text
stringlengths 0
2.67k
|
---|
ಕಳ್ಳ ರಾಜ |
ಲಕ್ಷ್ಮಿ, ಕಾಂಚನಾ |
೧೭೬ ೧೯೮೦ ರವಿಚಂದ್ರ • ರವಿ |
• ಚಂದ್ರ ಲಕ್ಷ್ಮಿ |
೧೭೭ ೧೯೮೦ ವಸಂತಗೀತ ಇನ್ಷೂರೆನ್ಸ್ ಏಜೆಂಟ್ ವಸಂತ್ ಕುಮಾರ್ ಗಾಯತ್ರಿ |
೧೭೮ ೧೯೮೧ ಹಾವಿನ ಹೆಡೆ ಸುಲಕ್ಷಣಾ |
೧೭೯ ೧೯೮೧ ನೀ ನನ್ನ ಗೆಲ್ಲಲಾರೆ ಮಂಜುಳಾ |
೧೮೦ ೧೯೮೧ ಕೆರಳಿದ ಸಿಂಹ ಪೋಲಿಸ್ ಇನ್ಸ್ಪೆಕ್ಟರ್ ಶಂಕರ್ ಸರಿತಾ |
೧೮೧ ೧೯೮೨ ಹೊಸಬೆಳಕು ರವಿ ಸರಿತಾ |
೧೮೨ ೧೯೮೨ ಹಾಲು ಜೇನು ರಂಗ ಮಾಧವಿ, ರೂಪಾದೇವಿ |
೧೮೩ ೧೯೮೨ ಚಲಿಸುವ ಮೋಡಗಳು ವಕೀಲ ಮೋಹನ್ ಸರಿತಾ, ಅಂಬಿಕಾ |
೧೮೪ ೧೯೮೩ ಕವಿರತ್ನ ಕಾಳಿದಾಸ ಕಾಳಿದಾಸ ಜಯಪ್ರದಾ |
೧೮೫ ೧೯೮೩ ಕಾಮನಬಿಲ್ಲು ಅರ್ಚಕ ಮತ್ತು ರೈತ ಸೂರ್ಯನಾರಾಯಣ ಶಾಸ್ತ್ರಿ ಸರಿತಾ |
೧೮೬ ೧೯೮೩ ಭಕ್ತ ಪ್ರಹ್ಲಾದ ಹಿರಣ್ಯಕಶಿಪು ಸರಿತಾ |
೧೮೭ ೧೯೮೩ ಎರಡು ನಕ್ಷತ್ರಗಳು ಸೇನಾಧಿಕಾರಿಯ ಮಗ ರಾಜ ಅಂಬಿಕಾ |
೧೮೮ ೧೯೮೪ ಸಮಯದ ಗೊಂಬೆ ಅನಿಲ್/ಚಾಲಕ ಗುರುಮೂರ್ತಿ ರೂಪಾದೇವಿ, ಮೇನಕಾ |
೧೮೯ ೧೯೮೪ ಶ್ರಾವಣ ಬಂತು ಪಾಪ್ ಗಾಯಕ ಕುಮಾರ್/ಪೀಟರ್ ಫ್ರಂ ಪೀಟರ್ಸ್ ಬರ್ಗ್/ಆಶುಕವಿ ಊರ್ವಶಿ |
೧೯೦ ೧೯೮೪ ಯಾರಿವನು ಇನ್ಸ್ ಪೆಕ್ಟರ್ ರೂಪಾದೇವಿ |
೧೯೧ ೧೯೮೪ ಅಪೂರ್ವ ಸಂಗಮ ಗೋಪಿ/ಪೋಲಿಸ್ ಸೂಪರಿಂಟೆಂಡೆಂಟ್ ಸಂತೋಷ್ ಕುಮಾರ್ ಅಂಬಿಕಾ |
೧೯೨ ೧೯೮೫ ಅದೇ ಕಣ್ಣು ದ್ವಿಪಾತ್ರದಲ್ಲಿ ಗಾಯತ್ರಿ, ವಿಜಯರಂಜಿನಿ |
೧೯೩ ೧೯೮೫ ಜ್ವಾಲಾಮುಖಿ ಪ್ರೊಫೆಸರ್ ಮತ್ತು ಪತ್ರಕರ್ತ ಜಯಸಿಂಹ ಗಾಯತ್ರಿ |
೧೯೪ ೧೯೮೫ ಧ್ರುವತಾರೆ ವಕೀಲ ಸಾಗರ್ ಗೀತಾ_(ನಟಿ) |
೧೯೫ ೧೯೮೬ ಭಾಗ್ಯದ ಲಕ್ಷ್ಮಿ ಬಾರಮ್ಮ ಪಾಂಡುರಂಗ ಮಾಧವಿ |
೧೯೬ ೧೯೮೬ ಅನುರಾಗ ಅರಳಿತು ಮೆಕ್ಯಾನಿಕ್ ಶಂಕರ್ ಮಾಧವಿ, ಗೀತಾ_(ನಟಿ) |
೧೯೭ ೧೯೮೬ ಗುರಿ ಕಸ್ಟಂಸ್ ಅಧಿಕಾರಿ ಕಾಳೀಪ್ರಸಾದ್ ಅರ್ಚನಾ |
೧೯೮ ೧೯೮೭ ಒಂದು ಮುತ್ತಿನ ಕಥೆ ಮೀನುಗಾರ ಐತು ಅರ್ಚನಾ |
೧೯೯ ೧೯೮೭ ಶ್ರುತಿ ಸೇರಿದಾಗ ವೈದ್ಯ ಮತ್ತು ಗಾಯಕ ಡಾ. ಮೂರ್ತಿ ಗೀತಾ_(ನಟಿ), ಮಾಧವಿ |
೨೦೦ ೧೯೮೮ ದೇವತಾ ಮನುಷ್ಯ ಚಾಲಕ ಮೂರ್ತಿ ಗೀತಾ_(ನಟಿ) |
೨೦೧ ೧೯೮೯ ಪರಶುರಾಮ್ ಭಾರತೀಯ ಭೂಸೇನೆ ಮೇಜರ್ ಪರಶುರಾಮ್ ವಾಣಿ ವಿಶ್ವನಾಥ್, ಮಹಾಲಕ್ಷ್ಮಿ |
೨೦೨ ೧೯೯೨ ಜೀವನ ಚೈತ್ರ ಸಿಂಹಾದ್ರಿ ಜೋಡಿದಾರ್ ವಿಶ್ವನಾಥ ರಾವ್ ಮಾಧವಿ |
೨೦೩ ೧೯೯೩ ಆಕಸ್ಮಿಕ ಇನ್ಸ್ಪೆಕ್ಟರ್ ನರಸಿಂಹ ಮೂರ್ತಿ ಮಾಧವಿ. ಗೀತಾ_(ನಟಿ) |
೨೦೪ ೧೯೯೪ ಒಡಹುಟ್ಟಿದವರು ರಾಮಣ್ಣ ಮಾಧವಿ |
೨೦೫ ೨೦೦೦ ಶಬ್ದವೇಧಿ ಇನ್ಸ್ಪೆಕ್ಟರ್ ಸಂದೀಪ್ ಜಯಪ್ರದಾ |
ಅತಿಥಿ ನಟನಾಗಿ ಅಭಿನಯಿಸಿದ ಚಿತ್ರಗಳು |
ಶ್ರೀನಿವಾಸ ಕಲ್ಯಾಣ ೧೯೫೧ |
ಗಂಧದ ಗುಡಿ ಭಾಗ ೨ |
ಜೋಗಿ |
ಗಾಯಕರಾಗಿ ಡಾ. ರಾಜ್ |
ಬದಲಾಯಿಸಿ |
ಕೇವಲ ನಟನೆಯಲ್ಲದೆ, ಅತ್ಯುತ್ತಮ ಗಾಯಕರೂ ಆಗಿದ್ದ ರಾಜ್ ಕನ್ನಡ ಗಾನಲೋಕಕ್ಕೂ ತಮ್ಮ ಅಪಾರ ಸೇವೆ ಸಲ್ಲಿಸಿದ್ದಾರೆ. ೧೯೭೪ರಲ್ಲಿ ಬಿಡುಗಡೆಯಾದ ಸಂಪತ್ತಿಗೆ ಸವಾಲ್ ಚಿತ್ರದ ಯಾರೇ ಕೂಗಾಡಲಿ,ಊರೇ ಹೋರಾಡಲಿ (ಎಮ್ಮೆ ಹಾಡೆಂದೇ ಪ್ರಸಿದ್ಧಿ) ಎಂಬ ಹಾಡಿನಿಂದ ಅವರು ಪೂರ್ಣ ಪ್ರಮಾಣದ ಗಾಯಕರಾಗಿ ಹೊರ ಹೊಮ್ಮಿದರು. |
ಇದಕ್ಕೂ ಮುಂಚೆ ೧೯೫೬ರಲ್ಲೇ ಓಹಿಲೇಶ್ವರ_(ಚಲನಚಿತ್ರ) ಚಿತ್ರದಲ್ಲಿ "ಶರಣು ಶಂಭೋ" ಎಂಬು ಗೀತೆಯೊಂದನ್ನು ಹಾಗೂ ಮಹಿಷಾಸುರ ಮರ್ಧಿನಿ ಚಿತ್ರದಲ್ಲಿ ಎಸ್.ಜಾನಕಿಯವರೊಡನೆ "ತುಂಬಿತು ಮನವ ತಂದಿತು ಸುಖವ" ಎಂಬ ಯುಗಳ ಗೀತೆಯನ್ನು ಹಾಡಿದ್ದರು. ಈ ಮೂರು ಚಿತ್ರಗಳು ಜಿ.ಕೆ.ವೆಂಕಟೇಶ್ ಅವರ ಸಂಗೀತ ನಿರ್ದೇಶನವನ್ನು ಹೊಂದಿದ್ದವು. |
ಜಿ.ಕೆ.ವೆಂಕಟೇಶ್ ಹಾಗೂ ಉಪೇಂದ್ರಕುಮಾರ್ ಸಂಗೀತದಲ್ಲಿ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. |
೧೯೬೨ರಲ್ಲಿ, ದೇವಸುಂದರಿ ಚಿತ್ರದಲ್ಲಿ ಹಾಸ್ಯರತ್ನ ನರಸಿಂಹರಾಜು ಅವರ ಪಾತ್ರಕ್ಕೆ ಯುಗಳ ಗೀತೆಯೊಂದನ್ನೂ ಹಾಡಿದ್ದಾರೆ. ಡಾ. ರಾಜ್ ಅವರು ಬೇರೊಬ್ಬರ ಅಭಿನಯಕ್ಕೆ ಹಿನ್ನೆಲೆ ಗಾಯನ ಮಾಡಿದ ಮೊದಲ ಚಿತ್ರಗೀತೆಯಿದು. |
೧೯೬೪ರಲ್ಲಿ, ನವಕೋಟಿನಾರಾಯಣ (ಭಕ್ತ ಪುರಂದರದಾಸ) ಚಲನಚಿತ್ರದಲ್ಲಿ ಕೆಲವು ಕೀರ್ತನೆ ಗಳನ್ನು ಹಾಡಿದ್ದಾರೆ. |
ಜೀವನ ಚೈತ್ರ ಚಿತ್ರದಲ್ಲಿನ ನಾದಮಯ ಈ ಲೋಕವೆಲ್ಲಾ ಹಾಡಿನ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿಯನ್ನು ಪಡೆದರು. |
೨೦೦೩ರಲ್ಲಿ ಬಿಡುಗಡೆಯಾದ ಅಭಿ ಚಿತ್ರದ "ವಿಧಿ ಬರಹ ಎಂಥ ಘೋರ" ಹಾಗು ಅದೇ ವರ್ಷದ ಚಿಗುರಿದ ಕನಸು ಚಿತ್ರದ "ಬಂಧುವೇ ಓ ಬಂಧುವೇ" ಇವರು ಹಾಡಿದ ಇತ್ತೀಚಿನ ಚಿತ್ರಗೀತೆಗಳಾಗಿರುತ್ತವೆ. |
ಚಿತ್ರಗೀತೆಗಳಷ್ಟೇ ಅಲ್ಲದೆ ಹಲವಾರು ಭಕ್ತಿಗೀತೆಗಳನ್ನು ಹಾಡಿರುವರು. ಕನ್ನಡವೇ ಸತ್ಯ, ಅನುರಾಗ, ಮಂಕುತಿಮ್ಮನ ಕಗ್ಗ - ರಾಜ್ ಕಂಠದಲ್ಲಿ ಮೂಡಿ ಬಂದ ಭಾವಗೀತೆ ಸಂಕಲನಗಳು. |
ರಾಜ್ ಕುಮಾರ್ ಅವರು ತಮ್ಮ ಹೆಚ್ಚಿನ ಹಾಡುಗಳನ್ನು ಎಸ್. ಜಾನಕಿ ಮತ್ತು ವಾಣಿ ಜಯರಾಂ ಅವರೊಂದಿಗೆ ಹಾಡಿದ್ದಾರೆ. ಅಲ್ಲದೆ, ಪಿ. ಸುಶೀಲ, ಬೆಂಗಳೂರು ಲತಾ, ರತ್ನಮಾಲ ಪ್ರಕಾಶ್, ಮಂಜುಳಾ ಗುರುರಾಜ್, ಬಿ. ಆರ್. ಛಾಯಾ, ಕಸ್ತೂರಿ ಶಂಕರ್, ಚಿತ್ರಾ, ಸುಲೋಚನಾ ಅವರೊಂದಿಗೂ ಯುಗಳಗೀತೆಗಳನ್ನು ಹಾಡಿದ್ದಾರೆ. |
ಹುಟ್ಟಿದರೇ ಕನ್ನಡನಾಡ್ನಲ್ ಹುಟ್ಟಬೇಕು, ಮೆಟ್ಟಿದರೇ, ಕನ್ನಡ ಮಣ್ಣನ್ ಮೆಟ್ಟಬೇಕು ಗೀತೆಯನ್ನು ಸಾಮಾನ್ಯವಾಗಿ ಹೋದೆಡೆಯಲ್ಲೆಲ್ಲಾ ಹಾಡುತ್ತಿದ್ದರು. ತಮ್ಮ 'ದಾದಾ ಸಾಹೇಬ್ ಫಾಲ್ಕೆ ಪುರಸ್ಕಾರ', ವನ್ನು ದೆಹಲಿಯಲ್ಲಿ ಪಡೆದ ಬಳಿಕ, ಮುಂಬಯಿ ಗೆ ಭೇಟಿಕೊಟ್ಟಾಗ, 'ಕರ್ನಾಟಕ ಸಂಘ' ದ ರಂಗಮಂಚದ ಮೇಲೆ, ಮೇಲಿನ ಗೀತೆಯನ್ನು ಅವರ ಮಕ್ಕಳ ಸಮೇತ ಕುಣಿದು-ಕುಪ್ಪಳಿಸಿ ಹಾಡಿದ ಸಡಗರ ಇನ್ನೂ ಮುಂಬಯಿ ನಗರದ, ಕನ್ನಡ ರಸಿಕರ ಮನದಲ್ಲಿ ಹಸಿರಾಗಿ ಉಳಿದಿದೆ. |
ರಾಷ್ಟ್ರಕವಿ ಕುವೆಂಪು ರಚಿಸಿದ 'ಕನ್ನಡವೇ ಸತ್ಯ' ಹಾಡನ್ನು ಡಾ. ರಾಜಕುಮಾರ್ ಭಾವಗೀತೆಯ ಮೇರು ಕಲಾವಿದ ಡಾ. ಸಿ.ಅಶ್ವತ್ಥ್ ಅವರ ಸಂಗೀತ ನಿರ್ದೇಶನದಲ್ಲಿ ಹಾಡಿದ್ದಾರೆ. ಇದು ಮೈಸೂರು ಅನಂತಸ್ವಾಮಿಯವರ ಆವೃತ್ತಿಗಿಂತಲೂ ಭಾರೀ ಜನಪ್ರಿಯತೆ ಗಳಿಸಿತು. |
ಕನ್ನಡಪರ ಚಳುವಳಿಗಳಲ್ಲಿ ಡಾ. ರಾಜ್ |
ಬದಲಾಯಿಸಿ |
ಗೋಕಾಕ್ ಚಳುವಳಿಯಲ್ಲಿ ಡಾ. ರಾಜ್ |
ಗೋಕಾಕ್ ವರದಿಯು ಕನ್ನಡವನ್ನು ಪ್ರಾಥಮಿಕ ಶಿಕ್ಷಣದಲ್ಲಿ ಕಡ್ಡಾಯವಾಗಿ ಅಳವಡಿಸಿಕೊಳ್ಳುವುದು ಹಾಗು ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಕನ್ನಡ ಭಾಷೆಗೆ ಕೊಡುವುದರ ಬಗ್ಗೆ ಸಿದ್ಧವಾಗಿತ್ತು. ಆದರೆ, ಈ ವರದಿಯು ಜಾರಿಗೆ ಬಂದಿರಲಿಲ್ಲ. ೧೯೮೧ರಲ್ಲಿ, ಪಾಟೀಲ ಪುಟ್ಟಪ್ಪ, ಚಂದ್ರಶೇಖರ ಪಾಟೀಲ್ ಮುಂತಾದ ಸಾಹಿತಿಗಳು, ಕನ್ನಡ ವಿದ್ಯಾರ್ಥಿಗಳು, ಹಲವು ಸಂಘಸಂಸ್ಥೆಗಳು ಗೋಕಾಕ್ ವರದಿಯನ್ನು ಜಾರಿಗೊಳಿಸುವಂತೆ ಚಳುವಳಿಯನ್ನು ಪ್ರಾರಂಭ ಮಾಡಿದರು. |
ಇದೇ ಚಳುವಳಿಯು ಗೋಕಾಕ್ ಚಳುವಳಿ ಎಂದೇ ಹೆಸರಾಯಿತು. |
ಚಳುವಳಿಯು ಪ್ರಾರಂಭಗೊಂಡು ಹಲವಾರು ದಿನಗಳು ಕಳೆದರೂ, ಜನಸಾಮಾನ್ಯರಿಂದ ಉತ್ಸಾಹದ ಪ್ರತಿಕ್ರಿಯೆ ಕಂಡುಬರಲಿಲ್ಲ. ಈ ಸಮಯದಲ್ಲಿ, ಡಾ. ರಾಜ್ ಅವರನ್ನು ಚಳುವಳಿಗೆ ಆಹ್ವಾನಿಸಿ, ಚಳುವಳಿಯ ಬಲವರ್ಧನೆ ಮಾಡಬೇಕೆಂದು ಕೋರಲಾಯಿತು. ಡಾ. ರಾಜ್ ನೇತೃತ್ವದಲ್ಲಿ ಕನ್ನಡ ಚಿತ್ರರಂಗ, ಗೋಕಾಕ್ ಚಳುವಳಿಗೆ ಸಂಪೂರ್ಣ ಸಹಕಾರ ನೀಡಲು ಪ್ರಕಟಿಸಿ, ರಾಜ್ಯಾದ್ಯಂತ ಪ್ರವಾಸ ಕೈಗೊಂಡಿತು. |
ಹಲವಾರು ಸಭೆಗಳು, ಭಾಷಣಗಳು ಕರ್ನಾಟಕದ ಪ್ರಮುಖ ನಗರಗಳಲ್ಲಿ ಜರುಗಿದವು. ಕರ್ನಾಟಕದ ಜನತೆ ಚಳುವಳಿಗೆ ಹಿಂದೆಂದಿಗಿಂತಲೂ ಹೆಚ್ಚಿನ ಉತ್ಸಾಹದಿಂದ ಪ್ರತಿಕ್ರಿಯಿಸಿದರು, ಭಾಗವಹಿಸಿದರು. ಕನ್ನಡದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು, ಅಭಿಮಾನ ಬೆಳೆಸಲು, ಕನ್ನಡ ಭಾಷೆಗೆ ಸಿಗಬೇಕಾದ ಹಕ್ಕುಗಳು, ಸೌಲಭ್ಯಗಳನ್ನು ಆಗಿನ ಕರ್ನಾಟಕ ಸರ್ಕಾರಕ್ಕೆ ಮನದಟ್ಟು ಮಾಡಿಕೊಡಲು, ಡಾ. ರಾಜ್ ಅವರ ಭಾಷಣಗಳು ಹಾಗು ಚಳುವಳಿಯ ನೇತೃತ್ವ ಸಹಾಯಕಾರಿಯಾದವು. ಗುಂಡೂರಾವ್ ನೇತೃತ್ವದ ಆಗಿನ ಕರ್ನಾಟಕ ಸರ್ಕಾರವು ಚಳುವಳಿಯ ತೀವ್ರತೆಗೆ ಸ್ಪಂದಿಸಿ, ಗೋಕಾಕ್ ವರದಿಯನ್ನು ಜಾರಿಗೊಳಿಸಿತು. |
ಪ್ರಶಸ್ತಿ/ ಪುರಸ್ಕಾರಗಳು/ಬಿರುದುಗಳು |
ಬದಲಾಯಿಸಿ |
ಕರ್ನಾಟಕ ರತ್ನ, ಪದ್ಮಭೂಷಣ ಡಾ. ರಾಜ್‌ಕುಮಾರ್ |
ಪ್ರಶಸ್ತಿಗಳು |
ಬದಲಾಯಿಸಿ |
ಪದ್ಮಭೂಷಣ (ಭಾರತ ಸರ್ಕಾರದಿಂದ) |
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ (೧೯೯೫ರಲ್ಲಿ ಭಾರತ ಸರ್ಕಾರದಿಂದ) |
ಕರ್ನಾಟಕ ರತ್ನ (ಕರ್ನಾಟಕ ಸರ್ಕಾರ) |
ರಾಷ್ಟ್ರಪ್ರಶಸ್ತಿ (ಜೀವನ ಚೈತ್ರ ಚಿತ್ರದಲ್ಲಿನ 'ನಾದಮಯ ಈ ಲೋಕವೆಲ್ಲಾ' ಹಾಡಿನ ಗಾಯನಕ್ಕೆ) |
ಅತ್ಯುತ್ತಮ ನಟ - ಫಿಲ್ಮ್‌ಫೇರ್ ಪ್ರಶಸ್ತಿ (ಹತ್ತು ಬಾರಿ) |
ಅತ್ಯುತ್ತಮ ನಟ - ರಾಜ್ಯಪ್ರಶಸ್ತಿ (ಒಂಭತ್ತು ಬಾರಿ) |
ಕೆಂಟಕಿ ಕರ್ನಲ್ (ಅಮೆರಿಕದ ಕೆಂಟಕಿ ರಾಜ್ಯದ ಗವರ್ನರ್ ೧೯೮೫ರಲ್ಲಿ ಬೆಂಗಳೂರಲ್ಲಿ ನೀಡಿದರು) |
ನಾಡೋಜ ಪ್ರಶಸ್ತಿ (ಕನ್ನಡ ವಿಶ್ವವಿದ್ಯಾಲಯ, ಹಂಪಿ) |
ಗುಬ್ಬಿ ವೀರಣ್ಣ ಪ್ರಶಸ್ತಿ (ಕರ್ನಾಟಕ ಸರ್ಕಾರ) |
ಕಲಾ ಕೌಸ್ತುಭ (ವೃತ್ತಿ ರಂಗಭೂಮಿಗೆ ಸಲ್ಲಿಸಿದ ಸೇವೆಗೆ, ಕರ್ನಾಟಕ ಸರ್ಕಾರದಿಂದ) |
ಪದವಿಗಳು |
ಬದಲಾಯಿಸಿ |
ಗೌರವ ಡಾಕ್ಟರೇಟ್(ಮೈಸೂರು ವಿಶ್ವವಿದ್ಯಾಲಯ) |
ಬಿರುದುಗಳು |
ಬದಲಾಯಿಸಿ |
ಅಭಿನಯ ಕಲಾಶ್ರೀ |
ಅಭಿನಯ ಕೇಸರಿ |
ಅಭಿನಯ ಚಕ್ರೇಶ್ವರ |
ಅಭಿನಯ ನೃಪತುಂಗ |
ಅಭಿನಯ ಬ್ರಹ್ಮ |
ಅಭಿನಯ ಭಗೀರಥ |
ಅಭಿನಯ ಭಾರ್ಗವ |
ಅಭಿನಯ ರತ್ನ |
ಅಭಿನಯ ವಾಲ್ಮೀಕಿ |
ಅಭಿನಯ ಶಿರೋಮಣಿ |
ಅಭಿನಯ ಸಂಜಾತ |
ಅಭಿನಯ ಸವ್ಯಸಾಚಿ |
ಅಭಿನಯ ಸಿಂಹ |
ಅಭಿನಯ ಸೃಷ್ಟಿಕರ್ತ |
ಅಮರ ಜೀವಿ |
ಅಮರ ಜ್ಯೋತಿ |
ಕನ್ನಡ ಕಂಠೀರವ |
Subsets and Splits
No community queries yet
The top public SQL queries from the community will appear here once available.