text
stringlengths 0
2.67k
|
---|
ವಿಕಿಪೀಡಿಯ ಅನ್ನು ಹುಡುಕಿ |
[ಮರೆಮಾಡಲು] |
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ. |
ಜಕಣಾಚಾರಿ |
ಭಾರತೀಯ ಶಿಲ್ಪಿ |
ಭಾಷೆ |
Download PDF |
ವೀಕ್ಷಿಸಿ |
ಸಂಪಾದಿಸಿ |
ಅಮರಶಿಲ್ಪಿ ಜಕಣಾಚಾರಿ ಯವರು ಅತ್ಯಂತ ನಾಜೂಕಾದ ಹಲವಾರು ದೇವಾಲಯಗಳನ್ನು ನಿರ್ಮಿಸಿ ದಂತಕಥೆಯಾದ ಶಿಲ್ಪಿ,ಇವರು ಕಲ್ಯಾಣಿ ಚಾಲುಕ್ಯರ ಹಾಗೂ ಹೊಯ್ಸಳರ ಶೈಲಿಯ ದೇವಾಲಯಗಳನ್ನು ಬೇಲೂರು ಹಾಗೂ ಹಳೇಬೀಡಿನಲ್ಲಿ ನಿರ್ಮಿಸಿದ್ದಾರೆ. |
Entrance of Channakeshava Temple, Kaidala |
ಪರಿವಿಡಿ |
ಅವರ ಜೀವನ |
ಬದಲಾಯಿಸಿ |
Interior of Chennakeshava Temple, Kaidala |
Chennakeshava temple, Kaidala |
ಕರ್ನಾಟಕದ ತುಮಕೂರಿನಿಂದ ೯ ಕಿ.ಮೀ ದೂರದಲ್ಲಿರುವ ಕೈದಾಳೆಯಲ್ಲಿ ಜಕಣಾಚಾರಿಯವರು ಜನಿಸಿದರು. ಕೆಲವು ದಾಖಲೆಗಳ ಪ್ರಕಾರ ಈ ಊರಿನ ಮೂಲ ಹೆಸರು ಕ್ರೀಡಾಪುರ. ಅವರ ತಮ್ಮ ಜೀವನವನ್ನು ಕಲೆಗಾಗಿ ಮುಡಿಪಾಗಿಟ್ಟಿದ್ದರು. ಅವರು ತಮ್ಮ ವೃತ್ತಿ ಜೀವನವನ್ನು ನೃಪ ಹಯರು ಆ ಪ್ರದೇಶವನ್ನು ಆಳುತ್ತಿರುವಾಗ ಪ್ರಾರಂಭಿಸಿದರು. ತಮ್ಮ ಮದುವೆಯಾದ ನಂತರವೇ ಅವರು ಕೆಲಸ ಹುಡುಕುತ್ತಾ ಮನೆಬಿಟ್ಟು ಹೊರಟರು. ದೂರದ ಪ್ರಯಾಣ ಮಾಡಿದರು ಹಾಗೂ ಹಲವಾರು ದೇವಾಲಯಗಳನ್ನು ನಿರ್ಮಿಸುತ್ತ ಮುನ್ನಡೆದರು ಹಾಗೂ ತಮ್ಮ ಹೆಂಡತಿಯನ್ನು ಸಹ ತಮ್ಮ ಕೆಲಸದಲ್ಲಿ ಮರೆತರು. |
ಜಕಣಾಚಾರ್ಯ ಹಾಗೂ ಅವರ ಮಗ |
ಬದಲಾಯಿಸಿ |
ಜಕಣಾಚಾರ್ಯನ ಮಗನ ಹೆಸರು ಡಂಕಣಾಚಾರ್ಯ. ಡಂಕಣಾಚರ್ಯನು ಆತನ ತಂದೆಯನ್ನು ಹುಡುಕುವುದಕ್ಕಾಗಿ ತಾನೇ ಒಬ್ಬ ಪ್ರಖ್ಯಾತ ಶಿಲ್ಪಿಯಾಗಿ ಬೆಳೆದನು. ಬೇಲೂರಿನಲ್ಲಿ ಅವನು ಶಿಲ್ಪಿಯ ಕೆಲಸಕ್ಕಾಗಿ ನೇಮಿಸಲ್ಪಟ್ಟನು, ಮಹಾನ್ ಶಿಲ್ಪಿ ಜಕಣಾಚಾರಿ ನಿರ್ಮಿಸಿದ ಒಂದು ಶಿಲ್ಪದಲ್ಲಿ ಒಂದು ಒಡಕನ್ನು ಆತನು ಕಂಡನು. ಇದರಿಂದ ಕೋಪಗೊಂಡ ಜಕಣಾಚಾರ್ಯರು ಅವರು ಕೆತ್ತಿದ ಶಿಲ್ಪದಲ್ಲಿ ದೋಷವಿದ್ದರೆ ತನ್ನ ಬಲಗೈಯನ್ನು ಕತ್ತರಿಸಿಕೊಳ್ಳುವುದಾಗಿ ಆ ಯುವ ಶಿಲ್ಪಿಗೆ ಮಾತನ್ನಿತ್ತರು. ಆ ಶಿಲ್ಪವನ್ನು ಪರೀಕ್ಷಿಸಿದ ನಂತರ, ಆ ದೋಷವಿರುವುದು ನಿಜವೆಂದು ಗೊತ್ತಾಗಿ ಜಕಣಾಚಾರ್ಯರು ತಮ್ಮ ವಾಗ್ದಾನದಂತೆ ತಮ್ಮ ಬಲಗೈಯನ್ನು ಕತ್ತರಿಸಿಕೊಂಡರು. ಕೊನೆಯಲ್ಲಿ, ಆ ಇಬ್ಬರು ಶಿಲ್ಪಿಗಳು ಅವರಿಬ್ಬರೂ ತಂದೆ, ಮಗನೆಂಬ ಸಂಬಂಧವನ್ನು ತಿಳಿದುಕೊಂಡರು. |
ಚನ್ನಕೇಶವ ದೇವಾಲಯ |
ಬದಲಾಯಿಸಿ |
Krishna in relief at the entrnace of Channakeshava Temple, Kaidala |
Vishnu relief adorning entrance of Channakeshava Temple, Kaidala |
ಜಕಣಾಚಾರ್ಯರು ತಮ್ಮ ಹುಟ್ಟೂರಾದ ಕ್ರೀಡಾಪುರದಲ್ಲಿ ಚನ್ನಕೇಶವ ದೇವಾಲಯವನ್ನು ನಿರ್ಮಿಸುವ ಆಶೆ ಹೊಂದಿದರು. ಇದು ಮುಗಿದ ನಂತರ, ಅವರ ಬಲಗೈಯನ್ನು ದೇವರು ಕರುಣಿಸಿದನೆಂದು ದಂತಕಥೆ ಹೇಳುತ್ತದೆ. ಈ ಘಟನೆಯನ್ನು ಸಂತೋಷದಿಂದ ಆಚರಿಸಿದುದರ ನಂತರ ಈ ಕ್ರೀಡಾಪುರ ಊರಿಗೆ ಕೈದಾಳ ಎಂಬ ಹೆಸರು ಬಂತು ಎನ್ನಲಾಗಿದೆ. ಅದಕ್ಕಾಗಿ ಕೈ ಎನ್ನುವ ಪದವನ್ನು ಇಲ್ಲಿ ಬಳಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಸ್ಥಳೀಯ ಸರ್ಕಾರೇತರ ಸಂಸ್ಥೆಗಳು ಕೈದಾಳದಲ್ಲಿರುವ ಚನ್ನಕೇಶವ ದೇವಾಲಯವನ್ನು ರಕ್ಷಣೆಗಾಗಿ ಹಣ ಸಹಾಯ ಕೋರುತ್ತಿವೆ. |
ಜಕಣಾಚಾರಿ ಪ್ರಶಸ್ತಿ |
ಬದಲಾಯಿಸಿ |
ಕರ್ನಾಟಕ ಸರ್ಕಾರವು ಪ್ರತಿವರ್ಷ ಶಿಲ್ಪಕಲೆಗೆ ಅತಿ ಹೆಚ್ಚಿನ ಕೊಡುಗೆ ನೀಡುವ ಕಲೆಗಾರನಿಗೆ ಜಕಣಾಚಾರಿ ಪ್ರಶಸ್ತಿ ನೀಡಿ ಗೌರವಿಸುತ್ತದೆ. |
ಬಾಹ್ಯ ಕೊಂಡಿಗಳು |
ಬದಲಾಯಿಸಿ |
ಜಕಣಾಚಾರ್ಯರ ಜೀವನ ಚರಿತ್ರೆಯನ್ನೊಳಗೊಂಡ ಲೇಖನ |
ಜಕಣಾಚಾರ್ಯ ರಾಜ್ಯಪ್ರಶಸ್ತಿಯ ಲೇಖನ |
ಉಲ್ಲೇಖಗಳು |
ಬದಲಾಯಿಸಿ |
Last edited ೩ years ago by MalnadachBot |
ವಿಕಿಪೀಡಿಯ |
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. |
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್ |
ವಿಕಿಪೀಡಿಯ |
ವಿಕಿಪೀಡಿಯ ಅನ್ನು ಹುಡುಕಿ |
[ಮರೆಮಾಡಲು] |
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ. |
ನಿಶಾನ್ ಕೆ ಪಿ ನಾಣಯ್ಯ |
ಭಾಷೆ |
Download PDF |
ವೀಕ್ಷಿಸಿ |
ಸಂಪಾದಿಸಿ |
ನಿಶಾನ್ ಕೆ ಪಿ ನಾಣಯ್ಯ, (ಜನನ: ೦೭ನೇ ಡಿಸೆಂಬರ್ ೧೯೮೫)ನವರು ನಿಶಾನ್ ಎಂದು ಪ್ರಸಿದ್ಧರಾಗಿರುವ ಭಾರತೀಯ ಚಲನಚಿತ್ರ ನಟರು. ಕರ್ನಾಟಕದವರಾದ ಇವರು ಮುಖ್ಯವಾಗಿ ಮಲಯಾಳಮ್ ಚಲನಚಿತ್ರ ರಂಗದಲ್ಲಿ ವಿಖ್ಯಾತರು. ೨೦೦೯ರಲ್ಲಿ "ಸೈಕ್‌ಲ್ ಕಿಕ್" ಎನ್ನುವ ಹಿಂದಿ ಚಿತ್ರದ ಮೂಲಕ ಅಭಿನಯರಂಗವನ್ನು ಪ್ರವೇಶಿಸಿದರು. ಆದರೆ ಕಾರಣವಶಾತ್ ಈ ಚಿತ್ರ ಬಿಡುಗಡೆಯಾಗಲಿಲ್ಲ. ಅದೇ ವರ್ಷ ಮಲಯಾಳಮ್ ಚಿತ್ರರಂಗದ ಶ್ಯಾಮಪ್ರಸಾದರ "ಋತು" ಚಿತ್ರದಲ್ಲಿ ನಾಯಕ ಪಾತ್ರ ದೊರಕಿತು. ೨೦೧೦ರಲ್ಲಿ ಸಿಬಿ ಮಲಯಿಳ್ ಅವರ "ಅಪೂರ್ವರಾಗಮ್" ಚಿತ್ರದ ಮೂಲಕ ರಸಿಕರ ಗಮನವನ್ನು ಸೆಳೆದರು. |
ನಿಶಾನ್ |
ಜನನ |
ನಿಶಾನ್ ಕೆ ಪಿ ನಾಣಯ್ಯ [೧] |
ಕೊಡಗು, ಕರ್ನಾಟಕ |
ವೃತ್ತಿ |
ಅಭಿನೇತೃ |
Years active |
2009 - ಪ್ರಸಕ್ತ |
ಪರಿವಿಡಿ |
ಜನನ ಮತ್ತು ವಿದ್ಯಾಭ್ಯಾಸ |
ಬದಲಾಯಿಸಿ |
ಕರ್ನಾಟಕದ ಕೊಡಗಿನಲ್ಲಿ ಕೊಡವ ಜನಾಂಗದವರಾಗಿ ಹುಟ್ಟಿದರೂ ನಿಶಾನ್ ಅವರ ಬಾಲ್ಯವೆಲ್ಲಾ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಕಳೆಯಿತು. ತಂದೆ, ಪ್ರಸಾದ್, ಕಸ್ಟಮ್ಸ್ ಇಲಾಖೆಯ ನಿವೃತ್ತ ಡೆಪ್ಯುಟಿ ಕಮಿಶನರ್ ಹಾಗೂ ತಾಯಿ ಸದ್ಗೃಹಿಣಿ. ತಂಗಿ, ಶೃತಿ ಪ್ರಸಾದ್ ಕಳ್ಳಿಚಂಡ ಅವರು ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಗಾಗಿ ಅಧ್ಯಯನ ನಡೆಸುತ್ತಿದ್ದಾರೆ. |
ನಿಶಾನ್ ವಿಶ್ವವಿದ್ಯಾನಿಲಯದ ಟೆನ್ನಿಸ್ ಕ್ರೀಡಾಪಟು. ಬಳಿಕ ಪುಣೆಯ ಫಿಲ್ಮ್ ಇನ್ಸ್ಟಿಟ್ಯೂಟ್‌ನಿಂದ ಡಿಪ್ಲೋಮಾ ಪಡೆದರು.[೨] |
ಚಿತ್ರರಂಗದಲ್ಲಿ |
ಬದಲಾಯಿಸಿ |
ತದನಂತರ ಬಾಲಿವುಡ್ ನಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಲು ಮುಂಬೈಗೆ ತೆರಳಿದರು. ಅಲ್ಲಿ ಸುಭಾಷ್ ಘೈ ನಿರ್ಮಾಣದ "ಸೈಕ್‌ಲ್ ಕಿಕ್" ಎಂಬ ಚಿತ್ರದಲ್ಲಿ ಅಭಿನಯಿಸಿದರು. ಚಿತ್ರವು ತಡವಾಗಿ ೨೦೧೧ರಲ್ಲಿ ಬಿಡುಗಡೆಯಾಯಿತು.[೨] |
೨೦೦೯ರಲ್ಲಿ ಬಿಡುಗಡೆಗೊಂಡ "ಮನೋರಮಾ" ತೆಲುಗು ಚಿತ್ರದಲ್ಲಿ ಅಭಿನಯಿಸಲು ಅವಕಾಶ ದೊರೆತಾಗ ತನ್ನ ಅಭಿನಯ ಕ್ಷೇತ್ರವನ್ನು ವಿಸ್ತಾರಗೊಳಿಸಲು ನಿಶಾನ್ ದಕ್ಷಿಣ ಭಾರತಕ್ಕೆ ಬಂದರು.[೨] ಈ ಚಿತ್ರದಲ್ಲಿಯ ಅವರ ಅಭಿನಯವು ಜನಮನ್ನಣೆಯನ್ನು ಪಡೆದರೂ ನಿಶಾನ್ ಬಾಲಿವುಡ್‌ಗೆ ಮರಳಿದರು. ಇದೇ ಸಮಯದಲ್ಲಿ ಮಲಯಾಳಮ್ ಚಿತ್ರ ಜಗತ್ತಿನ ನಿರ್ದೇಶಕ ಶ್ಯಾಮಪ್ರಸಾದರ "ಋತು" ಚಿತ್ರದಲ್ಲಿ ನಾಯಕನ ಪಾತ್ರವನ್ನು ವಹಿಸಲು ಕರೆ ಬಂತು. ಈ ಚಿತ್ರದ ನಂತರ ಸಿಬು ಮಲಯಿಳ್ ಅವರ "ಅಪೂರ್ವ ರಾಗಂ" ಚಿತ್ರದಲ್ಲಿ ಗಮನೀಯ ಪಾತ್ರ ಅವರ ಪಾಲಿಗೆಬಂತು. |
ನಿಶಾನ್ ಅವರ ಮುಂದಿನ "ಈ ಅಟುತ್ತ ಕಾಲತ್ತ್" ದಿಟ್ಟ ಹಾಗೂ ನೈಜ ಕಥನಶೈಲಿಗಳಲ್ಲಿ ಹೊಸ ಮಾರ್ಗವನ್ನು ತುಳಿದ ಚಿತ್ರವೆಂದು ವಿಮರ್ಶಕರ ಮೆಚ್ಚುಗೆಯನ್ನು ಪಡೆಯಿತು. ಅವರ ರುಸ್ತಮನ ಪಾತ್ರ ವೀಕ್ಷಕರ ಮತ್ತು ವಿಮರ್ಶಕರನ್ನು ಮೆಚ್ಚಿಸಿತು. ಇದಾದ ಮೇಲೆ ಮಲಯಾಳಮ್ ಚಿತ್ರರಂಗದಲ್ಲೇ ಎಂಟು-ಹತ್ತು ಚಿತ್ರಗಳಲ್ಲಿ ಅಭಿನಯಿಸಲು ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದವು. |
ಫಿಲ್ಮೋಗ್ರಫಿ |
ಬದಲಾಯಿಸಿ |
ಕ್ರ ಸಂ ಚಿತ್ರದ ಹೆಸರು ಬಿಡುಗಡೆಯ ವರ್ಷ ಭಾಷೆ ನಿರ್ದೇಶಕ ಸಹನಟರು ಪಾತ್ರ ಟಿಪ್ಪಣಿ |
೧ ಸೈಕ್‌ಲ್ ಕಿಕ್ ೨೦೧೧ ಹಿಂದಿ ಶಶಿ ಸುದಿಗಲ ಸನ್ನಿ ಹಿಂದುಜ, ಗಿರಿಜಾ ಓಕ್ ರಾಮು ೨ ವರ್ಷ ತಡವಾಗಿ ಬಿಡುಗಡೆಯಾಯಿತು |
೨ ಋತು ೨೦೦೯ ಮಲಯಾಳಮ್ ಶ್ಯಾಮಪ್ರಸಾದ್ ಆಸಿಫ್ ಅಲಿ, ರೀಮಾ ಕಲ್ಲಿಂಕಲ್ ಶರತ್ ವರ್ಮ |
೩ ಮನೋರಮ ೨೦೦೯ ತೆಲುಗು ಈಶ್ವರ್ ರೆಡ್ಡಿ ಚಾರ್ಮಿ ಅಪರಿಚಿತ |
೪ ಅಪೂರ್ವ ರಾಗಮ್ ೨೦೧೦ ಮಲಯಾಳಮ್ ಸಿಬಿ ಮಲಯಿಳ್ ಆಸಿಫ್ ಅಲಿ, ನಿತ್ಯಾ ಮೆನೊನ್ ರೂಪೇಶ್ |
೫ ಗ್ರಾಮಮ್ ೨೦೧೧ ಮಲಯಾಳಮ್ ಮೋಹನ್ ನೆಡುಮುಡಿ ವೇಣು, ಸಂವೃತ ಸುನಿಲ್ ಕಣ್ಣನ್ |
೬ ನಾಟ್ ಔಟ್ ೨೦೧೧ ಮಲಯಾಳಮ್ ಕುಟ್ಟಿ ನಡುವಿಲ್ ಮಿತ್ರಾ ಕುರಿಯನ್, ಅನೂಪ್ ಚಂದ್ರನ್ ಪವಿತ್ರನ್ |
೭ ಇತು ನಮ್ಮುಟೆ ಕಥ ೨೦೧೧ ಮಲಯಾಳಮ್ ರಾಜೇಶ್ ಕಣ್ಣಂಕರ ಆಸಿಫ್ ಅಲಿ, ಅನನ್ಯ, ಜಗತಿ ಸಂತೋಷ್ |
೮ ಈ ಅಟುತ್ತ ಕಾಲತ್ತ್ ೨೦೧೨ ಮಲಯಾಳಮ್ ಅರುಣ್ ಕುಮಾರ್ ಅರವಿಂದ್ ಇಂದ್ರಜಿತ್ ಸುಕುಮಾರನ್, ಅನೂಪ್ ಮೆನೊನ್, ಮೈಥಿಲಿ ರುಸ್ತಮ್ |
೯ ಅನ್ನುಮ್, ಇನ್ನುಮ್, ಎನ್ನುಮ್ ೨೦೧೩ ಮಲಯಾಳಮ್ ರಾಜೇಶ್ ನಾಯರ್ ಜಿಶ್ಣು, ಫರೀಸ ಜೋಮ್ಮನ್‌ಬಕ್ಸ್ ರಾಯ್ |
೧೦ ಡೇವಿಡ್ ೨೦೧೩ ಹಿಂದಿ ಬೆಜೊಯ್ ನಂಬಿಯಾರ್ ವಿಕ್ರಮ್, ತಬು, ಇಶಾ ಶ್ರಾವಣಿ ಪೀಟರ್ |
೧೧ ಡೇವಿಡ್ ೨೦೧೩ ತಮಿಳು ಬೆಜೊಯ್ ನಂಬಿಯಾರ್ ವಿಕ್ರಮ್, ತಬು, ಇಶಾ ಶ್ರಾವಣಿ ಪೀಟರ್ |
೧೨ ೧೦:೩೦ ಎ ಎಮ್ ಲೋಕಲ್ ಕಾಲ್ ೨೦೧೩ ಮಲಯಾಳಮ್ ಮನು ಸುಧಾಕರ್ ಶೃತಾ ಶಿವದಾಸ್, ಕೈಲಾಶ್ ಅಲ್ಬಿ |
೧೩ ರೇಡಿಯೊ ೨೦೧೩ ಮಲಯಾಳಮ್ ಉಮರ್ ಮೊಹಮದ್ ಇನಿಯಾ, ಸರಯೂ |
೧೪ ಕ್ಲೈಮ್ಯಾಕ್ಸ್ ೨೦೧೩ ಮಲಯಾಳಮ್ ಸುರೇಶ್ ಕೃಷ್ಣ, ಸಾನಾ ಖಾನ್ |
Subsets and Splits