text
stringlengths
0
2.67k
ಸದಾ ಹಸನ್ಮುಖಿಯಾಗಿದ್ದ ತಮ್ಮಯ್ಯನವರು ಇಂಗ್ಲಂಡಿನ ಕೊಡವ ಸಮುದಾಯದ ಜನರಿಗೆ "ತಮ್ಮಿ" ಆಗಿದ್ದರೆ ಇತರ ಮಿತ್ರರಿಗೆ "ಕೀಕಿ"ಯಾಗಿದ್ದರು. ಎಲ್ಲಿ, ಯಾರಿಗೆ, ಏನಾದರೂ ಕಷ್ಟ, ಸಮಸ್ಯೆಗಳಿತ್ಯಾದಿಗಳುಂಟಾದರೂ ಅವರ ಹೆಸರು ಮೊದಲು ನೆನಪಾಗುತ್ತಿತ್ತು ಎನ್ನುವಷ್ಟು ಜನಾನುರಾಗಿಗಳಾಗಿದ್ದರು.
ನಿಧನ
ಬದಲಾಯಿಸಿ
೨೦೧೧ರ ಆಗಸ್ಟ್ ತಿಂಗಳಿನಲ್ಲಿ ಲಂಡನಿನಲ್ಲಿ ನಡೆದ ಜಾಗತಿಕ (ಯೂರೋಪ್) ಕನ್ನಡ ಸಮ್ಮೇಳನದ ಅಧ್ಯಕ್ಷರಾಗಿ ತಮ್ಮಯ್ಯನವರು ಚುನಾಯಿತರಾಗಿದ್ದರು. ಇದರ ಪ್ರಯುಕ್ತ ಅವರು ೨೮ನೇ ಮಾರ್ಚ್ ೨೦೧೧ರಂದು ಒಂದು ಕಾರ್ಯಕಾರೀ ಸಭೆಯನ್ನೂ ತಮ್ಮ ಮನೆಯಲ್ಲಿ ನಡೆಸಿದ್ದರು. ಕೊನೆಯವರೆಗೂ ಸಮಾಜಸೇವೆಯನ್ನೇ ಉಸಿರಾಗಿಟ್ಟುಕೊಂಡಿದ್ದ ಅವರು ಮರುದಿನವೇ ಲಂಡನಿನಲ್ಲಿ ಸ್ವರ್ಗಸ್ಥರಾದರು. ಅವರ ಮಿತ್ರರು, ಸಮುದಾಯದ ಜನರು, ಸಮಾಜದ ಹಾಗೂ ರಾಜಕೀಯ ಗಣ್ಯರು ಮತ್ತು ಮಾಧ್ಯಮಗಳ ಜನರು ಬಹುಸಂಖ್ಯೆಯಲ್ಲಿ ಸೇರಿ ಪೌರ ಸನ್ಮಾನಪೂರಕವಾದ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿದ್ದರು.
ಆಧಾರ
ಬದಲಾಯಿಸಿ
೧. ಪೂಮಾಲೆ ಕೊಡವ ಸಾಪ್ತಾಹಿಕ ೨೭ ಡಿಸೆಂಬರ್ ೨೦೦೦ (ಸಂಪುಟ ೫; ಸಂಚಿಕೆ ೩೫)
೨. ಇತರ ಮೂಲಗಳು
ಉಲ್ಲೇಖ
ಬದಲಾಯಿಸಿ
!
Last edited ೧ year ago by రుద్రుడు చెచ్క్వికి
ವಿಕಿಪೀಡಿಯ
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ.
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್
ವಿಕಿಪೀಡಿಯ
ವಿಕಿಪೀಡಿಯ ಅನ್ನು ಹುಡುಕಿ
[ಮರೆಮಾಡಲು]
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.
ಕೆಳದಿಯ ಚೆನ್ನಮ್ಮ
ಭಾಷೆ
Download PDF
ವೀಕ್ಷಿಸಿ
ಸಂಪಾದಿಸಿ
ಕೆಳದಿಯ ಚನ್ನಮ್ಮ ಕ್ರಿ.ಶ.೧೬೭೨ರಿಂದ ಕ್ರಿ.ಶ.೧೬೯೭ರವರೆಗೆ ಕೆಳದಿ ಸಂಸ್ಥಾನವನ್ನು ಆಳಿದ ವೀರ ಮಹಿಳೆ. ರಾಣಿ ಚೆನ್ನಮ್ಮ ಛತ್ರಪತಿ ಶಿವಾಜಿಯ ಎರಡನೆಯ ಮಗನಾದ ರಾಜರಾಮನಿಗೆ ನೀಡಿದ ಆಶ್ರಯ ಮತ್ತು ಅದರ ಪರಿಣಾಮವಾಗಿ ಯುದ್ಧಕ್ಕೆ ಬಂದ ಔರಂಗಜೇಬನ ಸೈನ್ಯವನ್ನು ಸೋಲಿಸಿದ್ದು ಅವಳ ಆಳ್ವಿಕೆಯ ಅತ್ಯಂತ ಮಹತ್ತ್ವದ ಸಂಗತಿಗಳು. ತನ್ನ ಸ್ಥಿರ ಸಂಕಲ್ಪ, ದೂರದೃಷ್ಟಿ ಹಾಗೂ ಕಲಿತನಗಳಿಂದ ಇಕ್ಕೇರಿ ಸಂಸ್ಥಾನವನ್ನು ವಿಪತ್ತಿನಿಂದ ಪಾರು ಮಾಡಿದಳೆಂದು ಚೆನ್ನಮ್ಮ ಪ್ರಸಿದ್ಧಳಾಗಿದ್ದಾಳೆ.[೧] [೨]
ಕೆಳದಿಯ ಚನ್ನಮ್ಮ
Keladi Chennamma
ಜನನ
ಚನ್ನಮ್ಮ
ಮರಣ
1696
ರಾಷ್ಟ್ರೀಯತೆ
ಕನ್ನಡತಿ
Known for
ಬಿಜಾಪುರ ವಿರುದ್ಧ ಹೋರಾದಿರುವುದು
ಮತ್ತು ಮುಘಲ್ ಚಕ್ರವರ್ತಿ ಔರಂಗಜೇಬ್ನನ್ನು ನಿರಾಕರಿಸುವುದು
ಪರಿವಿಡಿ
ಆಳ್ವಿಕೆ
ಬದಲಾಯಿಸಿ
ಚೆನ್ನಮ್ಮನು ಕೋಟಿಪುರದ ಸಿದ್ದಪ್ಪಶೆಟ್ಟರ ಮಗಳು ಹಾಗು ಒಂದನೆಯ ಸೋಮಶೇಖರನಾಯಕನ (1664-1679) ಮಡದಿ. ಲಿಂಗಣ್ಣಕವಿಯ ಕೆಳದಿನೃಪವಿಜಯ ಎಂಬ ಗ್ರಂಥ ಹಾಗೂ ಇತರ ಆಧಾರಗಳಿಂದ ಚೆನ್ನಮ್ಮನ ಆಳ್ವಿಕೆಯ ಮುಖ್ಯ ಘಟನೆಗಳು ತಿಳಿದು ಬರುತ್ತವೆ.[೩] [೪] ಕೆಳದಿ ( ಈಗ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಇದೆ)ಯ ರಾಜ ಸೋಮಶೇಖರನಾಯಕ ಪ್ರಾರಂಭದಲ್ಲಿ ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿದ್ದರೂ ದುರ್ಜನರ ಸಹವಾಸದಿಂದ ದುಶ್ಚಟಗಳಿಗೆ ಬಲಿಯಾಗಿ ಮತಿವಿಕಲನಾಗಿ ಕೊನೆಗೆ 1671ರಲ್ಲಿ ಕೊಲೆಯಾದ. ಅವನಿಗೆ ಮಕ್ಕಳಿರಲಿಲ್ಲ. ಕೆಳದಿ ಸಂಸ್ಥಾನದಲ್ಲಿ ಅರಾಜಕತೆಯುಂಟಾಯಿತು. ನಾಯಕ ಮನೆತನದ ವಿರೋಧಿಗಳು ತಮಗೆ ಬೇಕಾದವನೊಬ್ಬನನ್ನು ನಾಯಕಪಟ್ಟಕ್ಕೆ ತರಲು ಹವಣಿಸಿದರು. ಅಂಥ ದುರ್ಭರ ಸನ್ನಿವೇಶದಲ್ಲಿ ಚೆನ್ನಮ್ಮ ಆಡಳಿತವನ್ನು ವಹಿಸಿಕೊಂಡು ಅಸಾಧಾರಣ ಜಾಣ್ಮೆಯಿಂದ ಸಂಸ್ಥಾನದಲ್ಲಿ ಶಾಂತಿ ಸ್ಥಾಪಿಸಿದಳು.ಕೆಳದಿಯಲ್ಲುಂಟಾಗಿದ್ದ ದುಃಸ್ಥಿತಿಯನ್ನು ಉಪಯೋಗಿಸಿಕೊಂಡು ಬಿಜಾಪುರದ ಸುಲ್ತಾನ ಮತ್ತು ಇತರ ಪಾಳೆಯಗಾರರು ಕೆಳದಿಯನ್ನು ಕಬಳಿಸಲು ಹೊಂಚು ಹಾಕಿದ್ದರು. ವೈರಿಗಳ ಸಂಚಿನಿಂದಾಗಿ ಚೆನ್ನಮ್ಮ ಒಮ್ಮೆ ರಾಜಧಾನಿಯಿಂದ ತಲೆತಪ್ಪಿಸಿಕೊಳ್ಳಬೇಕಾಯಿತು. ಅವಳು ತನ್ನ ನೆಚ್ಚಿನ ಸಚಿವನಾದ ಗುರು ಬಸಪ್ಪದೇವ ಮತ್ತು ದಂಡನಾಯಕರಾದ ಕೃಷ್ಣಪ್ಪಯ್ಯ ಹಾಗೂ ತಿಮ್ಮರಸಯ್ಯ ಇವರ ಸಹಾಯದಿಂದ ವೈರಿಗಳನ್ನು ಸದೆಬಡಿದು ಸಂಸ್ಥಾನವನ್ನು ವಿಪತ್ತಿನಿಂದ ರಕ್ಷಿಸಿದಳು.ಮೈಸೂರು ಮತ್ತು ಕೆಳದಿಯ ಮಧ್ಯೆ ರಾಜ್ಯ ವಿಸ್ತರಣೆಗಾಗಿ ನಡೆಯುತ್ತಿದ್ದ ಯುದ್ಧಗಳು ರಾಣಿ ಚೆನ್ನಮ್ಮಾಜಿಯ ಕಾಲದಲ್ಲೂ ಮುಂದುವರಿದುವು. ಚೆನ್ನಮ್ಮ ಮೈಸೂರಿನ ಒಡೆಯರ ರಾಜ್ಯವಿಸ್ತರಣ ಕಾರ್ಯವನ್ನು ಎದುರಿಸಿದಳು. ಆದರೂ ಪರಾಕ್ರಮಿಯಾದ ಚಿಕ್ಕದೇವರಾಜ ಒಡೆಯರ್ 1695ರ ವೇಳೆಗೆ ಕೆಳದಿಯ ಬಲವನ್ನು ಸೋಲಿಸಿ ಅರಕಲಗೂಡು, ಹಾಸನ ಪ್ರದೇಶಗಳನ್ನು ವಶಪಡಿಸಿಕೊಂಡು ಚಿಕ್ಕಮಗಳೂರು ಜಿಲ್ಲೆಯ ಸಕ್ಕರೆಪಟ್ಟಣದವರೆಗೂ ರಾಜ್ಯವನ್ನು ವಿಸ್ತರಿಸಿದ.[೫] A subordinate of Keladi Kingdom, Sadasiva of Swadi also helped Rajaram through a loan.[೬]
ಔರಂಗಜೇಬನ ಸೈನ್ಯವನ್ನು ಸೋಲಿಸಿದ್ದು
ಬದಲಾಯಿಸಿ
ಛತ್ರಪತಿ ಶಿವಾಜಿ‍ಯ ನಿಧನದ ನಂತರ ಮರಾಠಾ ರಾಜ್ಯವನ್ನು ಕೈವಶ ಮಾಡಿಕೊಳ್ಳುವ ಉದ್ದೇಶದಿಂದ ಔರಂಗಜೇಬ‍ನು ಸಂಭಾಜಿ‍ಯನ್ನು ೧೬೮೯ ಮಾರ್ಚ ೧೧ರಂದು ಕೊಲ್ಲಿಸಿದನು.ಶಿವಾಜಿಯ ಎರಡನೆಯ ಮಗ ರಾಜಾರಾಮ‍ನು ಸಕಲಬಲ ಸಂಪನ್ನನೂ ಪ್ರಬಲ ಪರಾಕ್ರಮಿಯೂ ಆದ ಮೊಗಲ್ ಬಾದಶಹ ಔರಂಗ್‍ಜೇಬನ ಸೇನೆಯ ಎದುರು ಹಿಮ್ಮಟ್ಟಿ ಉತ್ತರ ಭಾರತದಲ್ಲಿಯೂ ಆಶ್ರಯ ದೊರೆಯದೆ ಬಂಧನವನ್ನು ತಪ್ಪಿಸಿಕೊಳ್ಳಲು ದಕ್ಷಿಣಕ್ಕೆ ಓಡಿದನು. ಮೊಗಲ್ ಸೈನ್ಯಗಳು ಅವನ್ನನ್ನು ಬೆನ್ನಟ್ಟಿದುವು. ಬೆನ್ನೆಟ್ಟಿದ ಮೊಗಲ ಸೈನ್ಯವನ್ನು ತಪ್ಪಿಸುತ್ತ ರಾಜಾರಾಮನು ಕೆಳದಿಗೆ ಬಂದು ಚೆನ್ನಮ್ಮನ ಆಶ್ರಯ ಕೋರಿದನು. ಮೊಗಲರ ಅಜೇಯ ಬಲದ ಅರಿವಿದ್ದರೂ ಆಶ್ರಿತ ರಕ್ಷಣೆಯ ಕರ್ತವ್ಯದಿಂದ ರಾಣಿ ವಿಮುಖಳಾಗಲಿಲ್ಲ. ಅವಳು ರಾಜಾರಾಮನನ್ನು ಗೌರವಾದರಗಳಿಂದಲೂ ರಾಜೋಚಿತ ಮರ್ಯಾದೆಯಿಂದಲೂ ಬರಮಾಡಿಕೊಂಡು ಅವನಿಗೆ ಅಭಯಹಸ್ತ ನೀಡಿದಳು. ಇದರಿಂದ ಕುಪಿತನಾದ ಔರಂಗ್‍ಜೇಬ್ ಕೆಳದಿಯ ವಿರುದ್ಧ ಪಡೆಯೊಂದನ್ನು ಕಳುಹಿಸಿದ. ಚೆನ್ನಮ್ಮನು ರಾಜಾರಾಮನನ್ನು ಸುರಕ್ಷಿತ ಪ್ರದೇಶಕ್ಕೆ ಕಳುಹಿಸಿಕೊಟ್ಟಳು. ಔರಂಗಜೇಬನ ಎರಡನೆಯ ಮಗ ಆಝಮ್ ಶಹಾನ ನೇತೃತ್ವದ ವಿಶಾಲ ಸೈನ್ಯ ಕೆಳದಿಯನ್ನು ಕೈವಶ ಮಾಡಿಕೊಳ್ಳಲು ಬಂದಿತು.
1690ರಲ್ಲಿ ಕೆಳದಿ ಮತ್ತು ಮೊಗಲ್ ಸೈನ್ಯಗಳ ನಡುವೆ ಯುದ್ಧ ನಡೆಯಿತು. ಕದನದಲ್ಲಿ ಮೊಗಲ್ ಸೇನೆ ಪರಾಭವಗೊಂಡು ಪಲಾಯನ ಮಾಡಿತು. ಮೊಗಲರ ಸೋಲಿನಿಂದ ರಾಣಿ ಚೆನ್ನಮ್ಮಾಜಿಯ ಕೀರ್ತಿ ಇಡೀ ಭಾರತದಲ್ಲಿ ಹಬ್ಬಿತು. ಈ ಸಂಗತಿಯನ್ನು ಕುರಿತ ಜನಪದ ಗೀತೆಗಳು ಇಂದಿಗೂ ಕನ್ನಡನಾಡಿನಲ್ಲಿ ಪ್ರಚಾರದಲ್ಲಿವೆ. ಚನ್ನಮ್ಮ ಮೊಗಲರ ಈ ಪ್ರಚಂಡ ಸೈನ್ಯವನ್ನು ಸೋಲಿಸಿ ಅವರು ರಣರಂಗದಿಂದ ಕಾಲ್ತೆಗೆಯುವಂತೆ ಮಾಡಿದಳು. ಕಣಿವೆಗಳಲ್ಲಿ ವೈರಿಸೈನ್ಯವನ್ನು ಸಿಲುಕಿಸಿ ಔರಂಗಜೇಬನು ಒಪ್ಪಂದಕ್ಕೆ ಬರುವಂತೆ ಮಾಡಿದಳು.
ದತ್ತು , ಮರಣ
ಬದಲಾಯಿಸಿ
ಚೆನ್ನಮ್ಮನಿಗೆ ಸಂತತಿ ಇರಲಿಲ್ಲವಾದ್ದರಿಂದ ಬಸಪ್ಪ ಎಂಬ ಕುಮಾರನನ್ನು ದತ್ತುವಾಗಿ ಸ್ವೀಕರಿಸಿದಳು. ಅವನಿಗೆ ಯುದ್ಧ ಮತ್ತು ಆಡಳಿತದಲ್ಲಿ ಶಿಕ್ಷಣ ಕೊಟ್ಟು 1696ರಲ್ಲಿ ಕೆಳದಿ ಬಸವಭೂಪಾಲನೆಂದು ಹೆಸರಿಟ್ಟು ಆಡಳಿತ ವಹಿಸಿಕೊಟ್ಟಳು. ಎರಡು ವರ್ಷಗಳ ಅನಂತರ 1698ರಲ್ಲಿ ಈಕೆ ಮರಣಹೊಂದಿದಳೆಂದು ತಿಳಿದುಬರುತ್ತದೆ.
ದಾನ ಧರ್ಮಗಳು
ಬದಲಾಯಿಸಿ
ದಕ್ಷ ಆಡಳಿತಗಾರಳಾದ ಚೆನ್ನಮ್ಮ ಮತವಿಚಾರಗಳಲ್ಲಿ ಉದಾರ ನೀತಿ ಹೊಂದಿದ್ದಳು. ಜಂಗಮರಿಗೆ ಮಠಗಳನ್ನು ಕಟ್ಟಿಸಿಕೊಟ್ಟಳು. ತನ್ನ ಪತಿಯ ಹೆಸರಿನಲ್ಲಿ ಅನೇಕ ಅಗ್ರಹಾರಗಳನ್ನು ನಿರ್ಮಿಸಿದಳು. ಒಂದು ಅಗ್ರಹಾರವನ್ನು ತನ್ನ ಸ್ವಂತ ಹೆಸರಿನಿಂದ ಚೆನ್ನಮ್ಮಾಂಬಪುರ ಎಂಬುದಾಗಿ ಕರೆದಳು. ಕೆಳದಿಯ ವೀರಭದ್ರ ದೇವಾಲಯದ ಮುಂದಿನ ಧ್ವಜಸ್ತಂಭವನ್ನು ನೆಡಿಸಿದವಳು ಈಕೆಯೇ. ಮೂಕಾಂಬ ದೇವಾಲಯಕ್ಕೆ ಈಕೆ ವಿಶೇಷ ದಾನ ನೀಡಿದಳು. ತನ್ನ ರಾಜ್ಯದಲ್ಲಿ ಚರ್ಚುಗಳನ್ನು ನಿರ್ಮಿಸಲು ಪೋರ್ಚುಗೀಸರಿಗೆ ಅನುಮತಿ ನೀಡಿದಳು.
ಚನ್ನಮ್ಮ ಅನೇಕ ದಾನ ಧರ್ಮಗಳನ್ನು ಮಾಡಿದ್ದಾಳೆ. ಮಠಗಳನ್ನು, ದೇವಾಲಯಗಳನ್ನು ಸ್ಥಾಪಿಸಿದ್ದಾಳೆ. ಅವುಗಳಲ್ಲಿ ದತ್ತಪೀಠದಲ್ಲಿರುವ ಚಂದ್ರದ್ರೋಣ ಪರ್ವತದ ದೇವಾಲಯವೂ ಒಂದಾಗಿದೆ.
ಉಲ್ಲೇಖಗಳು
ಬದಲಾಯಿಸಿ
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
ಚೆನ್ನಮ್ಮ, ಕೆಳದಿಯ ರಾಣಿ
Last edited ೨ months ago by Pisumathu
ವಿಕಿಪೀಡಿಯ
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ.
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್
ವಿಕಿಪೀಡಿಯ
ವಿಕಿಪೀಡಿಯ ಅನ್ನು ಹುಡುಕಿ
[ಮರೆಮಾಡಲು]
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.
ಗುಲ್ಶನ್ ದೇವಯ್ಯ
ಭಾಷೆ
Download PDF
ವೀಕ್ಷಿಸಿ
ಸಂಪಾದಿಸಿ
ಗುಲ್ಶನ್ ದೇವಯ್ಯನವರು (ಜನನ: ಮೇ ೨೮, ೧೯೭೮) ಹಿಂದಿ ಚಿತ್ರರಂಗದಲ್ಲಿ ಪ್ರಸಿದ್ಧಿಯನ್ನು ಪಡೆಯುತ್ತಿರುವ ನಟರು. ಬೆಂಗಳೂರಿನವರಾದ ಇವರು ಕನ್ನಡಿಗರು ಮಾತ್ರವಲ್ಲದೆ, ಕೊಡವ ಜನಾಂಗದವರಾಗಿದ್ದು, ಕಂಬೆಯಂಡ ಮನೆತನಕ್ಕೆ ಸೇರಿದವರು.
ಗುಲ್ಶನ್ ದೇವಯ್ಯ
ಪರಿವಿಡಿ
ಜನನ, ಬಾಲ್ಯ ಮತ್ತು ವಿದ್ಯಾಭ್ಯಾಸ
ಬದಲಾಯಿಸಿ
ಗುಲ್ಶನ್ ಅವರು ಶ್ರೀ ದೇವಯ್ಯನವರು ಹಾಗೂ ತಾಯಿ ಶ್ರೀಮತಿ ಪುಷ್ಪಲತಾ ಅವರ ಏಕೈಕ ಪುತ್ರರಾಗಿ ಬೆಂಗಳೂರಿನ ಬಿ ಇ ಎಲ್ ಆಸ್ಪತ್ರೆಯಲ್ಲಿ ಜನಿಸಿದರು. ದೇವಯ್ಯ ದಂಪತಿಗಳಿಬ್ಬರೂ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ (ಬಿ ಇ ಎಲ್)ನಲ್ಲಿ ಉದ್ಯೋಗದಲ್ಲಿದ್ದು ನಿವೃತ್ತರಾದವರು. ಉದ್ಯೋಗದಲ್ಲಿದ್ದಾಗ ಇಬ್ಬರೂ ಸಾಹಿತ್ಯ, ಲಘು ಸಂಗೀತ, ಚಿತ್ರಕಲೆ, ನಾಟಕ, ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿದ್ದರಲ್ಲದೆ, ಗುಲ್ಶನ್‌ನಲ್ಲೂ ಇದ್ದ ಕಲೆಗಾರಿಕೆಯನ್ನು ಗುರುತಿಸಿ, ಪ್ರೋತ್ಸಾಹಿಸಿದರು.