text
stringlengths
0
2.67k
ಭಾಷೆ
Download PDF
ವೀಕ್ಷಿಸಿ
ಸಂಪಾದಿಸಿ
ಒಂದನೆಯ ಮೈಸೂರು ಯುದ್ಧ (೧೭೬೬-೧೭೬೯) ಮೈಸೂರು ರಾಜ್ಯ ಕ್ಕೂ ಬ್ರಿಟೀಷರಿಗೂ ನಡೆದ ಯುದ್ಧ. ಈ ಯುದ್ಧ ಸರಣಿಯಲ್ಲಿ ಮೊದಲನೆಯದು.
ಮೊದಲ ಮತ್ತು ಎರಡನೆಯ ಮೈಸೂರು ಯುದ್ಧ .
ಮೈಸೂರಿನ ಆಡಳಿತಾಧಿಕಾರಿ ಹೈದರಾಲಿಯ ಚಟುವಟಿಕೆಗಳನ್ನು ಮದರಾಸು ಪ್ರಾಂತದ ಬ್ರಿಟೀಷರು ಗಂಭೀರವಾಗಿ ಪರಿಗಣಿಸಿದರು. ೧೭೬೬ರಲ್ಲಿ ಬ್ರಿಟೀಷರು ಹೈದರಾಬಾದಿನ ನಿಜಾಮನೊಂದಿನ ಒಪ್ಪಂದ ಮಾಡಿಕೊಂಡು , ಅದರ ಪ್ರಕಾರ , ತಮ್ಮಿಬ್ಬರ ಸಮಾನ ಶತ್ರುವಾಗಿದ್ದ ಹೈದರಾಲಿಯ ವಿರುದ್ಧ ಬಳಸಲಿಕ್ಕಾಗಿ ಸೈನ್ಯವನ್ನು ಪೂರೈಸಿದರು. ಆದರೆ , ಈ ಒಪ್ಪಂದವಾದ ಸ್ವಲ್ಪ ಸಮಯದಲ್ಲಿಯೇ, ಹೈದರಾಲಿ ಮತ್ತು ನಿಜಾಮ ರಹಸ್ಯ ಒಪ್ಪಂದಕ್ಕೆ ಬಂದು , ಬ್ರಿಟೀಷರ ಕರ್ನಲ್ ಸ್ಮಿತ್ ನ ಸಣ್ಣ ಸೇನೆ ಯ ಮೇಲೆ ತಮ್ಮ ಒಕ್ಕೂಟದ ೫೦,೦೦೦ ಸಿಪಾಯಿಗಳು ಮತ್ತು ೧೦೦ ತುಪಾಕಿಗಳ ಸೇನೆಯನ್ನು ನುಗ್ಗಿಸಿದರು. ಸಂಖ್ಯೆಯಲ್ಲಿ ಸಣ್ಣದಿದ್ದರೂ, ಬ್ರಿಟೀಷ್ ಪಡೆಗಳು,ಶಿಸ್ತು ಮತ್ತು ಉತ್ತಮ ತರಬೇತಿಯಿಂದಾಗಿ, ಒಕ್ಕೂಟದ ಸೇನೆಯನ್ನು ಮೊದಲು ಚೆಂಗಮ್ ಎಂಬಲ್ಲಿಯೂ ( ಸೆಪ್ಟೆಂರ್‍ ೩, ೧೭೬೭)ಮತ್ತೆ , ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ, ತಿರುವಣ್ಣಾಮಲೈಯಲ್ಲಿಯೂ ಹಿಮ್ಮೆಟ್ಟಿಸಿದರು.
ಪಶ್ಚಿಮ ತೀರದ ತನ್ನ ನವೀನ ನೌಕಾಪಡೆ ಮತ್ತು ಕೋಟೆಗಳನ್ನು ಕಳೆದುಕೊಂಡ ನಂತರ ಹೈದರಾಲಿಯು ಸಂಧಾನಕ್ಕೆ ಬಂದನು. ಈ ಸಂಧಾನದ ಕೋರಿಕೆ ತಿರಸ್ಕೃತವಾಗಲು, ಹೈದರಾಲಿಯು ತನ್ನೆಲ್ಲ ಅಳಿದುಳಿದ ಸೈನ್ಯವನ್ನು ಒಗ್ಗೂಡಿಸಿ ಬ್ರಿಟೀಷರ ಮೇಲೇರಿ ಹೋದನು. ಕರ್ನಲ್ ಸ್ಮಿತ್ ಬೆಂಗಳೂರಿಗೆ ಹಾಕಿದ್ದ ಮುತ್ತಿಗೆಯನ್ನು ಹಿಂತೆಗೆದುಕೊಳ್ಳುವಂತೆ ಮಾಡಿದ್ದಲ್ಲದೆ, ತನ್ನ ಸೇನೆಯೊಡನೆ ಮದರಾಸು ನಗರದ ಐದು ಮೈಲಿಯಷ್ಟು ಸಮೀಪದವರೆಗೂ ಬಂದು ತಲುಪಿದನು. ಈ ಯುದ್ಧದ ಪರಿಣಾಮವಾಗಿ ಏಪ್ರಿಲ್ ೧೭೬೯ರಲ್ಲಿ , ಎರದೂ ಪಕ್ಷಗಳೂ ತಾವು ಆಕ್ರಮಿಸಿದ ಪ್ರದೇಶಗಳನ್ನು ವಾಪಸು ಮಾಡಬೇಕೆಂದು ಮತ್ತು ಯುದ್ಧಗಳಲ್ಲಿ ಪರಸ್ಪರರ ಸಹಾಯಕ್ಕೆ ಬರುವಂತೆಯೂ ಒಪ್ಪಂದವಾಯಿತು.[೧] [೨]
ನೋಡಿ
ಬದಲಾಯಿಸಿ
ಒಂದನೆಯ ಮೈಸೂರು ಯುದ್ಧ |
ಎರಡನೆಯ ಮೈಸೂರು ಯುದ್ಧ |
ಮೂರನೇ ಮೈಸೂರು ಯುದ್ಧ |
ನಾಲ್ಕನೆಯ ಮೈಸೂರು ಯುದ್ಧ |
ಟಿಪ್ಪು ಸುಲ್ತಾನ್ |
ಲಾರ್ಡ್ ಕಾರ್ನ್‍ವಾಲಿಸ್
ಉಲ್ಲೇಖ
ಬದಲಾಯಿಸಿ
ಹಿಂದೂದೇಶದ ಚರಿತ್ರೆ ಲೇಖಕರು:ಇ.ಡಬ್ಳ್ಯು.ಥಾಂಸನ್. ಅನುವಾದಕರರು: ಕೆ.ವಿ.ದೊರೆಸ್ವಾಮಿ ಲೆಕ್ಚರರ್ ಮೈಸೂರು.
Indian History R.C.mujumdar and Raychoudhry S.C
Last edited ೧ year ago by రుద్రుడు చెచ్క్వికి
RELATED PAGES
ಟಿಪ್ಪು ಸುಲ್ತಾನ್
ಎರಡನೆಯ ಮೈಸೂರು ಯುದ್ಧ
ನಾಲ್ಕನೆಯ ಮೈಸೂರು ಯುದ್ಧ
ವಿಕಿಪೀಡಿಯ
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ.
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್
ವಿಕಿಪೀಡಿಯ
ವಿಕಿಪೀಡಿಯ ಅನ್ನು ಹುಡುಕಿ
[ಮರೆಮಾಡಲು]
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.
ಖಂಡೇರಾವ್ (ಐತಿಹಾಸಿಕ ವ್ಯಕ್ತಿ)
ಭಾಷೆ
Download PDF
ವೀಕ್ಷಿಸಿ
ಸಂಪಾದಿಸಿ
ಖಂಡೇರಾವ್-ಮೈಸೂರು ಸಂಸ್ಥಾನದ ಆಡಳಿತ ಸೂತ್ರ ಹೈದರನ ವಶವಾಗುವುದನ್ನು ತಪ್ಪಿಸಿ ಅದನ್ನು ರಾಜಮನೆತನದಲ್ಲಿ ಉಳಿಸಲು ಶ್ರಮಿಸಿ ಈ ಯತ್ನದಲ್ಲೇ ಪ್ರಾಣಾರ್ಪಣೆ ಮಾಡಿದ ಒಬ್ಬ ರಾಜಭಕ್ತ.
ಖಂಡೇರಾವ್ ಪರಾಕ್ರಮಿಯಾದ ಯೋಧನಾಗಿದ್ದ. ಅವನಿಗೆ ರಾಜಮನೆತನದಲ್ಲಿ ವಿಶೇಷವಾದ ಮಮತೆ, ಭಕ್ತಿ ಇದ್ದುವು. ಅವನು ಬುದ್ಧಿವಂತನಾಗಿದ್ದರೂ ತಂತ್ರದಲ್ಲಿ ಹೈದರನಿಗೆ ಸಾಟಿಯಾಗಿರಲಿಲ್ಲ. ರಾಜಮನೆತನವನ್ನು ಆಪತ್ತಿನಿಂದ ಪಾರುಮಾಡಲು ನಿಷ್ಠೆಯಿಂದ ಶ್ರಮಿಸಿ ಆ ಧ್ಯೇಯ ಸಾಧನೆಗಾಗಿಯೆ ಅವನು ಪ್ರಾಣಾರ್ಪಣೆ ಮಾಡಿದ.
ಪರಿವಿಡಿ
ರಾಜಕೀಯ ಹಿನ್ನೆಲೆ
ಬದಲಾಯಿಸಿ
18ನೆಯ ಶತಮಾನದ ಮಧ್ಯಭಾಗದಲ್ಲಿ ಮೈಸೂರು ರಾಜ್ಯದಲ್ಲಿ 7ನೆಯ ಚಾಮರಾಜ ಒಡೆಯನ ಮರಣಾಂತರ ದಳವಾಯಿಗಳು ಪ್ರಾಬಲ್ಯಕ್ಕೆ ಬಂದರು. ಕೇವಲ 5 ವರ್ಷಗಳ ವಯಸ್ಸಿನ ಚಿಕ್ಕ ಕೃಷ್ಣರಾಜನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿ ದಳವಾಯಿ ನಂಜರಾಜಯ್ಯ ಆಡಳಿತ ಸೂತ್ರವನ್ನು ತಾನೇ ವಹಿಸಿದ್ದ. ನಂಜರಾಜಯ್ಯ ಪದಚ್ಯುತನಾಗುವುದಕ್ಕೆ ಕೆಲವು ವರ್ಷಗಳ ಹಿಂದೆ ಖಂಡೇರಾವ್ ಮತ್ತು ಹೈದರ್ ಪ್ರಸಿದ್ಧಿಗೆ ಬಂದರು. ಅವರಿಬ್ಬರೂ ಪ್ರಾರಂಭದಲ್ಲಿ ಪರಸ್ಪರ ಮೈತ್ರಿಯಿಂದಿದ್ದರು. 1756ರಲ್ಲಿ ಹೈದರ್ ದಳವಾಯಿಗಳ ನೇರ ಆಡಳಿತಕ್ಕೊಳಪಡದ ಕೆಲವು ಪ್ರದೇಶಗಳ ಆಡಳಿತವನ್ನು ಖಂಡೇರಾಯನಿಗೆ ದೊರಕಿಸಿಕೊಟ್ಟಿದ್ದ. ನಂಜರಾಜಯ್ಯ ಅಧಿಕಾರ ತ್ಯಜಿಸಿದ ಮೇಲೆ ಖಂಡೇರಾವ್ ಪ್ರಧಾನಿಯಾಗಿ ನೇಮಕಗೊಂಡಿದ್ದ. ಹೈದರ್ ಶೀಘ್ರವಾಗಿ ಆಡಳಿತದಲ್ಲಿ ತನ್ನ ಪ್ರಭಾವವನ್ನು ಸ್ಥಾಪಿಸಿದ.
ಹೈದರ್ ನ ಮೇಲೆ ಮೊದಲ ಗೆಲುವು
ಬದಲಾಯಿಸಿ
ಹೈದರ್ ಪ್ರಾಬಲ್ಯಕ್ಕೆ ಬರುತ್ತಿದ್ದುದನ್ನು ಗಮನಿಸಿದ ಖಂಡೇರಾವ್ ಅರಮನೆಯ ಪಕ್ಷಕ್ಕೆ ಮರಾಠರ ನೆರವು ದೊರಕುವಂತೆ ಏರ್ಪಡಿಸಿ ಹೈದರನನ್ನು ಎದುರಿಸಲು ಸಿದ್ಧತೆ ಮಾಡಿಕೊಂಡ. 1759ರ ಆಗಸ್ಟಿನಲ್ಲಿ ಹೈದರ್ ಆರ್ಕಾಟಿನಿಂದ ಮಿತಸೈನ್ಯದೊಡನೆ ಶ್ರೀರಂಗಪಟ್ಟಣಕ್ಕೆ ಬಂದಾಗ ಖಂಡೇರಾವ್ ಧೈರ್ಯದಿಂದ ತನ್ನ ಸೈನ್ಯದ ಮುಖಂಡತ್ವ ವಹಿಸಿ ಹೈದರನ ಸೈನ್ಯವನ್ನು ಬಗ್ಗುಬಡಿದ. ಹೈದರ್ ಶ್ರೀರಂಗಪಟ್ಟಣದಿಂದ ತಲೆತಪ್ಪಿಸಿಕೊಂಡು ಓಡಿಹೋದ. ಅವನ ಹೆಂಡತಿ ಮಕ್ಕಳನ್ನು ಖಂಡೇರಾವ್ ಅತ್ಯಂತ ಗೌರವದಿಂದ ನಡೆಸಿಕೊಂಡು ಅವರ ರಕ್ಷಣೆಗೆ ಸೂಕ್ತ ಏರ್ಪಾಟು ಮಾಡಿದ.
ಹೈದರ್ ನ ಮೇಲೆ ಎರಡನೆಯ ಬಾರಿ ಗೆಲುವು
ಬದಲಾಯಿಸಿ
1760ರಲ್ಲಿ ಫ್ರೆಂಚ್ ದಳವೊಂದರ ಸಹಾಯದಿಂದ ಖಂಡೇರಾಯನನ್ನು ಸೋಲಿಸಿ ತನ್ನ ಅಧಿಕಾರವನ್ನು ಸ್ಥಾಪಿಸಲು ಹೈದರ್ ಶ್ರೀರಂಗಪಟ್ಟಣದತ್ತ ಮುಂದುವರಿದ. ಆದರೆ ಖಂಡೇರಾವ್ ಸೈನ್ಯಸಮೇತನಾಗಿ ಹೊರಟು ನಂಜನಗೂಡಿನ ಸಮೀಪದಲ್ಲಿ ಹೈದರನ ಸೈನ್ಯವನ್ನು ಎದುರಿಸಿ ಹೋರಾಡಿ ಅವನನ್ನು ಸಂಪೂರ್ಣವಾಗಿ ಸೋಲಿಸಿದ. ಹೈದರ್ ಹರದನಹಳ್ಳಿಯ ಕಡೆಗೆ ಓಡಿಹೋದ.
ಹೈದರ್ ನ ಮೇಲೆ ಮೂರನೆಯ ಬಾರಿ ಗೆಲುವು
ಬದಲಾಯಿಸಿ
ಖಂಡೇರಾಯನನ್ನು ಸೋಲಿಸುವುದು ಅಸಾಧ್ಯವೆಂದು ತಿಳಿದ ಹೈದರ್ ಮತ್ತೊಂದು ತಂತ್ರ ಹೂಡಿದ. ಗೌರವನಿಮಿತ್ತವಾಗಿ ಸರ್ವಾಧಿಕಾರಿ ಎಂಬ ಬಿರುದನ್ನೂ ಚಿಕ್ಕ ಯೋಧಪಡೆಯೊಂದನ್ನೂ ಹೊಂದಿ ಕೊಣನೂರಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದ ನಂಜರಾಜಯ್ಯನ ಬಳಿಗೆ ಹೈದರ್ ಗೋಪ್ಯವಾಗಿ ಹೋಗಿ ಅವನ ಪಾದಕ್ಕೆ ನಮಸ್ಕರಿಸಿ, ಕ್ಷಮಾಯಾಚನೆ ಬೇಡಿ ತನ್ನ ಹಿಂದಿನ ಸೇವಕನನ್ನು ಕಾಪಾಡಬೇಕೆಂದು ದೈನ್ಯದಿಂದ ಬೇಡಿದ. ನಂಜರಾಜಯ್ಯ ಅವನಲ್ಲಿ ಕನಿಕರ ತಳೆದು ತನ್ನ ಬಲವನ್ನೆಲ್ಲ ಕೂಡಿಸಿ ಹೈದರನಿಗೆ ಕೊಟ್ಟು ತನ್ನ ಹೆಸರನ್ನು ಉಪಯೋಗಿಸಿಕೊಳ್ಳುವಂತೆ ಅನುಮತಿ ನೀಡಿದ. ತನ್ನ ಬಲವನ್ನು ವೃದ್ಧಿಪಡಿಸಿಕೊಂಡು ಶ್ರೀರಂಗಪಟ್ಟಣವನ್ನು ಮುತ್ತಬೇಕೆಂಬ ಹೈದರನ ಹವಣಿಕೆಯನ್ನು ತಿಳಿದು ಖಂಡೇರಾವ್ ಹೈದರನನ್ನು ಕಟ್ಟೆಮಳವಾಡಿಯ ಬಳಿ ಪುನಃ ಸೋಲಿಸಿದ.
ಮೋಸದಿಂದ ಹೈದರನ ಗೆಲುವು, ಖಂಡೇರಾವ್ ಬಂಧನ, ಸಾವು
ಬದಲಾಯಿಸಿ
ತೀಕ್ಷ್ಣ ಮತಿಯಾದ ಹೈದರ್ ಖಂಡೇರಾಯನನ್ನು ಸೋಲಿಸಲು ಮತ್ತೊಂದು ತಂತ್ರ ಹೂಡಿದ. ಖಂಡೇರಾಯನ ದಳಪತಿಗಳು ಅವನನ್ನು ಹೈದರನಿಗೆ ಒಪ್ಪಿಸುವಂತೆ ನಂಜರಾಜಯ್ಯನ ಸಹಿಯಿದ್ದ ಕರಪತ್ರಗಳನ್ನು ಸೃಷ್ಟಿ ಮಾಡಿ ಅವು ಖಂಡೇರಾಯನ ಕೈಗೆ ಸಿಗುವಂತೆ ಮಾಡಿದ. ಹೈದರನ ಕುತಂತ್ರವನ್ನರಿಯದ ಖಂಡೇರಾವ್ ಅವನ್ನು ನಿಜವೆಂದೇ ನಂಬಿ ಎದೆಗುಂದಿ ಶ್ರೀರಂಗಪಟ್ಟಣಕ್ಕೆ ಧಾವಿಸಿದ. ಅವನ ಸೈನಿಕರು ಹತಾಶರಾದರು. ತನ್ನ ಸಂಚು ಫಲಿಸಿದ್ದನ್ನರಿತ ಹೈದರ್ 1761ರ ಮೇ ತಿಂಗಳಲ್ಲಿ ಶ್ರೀರಂಗಪಟ್ಟಣದ ಬಳಿ ಬೀಡು ಬಿಟ್ಟು ಒಂದು ವಾರ ಕಾಲ ಸಂಧಾನ ನಡೆಸುವವನಂತೆ ನಟಿಸಿ ಕೊನೆಗೆ ಹಠಾತ್ತನೆ ನದಿಯನ್ನು ದಾಟಿ ಪಟ್ಟಣವನ್ನು ಪ್ರವೇಶಿಸಿ ವಿಜಯ ಘೋಷಿಸಿದ. ಈ ಘಟನೆಯಿಂದ ರಾಜ ತತ್ತರಿಸಿಹೋದ. ಖಂಡೇರಾಯನನ್ನು ತನಗೆ ಒಪ್ಪಿಸುವಂತೆಯೂ ತಾನು ಅವನನ್ನು ಗಿಳಿಯಂತೆ ಸಾಕುವುದಾಗಿಯೂ ಹೈದರ್ ದೊರೆಗೆ ನಿರೂಪ ಕಳಿಸಿದ. ಸೆರೆ ಸಿಕ್ಕಿದ ಖಂಡೇರಾಯನನ್ನು ಹೈದರ್ ಕಬ್ಬಿಣದ ಪಂಜರದಲ್ಲಿಟ್ಟು, ಆಹಾರವಾಗಿ ಹಾಲು ಅನ್ನ ನೀಡುವಂತೆ ಏರ್ಪಾಟು ಮಾಡಿದ. ಖಂಡೇರಾವ್ ಈ ಸ್ಥಿತಿಯಲ್ಲಿ ಹಲವು ದಿವಸಗಳ ಕಾಲ ಬದುಕಿದ್ದು ಕೊನೆಯುಸಿರೆಳೆದ.
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
ಖಂಡೇರಾವ್
Last edited ೮ years ago by Gopala Krishna A
ವಿಕಿಪೀಡಿಯ
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ.
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್
ವಿಕಿಪೀಡಿಯ
ವಿಕಿಪೀಡಿಯ ಅನ್ನು ಹುಡುಕಿ
[ಮರೆಮಾಡಲು]
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.
ಜಯಚಾಮರಾಜ ಒಡೆಯರ್
ಭಾಷೆ
Download PDF
ವೀಕ್ಷಿಸಿ
ಸಂಪಾದಿಸಿ
ಜಯಚಾಮರಾಜ ಒಡೆಯರ್ [೧](ಜುಲೈ ೧೮, ೧೯೧೯-ಸೆಪ್ಟೆಂಬರ್ ೨೩, ೧೯೭೪) ಮೈಸೂರು ಸಂಸ್ಥಾನದ ೨೫ನೇ ಹಾಗು ಕೊನೆಯ ಮಹಾರಾಜ ಆಗಿದ್ದವರು. ಇವರು ೧೯೪೦ರಿಂದ ೧೯೫೦ರವರೆಗೆ ರಾಜ್ಯಬಾರ ನಡೆಸಿ, ೧೯೫೦ರಲ್ಲಿ ಭಾರತವು ಗಣರಾಜ್ಯವಾದಾಗ ಮೈಸೂರು ರಾಜ್ಯದ ಪ್ರಮುಖರಾಗಿ ೧೯೫೬ರವರೆಗು ಸೇವೆ ಸಲ್ಲಿಸಿದರು. ಕರ್ನಾಟಕ ಸ್ಥಾಪನೆಯ ನಂತರ ೧೯೬೪ರವರೆಗೆ ಅದರ ರಾಜ್ಯಪಾಲರಾಗಿದ್ದರು.[೨]
ಜಯಚಾಮರಾಜ ಒಡೆಯರ್ ಬಹದ್ದೂರ್
ಮೈಸೂರು ಮಹಾರಾಜ
ಆಳ್ವಿಕೆ
೧೯೪೦-೧೯೫೦
ಪೂರ್ವಾಧಿಕಾರಿ
ನಾಲ್ವಡಿ ಕೃಷ್ಣರಾಜ ಒಡೆಯರು
ಉತ್ತರಾಧಿಕಾರಿ: ಶ್ರೀಕಂಠದತ್ತ ನರಸಿಂಹರಾಜ ಒಡೆಯರ್
ಸಂತಾನ