕ ಟಿವಿ ಮಾಧ್ಯಮಗಳು ಜನಪ್ರಿಯವಾಗಿದೆ. ಇದಕ್ಕೆ ಉದಾಹರಣೆ ಟಿವಿ ೯, ಉದಯ, ಈ ಟಿವಿ, ಸುವರ್ಣ, ಜನಶ್ರೀ, ಸಮಯ, ಮುಂತಾದವು. ಸಂಪರ್ಕ ನಗರದ ಒಳ ಹಾಗು ಹೊರಭಾಗಗಳು ಒಂದಕ್ಕೊಂದು ಒಳ್ಳೆಯ ಸಂಪರ್ಕ ಹೊಂದಿರುವ ಕಾರಣ ನಗರದ ಒಳಗೆ ಮತ್ತು ಹೊರಗೆ ಓಡಾಡುವುದು ತುಂಬಾ ಸರಳವಾಗಿದೆ. ನಗರದ ಒಳಗಡೆ ಸಂಚರಿಸಲು, ಜನರು ಆಟೊ ರಿಕ್ಷಾಗಳು, ಕ್ಯಾಬಗಳು, ಮೆಟ್ರೊ ಟ್ರೇನಗಳ ಸೌಲಭ್ಯವನ್ನು ಪಡೆಯಬಹುದು. ವಿಮಾನ ನಿಲ್ದಾಣಕ್ಕೆ ಹೋಗಲು ವಾಯು ವಜ್ರ ಬಸ್ಸುಗಳ ಸೌಲಭ್ಯವಿದೆ. ಬೆಂಗಳೂರು ಆಕಾಶ ಮಾರ್ಗ, ರಸ್ತೆ ಮತ್ತು ರೈಲು ಮಾರ್ಗಗಳ ಮೂಲಕ ಭಾರತದ ಇತರ ಭಾಗಗಳಿಗೂ ಸಂಪರ್ಕ ಹೊಂದಿದೆ. 'ನಮ್ಮ ಮೆಟ್ರೋ'ವಿನ ಮೊದಲನೆಯ ಹಂತ ಪೂರ್ಣವಾಗಿ ಚಾಲನೆಯಲ್ಲಿದೆ. ೪೨ ಕಿಲೋಮೀಟರ್ ಗಳ ಎರಡು ಮಾರ್ಗಗಳು (ಉತ್ತರ ದಕ್ಷಿಣ ದಿಕ್ಕಿನಲ್ಲಿ ಹಸಿರು ಮಾರ್ಗ - ನಾಗಸಂದ್ರದಿಂದ ಯೆಲಚೇನಹಳ್ಳಿವರೆಗೆ, ಪೂರ್ವ ಪಶ್ಚಿಮ ದಿಕ್ಕಿನಲ್ಲಿ ನೇರಳೆ ಮಾರ್ಗ - ಬೈಯ್ಯಪ್ಪನಹಳ್ಳಿಯಿಂದ ನಾಯಂಡಹಳ್ಳಿವರೆಗೆ) ಚಾಲನೆಯಲ್ಲಿದೆ. ಎರಡನೆ ಹಂತದ ಕಾಮಗಾರಿ ನಡೆಯುತ್ತಿದೆ ಭಾರತದ ನೈಋತ್ಯ ರೇಲ್ವೆ ವಲಯಕ್ಕೆ ಇದು ಮುಖ್ಯ ಕೇಂದ್ರವಾಗಿದ್ದು, ಯಶವಂತಪುರ, ಕ್ಯಾಂಟೊನಮೆಂಟ್ ಮತ್ತು ಕೆ.ಆರ್.ಪುರಂ ನಂತಹ ಕೆಲವು ಇತರ ನಿಲ್ದಾಣಗಳನ್ನೂ ಹೊಂದಿದೆ. ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರಿಗಾಗಿ, ದೇವನಹಳ್ಳಿ ಎಂಬಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದ್ದು, ಇದು ನಗರದಿಂದ ೪೦ ಕಿ.ಮೀ. ದೂರದಲ್ಲಿದೆ. ಪ್ರವಾಸಿ ಸ್ಥಳಗಳು ಬೆಂಗಳೂರು ಇತರ ಸ್ಥಳಗಳಿಗೆ ಉತ್ತಮವಾದ ಸಂಪರ್ಕ ಹೊಂದಿರುವದರಿಂದ ಪ್ರವಾಸಿಗರಿಗೆ ಸ್ವರ್ಗವಾಗಿದ್ದು, ಅನೇಕ ಆಕರ್ಷಣೀಯ ಸ್ಥಳಗಳಾದ ಜವಾಹರಲಾಲ್ ನೆಹರು ಪ್ಲಾನೇಟೊರಿಯಮ್, ಲಾಲಬಾಗ್, ಕಬ್ಬನ್ ಪಾರ್ಕ್, ಅಕ್ವೇರಿಯಮ್, ವೆಂಕಟಪ್ಪಾ ಆರ್ಟ್ ಗ್ಯಾಲರಿ, ವಿಧಾನ ಸೌಧ ಮತ್ತು ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಗಳನ್ನು ಇಲ್ಲಿ ಕಾಣಬಹುದು. ಮುತ್ಯಾಲಮಡುವು (ಮುತ್ತಿನಕಣಿವೆ), ಮೈಸೂರು, ಶ್ರವಣಬೆಳಗೋಳ, ನಾಗರಹೊಳೆ, ಬಂಡಿಪುರ, ರಂಗನತಿಟ್ಟು, ಬೇಲೂರು, ಮಂಡ್ಯ, ಹಳೇಬೀಡು, ಚಿಕ್ಕಮಗಳೂರು, ಕೊಡಗು ಮುಂತಾದ ಸ್ಥಳಗಳಿಗೂ ಕೂಡ ಬೆಂಗಳೂರಿನಿಂದ ಆರಾಮವಾಗಿ ಪ್ರಯಾಣಿಸಬಹುದಾಗಿದೆ. ನಗರದಲ್ಲಿ ಇಳಿದುಕೊಳ್ಳಲು ಅನೇಕ ಆಯ್ಕೆಗಳಿದ್ದು, ಅವುಗಳಲ್ಲಿ ಲೀಲಾ ಪ್ಯಾಲೇಸ್, ಗೊಲ್ಡನ್ ಲ್ಯಾಂಡಮಾರ್ಕ್, ವಿಂಡ್ಸರ್ ಮ್ಯಾನರ್, ಲಿ ಮೇರಿಡಿಯನ್, ತಾಜ್ ಮತ್ತು ಲಲಿತ್ ಅಶೋಕ ಮುಂತಾದ ಹಲವು ಹೋಟೆಲ್ ಗಳು ಸೂಕ್ತ ಹಾಗು ದುಬಾರಿ ಬೆಲೆಗಳಲ್ಲಿ ಪ್ರವಾಸಿಗರಿಗೆ ಲಭ್ಯವಿವೆ. ಬಹುಮುಖಿಯ ಸಂಸ್ಕೃತಿಹೊಂದಿರುವ ಕಾರಣ, ವಿವಿಧ ಬಗೆಯ ಖಾದ್ಯಗಳನ್ನು ಕೂಡ ಇಲ್ಲಿ ಕಾಣಬಹುದು. ಬೀದಿ ತಿನಿಸುಗಳಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದವರೆಗಿನ ತಿನಿಸುಗಳು ಕೂಡ ಇಲ್ಲಿ ಲಭ್ಯ. ಬೆಂಗಳೂರಿನಾದ್ಯಂತ ಬಹುಸಂಖ್ಯೆಯಲ್ಲಿ ಮ್ಯಾಕ್ ಡೊನಾಲ್ಡ್, ಕೆ.ಎಫ್.ಸಿ ಮತ್ತು ಪೀಜ್ಜಾ ಹಟ್ ಗಳ ಔಟ್ ಲೆಟ್ ಗಳನ್ನು ಕಾಣಬಹುದಾಗಿದ್ದು, ಆಸಕ್ತಿಯುಳ್ಳ ಪ್ರವಾಸಿಗರು ಸ್ಥಳೀಯ ತಿಂಡಿತಿನಿಸುಗಳ ಕೇಂದ್ರವಾದ ಎಂ.ಟಿ.ಅರ್. ಗೂ ಕೂಡ ಭೇಟಿ ನೀಡಬಹುದು. ಇತರ ಅನೇಕ ಸ್ಥಳಗಳಲ್ಲಿ ಭಾರತದ ಬೇರೆ ಬೇರೆ ರಾಜ್ಯಗಳ ಖಾದ್ಯಗಳು ಲಭ್ಯವಿದ್ದು, ಉತ್ತರ ಅಥವಾ ಪೂರ್ವ ಭಾರತದ ಅಡುಗೆಗಳಿಗೆ ಯಾವುದೆ ಕೊರತೆಯಿಲ್ಲ. ಫೀನಿಕ್ಸ್ ಮಾಲ್, ದಿ ಫೋರಮ್, ಗರುಡಾ ಮಾಲ್, ಸೆಂಟ್ರಲ್ ,ಒರಾಯನ್ ಮಾಲ್, ಮತ್ತು ಮಂತ್ರಿ ಮಾಲ್ ಗಳಲ್ಲಿ, ದೇಶಿಯ ಹಾಗು ವಿದೇಶಿಯ ಉತ್ಪನ್ನಗಳು ಲಭ್ಯವಿದ್ದು ಖರೀದಿಗೆ ಯೋಗ್ಯವಾದ ಸ್ಥಳಗಳಾಗಿವೆ. ಎಂ.ಜಿ. ರಸ್ತೆಯಲ್ಲಿರುವ ಕಾವೇರಿ ಎಂಪೋರಿಯಮ್ ದೇಶೀಯ ಉತ್ಪನ್ನಗಳಾದ ಚಂದನದ ಸಾಮಗ್ರಿಗಳು, ಜನಪ್ರಿಯವಾದ ಚೆನ್ನಪಟ್ಟಣದ ಕಟ್ಟಿಗೆಯ ಬೊಂಬೆಗಳನ್ನು ಖರೀದಿಸಲು ಉತ್ತಮ ಸ್ಥಳವಾಗಿದೆ. ತುಡಿಯುತ್ತಿರುವ ಯುವಜನಾಂಗದ ಪರಿಣಾಮವಾಗಿ, ಬೆಂಗಳೂರಿನ ರಾತ್ರಿ ಜೀವನವು ಬಲು ಸೊಗಸಾಗಿರುತ್ತದೆ. ಜಗತ್ತಿನ ಕ್ರಿಯಾಶೀಲ ನಗರಗಳು ವಿಶ್ವದ ಕ್ರಿಯಾಶೀಲ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನ ಪಡೆದಿದೆ. ಜಿಎಲ್‍ಎಲ್ ಗ್ಲೋಬಲ್ ರಿಸರ್ಚ್ ಕಂಪನಿ ನಡೆಸಿದ ಸಮೀಕ್ಷೆಯ ಆಧಾರದಲ್ಲಿ ಈ ಪಟ್ಟಿಯನ್ನು ತಯಾರಿಸಲಾಗಿದೆ. ಶಿಕ್ಷಣ, ಮೂಲಸೌಕರ್ಯ, ಅಗಾಧವಾಗಿ ಬೆಳೆಯುತ್ತಿರುವ ಜನಸಂಖ್ಯೆಗೆ ಹೊಂದಿಕೊಳ್ಳುವುದು ಸೇರಿದಂತೆ ದೇಶದ ಪ್ರಗತಿಗೆ ತಮ್ಮ ಕಾಣಿಕೆಯನ್ನೂ ನೀಡುತ್ತಿರುವ ವಿಚಾರಗಳನ್ನಾಧರಿಸಿ ಜಗತ್ತಿನ ಮೂವತ್ತು ನಗರಗಳನ್ನು ಗುರುತಿಸಲಾಗಿದೆ. ಈ ಪಟ್ಟಿಯಲ್ಲಿ ಟಾಪ್ ೧೦ ಸ್ಥಾನದಲ್ಲಿರುವ ನಗರಗಳು. ೧ ಬೆಂಗಳೂರು ೨ ಹೋ ಚಿ ಮಿನಾ ಸಿಟಿ ೩ ಸಿಲಿಕಾನ್ ವ್ಯಾಲಿ ೪ ಶಾಂಘೈ ೫ ಹೈದ್ರಾಬಾದ್ ೬ ಲಂಡನ್ ೭ ಆಸ್ಟಿನ್g ೮ಹನೋಯಿ ೯ ಬೋಸ್ಟನ್ ೧೦ ನೈರೋಬಿ ದೇಶದ ಮೂರನೇ ಸಿರಿವಂತ ನಗರ ಬೆಂಗಳೂರು ೨೭ ಫೆಬ್ರುವರಿ, ೨೦೧೭ ಭಾರತದ ಅತ್ಯಂತ ಶ್ರೀಮಂತ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಮೂರನೇ ಸ್ಥಾನ ಪಡೆದಿದೆ. ದೇಶದ ಅತ್ಯಂತ ಶ್ರೀಮಂತ ನಗರ ಎಂಬ ಹೆಗ್ಗಳಿಕೆಗೆ ವಾಣಿಜ್ಯ ನಗರಿ ಮುಂಬೈ ಪಾತ್ರವಾಗಿದ್ದರೆ, ದೆಹಲಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮುಂಬೈನ ಸಂಪತ್ತಿನ ಮೊತ್ತ ರೂ.೫೪.೬ ಲಕ್ಷ ಕೋಟಿ. ಇನ್ನು ದೆಹಲಿ ಮತ್ತು ಬೆಂಗಳೂರಿನ ಸಂಪತ್ತು ಕ್ರಮವಾಗಿ ರೂ.೨೯.೯ ಲಕ್ಷ ಕೋಟಿ ಮತ್ತು ರೂ.೨೧.೩ ಲಕ್ಷ ಕೋಟಿಯಷ್ಟಿದೆ. ಮಾರುಕಟ್ಟೆ ಸಂಶೋಧನಾ ಸಂಸ್ಥೆ, ನ್ಯೂ ವರ್ಲ್ಡ್‌ ವೆಲ್ತ್‌ ಬಿಡುಗಡೆ ಮಾಡಿರುವ ೨೦೧೬ನೇ ಸಾಲಿನ ವರದಿಯಲ್ಲಿ ಈ ಮಾಹಿತಿ ಇದೆ. ವಲಸೆ ಸ್ವದೇಶದಿಂದ ವಲಸೆ ಹೋಗುತ್ತಿರುವ ಸಿರಿವಂತರ ಸಂಖ್ಯೆಯಲ್ಲಿ ಭಾರಿ ಏರಿಕೆ ಆಗಿದೆ. ೨೦೧೬ರಲ್ಲಿ ವಿಶ್ವದಾದ್ಯಂತ ೮೨ ಸಾವಿರ, ಅತಿ ಸಿರಿವಂತರು ವಲಸೆ ಹೋಗಿದ್ದಾರೆ. ಈ ರೀತಿ ಅತಿ ಹೆಚ್ಚು ವಲಸೆ ಹೋದ ಮೊದಲ ಐದು ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೂ ಇದೆ. ಈ ಸಾಲಿನಲ್ಲಿ ಒಟ್ಟು ೬ ಸಾವಿರ ಸಿರಿವಂತರು ತಮ್ಮ ವಾಸ್ತವ್ಯವನ್ನು ಭಾರತದಿಂದ ಬೇರೆ ದೇಶಗಳಿಗೆ ಬದಲಿಸಿದ್ದಾರೆ. ೨೦೧೫ನೇ ಸಾಲಿನಲ್ಲಿ ಹೀಗೆ ವಲಸೆ ಹೋದವರ ಸಂಖ್ಯೆ ೪ ಸಾವಿರ. ಹಿಂದಿನ ವರ್ಷಕ್ಕೆ ಹೋಲಿಸಿದರೆ ೨೦೧೬ರಲ್ಲಿ ವಲಸೆ ಹೋದ ಸಿರಿವಂತರ ಸಂಖ್ಯೆಯಲ್ಲಿ ಶೇ ೫೦ ರಷ್ಟು ಹೆಚ್ಚಳವಾಗಿದೆ. ಶತ ಕೋಟ್ಯಾಧಿಪತಿಗಳು ೧೦ ಲಕ್ಷ ಅಮೆರಿಕನ್ ಡಾಲರ್‌ನಿಂದ ೧೦೦ ಕೋಟಿ ಅಮೆರಿಕನ್ ಡಾಲರ್‌ವರೆಗೆ (ಸುಮಾರು ₹ ೬.೬ ಕೋಟಿಯಿಂದ ₹ ೬.೬ ಸಾವಿರ ಕೋಟಿ) ಸಂಪತ್ತು ಹೊಂದಿರುವವರನ್ನು ಮಿಲಿಯನೇರ್ ಅಥವಾ ಶತ ಕೋಟ್ಯಾಧಿಪತಿಗಳು ಎಂದು ನ್ಯೂ ವರ್ಲ್ಡ್‌ ವೆಲ್ತ್‌ ವರದಿಯಲ್ಲಿ ಪರಿಗಣಿಸಲಾಗಿದೆ. ೧೦೦ ಕೋಟಿ ಅಮರಿಕನ್‌ ಡಾಲರ್‌ಗಿಂತ (ಸು. ₹ ೬.೬ ಸಾವಿರ ಕೋಟಿ) ಹೆಚ್ಚು ಸಂಪತ್ತು ಇದ್ದವರನ್ನು ಬಿಲಿಯನೇರ್‌ ಅಥವಾ ಸಹಸ್ರ ಕೋಟ್ಯಾಧಿಪತಿಗಳು ಎಂದು ಕರೆಯಲಾಗಿದೆ. ಇದನ್ನೂ ನೋಡಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೆಂಗಳೂರು ಮಹಾನಗರ ಪಾಲಿಕೆ ಬೆಂಗಳೂರು ಉತ್ತರ (ಲೋಕ ಸಭೆ ಚುನಾವಣಾ ಕ್ಷೇತ್ರ) ಬೆಂಗಳೂರು ಕೇಂದ್ರ (ಲೋಕ ಸಭೆ ಚುನಾವಣಾ ಕ್ಷೇತ್ರ) ಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ) ಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ) ನಮ್ಮ ಮೆಟ್ರೊ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬೆಂಗಳೂರು ಎಫ್ ಸಿ ಇತರೆ ಸಂಪರ್ಕ Interactive Map of Bangalore ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಮಹಾನಗರ ಪಾಲಿಕೆ Bangalore cyber police ಇತರೆ ಇಲಾಖೆಗಳ ಸಂಪರ್ಕ ಪಟ್ಟಿ ಬೆಳದಿದೆ ನೊಡ ಬೆಂಗಳೂರು ನಗರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಉಲ್ಲೇಖಗಳು visit: www.bangaloreitbt.in ಭಾರತದ ಪಟ್ಟಣಗಳು ಬೆಂಗಳೂರು ಕರ್ನಾಟಕದ ಪ್ರಮುಖ ಸ್ಥಳಗಳು ಮಹಾನಗರಪಾಲಿಕೆಗಳು
867
https://kn.wikipedia.org/wiki/%E0%B2%95%E0%B2%A8%E0%B3%8D%E0%B2%A8%E0%B2%A1%20%E0%B2%85%E0%B2%95%E0%B3%8D%E0%B2%B7%E0%B2%B0%E0%B2%AE%E0%B2%BE%E0%B2%B2%E0%B3%86
ಕನ್ನಡ ಅಕ್ಷರಮಾಲೆ
ಇತಿಹಾಸ ಅಶೋಕನ ಬ್ರಾಹ್ಮೀ ಲಿಪಿ ಉತ್ತರಕ್ಕೆ ಕಾಲಸಿ ಮತ್ತು ಭಾರತ-ನೇಪಾಲ ಗಡಿಯಲ್ಲಿರುವ ರುಮ್ಮಿಂದೈಯಿಂದ ದಕ್ಷಿಣಕ್ಕೆ ಮೈಸೂರುವರೆಗೂ ಪೂರ್ವಕ್ಕೆ ಒರಿಸ್ಸದಿಂದ ಪಶ್ಚಿಮಕ್ಕೆ ಜುನಾಗಢ ಮತ್ತು ಮುಂಬಯಿವರೆಗೂ ದೊರೆತ ಅಶೋಕ ಸಾಮ್ರಾಟನ ಧರ್ಮಶಾಸನಗಳಲ್ಲಿ ಕಂಡುಬರುತ್ತದೆ. ಈ ಲಿಪಿಯು ಅಶೋಕನ ಕಾಲದಲ್ಲಿ ಪ್ರಚಲಿತವಿದ್ದ ಪಾಕೃತ ಬಾಷೆಯಾಗಿ ಉಪಯೋಗಿಸಲ್ಪಟ್ಟಿದೆ. ಆ ಕಾಲಕ್ಕಾಗಲೇ ಅದು ಪರಿಪುರ್ಣತೆಯನ್ನು ಪಡೆದಿದ್ದು ಪ್ರಾಕೃತ ಭಾಷೆಯ ಪ್ರತಿಯೊಂದು ಶಬ್ದ ಅಥವಾ ಧ್ವನಿಗೆ ಪ್ರತ್ಯೇಕವಾದ ಅಕ್ಷರ ಅಥವಾ ಸಂಜ್ಞೆಯನ್ನು ಅದರಲ್ಲಿ ಕಲ್ಪಿಸಲಾಗಿದೆ. ಈ ಲಿಪಿ ಎಡದಿಂದ ಬಲಕ್ಕೆ ಬರೆಯಲ್ಪಟ್ಟಿದ್ದು ಅದರಲ್ಲಿಯ ಸರಳ ಸುಂದರ, ಅಕ್ಷರಗಳು ಸುಲಭವಾಗಿ ಗುರುತಿಸುವಂತಿವೆ. ಈ ಅಕ್ಷರಗಳಿಗೆ ತಲೆಕಟ್ಟು ಇರುವುದಿಲ್ಲ. ಥ, ಪ, ಮ, ವ. ಲ, ಹ ಮುಂತಾದ ಅಕ್ಷರಗಳ ಬುಡಕಟ್ಟು ದುಂಡಾಗಿರುತ್ತವೆ. ಸಂಸ್ಕೃತ ಭಾಷೆಯ ಋ, ವಿಸರ್ಗ, ಜಿಹ್ವಾ ಮೂಲೀಯ ಮತ್ತು ಉಪಧ್ಮಾನೀಯಗಳನ್ನು ನಿರ್ದೇಶಿಸುವ ಸಂಜ್ಞೆಗಳಿರುವುದಿಲ್ಲ. ಅದರಂತೆ ಪದಾದಿಯ ದೀರ್ಘ ಈ ಕಾರವಿಲ್ಲ. ಕರ್ಣಾಟಕದಲ್ಲಿ ಅಶೋಕನ ಬಾಹ್ಮೀ ಲಿಪಿಯ ಶಾನಗಳು ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ, ಸಿದ್ದಾಪುರ ಮತ್ತು ಜಟಿಂಗ ರಾಮೇಶ್ವರ ಎಂಬ ಸ್ಥಳಗಳಲ್ಲಿಯೂ ರಾಯಚೂರು ಜಿಲ್ಲೆಯ ಮಸ್ಕಿ, ಪಾಲ್ಕಗುಂಡು ಮತ್ತು ಗವಿಮಠ ಎಂಬ ಸ್ಥಳಗಳಲ್ಲಿಯೂ ದೊರೆತಿವೆ. ಅಶೋಕನ ಬ್ರಾಹ್ಮೀ ಲಿಪಿ ಮುಂದೆ 3ನೆಯ ಶತಮಾನದ ವರೆಗೆ ಶುಂಗ, ಕುಶಾನ, ಕ್ಷತ್ರಪ, ಆಂಧ್ರ, ಶಾತವಾಹನ ಮುಂತಾದ ಅರಸರ ಶಾಸನಗಳಲ್ಲಿ ಭಾರತದ ಬೇರೆ ಬೇರೆ ಭಾಗಗಳಲ್ಲಿ ವಿಕಾಸ ಹೊಂದಿರುತ್ತದೆ. ಕುಶಾನ ಕಾಲದ ಲಿಪಿಯ ಅಕ್ಷರಗಳು ಕಡಿಮೆ ಎತ್ತರವಾಗಿಯೂ ಅಗಲವಾಗಿಯೂ ದಪ್ಪವಾಗಿಯೂ ಇರುತ್ತವೆ. ಕ್ಷತ್ರಪ ಹಾಗೂ ಶಾತವಾಹನರ ಕಾಲದ ಲಿಪಿಗಳೂ ಹೆಚ್ಚು ಕಡಿಮೆ ಇದೇ ವೈಶಿಷ್ಟ್ಯಗಳನ್ನೊಳಗೊಂಡಿವೆ. ಕರ್ಣಾಟಕದಲ್ಲಿ ಅಶೋಕನ ಬ್ರಾಹ್ಮೀ ಲಿಪಿಯ ಮುಂದಿನ ಹಂತವನ್ನು 2-3ನೆಯ ಶತಮಾನದ ಮಳವಳ್ಳಿ ಮತ್ತು ಬನವಾಸಿಯ ಸಾತಕರ್ಣಿಯ ಶಾಸನಗಳಲ್ಲಿ ಕಾಣುತ್ತೇವೆ. ಇಲ್ಲಿಯೂ ಅಕ್ಷರಗಳ ಎತ್ತರ ಕಡಿಮೆಯಾಗಿದ್ದು ಕೆಲವು ಅಕ್ಷರಗಳಿಗೆ ತ್ರಿಕೋಣಾಕೃತಿಯುಳ್ಳ ತಲೆಕಟ್ಟು ಇರುತ್ತದೆ. ಅಗಲವಾದ ತುದಿಯುಳ್ಳ ಲೇಖನಿಯನ್ನು ಉಪಯೋಗಿಸಿದ್ದರಿಂದ ಇಂಥ ತಲೆಕಟ್ಟುಗಳು ತಲೆದೋರಿವೆಯೆಂದು ಕೆಲವು ವಿದ್ವಾಂಸರು ಹೇಳುತ್ತಾರೆ. ಅ, ಕ, ರ ಮುಂತಾದ ಅಕ್ಷರಗಳ ಲಂಬರೇಖೆಯ ಕೆಳಭಾಗ ವೃತ್ತಾಕಾರವಾಗಿ ಎಡಗಡೆ ಹೊರಳಿದೆ. ಇತ್ತೀಚೆಗೆ ಗುಲ್ಬರ್ಗಾ ಜಿಲ್ಲೆಯ ಸನ್ನತಿ ಎಂಬ ಸ್ಥಳದಲ್ಲಿ ದೊರೆತ 3ನೆಯ ಶತಮಾನದ ಶಾನಗಳಲ್ಲಿಯ ಕೆಲವು ಅಕ್ಷರಗಳು ಆಂಧ್ರಪ್ರದೇಶದ ನಾಗಾರ್ಜುನ ಕೊಂಡದ ಇಕ್ಷ್ವಾಕು ಅರಸರ ಶಾಸನಗಳ ಅಕ್ಷರಗಳಂತೆ ಸುಂದರವಾಗಿಯೂ ಅಂಕಾರಯುತವಾಗಿಯೂ ಕೆತ್ತಲ್ಪಟ್ಟಿವೆ. 10-12ನೆಯ ಶತಮಾನ ಕನ್ನಡ ಲಿಪಿ 10-12ನೆಯ ಶತಮಾನದಲ್ಲಿ ಕಲ್ಯಾಣಿ ಚಾಳುಕ್ಯರ ಶಾಸನಗಳಲ್ಲಿ ವಿಶೇಷ ಬದಲಾವಣೆಯನ್ನು ಹೊಂದಿ ಒಂದು ಮುಖ್ಯವಾದ ಹಂತವನ್ನು ಸೂಚಿಸುತ್ತಿವೆ. ಈ ಕಾಲದ ಕೆಲವು ಅಕ್ಷರಗಳು ಇನ್ನಷ್ಟು ದುಂಡಾಗಿದ್ದು ಆಧುನಿಕ ಕನ್ನಡ ಲಿಪಿಯ ಅಕ್ಷರಗಳ ಲಕ್ಷಣಗಳನ್ನು ವ್ಯಕ್ತಪಡಿಸುತ್ತದೆ. ಉದಾಹರಣೆಗಾಗಿ ಕ, ರ, ಯ ಮುಂತಾದ ಅಕ್ಷರಗಳ ಮೈಕಟ್ಟು ಹೆಚ್ಚು ಕಡಿಮೆ ಈಗಿನಂತೆಯೇ ಇದೆ. ಕೆಲವು ಅಕ್ಷರಗಳ ತಲೆಕಟ್ಟು ಕೋನಾಕೃತಿಯುಳ್ಳದಾಗಿದೆ. ಚ, ವ, ಮ ಮುಂತಾದ ಅಕ್ಷರಗಳ ತಲೆಕಟ್ಟಿನ ಭಾಗ ಎರಡು ಭಾಗವಾಗಿ ಬೇರ್ಪಡೆಯಾಗಿದ್ದು ತಲೆಕಟ್ಟು ಬಲಭಾಗದ ರೇಖೆಗೆ ಹೊಂದಿ ಕೊಂಡಿರುತ್ತದೆ. ಅನೇಕ ಅಕ್ಷರಗಳ ತಲೆಕಟ್ಟು ಸ್ಪಷ್ಟವಾಗಿ ಎದ್ದುಕಾಣುವಂತಿದೆ. ಮುಂದೆ 12-13ನೆಯ ಶತಮಾನದಲ್ಲಿ ಹೊಯ್ಸಳ ಅರಸರ ಅನೇಕ ಶಾಸನಗಳನ್ನು ನುಣುಪಾದ ಕಲ್ಲಿನ ಹಲಗೆಗಳ ಮೇಲೆ ಅಲಂಕಾರಯುತವಾಗಿಯೂ ಕಲಾತ್ಮಕವಾಗಿಯೂ ಬರೆಯಲ್ಪಟ್ಟಿದ್ದು ಅಲ್ಲಿಯ ಅಕ್ಷರಗಳು ಬಹು ಸುಂದರವಾಗಿ ಕಾಣುತ್ತವೆ. ಈ ಅಕ್ಷರಗಳನ್ನು ಸ್ಪಷ್ಟವಾಗಿಯೂ ಹೆಚ್ಚು ದುಂಡಾಗಿಯೂ ಬರೆಯಲಾಗಿದೆ. ಇಲ್ಲಿ ಕನ್ನಡ ಲಿಪಿ ಊರ್ಜಿತಾವಸ್ಥೆಯನ್ನು ಹೊಂದಿದೆಯೆಂದು ಹೇಳಬಹುದು. ಆದರೆ ಮುಂದಿನ 2-3 ಶತಮಾನಗಳ ಕಾಲದಲ್ಲಿ ಅಂದರೆ 14-16ನೆಯ ಶತಮಾನದ ವಿಜಯನಗರ ಅರಸರ ಶಾಸನಗಳಲ್ಲಿ ಅಕ್ಷರಗಳನ್ನು ಡೊಂಕು ಡೊಂಕಾಗಿ ಬರೆಯಲಾಗಿದ್ದು ಅವುಗಳ ಜೋಡಣೆಯ ವಿಷಯದಲ್ಲಿ ಅಷ್ಟು ಗಮನವನ್ನಿತ್ತಿಲ್ಲ. ಆದುದರಿಂದ ಕಲ್ಯಾಣಿ ಚಾಳುಕ್ಯ ಹಾಗೂ ಹೊಯ್ಸಳರ ಕಾಲದ ಲಿಪಿಯ ಅಕ್ಷರಗಳಂತೆ ವಿಜನಗರ ಕಾಲದ ಲಿಪಿಯ ಅಕ್ಷರಗಳು ಅಂದವಾಗಿ ಕಾಣುವುದಿಲ್ಲ. ಆದರೂ ಈ ಕಾಲದ ಲಿಪಿಯ ಅಕ್ಷರಗಳು ಕನ್ನಡ ಲಿಪಿಯ ಬೆಳೆವಣಿಗೆಯ ದೃಷ್ಟಿಯಿಂದ ಗಮನಾರ್ಹವಾಗಿದೆ. ಅ, ಞ, ಣ, ಷ, ಳ ಮುಂತಾದ ಅಕ್ಷರಗಳು ಈಗಿನ ರೂಪಗಳನ್ನು ಹೆಚ್ಚಾಗಿ ಹೋಲುತ್ತವೆ. ದ, ಡ, ಪ ಮುಂತಾದ ಅಲ್ಪಪ್ರಾಣದ ಅಕ್ಷರಗಳಿಗೆ ಕೆಳಗಡೆ ಒಂದು ರೇಖೆಯನ್ನು ಸೇರಿಸಿ ಧ, ಢ, ಫ, ಮುಂತಾದ ಮಹಾಪ್ರಾಣಗಳ ಸಂಜ್ಞೆಗಳನ್ನು ಸೂಚಿಸಲಾಗಿದೆ. ಇದುವರೆಗೆ ಅಕ್ಷರಗಳ ಮೇಲ್ಭಾಗದಲ್ಲಿ ಒಂದು ಚುಕ್ಕೆ ಅಥವಾ ಚಿಕ್ಕ ಬಿಂದುವಿನಿಂದ ಸೂಚಿಸಲ್ಪಡುತ್ತಿದ್ದ ಅನುಸ್ವಾರವನ್ನು ಆಯಾ ಅಕ್ಷರಗಳ ಬಲಗಡೆಗೆ ಅಷ್ಟೇ ಗಾತ್ರದ ಬಿಂದುವಿನಿಂದ ತೋರಿಸಲಾಗಿದೆ. 18ನೆಯ ಶತಮಾನದಲ್ಲಿ ಮೈಸೂರು ಅರಸರ ಕಾಲದಲ್ಲಿ ಕನ್ನಡ ಲಿಪಿ ವಿಜಯನಗರ ಕಾಲದ ಅಕ್ಷರಗಳ ಕೆಲವು ಲಕ್ಷಣಗಳನ್ನು ಉಳಿಸಿಕೊಂಡಿದ್ದರೂ ಆಧುನಿಕ ಕನ್ನಡ ಲಿಪಿಗೆ ಬಹಳ ಹತ್ತಿರಬಾಗಿ ತೋರುತ್ತದೆ. ಇತ್ತೀಚೆಗೆ ಮುದ್ರಣ ಬಂದಮೇಲೆ ಇತರ ಲಿಪಿಗಳಂತೆ ಕನ್ನಡ ಲಿಪಿಯಾದರೂ ಒಂದು ಸ್ಥಿರತೆಯನ್ನು ಹೊಂದಿದ್ದರಿಂದ ಹೆಚ್ಚಿನ ವಿಕಾಸಕ್ಕೆ ಅಸ್ಪದವಿಲ್ಲದಂತಾಗಿದೆ. ಆದರೂ ಮುದ್ರಣದ ಲಿಪಿಯಲ್ಲಿ ಸಹ ಕಾಲಕಾಲಕ್ಕೆ ಕೆಲವು ಸುಧಾರಣೆಗಳನ್ನು ಮಾಡಿಕೊಂಡು ಹೆಚ್ಚಿನ ಅಂದವಾದ ಅಕ್ಷರಗಳನ್ನು ಅಚ್ಚು ಹಾಕುತ್ತಿರುವುದನ್ನು ನೋಡುತ್ತೇವೆ. ಪರಿಣಾಮ ಕನ್ನಡ ಲಿಪಿಯ ಒಂದು ವೈಶಿಷ್ಟ್ಯವೆಂದರೆ ಪ್ರಾಚೀನಕಾಲದಿಂದಲೂ ಕಾಗುಣಿತಾಕ್ಷರದ ಹೃಸ್ವ ಮತ್ತು ದೀರ್ಘ ಎ ಮತ್ತು ಏ ಕಾರಗಳನ್ನು ಹಾಗೂ ಒ ಮತ್ತು ಓ ಕಾರಗಳನ್ನು ಒಂದೇ ಸಂಜ್ಞೆಯಿಂದ ಸೂಚಿಸುತ್ತಿದ್ದು ಅವುಗಳಲ್ಲಿಯ ಹೃಸ್ವ ಮತ್ತು ದೀರ್ಘ ವರ್ಣಗಳ ಭೇದವನ್ನು ಸಂದರ್ಭಾನುಸಾರವಾಗಿ ತಿಳಿದುಕೊಳ್ಳಬೇಕಾಗಿತ್ತು. ಇತ್ತೀಚೆಗೆ ಅಂದರೆ 17-18ನೆಯ ಶತಮಾನದಂದೀಚೆಗೆ ಮಾತ್ರ ಕಾಗುಣಿತಾಕ್ಷರದ ದೀರ್ಘ ಏ ಕಾರ, ದೀರ್ಘ, ಓ ಕಾರ ಮತ್ತು ದೀರ್ಘ ಈ ಕಾರಗಳನ್ನು ಆಯಾ ಅಕ್ಷರಗಳ ಬಲಗಡೆ ಕೋಡಿಯುಳ್ಳ ಒಂದು ರೇಖೆಯಿಂದ ಸೂಚಿಸಲಾಗಿದೆ. ಇನ್ನು 4-5ನೆಯ ಶತಮಾನದಿಂದ 13-14ನೆಯ ಶತಮಾನದವರೆಗೆ ಕರ್ನಾಟಕ ಮತ್ತು ಆಂಧ್ರಪ್ರದೇಶದ ಶಾಸನಗಳಲ್ಲಿ ಸುಮಾರು ಒಂದೇ ಮಾದರಿಯ ಲಿಪಿಯನ್ನು ಉಪಯೋಗಿಸಿದ್ದುದರಿಂದ ಇವೆರಡೂ ಭಾಗದ ಲಿಪಿಗಳಿಗೆ ಕನ್ನಡ ತೆಲುಗು ಲಿಪಿಯೆಂದು ಹೇಳುವುದುಂಟು. ಅದರಲ್ಲೂ ವಿಶೇಷವಾಗಿ ಬಾದಾಮಿ ಚಳುಕ್ಯ, ರಾಷ್ಟ್ರಕೂಟ ಮತ್ತು ಕಲ್ಯಾಣಿ ಚಾಳುಕ್ಯರ ಕಾಲದ ಕನ್ನಡ ತೆಲುಗು ಲಿಪಿ ಒಂದೇ ಸ್ವರೂಪದ್ದಾಗಿದೆಯೆಂದು ಹೇಳಬಹುದು. 14-15ನೆಯ ಶತಮಾನಗಳಲ್ಲಿ ಕನ್ನಡ ಮತ್ತು ತೆಲುಗು ಲಿಪಿಗಳಲ್ಲಿ ಕೆಲವು ವ್ಯತ್ಯಾಸಗಳು ತಲೆದೋರಿದ್ದು ಮುಂದಿನ ಎರಡು ಮೂರು ಶತಮಾನಗಳಲ್ಲಿ ಗಮನಾರ್ಹವಾದ ಭೇದಗಳು ಕಂಡುಬರುತ್ತವೆ. ಆದರೂ ಅಲ್ಪ ಪ್ರಯತ್ನದಿಂದ ಕನ್ನಡಿಗರು ತೆಲುಗು ಲಿಪಿಯನ್ನೂ ಅದರಂತೆ ಆಂಧ್ರರು ಕನ್ನಡ ಲಿಪಿಯನ್ನೂ ಸುಲಭವಾಗಿ ತಿಳಿದುಕೊಳ್ಳಬಹುದು. ಬಾದಾಮಿ ಚಳುಕ್ಯರ ಕಾಲದಲ್ಲ ಕನ್ನಡ ಲಿಪಿ ಮಹಾರಾಷ್ಟ್ರ ಮತ್ತು ಗುಜರಾತ್ ಪ್ರಾಂತ್ಯಗಳಲ್ಲಿಯೂ ಪ್ರಚಲಿತವಿದ್ದು ಮುಂದೆ ಅಲ್ಲಿ ನಾಗರೀ ಲಿಪಿ ಬಳಕೆಗೆ ಬಂತು. * ಅಂತೂ ಮೇಲಿನ ವಿವೇಚನೆಯಿಂದ ಕನ್ನಡ ಲಿಪಿ ಸು. 2000 ವರ್ಷಕ್ಕೂ ಹೆಚ್ಚಿನ ಪರಂಪರೆಯುಳ್ಳದ್ದಾಗಿದೆಯೆಂದು ವಿಶದವಾಗುತ್ತದೆ. ಒಂದು ಲಿಪಿಯ ಹುಟ್ಟು ಮತ್ತು ಬೆಳೆವಣಿಗೆ ಅದನ್ನು ಉಪಯೋಗಿಸುವ ಜನರ ಸಂಸ್ಕೃತಿಯ ಪ್ರತೀಕವಾಗಿರುತ್ತದೆ. ಒಂದು ಆದರ್ಶ ಲಿಪಿಯಲ್ಲಿ ಪ್ರತಿಯೊಂದು ಶಬ್ದದ ಉಚ್ಚಾರಣೆಗೆ ಅಸಂದಿಗ್ಧವಾದ ಸಂಜ್ಞೆಯಿರಬೇಕು. ಬರೆದಂತೆ ಓದುವಂತಿರಬೇಕು. ಓದಿದಂತೆ ಬರೆಯುವಂತೆಯೂ ಇರಬೇಕು. ಅಂದರೆ ಉಚ್ಚಾರಿತ ಅಕ್ಷರ ಹಾಗೂ ಲಿಖಿತ ವರ್ಣ ಇವುಗಳ ಸಂಬಂಧ ಸಂಪುರ್ಣವಿರಬೇಕು. ಈ ದೃಷ್ಟಿಯಿಂದ ವಿಚಾರಿಸಿದರೆ ಕನ್ನಡ ಲಿಪಿ ಪರಿಪುರ್ಣತೆಯನ್ನು ಪಡೆದಿದೆಯೆಂದು ಹೇಳಬಹುದು. ಈ ಲಿಪಿಯಲ್ಲಿ ಸ್ವರ ಮತ್ತು ವ್ಯಂಜನಗಳು ಪುರ್ಣವಾಗಿದ್ದು ಆರ್ಯ ಮತ್ತು ದ್ರಾವಿಡ ಭಾಷೆಗಳ ಧ್ವನಿಗಳನ್ನು ಕೊರತೆಯಿಲ್ಲದೆ ಸೂಚಿಸಲಿಕ್ಕೆ ಉಪಯುಕ್ತವಾದ ಸಂಕೇತಗಳಿವೆ. ವ್ಯಂಜನಾಕ್ಷರಗಳೊಡನೆ ಸ್ವರಗಳ ಸುಂದರವಾದ ಸಂಯೋಗವಿದೆ. ಹೀಗೆ ಕನ್ನಡ ಲಿಪಿ ಅಶೋಕನ ಬ್ರಾಹ್ಮೀಲಿಪಿಯಿಂದ ಉದ್ಬವಿಸಿ ಕಾಲಕ್ರಮದಿಂದ ಅನೇಕ ಮಾರ್ಪಾಟುಗಳನ್ನು ಹೊಂದಿ ವೈವಿಧ್ಯಪುರ್ಣವಾದ ವಿಕಾಸವನ್ನು ಪಡೆದು ಸಾಹಿತ್ಯ-ಸಂಸ್ಕೃತಿಗಳ ಹಿರಿಮೆಯನ್ನು ವ್ಯಕ್ತಪಡಿಸುತ್ತದೆ. ಕನ್ನಡ ವರ್ಣಮಾಲೆಯ ಪ್ರತಿಯೊಂದು ಅಕ್ಷರದ ಉಗಮ, ವಿಕಾಸ, ಉಚ್ಚಾರಣೆ ಮುಂತಾದ ವಿವರಗಳು ಆಯಾ ಅಕ್ಷರಗಳ ಶೀರ್ಷಿಕೆಗಳಲ್ಲಿ ಬಂದಿವೆ. ಅವನ್ನು ನೋಡಬಹುದು. ಈಚೆಗೆ ಪರಭಾಷೆಯ ಪದಗಳನ್ನು ಎರವಲಾಗಿ ತೆಗೆದುಕೊಳ್ಳಬೇಕಾದ ಅಗತ್ಯ ಒದಗಿಬಂದುದರಿಂದ ಈಚಿಣheಡಿ, ಈಚಿisಚಿಟ, Zoo, ಒಚಿಟಿ ಮೊದಲಾದುವನ್ನು; ಬರೆಯಲು ವಿಶಿಷ್ಟ ಸಂಜ್ಞೆಗಳನ್ನು ಬಳಸಲಾಗುತ್ತಿದೆ. ಉದಾ : ಫಾದರ್, ಫೈಸಲ್ ಜóÆ, ಮ್ಯಾನ್-ಹೀಗೆ. ಸಂಜ್ಞಾ ಪ್ರಕರಣ ಕೇಶಿರಾಜನ ಸೂತ್ರದ ಪ್ರಕಾರ, ಅಕ್ಷರ ಮಾಲೆ/ವರ್ಣಮಾಲೆ ಎಂಬುದು ಒಂದು ಸಂಜ್ಞಾ ಪ್ರಕಾರವಾಗಿದೆ. ಕವಿಗಳ್ ಸ್ವರದಿಂ ವರ್ಗದಿ ನವರ್ಗದಿಂ ಯೋಗವಾಹದಿಂ ದೇಶಿಯಳು ದ್ಭವಮಪ್ಪ ವರ್ಣದಿಂ ಪಂ ಚ ವಿಧಂ ತಾನೆಂದು ತಿಳಿಸುವರ್ ಶುದ್ಧಗೆಯಂ (ಸೂತ್ರ ವಿವರಣೆ:ಕವಿಗಳು ಸ್ವರದಿಂದ, ವರ್ಗಾಕ್ಷರಗಳಿಂದ, ಅವರ್ಗೀಯ ಅಕ್ಷರಗಳಿಂದ, ಯೋಗವಾಹ ಅಕ್ಷರದಿಂದದಿಂದ, ಮತ್ತು ದೇಶಿಯ ಅಕ್ಷರಗಳಿಂದ ಹುಟ್ಟಿರುವ ಐದು ವಿಧದ ಅಕ್ಷರಗಳನ್ನು ಶುದ್ಧಗೆ ಎಂದು ಹೇಳುತ್ತಾರೆ) (ಸೂತ್ರಸಂಖ್ಯೆ – ೪೧) ಕನ್ನಡದ ಶುದ್ಧಾಕ್ಷರಗಳ ವಿಧಗಳು ಕೇಶಿರಾಜನ ಪ್ರಕಾರ ಕನ್ನಡ ಶುದ್ಧಗೆಯಲ್ಲಿ ಐದು ವಿಧಗಳು. ಅವುಗಳು ಕ್ರಮವಾಗಿ : ಸ್ವರ ಅಕ್ಷರಗಳು, ವರ್ಗೀಯ ವ್ಯಂಜನ ಅಕ್ಷರಗಳು, ಅವರ್ಗೀಯ ವ್ಯಂಜನ ಅಕ್ಷರಗಳು, ಯೋಗವಾಹ ಅಕ್ಷರಗಳು, ದೇಶಿಯ ಅಕ್ಷರಗಳು. ಆದರೆ ಕನ್ನಡ ಪಠ್ಯಾನುಸಾರ ಪ್ರಾಥಮಿಕ ಮತ್ತು ಮಾಧ್ಯಮಿಕ ತರಗತಿಯ ವಿದ್ಯಾರ್ಥಿಗಳು ಒಟ್ಟು ಕನ್ನಡ ಅಕ್ಷರಗಳನ್ನು ಈ ಕೆಳಗಿನಂತೆ ಗ್ರಹಿಸಿಕೊಂಡಿದ್ದಾರೆ. ಈ ರೀತಿ ಕನ್ನಡದಲ್ಲಿ ೫೧ ಅಕ್ಷರಗಳಿವೆ. ಪ್ರಸ್ತುತ ಕನ್ನಡದಲ್ಲಿ ಬಳಸುತ್ತಿರುವುದು ೪೯ ಅಕ್ಷರಗಳು. ಕನ್ನಡ ವರ್ಣಮಾಲೆ ಕನ್ನಡ ವರ್ಣಮಾಲೆಯಲ್ಲಿ ೪೯ಅಕ್ಷರಗಳಿವೆ. ಅವುಗಳನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಸ್ವರಗಳು -೧೩ ವ್ಯಂಜನಗಳು -೩೪ ಯೋಗವಾಹಗಳು-೦೨ ಸ್ವರ ಬೇರೊಂದು ಅಕ್ಷರದ ಸಹಾಯವಿಲ್ಲದೆ ಸ್ವತಂತ್ರವಾಗಿ ಉಚ್ಛರಿಸಲು ಬರುವ ವರ್ಣಮಾಲೆಯ ಮೊದಲ ಹದಿಮೂರು ಅಕ್ಷರಗಳನ್ನು ಸ್ವರ ಎಂದು ಕರೆಯುತ್ತಾರೆ. ಸ್ವರಗಳಲ್ಲಿ ಎರಡು ವಿಧ. ಅವು ಯಾವುವೆಂದರೆ ಹೃಸ್ವ ಸ್ವರಗಳು ಹಾಗೂ ದೀರ್ಘ ಸ್ವರ ಹೃಸ್ವ ಸ್ವರ ಹೃಸ್ವ ಸ್ವರಗಳು (೬)ಆರು. ಒಂದು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ವರ್ಣಮಾಲೆಯ ಆರು ಅಕ್ಷರಗಳನ್ನು(ಅ,ಇ ಉ,ಋ,ಎ,ಒ) ಹೃಸ್ವ ಸ್ವರಗಳೆಂದು ಕರೆಯುವರು. ದೀರ್ಘ ಸ್ವರ ಎರಡು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ವರ್ಣಮಾಲೆಯ (೭)ಏಳು ಅಕ್ಷರಗಳನ್ನು (ಆ,ಈ,ಊ,ಏ.ಐ.ಓ,ಔ) ದೀರ್ಘ ಸ್ವರಗಳೆಂದು ಕರೆಯುವರು. ವ್ಯಂಜನ ಬೇರೊಂದು ಅಕ್ಷರದ ಸಹಾಯವಿಲ್ಲದೆ ಸ್ವತಂತ್ರವಾಗಿ ಉಚ್ಛರಿಸಲು ಬಾರದ ವರ್ಣಮಾಲೆಯ(೩೪) ಮುವತ್ತು ನಾಲ್ಕು ಅಕ್ಷರಗಳನ್ನು ವ್ಯಂಜನಗಳೆಂದು ಕರೆಯುವರು. ಪ್ರಮುಖವಾಗಿ ವ್ಯಂಜನಗಳಲ್ಲಿ ಎರಡು ವಿಧ. ಅವು ಯಾವುವೆಂದರೆ ವರ್ಗೀಯ ವ್ಯಂಜನಗಳು(೨೫: ಕ,ಚ,ಟ,ತ,ಪ-ವರ್ಗಗಳು) ಮತ್ತು ಅವರ್ಗೀಯ ವ್ಯಂಜನಗಳು(೯-ಯ ಇಂದ ಳ ವರೆಗೆ) ವರ್ಗೀಯ ವ್ಯಂಜನ ಒಂದು ವರ್ಗ ಅಥವಾ ಗುಂಪಿಗೆ ಸೇರಿಸಬಹುದಾದ ವರ್ಣಮಾಲೆಯ ಇಪ್ಪತ್ತೈದು(೨೫) ಅಕ್ಷರಗಳನ್ನು ವರ್ಗೀಯ ವ್ಯಂಜನ ಎಂದು ಕರೆಯುವರು. ಅವು ಯಾವುವೆಂದರೆ, ಕ-ವರ್ಗ = ಕ, ಖ, ಗ, ಘ, ಙ ಚ-ವರ್ಗ = ಚ, ಛ, ಜ, ಝ, ಞ ಟ-ವರ್ಗ = ಟ, ಠ, ಡ, ಢ, ಣ ತ-ವರ್ಗ = ತ, ಥ, ದ, ಧ, ನ ಪ-ವರ್ಗ = ಪ, ಫ, ಬ, ಭ, ಮ ಅವರ್ಗೀಯ ವ್ಯಂಜನ ಒಂದು ಗುಂಪು ಅಥವಾ ಒಂದು ವರ್ಗಕ್ಕೆ ಸೇರಿಸಲು ಬಾರದ ವರ್ಣಮಾಲೆಯ ಕೊನೆಯ ಒಂಬತ್ತು ಅಕ್ಷರಗಳನ್ನು ಅವರ್ಗೀಯ ವ್ಯಂಜನಗಳೆಂದು ಕರೆಯುತ್ತಾರೆ. ಅವು ಯಾವುವೆಂದರೆ- ಯ,ರ,ಲ,ವ,ಶ,ಷ,ಸ,ಹ,ಳ. ಕನ್ನಡ ಒತ್ತಕ್ಷರಗಳು ಕನ್ನಡ ಒತ್ತಕ್ಷರಗಳು (೩೪)ಮುವತ್ನಾಲ್ಕು. ಅವು ಯಾವುವೆಂದರೆ: ಕ್ಕ ಖ್ಖ ಗ್ಗ ಘ್ಘ ಙ್ಙ ಚ್ಚ ಛ್ಛ ಜ್ಜ ಝ್ಝ ಞ್ಞ ಟ್ಟ ಠ್ಠ ಡ್ಡ ಢ್ಢ ಣ್ಣ ತ್ತ ಥ್ಥ ದ್ದ ಧ್ಧ ನ್ನ ಪ್ಪ ಫ್ಫ ಬ್ಬ ಭ್ಭ ಮ್ಮ ಯ್ಯ ರ್ರ ಲ್ಲ ವ್ವ ಶ್ಶ ಷ್ಷ ಸ್ಸ ಹ್ಹ ಳ್ಳ ಯೋಗವಾಹಗಳು ಸ್ವತಂತ್ರವಲ್ಲದ ಹಾಗೂ ಸ್ವರವೂ ಅಲ್ಲದ,ವ್ಯಂಜನವೂ ಅಲ್ಲದ ಸ್ವರಾಕ್ಷರಗಳ ಅಂತ್ಯದಲ್ಲಿನ ಹಾಗೂ ವ್ಯಂಜನಗಳ ಆರಂಭಾಕ್ಷರಗಳ ನಡುವಿನ ಎರಡು ಅಕ್ಷರಗಳನ್ನು (ಅನುಸ್ವಾರ-೦,ವಿಸರ್ಗ-ಃ)ಯೋಗವಾಹಗಳೆಂದು ಕರೆಯುತ್ತಾರೆ. ಕರ್ನಾಟಕ ಸರ್ಕಾರವು ತನ್ನ ಪಠ್ಯ ಕ್ರಮದಿಂದ ೠ ಸ್ವರವನ್ನು ಕನ್ನಡ ವರ್ಣಮಾಲೆಯಿಂದ ೧೯೯೦ ರಲ್ಲಿ ಬಿಟ್ಟಿತು. ಹಳೆಗನ್ನಡದ ಮೂರು ಅಕ್ಷರಗಳಾದ ಱ, ೞ ಮತ್ತು (ನ್, ಇದಕ್ಕೆ ಯೂನಿಕೋಡ್ ಇಲ್ಲ) ಇವನ್ನು ಇಂದು ಹೆಚ್ಚಾಗಿ ಬಳಸುತ್ತಿಲ್ಲವಾದರೂ ಹಳೆಗನ್ನಡವನ್ನು ಓದಲು ಇವನ್ನು ತಿಳಿದಿರಬೇಕು. ಇಂಗ್ಲಿಷ್‌ನ F ಮತ್ತು Z ಅಕ್ಷರಗಳಿಗೆ ಫ಼ ಮತ್ತು ಜ಼ (ಫ ಮತ್ತು ಜ) ಹೊಸ ಅಕ್ಷರಗಳು ಉಪಯೋಗಕ್ಕೆ ಬಂದಿವೆ. ಆದರೆ ಅವುಗಳನ್ನು ಕನ್ನಡ ವರ್ಣಮಾಲೆಯಲ್ಲಿ ಸೇರಿಸಿಲ್ಲ. ಸ್ವರಗಳು ಕನ್ನಡದಲ್ಲಿ ಒಟ್ಟು ೧೩ ಸ್ವರಗಳಿವೆ. ಅವನ್ನು "ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ" ಹೀಗೆ 'ಅ'ಕಾರದಿಂದ ಮೊದಲು ಮಾಡಿ, 'ಔ'ಕಾರದ ವರೆಗೆ ಕೊನೆ ಮಾಡಿ, ಹೀಗೆ ಬರೆಯುವುದು ಸಂಸ್ಕೃತ ವ್ಯಾಕರಣದ ಅನುಕರಣೆ. ಸಂಸ್ಕೃತದಲ್ಲಿ ಈ ಬಗೆಯಲ್ಲಿ ಬರೆಯಲು ಕಾರಣ ಅದರ ಮಾಹೇಶ್ವರ ಸೂತ್ರ ಮತ್ತು ಸಂಧಿನಿಯಮಗಳು. ಆದರೆ ಹೀಗೆ ಬರೆಯುವುದರಿಂದ ಕನ್ನಡದ ಸಂಧಿನಿಯಮಗಳನ್ನು ಅರಿಯಲು ಯಾವ ಅನುಕೂಲವೂ ಆಗುವುದಿಲ್ಲವೆಂಬ ಅಭಿಪ್ರಾಯವಿದೆ. "ಇ ಈ ಎ ಏ ಉ ಊ ಒ ಓ ಅ ಆ" ಎಂದು ಇನ್ನೊಂದು ಬಗೆಯಲ್ಲಿಯೂ ಬರೆಯುವುದುಂಟು. ಇಲ್ಲಿ ಸ್ವರಗಳನ್ನು ನಾಲಗೆಯ ತುದಿಯಿಂದ ಕೊನೆಯ ತನಕ ಅವುಗಳು ಹೊರಡುವ ನಾಲಗೆಯ ಭಾಗಕ್ಕೆ ಅನುಕ್ರಮವಾಗಿ ಬರೆಯಲಾಗಿದೆ. ಅಂದರೆ "ಇ ಈ" ನಾಲಗೆಯ ತುತ್ತುದಿಯಿಂದ ಉಲಿದರೆ, "ಅ ಆ" ನಾಲಗೆಯ ಕಟ್ಟಕಡೆಯಲ್ಲಿ ಹೊರಡುವುದು. ೠ, ಱ, ೞ ಗಳನ್ನು ಬಿಟ್ಟಮಾತ್ರಕ್ಕೆ ಆ ಅಕ್ಷರಗಳು ಕನ್ನಡದಲ್ಲಿ ಇಲ್ಲ ಅಥವಾ ಜನರಿಗೆ ಉಚ್ಚರಿಸಲಾಗದೆಂದು ಹೇಳಲಾಗದು. ಸ್ವರಗಳಲ್ಲಿ ನಾಲ್ಕು ವಿಧ ಹೃಸ್ವಸ್ವರ/ಗಿಡ್ಡಸ್ವರ : ಒಂದು ಮಾತ್ರೆಯ ಕಾಲಾವಧಿಯಲ್ಲಿ ಉಚ್ಛರಿಸುವ ಅಕ್ಷರ. ಹೃಸ್ವ ಅಂದರೆ ಚಿಕ್ಕದು. ಒಂದು ಹ್ರಸ್ವ ಸ್ವರವನ್ನು ಉಳಿಯಲು (ಉಚ್ಚಾರ ಮಾಡಲು) ಬರಿ ಒಂದು ಮಾತ್ರೆಯಷ್ಟು( ಒಂದು ಸರತಿ ಕಣ್ಣು ಮಿಟುಕುವಷ್ಟು/ಎವೆಯಿಕ್ಕುವಷ್ಟು ) ಹೊತ್ತು ಬೇಕಾಗುವುದು. ಹೃಸ್ವ ಸ್ವರಗಳು : ಅ ಇ ಉ ಋ ಎ ಒ ದೀರ್ಘಸ್ವರ/ಉದ್ದಸ್ವರ. : ಎರಡು ಮಾತ್ರೆಯ ಕಾಲಾವಧಿಯಲ್ಲಿ ಉಚ್ಛರಿಸುವ ಅಕ್ಷರ. ದೀರ್ಘ ಅಂದರೆ ಉದ್ದದ್ದು ಎಂದು. ಒಂದು ದೀರ್ಘ ಸ್ವರವನ್ನು ಉಲಿಯಲು ಎರಡು ಮಾತ್ರೆಯಷ್ಟು(ಎರಡು ಸರತಿ ಕಣ್ಣು ಮಿಟುಕುವಷ್ಟು/ಎವೆಯಿಕ್ಕುವಷ್ಟು) ಹೊತ್ತು ಬೇಕಾಗುವುದು. ದೀರ್ಘ ಸ್ವರಗಳು: ಆ ಈ ಊ ಏ ಐ ಓ ಔ ಪ್ಲುತ ಸ್ವರ : ಮೂರು ಇಲ್ಲವೆ, ಅದಕ್ಕಿಂತ ಹೆಚ್ಚು ಮಾತ್ರೆಗಳ ಹೊತ್ತು ಉಳಿಯುವ ಸ್ವರ. ಸಂಧ್ಯಕ್ಷರ : ಎರಡು ಸ್ವರಗಳಿಂದ ಉಂಟಾಗುವ ಅಕ್ಷರಗಳು. ಐ, ಔ, ಏ, ಓ ಯೋಗವಾಹಗಳು ಸ್ವತಂತ್ರವಾಗಿ ಪ್ರಯೋಗಿಸಲಾಗದೆ, ಯಾವುದಾದರು ಸ್ವರದೊಂದಿಗೆ ಮಾತ್ರ ಪ್ರಯೋಗ ಮಾಡಬಹುದಾದ ಅಕ್ಷರಗಳು. ಕನ್ನಡ ವರ್ಣಮಾಲೆಯಲ್ಲಿ ನಾಲ್ಕು ಯೋಗವಾಹಗಳಿದ್ದರೂ ಎರಡು ಯೋಗವಾಹಗಳು ಮಾತ್ರ ಬಳಕೆಯಲ್ಲಿವೆ. ಅನುಸ್ವಾರ/ಬಿಂದು (ಅಂ) ಮತ್ತು ವಿಸರ್ಗ (ಅಃ) ಉಪಾಧ್ಮಾನೀಯ ‍: ೲ ಜಿಹ್ಹಾಮೂಲೀಯ : ೱ ಉದಾಹರಣೆಗೆ: ವಿವಿಧ ಸ್ವರಗಳೊಡನೆ ಅನುಸ್ವಾರ: ಅಂಜೂರ, ಆಂಧ್ರ, ಇಂಚರ, ಉಂಗುರ, ಎಂಬತ್ತು, ಒಂಟೆ, ಓಂಕಾರ ಕನ್ನಡದಲ್ಲಿ ಪದದ ನಡುವಿನಲ್ಲಿ ಬರುವ ಅನುನಾಸಿಕ ವ್ಯಂಜನಗಳ ಅರ್ಧಾಕ್ಷರ (ನ್, ಮ್ ಮುಂತಾದವು) ಬದಲು ಅನುಸ್ವರವನ್ನು ಬಳಸುವುದುಂಟು. ಉದಾ: ಅಙ್ಕ = ಅಂಕ ( ಇದನ್ನು ಅಮ್ಕ ಎಂದು ಉಲಿಯಬಾರದು ) ಅಞ್ಚೆ = ಅಂಚೆ ತಙ್ಗಿ = ತಂಗಿ ಗಣ್ಟೆ = ಗಂಟೆ ಅನ್ದ = ಅಂದ ಅಮ್ಬ = ಅಂಬ ವಿವಿಧ ಸ್ವರಗಳೊಡನೆ ವಿಸರ್ಗ: ಅಂತಃಕರಣ, ದುಃಖ ಕನ್ನಡ ಅಕ್ಷರಗಳ ಉಚ್ಚಾರಣೆ ಐಪಿಎ ನಕಾಶೆ ಕೂಡುಸ್ವರಗಳು - ಐ ಔ ಕನ್ನಡ ಅಕ್ಷರಗಳನ್ನು ಬರೆಯುವ ವಿಧಾನ ವ್ಯಂಜನಗಳು ವ್ಯಂಜನಗಳಲ್ಲಿ ಎರಡು ವಿಧ. ವರ್ಗೀಯ ವ್ಯಂಜನ ಮತ್ತು ಅವರ್ಗೀಯ ವ್ಯಂಜನ. 'ಕ' ಅಕ್ಷರದಿಂದ 'ಮ' ಅಕ್ಷರದವರೆಗೆ ವರ್ಗೀಯ ವ್ಯಂಜನಗಳು. ಇದರಲ್ಲಿ ಐದು ವರ್ಗಗಳು. ಕ ವರ್ಗ, ಚ ವರ್ಗ, ಟ ವರ್ಗ, ತ ವರ್ಗ ಮತ್ತು ಪ ವರ್ಗ. 'ಯ' ಅಕ್ಷರದಿಂದ 'ಳ' ಅಕ್ಷರದವರೆಗೆ ಅವರ್ಗೀಯ ವ್ಯಂಜನಗಳು. ಪ್ರತಿ ವ್ಯಂಜನಕ್ಕೆ ಎರಡು ಸ್ವರಗಳಿವೆ: ಅಲ್ಪಪ್ರಾಣ: ಕ (ಕ್+ಅ) ಮಹಾಪ್ರಾಣ: ಕಾ (ಕ್+ಆ') ಸಾಮಾನ್ಯ ವರ್ಣಮಾಲೆಯಲ್ಲಿ (ಅಕ್ಷರಮಾಲೆಯಲ್ಲಿ) ದೀರ್ಘ ಸ್ವರವು ಉಪಯೋಗವಾಗುತ್ತದೆ. ಕನ್ನಡದ ಗುಣಿತಾಕ್ಷರಗಳು ಕನ್ನಡ ಗುಣಿತಾಕ್ಷರಗಳ ಚಿತ್ರಸಂಚಲನೆಯನ್ನು (ಅನಿಮೇಶನ್) ವೀಕ್ಷಿಸಲು ಕೆಳಗಿನ ಬಾಕ್ಸ್‍ನಲ್ಲಿ ನೀಡಿರುವ ಕೊಂಡಿಯನ್ನು ಕ್ಲಿಕ್ ಮಾಡಿ. ಗುಣಿತಾಕ್ಷರ ಮತ್ತು ಒತ್ತಕ್ಷರ ಕನ್ನಡದಲ್ಲಿ ಪ್ರತಿಯೊಂದು ವ್ಯಂಜನಗಳಿಗೂ ಪ್ರತ್ಯೇಕ ಒತ್ತಕ್ಷರಗಳಿವೆ. ಅವುಗಳು ಹೀಗಿವೆ; ಸಂಯುಕ್ತಾಕ್ಷರಗಳಲ್ಲಿ ಎರಡು ವಿಧಗಳಿವೆ. ಕನ್ನಡ ಒತ್ತಕ್ಷರಗಳ ಚಿತ್ರಸಂಚಲನೆಯನ್ನು (ಅನಿಮೇಶನ್) ವೀಕ್ಷಿಸಲು ಕೆಳಗಿನ ಬಾಕ್ಸ್‍ನಲ್ಲಿ ನೀಡಿರುವ ಕೊಂಡಿಯನ್ನು ಕ್ಲಿಕ್ ಮಾಡಿ. ಅವರ್ಗೀಯ ವ್ಯಂಜನ ಎಂದರೇನು?ಅವು ಎಷ್ಟಿವೆ? ಒಂದು ಗುಂಪು ಅಥವಾ ಒಂದು ವರ್ಗಕ್ಕೆ ಸೇರಿಸಲು ಬಾರದ ವರ್ಣಮಾಲೆಯ ಕೊನೆಯ ಒಂಬತ್ತು ಅಕ್ಷರಗಳನ್ನು ಅವರ್ಗೀಯ ವ್ಯಂಜನಗಳೆಂದು ಕರೆಯುತ್ತಾರೆ. ಅವು ಯಾವುವೆಂದರೆ-ಯ,ರ,ಲ,ವ,ಶ,ಷ,ಸ,ಹ,ಳ. ನೋಡಿ ಕನ್ನಡ ಹೊರಸಂಪರ್ಕ ಕರ್ನಾಟಕ ಜನಾಂಗದ ಮೊತ್ತಮೊದಲ ಬರಹ ಭಾಷೆ, ಪ್ರಾಕೃತ; ಲಿಪಿ, ಬ್ರಾಹ್ಮೀ. ಇಲ್ಲಿಯ ಜನಾಂಗಕ್ಕೆ ಇವನ್ನು ಪರಿಚಯಿಸಿದವನು, ಕ್ರಿ.ಪೂ. ಮೂರನೆಯ ಶತಮಾನದಲ್ಲಿ ಪಾಟಲೀಪುತ್ರ (ಬಿಹಾರ ರಾಜ್ಯ)ದಿಂದ ಆಳುತ್ತಿದ್ದ ಮೌರ್ಯಚಕ್ರವರ್ತಿ ಅಶೋಕ. ಒಂದು ಭಾಷೆ ಮತ್ತು ಒಂದು ಲಿಪಿಯ ಮೂಲಕ ಈತನು ಬೆಸೆದ ದಖ್ಖಣವು ಸುಮಾರು ಆರು ಶತಮಾನಗಳ ಕಾಲ (ಕ್ರಿ.ಪೂ. 3ರಿಂದ ಕ್ರಿ.ಶ. 3ರವರೆಗೆ) ಈ ಮಾಧ್ಯಮಗಳ ಮೂಲಕವೇ ಸಂಭಾಷಿಸಿತು. ಉಲ್ಲೇಖಗಳು ಅಕ್ಷರಮಾಲೆಗಳು ಲಿಪಿಗಳು ಭಾರತೀಯ ಭಾಷೆಗಳು ದ್ರಾವಿಡ ಭಾಷೆಗಳು ಕನ್ನಡ ಕರ್ನಾಟಕ ವ್ಯಾಕರಣ
880
"https://kn.wikipedia.org/wiki/%E0%B2%95%E0%B2%A8%E0%B3%8D%E0%B2%A8%E0%B2%A1%20%E0%B2%B5%E0%B2%BF%E0(...TRUNCATED)
ಕನ್ನಡ ವಿಕಿಪೀಡಿಯ.
"ಕನ್ನಡ ವಿಶ್ವಕೋಶವು ಮೀಡಿಯಾವಿಕಿಯನ್ನು ಬಳ(...TRUNCATED)

Dataset Card for "Wikipedia-Kn"

This is a filtered version of the Wikipedia dataset only containing samples of Kannada language. The dataset contains total of 31437 samples.

Data Sample:

{'id': '832',
 'url': 'https://kn.wikipedia.org/wiki/%E0%B2%A1%E0%B2%BF.%E0%B2%B5%E0%B2%BF.%E0%B2%97%E0%B3%81%E0%B2%82%E0%B2%A1%E0%B2%AA%E0%B3%8D%E0%B2%AA',
 'title': 'ಡಿ.ವಿ.ಗುಂಡಪ್ಪ',
 'text': 'ಡಿ ವಿ ಜಿ(ಮಾರ್ಚ್ ೧೭, ೧೮೮೭ - ಅಕ್ಟೋಬರ್ ೭, ೧೯೭೫) ಎಂಬ ಹೆಸರಿನಿಂದ ಪ್ರಸಿದ್ಧರಾದ ಡಾ. ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರು ಕರ್ನಾಟಕದ ಪ್ರಸಿದ್ಧ ಸಾಹಿತಿ, ಪತ್ರಕರ್ತರು. ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಇವರು ಕನ್ನಡದ ಆಧುನಿಕ ಸರ್ವಜ್ಞ ಎಂದೇ ಪ್ರಸಿದ್ಧರಾದವರು.\n\nಬಾಲ್ಯ ಜೀವನ\nಡಿ.ವಿ.ಜಿ ಅವರು ೧೮೮೭, ಮಾರ್ಚ್ ೧೭ರಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ದೇವನಹಳ್ಳಿಯಲ್ಲಿ ಜನಿಸಿದರು.\n\nವೃತ್ತಿ ಜೀವನ\nಪ್ರೌಢಶಾಲೆಯಲ್ಲಿ\n\nಸಾಹಿತ್ಯ ಕೃಷಿ\nದಿವಾನ್ ರಂಗಾಚಾರ್ಯ ಅವರ ಬಗ್ಗೆ ಇಂಗ್ಲಿಷಿನಲ್ಲಿ ಬರೆದ ಲೇಖನ ಡಿ.ವಿ.ಜಿ ಅವರ ಬದುಕಲ್ಲಿ ಹೊಸ ತಿರುವು ಪಡೆಯಿತು. ಮುಂದೆ ಪುಸ್ತಕ ರೂಪಕ್ಕೆ ತರಲು ಹಲವು ಮಾರ್ಪಾಡು ಮಾಡಿದರು. ಇದು ಪ್ರಕಟವಾಗುತ್ತಿದ್ದಂ....."
}

Use with Datasets

from datasets import load_dataset

ds = load_dataset("RaviNaik/Wikipedia-Kn")
Downloads last month
30