text
stringlengths 0
2.67k
|
---|
ಗುಲ್ಶನ್ ಬೆಂಗಳೂರಿನ ಕ್ಲೂನಿ ಕಾನ್ವೆಂಟ್‌ನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿ ಸೈಂಟ್ ಜೋಸೆಫ್’ಸ್ ಇಂಡಿಯನ್ ಹೈಸ್ಕೂಲ್‌ನಲ್ಲಿ ಶಿಕ್ಷಣ ಪಡೆದ ನಂತರ ಬಿ ಇ ಎಲ್ ಪದವಿಪೂರ್ವ ಕಾಲೆಜನ್ನು ಸೇರಿದರು. ಬಳಿಕ ೧೯೯೭ರಿಂದ ೨೦೦೦ರವರೆಗೆ ನ್ಯಾಶನಲ್ ಇನ್ಸ್‌ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ(National Institute of Fashion Technology)ಯಿಂದ ಪ್ರಥಮ ಶ್ರೇಣಿಯಲ್ಲಿ ಪದವೀಧರರಾದರು. |
ಉದ್ಯೋಗ |
ಬದಲಾಯಿಸಿ |
ಸುಮಾರು ಹತ್ತು ವರ್ಷಗಳವರೆಗೆ ಗುಲ್ಶನ್ ಫ್ಯಾಶನ್ ಉದ್ಯೋಗದಲ್ಲಿದ್ದರಲ್ಲದೆ, ಬೆಂಗಳೂರಿನ ವಿಗಾನ್ ಅಂಡ್ ಲೈ ಕಾಲೆಜಲ್ಲಿಅಧ್ಯಾಪಕರಾಗಿದ್ದರು. |
ನಾಟಕರಂಗ |
ಬದಲಾಯಿಸಿ |
ಪ್ರಾಥಮಿಕ ಶಾಲೆಯ ನಾಟಕ-ಪ್ರಹನಗಳಲ್ಲೇ ಬಾಲಕ ಗುಲ್ಶನ್ ಮುಖ್ಯ ಪಾತ್ರಕ್ಕೆ ಆಯ್ಕೆಯಾಗುತ್ತಿದ್ದರು. ಕಾಲೆಜಿನಲ್ಲಿದ್ದಾಗಿನಿಂದ ಆರಂಭಿಸಿದ್ದು, ಫ್ಯಾಶನ್ ರಂಗದಲ್ಲಿ ಉದ್ಯೋಗದಲ್ಲಿರುವಾಗಲೂ ಬೆಂಗಳೂರಿನ ಹಲವಾರು ಆಂಗ್ಲ ಥಿಯೇಟರ್ ತಂಡಗಳಲ್ಲಿ ಅಭಿನಯಿಸಿ ಪ್ರಸಿದ್ಧರಾಗಿದ್ದಾರೆ. ನಯನತಾರಾ ರಾಯ್ ಅವರ ನಿರ್ದೇಶನದ "ಮ್ಯಾಡ್ನೆಸ್", ರಂಜನ್ ಗೋಶಾಲ್‌ರವರ ನಾಟಕ,"ಬಂಚರಾಮ್'ಸ್ ಆರ್ಚರ್ಡ್ಸ್" ‘ಮರೀಚ’ ಥಿಯೇಟರ್‌ನ ಎರಡು ನಾಟಕಗಳು; ಇವಲ್ಲದೆ ಬೆಂಗಳೂರಿನ ಆಂಗ್ಲ ನಾಟಕ ರಂಗಗಳಲ್ಲಿ ಹರಾಮಿ ಥಿಯೇಟರ್’ಸ್‌ನ "ಬಟರ್ ಅಂಡ್ ಮ್ಯಾಶ್ಡ್ ಬನಾನ" ಮೊದಲಾದ ನಾಟಕಗಳಲ್ಲಿ, ಅತ್ಯಂತ ಗಮನಾರ್ಹವಾಗಿ ಗುಲ್ಶನ್ ಗುರುತಿಸಲ್ಪಡುತ್ತಾರೆ. ವಿಮರ್ಶಕರಿಂದಲೂ ಪ್ರಶಂಸೆಗೊಳಗಾದ ಉತ್ಕೃಷ್ಟ ಅಭಿನಯದ ನಾಟಕವೆಂದರೆ ಕುವೆಂಪು ವಿರಚಿತ ನಾಟಕ, "ಸ್ಮಶಾನ ಕುರುಕ್ಷೇತ್ರ". |
ಸಿನಿಮಾರಂಗ |
ಬದಲಾಯಿಸಿ |
ಗುಲ್ಶನ್‌ರವರ ಮೊದಲ ಚಿತ್ರ ಅನುರಾಗ್ ಕಶ್ಯಪ್ ನಿರ್ದೇಶನದ "ದ ಗರ್ಲ್ ಇನ್ ಯೆಲ್ಲೊ ಬೂಟ್ಸ್". ಇದರಲ್ಲಿ ಇವರ ಚಿಟ್ಟಿಯಪ್ಪ ಸಿದ್ದಪ್ಪ ಗೌಡ ಎನ್ನುವ ಕನ್ನಡಿಗ ಗ್ಯಾಂಗ್‌ಸ್ಟರ್‌ನ ಪಾತ್ರ ನೋಡುಗರ ಮನದಲ್ಲಿ ಅಚ್ಚಳಿಯದಂತೆ ನಿಂತಿದೆ. ಕಲ್ಕಿ ಕೇಕ್ಲಾನ್ (Koechlin) ಮತ್ತು ನಾಸಿರುದ್ದಿನ್ ಶಾ ಇವರ ಸಹನಟರಾಗಿದ್ದರು. ಈ ಚಿತ್ರವು ಟೊರನ್ಟೊ ಅಂತಾರಾಷ್ಟ್ರಿಯ ಫಿಲ್ಮ್ ಫೆಸ್ಟಿವಲ್ ಮತ್ತು ವೆನಿಸ್ ಫಿಲ್ಮ್ ಫೆಸ್ಟಿವಲಲ್ಲಿ ಪ್ರದರ್ಶನಗೊಂಡಿತು. |
ಆದರೆ ಇದಕ್ಕಿಂತ ಮೊದಲು ೨೦೧೧ರಲ್ಲಿ ಬಿಡುಗಡೆಯಾದದು ಬೆಜೊಯ್ ನಂಬಿಯಾರ್ ನಿರ್ದೇಶನದ "ಶೈತಾನ್" ಹಿಂದಿ ಚಿತ್ರ. ಕರಣ್ ಕೆ ಸಿ ಚೌಧರಿಯ ನೆಗೆಟಿವ್ ಪಾತ್ರ ವಿಮರ್ಶಕರ ಮೆಚ್ಚುಗೆಯನ್ನು ಪಡೆದಿದೆ. ಈ ಚಿತ್ರದಲ್ಲಿನ ಅವರ ಅಭಿನಯವು ವಿಮರ್ಶಕರ ಮೆಚ್ಚುಗೆಯನ್ನು ಪಡೆದು, ಸಿನಿಮಾರಂಗದ ಮೊದಲ ಪ್ರವೇಶದ ಅತ್ಯುತ್ತಮ ನಟ (ಬೆಸ್ಟ್ ಮೇಲ್ ಡೆಬ್ಯೂ) ಹಾಗೂ ಅತ್ಯುತ್ತಮ ಪೋಷಕ ನಟನೆಂದು ಫಿಲ್ಮ್ ಫೇರ್ ಪ್ರಶಸ್ತಿಗಳಿಗೆ ಗುಲ್ಶನ್ ದೇವಯ್ಯ ನಾಮನಿರ್ದೇಶನಗೊಂಡಿದ್ದರು. |
ಶೈತಾನ್ ಚಿತ್ರದ ಬಳಿಕ ೨೦೧೧ರಲ್ಲಿ ರೋಹನ್ ಸಿಪ್ಪಿ ನಿರ್ದೇಶನದ "ದಮ್ ಮಾರೋ ದಮ್" ಚಿತ್ರದಲ್ಲಿ ರಿಕ್ಕಿ ಎಂಬ ಹೆಸರಿನ ಗೋವಾದ ಮಾದಕ ವಸ್ತು ಸಾಗಾಟಗಾರನ ಪಾತ್ರ. ಸಣ್ಣದಾದರೂ, ನಯವಾಗಿ ಮಾತಾಡಿ ಕಪ್ಪು ದಂಧೆಯೊಳಕ್ಕೆ ತರುಣರನ್ನು ಬಲೆ ಬೀಸಿ ಹಿಡಿಯುವ ಚಾಣಾಕ್ಷನ ಪಾತ್ರದಲ್ಲಿ ಪ್ರೇಕ್ಷಕರ ಮತ್ತು ವಿಮರ್ಶಕರ ಗಮನ ಸೆಳೆದರು. ಅಭಿಷೇಕ್ ಬಚ್ಚನ್, ಬಿಪಾಶಾ ಬಸು ಮತ್ತಿ ಪ್ರತೀಕ್ ಬಬ್ಬರ್ ಮುಖ್ಯ ಪಾತ್ರಗಳಲ್ಲಿದ್ದರು. |
ನಂತರ ೨೦೧೨ರಲ್ಲಿ ತೆರೆ ಕಂಡ ವಿವೇಕ್ ಅಗ್ನಿಹೋತ್ರಿಯವರ "ಹೇಟ್ ಸ್ಟೋರಿ"ಯಲ್ಲಿನ ಇವರ ಪಾತ್ರ ಧೂರ್ತ ವ್ಯಕ್ತಿತ್ವದ ಸಿದ್ಧಾರ್ಥ್ ಧನರಾಜಗಿರ್. ಚಿತ್ರ ವಿವಾದ-ಕುತೂಹಲಗಳಿಗೆ ಕಾರಣೀಭೂತವಾಗಿದ್ದರೂ ಗುಲ್ಶನ್ನರ ಶಕ್ತಿಯುತ ಅಭಿನಯ ಎಲ್ಲರ ಮನ ಮೆಚ್ಚುಗೆಯಾಯಿತು. ಇದೇ ವರ್ಷದ ಮತ್ತೊಂದು ಚಿತ್ರ ವಾಸನ್ ಬಾಲಾರವರ "ಪೆಡ್ಲರ್ಸ್" ಚಿತ್ರದಲ್ಲಿ ರಣಜಿತ್ ಡಿ’ಸೋಜನ ಪಾತ್ರದಿಂದ ಉತ್ತಮ ಅಭಿನಯಕ್ಕಾಗಿ ಗುಲ್ಶನ್ ಪ್ರಶಂಸಾಭಾಜನರಾಗಿದ್ದಾರೆ. |
ವೈಯಕ್ತಿಕ ಜೀವನ |
ಬದಲಾಯಿಸಿ |
ನಿಜ ಜೀವನದಲ್ಲಿ ತುಂಬ ಸರಳ ಹಾಗೂ ಶಾಂತ ಸ್ವಭಾವದ ಗುಲ್ಶನ್ ಸ್ನೇಹಪ್ರಿಯರು. ಗ್ರೀಕ್ ಮೂಲದ ಕಲಿರೊಯ್ ಜಿಯಫೆಟ (Kallirroi Tziafeta) ಅವರನ್ನು ಮದುವೆಯಾಗಿದ್ದಾರೆ. |
ಅಭಿನಯಿಸಿದ ಚಲಚ್ಚಿತ್ರಗಳು |
ಬದಲಾಯಿಸಿ |
ಕ್ರಮ ಸಂಖ್ಯೆ ಬಿಡುಗಡೆಯ ವರ್ಷ ಚಿತ್ರದ ಹೆಸರು ಭಾಷೆ ನಿರ್ದೇಶಕರು ಪಾತ್ರ |
೧ ೨೦೧೧ ದ ಗರ್ಲ್ ಇನ್ ಯೆಲ್ಲೊ ಬೂಟ್ಸ್ ಹಿಂದಿ ಅನುರಾಗ್ ಕಶ್ಯಪ್ ಚಿಟ್ಟಿಯಪ್ಪ ಸಿದ್ದಣ್ಣ ಗೌಡ |
೨ ೨೦೧೧ ದಮ್ ಮಾರೋ ದಮ್ ಹಿಂದಿ ರೋಹನ್ ಸಿಪ್ಪಿ ರಿಕ್ಕಿ |
೩ ೨೦೧೧ ಶೈತಾನ್ ಹಿಂದಿ ಬೆಜೋಯ್ ನಂಬಿಯಾರ್ ಕರಣ್ ಕೆ ಸಿ ಚೌಧರಿ |
೪ ೨೦೧೨ ಹೇಟ್ ಸ್ಟೋರಿ ಹಿಂದಿ ವಿವೇಕ್ ಅಗ್ನಿಹೋತ್ರಿ ಸಿದ್ಧಾರ್ಥ್ ಧನರಾಜಗಿರ್ |
೫ ೨೦೧೨ ಪೆಡ್ಲರ್ಸ್ ಹಿಂದಿ ವಾಸನ್ ಬಾಲಾ ರಣಜಿತ್ ಡಿ’ಸೋಜ |
೬ ೨೦೧೩ ಗೋಲಿಯೋಂ ಕೀ ರಾಸ್‌ಲೀಲ ರಾಮ್ ಲೀಲ ಹಿಂದಿ ಸಂಜಯ್ ಲೀಲ ಭನ್ಸಲಿ ಭವಾನಿ |
೭ ೨೦೧೫ ಹಂಟರ್ (ಮುಂಚಿನ ಹೆಸರು ವಾಸು) ಹಿಂದಿ ಹರ್ಷವರ್ಧನ್ ಕುಲಕರ್ಣಿ ಮಂದಾರ್ ಪೊಂಕ್ಶೆ |
ಬಾಹ್ಯ ಸಂಪರ್ಕಗಳು |
ಬದಲಾಯಿಸಿ |
ಗುಲ್ಶನ್ ದೇವಯ್ಯ ಐ ಎಮ್ ಡಿ ಬಿನಲ್ಲಿ |
Last edited ೬ months ago by Gangaasoonu |
ವಿಕಿಪೀಡಿಯ |
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. |
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್ |
ವಿಕಿಪೀಡಿಯ |
ವಿಕಿಪೀಡಿಯ ಅನ್ನು ಹುಡುಕಿ |
[ಮರೆಮಾಡಲು] |
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ. |
ತ್ರಿಪುರಾಂಬಾ |
ಕನ್ನಡದ ಮೊದಲ ನಾಯಕನಟಿ |
ಭಾಷೆ |
Download PDF |
ವೀಕ್ಷಿಸಿ |
ಸಂಪಾದಿಸಿ |
ತ್ರಿಪುರಾಂಬಾ (೧೯೧೦-೧೯೭೯) ರು ಕನ್ನಡ ಚಲನಚಿತ್ರಗಳಲ್ಲಿ ಕೆಲಸ ಮಾಡಿದ ಭಾರತೀಯ ರಂಗಭೂಮಿ ಹಾಗು ಚಲನಚಿತ್ರ ನಟಿ ಮತ್ತು ಗಾಯಕಿ. ೧೯೩೪ ರಲ್ಲಿ ಬಿಡುಗಡೆಯಾದ ಕನ್ನಡದ ಮೊದಲ ಟಾಕಿ ಸತಿ ಸುಲೋಚನಾದಲ್ಲಿ ಸುಲೋಚನಾ ಪಾತ್ರದಿಂದ ಉತ್ತಮವಾಗಿ ನೆನಪುಳಿದುಕೊಳ್ಳುತ್ತಾರೆ. ಇದೇ ಅವರನ್ನು ಕನ್ನಡ ಚಿತ್ರರಂಗದ ಮೊದಲ ನಾಯಕಿಯನ್ನಾಗಿ ಮಾಡಿತು. [೧] [೨] [೩] |
ತ್ರಿಪುರಾಂಬಾ |
ಜನನ |
೧೭ ಜುಲೈ ೧೯೧೦ |
ಮೈಸೂರು ರಾಜ್ಯ, ಬ್ರಿಟಿಷ್ ಇಂಡಿಯಾ |
ಮರಣ |
೧೯೭೯ |
ವೃತ್ತಿs |
ನಾಯಕಿಗಾಯಕಿ |
ಸಂಗಾತಿ |
ವೇಣುಗೋಪಾಲ್ |
ಪರಿವಿಡಿ |
ವೃತ್ತಿ |
ಬದಲಾಯಿಸಿ |
ತ್ರಿಪುರಾಂಬ ರಂಗಭೂಮಿಯಲ್ಲಿ ತೊಡಗಿಸಿಕೊಂಡರು ಹಾಗು ನಿಪುಣ ನಟಿ ಮತ್ತು ಗಾಯಕಿಯಾದರು. ಅವರು ಸುಬ್ಬಯ್ಯ ನಾಯ್ಡು ಅವರೊಂದಿಗೆ ಕನ್ನಡ ಚಿತ್ರರಂಗದ ಮೊದಲ ಟಾಕಿ ಚಿತ್ರ ಸತಿ ಸುಲೋಚನಾದಲ್ಲಿ ಇಂದ್ರಜಿತ್ ಅವರ ಪತ್ನಿ ಸುಲೋಚನಾ ಪಾತ್ರವನ್ನು ನಿರ್ವಹಿಸಿದರು. ಈ ಐತಿಹಾಸಿಕ ಸಿನಿಮಾ ಅವರನ್ನು ಕನ್ನಡದ ಮೊದಲ ನಾಯಕಿಯನ್ನಾಗಿ ಮಾಡಿತು. [೪] [೫] |
ಆಶ್ಚರ್ಯವೆಂದರೆ ತ್ರಿಪುರಾಂಬ ಹೆಚ್ಚು ಸಿನಿಮಾ ಮಾಡಲಿಲ್ಲ. ೧೯೩೭ ರಲ್ಲಿ ಅವರ ಮುಂದಿನ ಮತ್ತು ಕೊನೆಯ ಚಿತ್ರ ಪುರಂದರದಾಸ. ಅವರು ೧೯೭೯ ರಲ್ಲಿ ನಿಧನರಾದರು. |
ಚಿತ್ರಕಥೆ |
ಬದಲಾಯಿಸಿ |
ಹಲವಾರು ರಂಗ ನಾಟಕಗಳ ಹೊರತಾಗಿ, ತ್ರಿಪುರಾಂಬಾ ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ. [೬] |
ವರ್ಷ ಶೀರ್ಷಿಕೆ ಪಾತ್ರ ಭಾಷೆ ಟಿಪ್ಪಣಿಗಳು |
1934 ಸತಿ ಸುಲೋಚನಾ ಸುಲೋಚನಾ ಕನ್ನಡ ಕನ್ನಡ ಚಿತ್ರರಂಗದ ಮೊದಲ ನಾಯಕಿ |
1937 ಪುರಂದರದಾಸರು ಸರಸ್ವತಿ ಕನ್ನಡ |
ಉಲ್ಲೇಖಗಳು |
ಬದಲಾಯಿಸಿ |
Shashidhara Chitradurga (3 March 2017). "Kannada's first talkie film Sati Sulochana turns 83 today". Asianet Newsable. Retrieved 16 September 2020. |
S. N. Deepak (15 April 2018). "Wealth of material found on first Kannada talkie". Deccan Herald. Retrieved 16 September 2020. |
Deepak SN (1 March 2019). "First Kannada talkie turns 85". Deccan Herald. Retrieved 16 September 2020. |
Muralidhara Khajane (3 March 2019). "Attempt to retell history of Kannada's first talkie". The Hindu. Retrieved 16 September 2020. |
"First Kannada movie Sati Sulochana". Chitraloka.com. Archived from the original on 3 ಡಿಸೆಂಬರ್ 2021. Retrieved 16 September 2020. |
"Celebrity Tripuramba". Chiloka.com. Retrieved 16 September 2020. |
ಬಾಹ್ಯ ಕೊಂಡಿಗಳು |
ಬದಲಾಯಿಸಿ |
ತ್ರಿಪುರಾಂಬಾ @ ಐ ಎಮ್ ಡಿ ಬಿ |
Last edited ೯ months ago by Akshitha achar |
ವಿಕಿಪೀಡಿಯ |
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. |
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್ |
ವಿಕಿಪೀಡಿಯ |
ವಿಕಿಪೀಡಿಯ ಅನ್ನು ಹುಡುಕಿ |
Subsets and Splits
No saved queries yet
Save your SQL queries to embed, download, and access them later. Queries will appear here once saved.