text
stringlengths 0
2.67k
|
---|
ಸರ್ಕಾರ |
• ಮಾದರಿ |
Panchayat raj |
• ಪಾಲಿಕೆ |
Gram panchayat |
Population (2011) |
• Total |
೧,೪೯೩ |
Languages |
ಸಮಯ ವಲಯ |
ಯುಟಿಸಿ+5:30 (IST) |
ISO 3166 code |
IN-KA |
ವಾಹನ ನೋಂದಣಿ |
KA |
ಜಾಲತಾಣ |
karnataka.gov.in |
ಇದು ಹುಬ್ಬಳ್ಳೀ, ಧಾರವಾಡಗಳಿಂದ ೧೯ ಕಿಲೋಮೀಟರ್ ದೂರದಲ್ಲಿದೆ. ಇಲ್ಲಿರುವ ಕೆರೆಯನ್ನು ಅಭಿವೃದ್ಧಿಪಡಿಸಿ ಬೃಂದಾವನ ಮಾದರಿಯಲ್ಲಿ ಪ್ರವಾಸಿತಾಣವಾಗಿ ಮಾಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಇಲ್ಲಿ ಮೀನುಮರಿ ಪಾಲನಾ ಕೇಂದ್ರವೂ ಇದೆ.[೧] |
ನೀರಸಾಗರ ಜಲಾಶಯ |
ಬದಲಾಯಿಸಿ |
ಇಲ್ಲಿನ ಕೆರೆಯು ೧೯೫೫ರಿಂದ ಹುಬ್ಬಳ್ಳಿ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುತ್ತಿದೆ. ೧೯೫೫ ರಲ್ಲಿ ಬೇಡ್ತಿ ಹಳ್ಳಕ್ಕೆ ಆಣೆಕಟ್ಟು ನಿರ್ಮಿಸಿ ಇಲ್ಲಿನ ನೀರಸಾಗರ ಜಲಾಶಯದ ನಿರ್ಮಾಣ ಮಾದಲಾಯಿತು. ಇದರ ಸಾಮರ್ಥ್ಯವು ೧.೦೨ ಟಿ.ಎಂ.ಸಿ ಆಗಿದೆ. ಒಂದು ಕಾಲದಲ್ಲಿ ಹುಬ್ಬಳ್ಳೀ-ಧಾರವಾಡ ಅವಳಿನಗರದ ಜನತೆಗೆ ಕುಡಿಯುವ ನೀರಿಗೆ ಆಧಾರವಾಗಿತ್ತು. ಇಂದಿಗೂ ಇದು ಹುಬ್ಬಳ್ಳಿಯ ಶೇ.೨೫ರಷ್ಟು ಪ್ರದೇಶಕ್ಕೆ ನೀರು ಒದಗಿಸುತ್ತಿದೆ.[೨] |
ಈ ಕೆರೆಯು ತುಂಬಲು ಬೇಡ್ತಿ ಹಳ್ಳದ ನೀರು ಪ್ರಮುಖ ಮೂಲವಾಗಿದೆ. |
ಈ ಕೆರೆ 181 ಚದರ ಕಿ.ಮೀ. ಜಲಾನಯನ ಪ್ರದೇಶ ಹೊಂದಿದೆ. |
ಇಲ್ಲಿ ಅನೇಕ ಪ್ರವಾಸಿಗಳು ಬರುತ್ತಾದರೂ ಹೊಟೆಲ್,ಅಂಗಡಿ, ಸುಸಜ್ಜಿತ ಉದ್ಯಾನವನಗಳು ಇಲ್ಲ. |
ಜನಸಂಖ್ಯಾಶಾಸ್ತ್ರ |
ಬದಲಾಯಿಸಿ |
2011 ರ ಭಾರತದ ಜನಗಣತಿಯ ಪ್ರಕಾರ ನೀರಸಾಗರದಲ್ಲಿ 290 ಮನೆಗಳು ಮತ್ತು ಒಟ್ಟು 1,493 ಜನಸಂಖ್ಯೆಯು 803 ಪುರುಷರು ಮತ್ತು 690 ಮಹಿಳೆಯರನ್ನು ಒಳಗೊಂಡಿದೆ. 0-6 ವಯಸ್ಸಿನ 213 ಮಕ್ಕಳು ಇದ್ದರು. [೩] |
ಉಲ್ಲೇಖಗಳು |
ಬದಲಾಯಿಸಿ |
RELATED PAGES |
ಹೊಸದುರ್ಗ |
ಹೆಸರಘಟ್ಟ ಕೆರೆ |
ಚಿರತಗುಂಡು |
ಕರ್ನಾಟಕ ರಾಜ್ಯದ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಒಂದು ಗ್ರಾಮ ಚಿರತಗುಂಡು |
ವಿಕಿಪೀಡಿಯ |
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. |
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್ |
ವಿಕಿಪೀಡಿಯ |
ವಿಕಿಪೀಡಿಯ ಅನ್ನು ಹುಡುಕಿ |
[ಮರೆಮಾಡಲು] |
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ. |
ಬಂಡಿಹಳ್ಳ ಜಲಾಶಯ |
ಭಾಷೆ |
Download PDF |
ವೀಕ್ಷಿಸಿ |
ಸಂಪಾದಿಸಿ |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಬಂಡಿಹಳ್ಳ ಜಲಾಶಯವು ಘಾಟಿ ಸುಬ್ರಮಣ್ಯ ಮತ್ತು ದೊಡ್ಡಬಳ್ಳಾಪುರ ಮಾರ್ಗ ಮಧ್ಯೆ , ಘಾಟಿ ಸುಬ್ರಹ್ಮಣ್ಯಕ್ಕೆ ೩ಕೀ.ಮಿ ದೂರದಲ್ಲಿ ಇದೆ ಇದನ್ನು ಸುಮಾರು 1946ರಲ್ಲಿ ನಿರ್ಮಿಸಲಾಯಿತು. ಇದೆ ಜಲಾನಯನ ಪ್ರದೇಶವು ಸುಮಾರು ೧೫೦೦ ಹೇಕ್ಟೆರ್ ಪ್ರದೇಶಗಳಿಗೆ ನೀರಿಣಿಸಬಲ್ಲದು. ಬಂಡಿಹಳ್ಳ ಜಲಾಶಯ ಜಲಾನಯನ ಪ್ರದೇಶ ಗೌರಿಬಿದನೂರು ತಾಲ್ಲೂಕಿನ ತೊಂಡೆಬಾವಿ ಹೋಬಳಿಯ ಸೂಮಾರು ೫೦ ಹಳ್ಳಿಗೆ ಇದೆ ಆಧಾರ. ಇದು ಉತ್ತರ ಪಿನಾಕಿನಿಯ ಉಪನದಿಯಾಗಿದ್ದು ಸುಮಾರು ೫೦ ಕೀ.ಮಿ ಕ್ರಮಿಸಿ ತೊಂಡೆಬಾವಿಯ ಸಮೀಪ ಉತ್ತರ ಪಿನಾಕಿನಿಗೆ ಸೇರುತ್ತದೆ. ಈಗ ಈ ನದಿಗೆ ಘಾಟಿ ಸುಬ್ರಹ್ಮಣ್ಯದ ಬಳಿ ವಿಶ್ವೇಶ್ವರಯ್ಯ ಪಿಕಪ್ ಡ್ಯಾಂ ಹಾಗೂ ಗೂಂಜುರು ಬಳಿ ೫೦೦ ಹೇಕ್ಟೆರ್ ಪ್ರದೇಶದಲ್ಲಿ ಕೆರೆಯನ್ನು ನಿರ್ಮಿಸಲಾಗಿದೆ. ಆದ ಕಾರಣ ಬಂಡಿಹಳ್ಳ ನದಿಯ(ಸುಬ್ರಹ್ಮಣ್ಯ ನದಿ ಹಿಂದಿನ ಹೇಸರು) ಜಾಡು ನಶಿಸಿಹೋಗಿದೆ. |
Last edited ೭ years ago by User unavailable826 |
RELATED PAGES |
ಕನಕಪುರ |
ದೊಡ್ಡಬಳ್ಳಾಪುರ ತಾಲ್ಲೂಕಿನ ನದಿಗಳು |
ಘಾಟಿ ಸುಬ್ರಹ್ಮಣ್ಯ |
ವಿಕಿಪೀಡಿಯ |
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. |
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್ |
ವಿಕಿಪೀಡಿಯ |
ವಿಕಿಪೀಡಿಯ ಅನ್ನು ಹುಡುಕಿ |
[ಮರೆಮಾಡಲು] |
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ. |
ಭದ್ರಾ ಅಣೆಕಟ್ಟು |
ಭಾಷೆ |
Download PDF |
ವೀಕ್ಷಿಸಿ |
ಸಂಪಾದಿಸಿ |
ಪರಿವಿಡಿ |
ನದಿಯ ಉಗಮ |
ಬದಲಾಯಿಸಿ |
ಲಕ್ಕವಳ್ಳಿ-ಭದ್ರಾ ಅಣೆಕಟ್ಟು |
ಭದ್ರಾ ನದಿ ಕುದುರೆಮುಖ ಶ್ರೇಣಿಯ ಪಶ್ಚಿಮ ಘಟ್ಟಗಳ ಅರೋಲಿ ಪರ್ವತ ಶ್ರೇಣಿಯ ತಪ್ಪಲಿನಲ್ಲಿ ಕುದುರೆಮುಖದ ಸಂಸೆ ಯಲ್ಲಿ, ಗಂಗಾಮೂಲ ಎಂಬಲ್ಲಿ ಹುಟ್ಟಿ, ಪೂರ್ವಾಭಿಮುಖವಾಗಿ ಡೆಕ್ಕನ್ ಪ್ರಸ್ಥಭೂಮಿಯ ಮೇಲೆ ಹರಿಯುತ್ತದೆ. ತನ್ನಿತರ ಉಪನದಿಗಳಾದ ಸೋಮವಾಹಿನಿ, ತಡಬೇಹಳ್ಳ ಮತ್ತು ಓಡಿರಾಯನಹಳ್ಳಗಳ ಜೊತೆ ಸೇರಿ ಭದ್ರ ಅಭಯರಣ್ಯದ ಮೂಲಕ ಹರಿಯುತ್ತ ಮುಂದೆ ಶಿವಮೊಗ್ಗ ಜಿಲ್ಲೆಯ ಸಣ್ಣ ಪಟ್ಟಣ 'ಕೂಡ್ಲಿ'ಯಲ್ಲಿ ತುಂಗಾ ನದಿಯೊಂದಿಗೆ ಸೇರಿ ತುಂಗಭದ್ರಾ ನದಿಯಾಗುತ್ತದೆ. ಈ ಭದ್ರಾ ನದಿಗೆಲಕ್ಕವಳ್ಳಿಯ ಬಳಿ ಜಲಾಶಯವನ್ನು ನಿರ್ಮಿಸಲಾಗಿದೆ.[೧] |
Bhadra Dam |
ಜಲಾನಯನ ಪ್ರದೇಶ-ಅಣೆಕಟ್ಟು |
ಬದಲಾಯಿಸಿ |
ಭದ್ರಾವತಿ ಮತ್ತು ಭದ್ರಾ ವನ್ಯಜೀವಿ ಅಭಯಾರಣ್ಯದ ಮೂಲಕ ಹರಿಯುತ್ತದೆ., ಶಿವಮೊಗ್ಗ ಸನಿಹದ ಭದ್ರಾವತಿ ಮೂಲಕ ಹರಿದು, ಉಪನದಿಗಳಿಂದ ಸಂಯೋಜಿತ ನದಿ ಕೃಷ್ಣ ನದಿ ಸೇರಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ತುಂಗಭದ್ರ, ಕೃಷ್ಣ ನದಿಯ ಪ್ರಮುಖ ಉಪನದಿ, ಪೂರ್ವದ ದಿಕ್ಕಿನಲ್ಲಿ ಮುಂದುವರೆಯುತ್ತದೆ. ಭದ್ರಾ ಅಣೆಕಟ್ಟು ಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ, ಲಕ್ಕವಳ್ಳಿ ಹಳ್ಳಿಯಿಂದ 1.5 ಕಿಲೋಮೀಟರ್ (0.93 ಮೈಲಿ) ಮತ್ತು ಶಿವಮೊಗ್ಗ ನಗರದ 28 ಕಿಲೋಮೀಟರ್ ಇದೆ (17 ಮೈಲಿ ) ಭದ್ರಾ ನದಿಯ ತುಂಗಭದ್ರೆಯ ಸಂಗಮ 50 ಕಿಲೋಮೀಟರ್ (31 ಮೈಲಿ). ಭದ್ರಾ ಅಣೆಕಟ್ಟಿನ ಜಲಾನಯನ ಪ್ರದೇಶ. 1,968 ಚದರ ಕಿಲೋಮೀಟರ್ (760 ಚದರ ಮೈಲಿ) ಅದರಲ್ಲಿ ಅರಣ್ಯ ಪ್ರದೇಶ 717.49 ಹೆಕ್ಟೇರ್ (1,773.0 ಎಕ್ರೆಗಳು) ಅಚ್ಚುಕಟ್ಟು ಪ್ರದೇಶವಿದೆ ತೂಬುಗಳಲ್ಲಿ, ನೀರಾವರಿ ಕೃಷಿ ಭೂಮಿ 3,274.65 ಹೆಕ್ಟೇರ್ (8,091.8 ಎಕರೆ) ಮತ್ತು 7,258.74 ಹೆಕ್ಟೇರ್ (17,936.7 ಎಕರೆ)ಪಾಳು ಭೂಮಿ ಆಗಿದೆ. ನೀರಾವರಿ ಯೋಜನೆಯ ಪ್ರದೇಶ ಚಿಕ್ಕಮಗಳೂರು, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಇದೆ. ಹಲವಾರು ಕೈಗಾರಿಕೆಗಳು, ನಗರ ಮತ್ತು ಗ್ರಾಮೀಣ ವಸಾಹತುಗಳು ಈ ನದಿಯ ನೀರು ಸರಬರಾಜು ಅವಲಂಬಿಸಿದೆ; ಪ್ರಮುಖ ಕೈಗಾರಿಕಾ ಚಟುವಟಿಕೆ ಯೋಜನೆಯ ಕುದುರೆಮುಖ ಕಬ್ಬಿಣ ಅದಿರು ಕಂಪನಿ ಲಿಮಿಟೆಡ್, ಮೈಸೂರು ಪೇಪರ್ ಮಿಲ್ಸ್ ಮತ್ತು ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಇದರ ನೀರಿನಾಶ್ರಯದಲ್ಲಿ ಇವೆ. ಮೀನುಗಾರಿಕೆ ಚಟುವಟಿಕೆಗಳಿಗೆ ಈ ನದಿಯ ಉಪಯೋಗ ಹೆಚ್ಚಾಗಿದೆ; (ಮೀನಿನ 81 ಮೀನುಗಳ ಜಾತಿ/ಕುಟುಂಬಗಳು, ಅವುಗಳ 8 ವಿಭಾಗದವುಗಳು ಭದ್ರಾ ನದಿ ಯಲ್ಲಿ ರೋಗ ಪೀಡಿತವಾದ ದಾಖಲೆಗಳಿವೆ.?)[೨] |
ಮಳೆ ನೀರಿನ ಪ್ರಮಾಣ |
ಬದಲಾಯಿಸಿ |
ಭದ್ರಾ ನದಿ ಜಲಾನಯನ ಮಳೆ ಮುಂಗಾರು ಅವಧಿಯಲ್ಲಿ (ನವೆಂಬರ್ ಜೂನ್) ಅವಧಿಯಲ್ಲಿ ಸಂಭವಿಸುತ್ತವೆ. 2320 ಮಿಮೀ ಸರಾಸರಿ ವಾರ್ಷಿಕ ಮಳೆಯಾಗುತ್ತದೆ [3]. ಮಳೆ ಎರಡೂ ನೈಋತ್ಯ ಮುಂಗಾರು ಹಾಗೂ ಈಶಾನ್ಯ ಮುಂಗಾರಿನ ಲಾಭದುರೆಯುವುದು.. ಒಳಹರಿವು ಕೊಡುಗೆ ನೈರುತ್ಯ ಮುಂಗಾರು (ಜೂನ್ ಸೆಪ್ಟೆಂಬರ್) 82%. ಮತ್ತು ಈಶಾನ್ಯ ಮಾರುತಗಳಿಂದ 18% (ಅಕ್ಟೋಬರ್ನಿಂದ ಡಿಸೆಂಬರ್ವರೆಗೆ) ನಿಂದ ಅಣೆಕಟ್ಟೆ ನೀರು ಪಡೆಯುವುದು. 1,968 ಚದರ ಕಿಲೋಮೀಟರ್ (760 ಚದರ ಮೈಲಿ) ಅಚ್ಚುಕಟ್ಟು ಪ್ರದೇಶದ ಅಂದಾಜು ವಾರ್ಷಿಕ ನೀರಿನ ಇಳುವರಿ/ಒದಗಣೆ 75% ನಂಬಬಹುದಾದ ವರ್ಷದಲೆಖ್ಖ 84,63ಬಿಚಿಎಫ್ ಃಅಈ (ಶತಕೋಟಿ ಘನ ಅಡಿ)ಎಂದಿದ್ದಾರೆ. 25 ವರ್ಷಗಳ ಕಾಲದ ರೆಕಾರ್ಡಿಂಗ್ ಆಧರಿಸಿ, ಇದು 1,678 ಮಿಮೀ ಅಂದಾಜು ವಾರ್ಷಿಕ ಇವ್ಯಾಪೊಟ್ರಾನ್ಸ್ಪಿರೇಷನ್ (ಭಾಷ್ಪೀಕರಣ?)ಹೊಂದಿದೆ.[೩] |
ನೀರಿನ ಕೊರತೆ ಏಪ್ರಿಲ್ ೨೦೧೬ |
ಬದಲಾಯಿಸಿ |
71.53 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ (ಜಲಾಶಯದ ಗರಿಷ್ಠಮಟ್ಟ 186 ಅಡಿ) ಹೊಂದಿರುವ ಜಲಾಶಯದಲ್ಲಿ ಪ್ರಸ್ತುತ 27 ಟಿಎಂಸಿ ನೀರಿದೆ. ಅದರಲ್ಲಿ 13 ಟಿಎಂಸಿ ಅನುಪಯುಕ್ತ ಸಂಗ್ರಹ. ಉಳಿದ 14 ಟಿಎಂಸಿಯಲ್ಲಿ ನದಿ ತೀರದ ನಗರ–ಪಟ್ಟಣ, ಗ್ರಾಮೀಣ ಭಾಗದ ನೀರು ಸರಬರಾಜು ಯೋಜನೆಗಳು ಹಾಗೂ ಕೈಗಾರಿಕೆಗಳ ಬಳಕೆಗೆ 4 ಟಿಎಂಸಿ ಮೀಸಲಿಡಬೇಕಿದೆ. ಹಾಗಾಗಿ, ಭದ್ರಾ ಬಲ ಹಾಗೂ ಎಡ ದಂಡೆ ನಾಲೆಗಳ 1,82,818 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ ಕೇವಲ 10 ಟಿಎಂಸಿ ಮಾತ್ರ ಲಭ್ಯವಿದೆ. |
ಸಮಿತಿ ತೀರ್ಮಾನದಂತೆ ಈಗಾಗಲೇ 54 ದಿನ ನೀರು ಹರಿಸಲಾಗಿದೆ. ಈಗ ನಾಲೆಯಲ್ಲಿ ಹರಿಯುತ್ತಿರುವ ನೀರನ್ನು ಏ. 10ಕ್ಕೆ ನಿಲುಗಡೆ ಮಾಡಿ, ನಂತರ ಏ.28ರಿಂದ 21 ದಿನ ಹರಿಸಿದರೆ ಜಲಾಶಯದ ನೀರು ಖಾಲಿಯಾಗಲಿದೆ. ಪ್ರಸ್ತುತ ಜಲಾಶಯದ ಮಟ್ಟ 139 ಅಡಿ ಇದೆ. 30 ದಿನ ನೀರು ಹರಿಸಿದರೆ ಅದು 113 ಅಡಿಗೆ ತಲುಪಲಿದೆ. ನಂತರ ಮಳೆ ಬೀಳುವವರೆಗೂ ಒಂದು ಹನಿ ನೀರು ನಾಲೆಗೆ ಹರಿಸಲು ಸಾಧ್ಯವಾಗುವುದಿಲ್ಲ. |
ಕುಡಿಯುವ ನೀರಿನ ಯೋಜನೆಗಳಿಗೆ ಬೇಡಿಕೆ: ಜಲಾಶಯದ ನೀರು ಬಳಸಿಕೊಂಡು ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಮಧ್ಯ ಕರ್ನಾಟಕದ ಹಲವು ಜಿಲ್ಲೆಗಳ ಹಲವು ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಹಿಂದೆ ಕುಡಿಯುವ ನೀರಿಗಾಗಿ ಕೇವಲ 2 ಟಿಎಂಸಿ ನೀರು ಬಳಸಲಾಗುತ್ತಿತ್ತು. ಈಗ ಈ ಪ್ರಮಾಣ 7 ಟಿಎಂಸಿಗೆ ತಲುಪಿದೆ. |
ಜಲಾಶಯದ ನೀರು ಮುಖ್ಯ ನಾಲೆ, ವಿತರಣಾ ಹಾಗೂ ಉಪ ನಾಲೆಗಳು ಸೇರಿ ಎಡ ನಾಲೆ 78 ಕಿ.ಮೀ ಮತ್ತು ಬಲ ನಾಲೆ 387.90 ಕಿ.ಮೀ ಸಾಗುತ್ತವೆ. ನಾಲೆ ಸಾಗುವ ಹಲವು ಪ್ರದೇಶಗಳು ಎತ್ತರದಲ್ಲಿದ್ದು, ಅಲ್ಲೆಲ್ಲ ಪಂಪ್‌ಸೆಟ್‌ಗಳ ಮೂಲಕ ನೀರು ಪಡೆದು ಒಣ ಭೂಮಿಯಲ್ಲೂ ಕೃಷಿ ಚಟುವಟಿಕೆ ಕೈಗೊಳ್ಳಲಾಗಿದೆ. ಹೀಗೆ ಅಕ್ರಮವಾಗಿ ಪಡೆದ ನೀರಿನಲ್ಲಿ ಸಾವಿರಾರು ಎಕರೆ ತೋಟಗಳನ್ನೂ ಬೆಳೆಸಲಾಗಿದೆ. |
ಅಕ್ರಮವಾಗಿ ನೀರು ಬಳಸುವ ಕಾರಣ ನಾಲೆಯಲ್ಲಿ ಪ್ರತಿದಿನ 2,650 ಕ್ಯುಸೆಕ್ ನೀರು ಹರಿದರೂ ಕೊನೆಯ ಭಾಗದ ಜಮೀನುಗಳಿಗೆ ನೀರು ತಲುಪುತ್ತಿಲ್ಲ. ಒಂದು ವೇಳೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಹೆಚ್ಚು ನೀರು ಹರಿಸುವ ನಿರ್ಧಾರ ತೆಗೆದುಕೊಂಡರೂ, ನಾಲೆಗಳಿಗೆ ಧಕ್ಕೆಯಾಗುವ ಜತೆಗೆ, ನೀರು ನಿಗದಿಪಡಿಸಿದ ಅವಧಿಗೂ ಮೊದಲೇ ಖಾಲಿಯಾಗಿ ಬಿಡುತ್ತದೆ. ಹಿಂದೆಯೂ ಕೆಲ ವರ್ಷ ಭದ್ರಾ ಜಲಾಶಯ ಇಂತಹ ಸ್ಥಿತಿಗೆ ತಲುಪಿತ್ತು. ನೀರಾವರಿ ಬಳಕೆಗಾಗಿ ಮೀಸಲಾದ ನೀರು 2004ರಲ್ಲಿ 16.64 ಟಿಎಂಸಿಗೆ ಕುಸಿದಿತ್ತು.[೪] |
ಕುಡಿಯುವ ನೀರಿನ ಯೋಜನೆ |
ಬದಲಾಯಿಸಿ |
Subsets and Splits