text
stringlengths
0
2.67k
ಯದುರಾಯರು (ಸುಮಾರು 1399-1423)
ಬೆಟ್ಟದ ಚಾಮರಾಜ ಒಡೆಯರು (1423-1459)
ತಿಮ್ಮರಾಜ ಒಡೆಯರು (1459-1478)
ಹಿರಿಯ ಚಾಮರಾಜ ಒಡೆಯರು (1478-1513)
ಹಿರಿಯ ಬೆಟ್ಟದ ಚಾಮರಾಜ ಒಡೆಯರು (1513-1553)
ಬೋಳ ಚಾಮರಾಜ ಒಡೆಯರು
ಬೆಟ್ಟದ ಚಾಮರಾಜ ಒಡೆಯರು (ಈ ಮೂರೂ ಜನ 1553-1578)
ರಾಜ ಒಡೆಯರು (1578-1618) ನಲವತ್ತು ವರ್ಷಗಳ ದೀರ್ಘ ಕಾಲದ ಆಳ್ವಿಕೆ.
ಚಾಮರಾಜ ಒಡೆಯರು (1617-1637)
ಎರಡನೆ ರಾಜ ಒಡೆಯರು (1637-1638) ಕೇವಲ 1 ವರ್ಷದ ಆಳ್ವಿಕೆ
ರಣಧೀರ ಕಂಠೀರವ ನರಸರಾಜ ಒಡೆಯರು (1638-1659)
ದೊಡ್ಡದೇವರಾಜ ಒಡೆಯರು (1659-1673)
ಚಿಕ್ಕದೇವರಾಜ ಒಡೆಯರು (1673-1704)
ಚಿಕ್ಕದೇವರಾಜ ಒಡೆಯರ ಮೂಕ ಮಗ (1704-1714 ತಾಯಿ, ಮಂತ್ರಿಗಳ ಸಹಕಾರದೊಂದಿಗೆ)
ದೊಡ್ಡ ಕೃಷ್ಣರಾಜ ಒಡೆಯರು (1714-1734)
ಅಂಕನಹಳ್ಳಿ ಚಾಮರಾಜ ಒಡೆಯರು
ಇಮ್ಮಡಿ ಕೃಷ್ಣರಾಜ ಒಡೆಯರು (ಇಬ್ಬರೂ ದತ್ತುಪುತ್ರರು, 1766ರ ವರೆಗೆ, ಅಂದಿನ ಆಡಳಿತ ಮಂತ್ರಿಗಳ ಕುತಂತ್ರಕ್ಕೊಳಪಟ್ಟಿದ್ದು ವಿವರಗಳು ಕಡಿಮೆ)
ನಂಜರಾಜ ಒಡೆಯರು (1766- 1770)
ಬೆಟ್ಟದ ಚಾಮರಾಜ ಒಡೆಯರು (1770-1776)
ಖಾಸಾ ಚಾಮರಾಜ ಒಡೆಯರು (1776-1796) (ನಂಜರಾಜ ಒಡೆಯರ ಕಾಲಕ್ಕೆ ಹೈದರಾಲಿಯು ಪ್ರಬಲನಾಗಿ ಮೈಸೂರು ಸಂಸ್ಥಾನದ ಆಡಳಿತವನ್ನು ಕೈಗೆ ತೆಗೆದುಕೊಂಡನು, 1782ರಲ್ಲಿ ಅವನು ಮರಣ ಹೊಂದಿದನು. ನಂತರ ಅವನ ಮಗ ಟಿಪ್ಪೂ ಸುಲ್ತಾನನು ಸಂಸ್ಥಾನದ ಸರ್ವಾಧಿಕಾರಿಯಾಗಿ ಆಡಳಿತ ನಡೆಸುತ್ತಿದ್ದುದರಿಂದ, ನಂಜರಾಜರು, ಬೆಟ್ಟದ ಚಾಮರಾಜರು,ಖಾಸಾ ಚಾಮರಾಜರು ಕೇವಲ ಹೆಸರಿಗೆ ಮಾತ್ರ ರಾಜರಾಗಿದ್ದರು)
ಮುಮ್ಮಡಿ ಕೃಷ್ಣರಾಜ ಒಡೆಯರು (1799ರಲ್ಲಿ ಪಟ್ಟಕ್ಕೆ ಬಂದಾಗ ಕೇವಲ 5 ವರ್ಷದವರು ) ಆವರು ಸ್ವತಂತ್ರವಾಗಿ ಆಡಳಿತ ನಿರ್ವಹಿಸಿದ್ದು 1810ರಿಂದ ಬ್ರಿಟಿಷರ ತಂತ್ರದಿಂದ ಮುಮ್ಮಡಿ ಕೃಷ್ಣರಾಜ ಒಡೆಯರು ಆಡಳಿತವನ್ನು ಬ್ರಿಟಿಷ್ ಕಮಿಷನರಿಗೆ ಬಿಟ್ಟು ಕೊಡಬೇಕಾಯಿತು.
ಚಾಮರಾಜ ಒಡೆಯರು (1881-1902)
ನಾಲ್ವಡಿ ಕೃಷ್ಣರಾಜ ಒಡೆಯರು (1902-1940)
ಜಯಚಾಮರಾಜ ಒಡೆಯರು (1940ರಿಂದ ಪ್ರಜಾತಂತ್ರ ಸ್ಥಾಪನೆಯಾಗುವವರೆಗೆ,ನಂತರವೂ ರಾಜ ಪ್ರಮುಖರಾಗಿ, ರಾಜ್ಯಪಾಲರಾಗಿ ನಾಡಿಗೆ ಸೇವೆ ಸಲ್ಲಿಸಿದರು. ಮದ್ರಾಸು ರಾಜ್ಯದ ರಾಜ್ಯಪಾಲರಾಗಿ ನಿವೃತ್ತರಾದರು.)
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಬಹದ್ದೂರ್ (20 ಫೆಬ್ರುವರಿ 1953 - 10 ಡಿಸೆಂಬರ್ 2013)
ಯದುವೀರ ಕೃಷ್ಣ ದತ್ತಾ ಚಾಮರಾಜ ಒಡೆಯರ್ (28 ಮೇ 2015- ಪ್ರಸ್ತುತ)
ವಾಸ್ತುಶಿಲ್ಪ
ಬದಲಾಯಿಸಿ
ಅರಮನೆಯ ವಾಸ್ತುಕಲೆಯ ಶೈಲಿಯನ್ನು ಸಾಮಾನ್ಯವಾಗಿ "ಇಂಡೋ-ಸರಾಸೆನಿಕ್" ಶೈಲಿ ಎಂದು ವರ್ಣಿಸಲಾಗುತ್ತದೆ. ಮುಖ್ಯವಾಗಿ ಹಿಂದೂ, ಮುಸ್ಲಿಮ್, ಮತ್ತು ಗೋಥಿಕ್ ಶೈಲಿಯ ವಾಸ್ತುಕಲೆಗಳನ್ನು ಅರಮನೆಯ ನಿರ್ಮಾಣದಲ್ಲಿ ಉಪಯೋಗಿಸಲಾಗಿದೆ. ಕಲ್ಲಿನಲ್ಲಿ ಕಟ್ಟಲಾಗಿರುವ ಅರಮನೆಯಲ್ಲಿ ಮೂರು ಮಹಡಿಗಳಿದ್ದು, ಕೆಂಪು ಅಮೃತಶಿಲೆಯ ಗುಂಬಗಳು ಹಾಗೂ ೧೪೫ ಅಡಿ ಎತ್ತರದ ಐದು ಮಹಡಿಗಳುಳ್ಳ ಗೋಪುರವನ್ನು ಅರಮನೆ ಹೊಂದಿದೆ. ಅರಮನೆಯ ಸುತ್ತಲೂ ದೊಡ್ಡ ಉದ್ಯಾನವಿದೆ.
ದೇವಸ್ಥಾನಗಳು
ಬದಲಾಯಿಸಿ
ಅರಮನೆಯ ಆವರಣದಲ್ಲಿ ೧೨ ದೇವಸ್ಥಾನಗಳಿವೆ. ೧೪ ನೆಯ ಶತಮಾನದಲ್ಲಿ ಕಟ್ಟಿದ ಕೋಡಿ ಭೈರವನ ದೇವಸ್ಥಾನದಿಂದ ಹಿಡಿದು ೧೯೫೩ ರಲ್ಲಿ ಕಟ್ಟಲಾದ ದೇವಸ್ಥಾನಗಳೂ ಇವೆ. ಇಲ್ಲಿರುವ ದೇವಸ್ಥಾನಗಳಲ್ಲಿ ಪ್ರಸಿದ್ಧವಾದ ಕೆಲವು:
ಸೋಮೇಶ್ವರನ ದೇವಸ್ಥಾನ
ಲಕ್ಶ್ಮೀರಮಣ ದೇವಸ್ಥಾನ
ಆಂಜನೇಯಸ್ವಾಮಿ ದೇವಸ್ಥಾನ
ಗಣೇಶ ದೇವಸ್ಥಾನ
ಶ್ವೇತ ವರಾಹ ಸ್ವಾಮಿ ದೇವಸ್ಥಾನ
ಆಕರ್ಷಣೆಗಳು
ಬದಲಾಯಿಸಿ
"ದಿವಾನ್-ಎ-ಖಾಸ್": ಮುಘಲ್ ಸಾಮ್ರಾಜ್ಯದ ಅರಮನೆಗಳಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತಿದ್ದ ಕೋಣೆ. ಮೈಸೂರು ಅರಮನೆಯಲ್ಲಿಯೂ ಇದನ್ನು ಬಳಸಲಾಗಿದೆ. ಮುಖ್ಯವಾದ ಅತಿಥಿಗಳು ಬಂದಾಗ ಅವರನ್ನು ರಾಜರು ಎದುರುಗೊಳ್ಳಲು ಉಪಯೋಗಿಸುತ್ತಿದ್ದ ಕೋಣೆ ಇದು. "ದರ್ಬಾರ್ ಹಾಲ್": ರಾಜರ ದರ್ಬಾರು ನಡೆಯುತ್ತಿದ್ದ ಶಾಲೆ. ಇಲ್ಲಿಯೇ ಜನರು ರಾಜರನ್ನು ಆಗಾಗ ಕಾಣಬಹುದಾಗಿತ್ತು. ಕಲ್ಯಾಣ ಮಂಟಪದಲ್ಲಿ ಚಿಕ್ಕ ಪುಟ್ಟ ಶುಭಕಾರ್ಯಗಳು ನಡೆಯುತ್ತಿದ್ದವು.
ಆಯುಧ ಶಾಲೆ
ಬದಲಾಯಿಸಿ
ರಾಜಮನೆತನದ ಸದಸ್ಯರು ಬಳಸುತ್ತಿದ್ದ ಆಯುಧಗಳನ್ನು ಇಲ್ಲಿ ಇಡಲಾಗಿದೆ. ಇಲ್ಲಿ ಚಾರಿತ್ರಿಕವಾದ ಅನೇಕ ಆಯುಧಗಳನ್ನು ಕಾಣಬಹುದು. ೧೪ ನೆಯ ಶತಮಾನದಲ್ಲಿ ಉಪಯೋಗಿಸಲ್ಪಡುತ್ತಿದ್ದ ಖಡ್ಗ, ಸುರಗಿ, ವ್ಯಾಗ್ರನಖ ಮೊದಲಾದ ಆಯುಧಗಳಿಂದ ಹಿಡಿದು ೨ಂನೆಯ ಶತಮಾನದ ಪಿಸ್ತೂಲುಗಳು, ಬಂದೂಕುಗಳು ಮೊದಲಾದವನ್ನು ಇಲ್ಲಿ ಕಾಣಬಹುದು.
ಮುಖ್ಯವಾಗಿ, ಒಡೆಯರ್ ವಂಶದ ಪ್ರಸಿದ್ಧ ಅರಸು ರಣಧೀರ ಕಂಠೀರವ ಉಪಯೋಗಿಸಿದ್ದ ಖಡ್ಗಗಳಲ್ಲಿ ಒಂದಾದ "ವಜ್ರಮುಷ್ಟಿ", ಹಾಗೂ ಟೀಪು ಸುಲ್ತಾನ್ ಮತ್ತು ಹೈದರ್ ಅಲಿ ಉಪಯೋಗಿಸುತ್ತಿದ್ದ ಖಡ್ಗಗಳಲ್ಲಿ ಕೆಲವನ್ನು ಇಲ್ಲಿ ಕಾಣಬಹುದು.[೩]
ಬಾಹ್ಯ ಸಂಪರ್ಕಗಳು
ಬದಲಾಯಿಸಿ
Mysore Palace ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್‌ನಲ್ಲಿ ಲಭ್ಯವಿದೆ.
ಮೈಸೂರಿನ ಅರಮನೆಗಳು Archived 2005-04-15 ವೇಬ್ಯಾಕ್ ಮೆಷಿನ್ ನಲ್ಲಿ.
ಮುಖ್ಯ ಮೈಸೂರು ಅರಮನೆ
ಮೈಸೂರು ಹೆರಿಟೇಜ್ ಕಟ್ಟಡಗಳ ಪಟ್ಟಿ
ಯದುವೀರ ಕೃಷ್ಣದತ್ತಾ ಚಾಮರಾಜ ಒಡೆಯರ್:೨೯-೬-೨೦೧೬:[[೧]]
ಉಲ್ಲೇಖಗಳು
ಬದಲಾಯಿಸಿ
"ಆರ್ಕೈವ್ ನಕಲು". Archived from the original on 2021-10-20. Retrieved 2017-11-02.
ಓರೆ ಅಕ್ಷರಗಳು
Is tourism stagnating in Mysore?
ಕರ್ನಾಟಕದ ಏಳು ಅದ್ಭುತಗಳು
ಹಿರೇಬೆಣಕಲ್ ಶಿಲಾ ಸಮಾಧಿಗಳು | ಹಂಪಿ | ಗೋಲ ಗುಮ್ಮಟ | ಶ್ರವಣಬೆಳಗೊಳದ ಗೊಮ್ಮಟೇಶ್ವರ | ಮೈಸೂರು ಅರಮನೆ | ಜೋಗ ಜಲಪಾತ | ನೇತ್ರಾಣಿ ದ್ವೀಪ
Last edited ೨ months ago by Gpkp
ವಿಕಿಪೀಡಿಯ
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ.
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್
ವಿಕಿಪೀಡಿಯ
ವಿಕಿಪೀಡಿಯ ಅನ್ನು ಹುಡುಕಿ
[ಮರೆಮಾಡಲು]
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.
ಮೈಸೂರು ಸಂಸ್ಥಾನ
ಭಾಷೆ
Download PDF
ವೀಕ್ಷಿಸಿ
ಸಂಪಾದಿಸಿ
ಮೈಸೂರು ಸಂಸ್ಥಾನ ಅಥವಾ ಮೈಸೂರು ಸಾಮ್ರಾಜ್ಯವು (೧೩೯೯ - ೧೯೪೭) ದಕ್ಷಿಣ ಭಾರತದಲ್ಲಿ ಆಳ್ವಿಕೆ ನಡೆಸಿದ ಒಂದು ಸಾಮ್ರಾಜ್ಯ. ೧೩೯೯ರಲ್ಲಿ ಯದುರಾಯರಿಂದ ಸ್ಥಾಪಿಸಲಾದ ಈ ಸಂಸ್ಥಾನ, ಒಡೆಯರ್ ರಾಜಮನೆತನದಿಂದ ಆಳಲ್ಪಟ್ಟಿತು. ೧೫೬೫ರವರೆಗೆ ವಿಜಯನಗರ ಸಾಮ್ರ್ಯಾಜ್ಯದ ಸಾಮಂತ ರಾಜ್ಯವಾಗಿದ್ದು, ಮುಂದೆ ಸ್ವತಂತ್ರ ರಾಜ್ಯವಾಯಿತು. ೧೫೬೫ರ ನಂತರ ವಿಜಯನಗರ ಸಾಮ್ರಾಜ್ಯದ ಅಳಿವಿನ ಜೊತೆಯಲ್ಲಿ ಮೈಸೂರು ಸಂಸ್ಥಾನವು ಸ್ವತಂತ್ರ ಸಂಸ್ಥಾನವಾಯಿತು.
ಮೈಸೂರು ಸಂಸ್ಥಾನ
೧೩೯೯–೧೯೫೦
Top: ಒಡೆಯರ್ ಆಡಳಿತದ ಸಮಯದಲ್ಲಿ (1399-1761)(1799-1947)
ಧ್ವಜ
Coat of arms of
Coat of arms
Anthem: "ಕಾಯೌ ಶ್ರೀ ಗೌರಿ"
(೧೮೬೮–೧೯೫೦)
ರಾಜ ಒಡೆಯರ್ ಆಡಳಿತಾವಧಿಯ ಮೈಸೂರು ಸಾಮ್ರಾಜ್ಯ
ರಾಜ ಒಡೆಯರ್ ಆಡಳಿತಾವಧಿಯ ಮೈಸೂರು ಸಾಮ್ರಾಜ್ಯ
Status
ವಿಜಯನಗರ ಸಾಮ್ರಾಜ್ಯದ ಅಧೀನದಲ್ಲಿ 1565 ರವರೆಗೆ, 1831 ರಿಂದ ಬ್ರಿಟೀಷ್ ಕ್ರೌನ್ ಅಡಿಯಲ್ಲಿ 1799 ರಾಜಪ್ರಭುತ್ವದ ರಾಜ್ಯದಿಂದ ಬ್ರಿಟಿಷ್ ಕ್ರೌನ್ ಜೊತೆಗಿನ ಅಂಗಸಂಸ್ಥೆಯ ಅಡಿಯಲ್ಲಿ.
Capital
ಮೈಸೂರು, ಶ್ರೀರಂಗಪಟ್ಟಣ
Official languages
ಕನ್ನಡ, ಪರ್ಷಿಯನ್
Religion
ಹಿಂದೂ, ಇಸ್ಲಾಮ್
Demonym(s)
ಮೈಸೂರಿಗ
Government
ರಾಜಪ್ರಭುತ್ವ