text
stringlengths
0
2.67k
೨೩-೭-೨೦೧೪
ಬದಲಾಯಿಸಿ
ವಿಜಯ ಕರ್ನಾಟಕ ವರದಿ--೨೩-೭-೨೦೧೪
(ವಿರೂಪಾಕ್ಷ ಹೊಕ್ರಾಣಿ ಬೆಂಗಳೂರು)
ಜೂ.1ರಿಂದ ಜು.22ರವರೆಗೆ ರಾಜ್ಯದಲ್ಲಿ ಶೇ.25ರಷ್ಟು ಮಳೆ ಕೊರತೆ ಉಂಟಾಗಿದೆ. ಸದ್ಯ ಕರಾವಳಿ ಮತ್ತು ಮಲೆನಾಡಿನ ಕೆಲ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುತ್ತಿದ್ದರೆ, ಬಹುತೇಕ ಜಿಲ್ಲೆಗಳಲ್ಲಿ ಮೋಡ ಕವಿದರೂ ಹನಿಗಳಾಗಿ ನೆಲಕ್ಕೆ ಬೀಳುತ್ತಿಲ್ಲ.
ಕೃಷಿ ಇಲಾಖೆ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 74 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದೆ. ಆದರೆ, ಇದುವರೆಗೆ ಕೇವಲ 30.20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಶೇ.41ರಷ್ಟು ಪೂರ್ಣಗೊಂಡಿದೆ. ಆದರೆ, ಕಳೆದ ವರ್ಷ ಇದೇ ಅವಧಿಗೆ 37.54 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು ಗಮನಿಸಿದರೆ 7 ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬಿತ್ತನೆ ಕುಂಠಿತವಾಗಿದೆ.
ಭತ್ತ 10.93 ಲಕ್ಷ ಹೆಕ್ಟೇರ್‌ನಲ್ಲಿ ವಿಸ್ತೀರ್ಣದ ಗುರಿ ಇದ್ದರೆ ಇದುವರೆಗೆ ಕೇವಲ 1.77 ಲಕ್ಷ ಹೆಕ್ಟೇರ್‌ನಲ್ಲಿ ನಾಟಿಯಾಗಿದೆ. ಜೋಳ, ರಾಗಿ, ಮೆಕ್ಕೆಜೋಳ, ಸಜ್ಜೆ ಸೇರಿದಂತೆ ಒಟ್ಟು ಏಕದಳ ಧಾನ್ಯಗಳ ವಿಸ್ತೀರ್ಣದ ಗುರಿ 35.18 ಲಕ್ಷ ಹೆಕ್ಟೇರ್ ಇದ್ದು, 10.83 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ತೊಗರಿ, ಹುರುಳಿ, ಅಲಸಂದೆ, ಹೆಸರು ಸೇರಿದಂತೆ ದ್ವಿದಳ ಧಾನ್ಯಗಳ ಗುರಿ 15.36 ಲಕ್ಷ ಹೆಕ್ಟೇರ್ ಇದ್ದರೆ, 5.80 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಸೂರ್ಯಕಾಂತಿ, ಶೇಂಗಾ, ಎಳ್ಳು, ಸೋಯಾ ಅವರೆ ಸೇರಿದಂತೆ ಎಣ್ಣೆಕಾಳು ಬೆಳೆಗಳ ವಿಸ್ತೀರ್ಣ 12.49 ಲಕ್ಷ ಹೆಕ್ಟೇರ್ ಗುರಿಗೆ 4.61 ಲಕ್ಷ ಹೆಕ್ಟೇರ್ ಬೀಜ ಕಂಡಿದೆ.
ಮುಂಗಾರು ಅವಧಿಯಲ್ಲಿ ಹೆಚ್ಚಾಗಿ ಬೆಳೆಯುವ ಹತ್ತಿ ಬಿತ್ತನೆ ಇದುವರೆಗೆ ಶೇ.74ರಷ್ಟು ಪೂರ್ಣಗೊಂಡಿದೆ. ಪ್ರಸಕ್ತ ಮುಂಗಾರಿನಲ್ಲಿ 4.91 ಲಕ್ಷ ಹೆಕ್ಟೇರ್ ಗುರಿ ಹೊಂದಿದ್ದರೆ, ಈಗಾಗಲೇ 3.63 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಅದೇ ರೀತಿ ಕಬ್ಬು ವಿಸ್ತೀರ್ಣದ ಗುರಿ 4.95 ಲಕ್ಷ ಹೆಕ್ಟೇರ್ ಇದ್ದರೆ, ಈಗಾಗಲೇ 4.46 ಲಕ್ಷ ಹೆಕ್ಟೇರ್‌ನಲ್ಲಿ ನಾಟಿಯಾಗಿ ಶೇ.90ರಷ್ಟು ಪೂರ್ಣಗೊಂಡಿದೆ. ಜೂನ್ ಅಂತ್ಯದಲ್ಲಿ ಸುರಿದ ಮಳೆಗೆ ರೈತರು ಹತ್ತಿ ಬಿತ್ತನೆ ಮಾಡಿದ್ದಾರೆ. ಈಗ ಕೆಲವೆಡೆ ಮೊಳಕೆಯೊಡೆದು ಪೈರು ಬಂದಿದೆ. ಆದರೀಗ ಮಳೆ ಇಲ್ಲದಿರುವುದರಿಂದ ಬೆಳೆ ಒಣಗುವ ಆತಂಕ ಎದುರಾಗಿದೆ. ಅಲ್ಲದೆ, ಬೇರುಗಳನ್ನು ಹುಳುಗಳು ತಿಂದುಹಾಕುತ್ತಿರುವ ಪ್ರಕರಣಗಳೂ ಕಾಣಿಸಿಕೊಳ್ಳುತ್ತಿವೆ.(೨೩-೭-೨೦೧೪)
ನೀರಾವರಿ ದೊಡ್ಡ ಅಣೆಕಟ್ಟೆಗಳು
ಬದಲಾಯಿಸಿ
ರಾಜ್ಯದ ದೊಡ್ಡ ಜಲಾಶಯಗಳು
ಎಲ್ಲಾ ನೀರಾವರಿಯ ಯೋಜನೆಯ ಜಲಾಶಯಗಳ ಒಟ್ಟು ಗರಿಷ್ಠ ಸಾಮರ್ಥ್ಯ 864 ಟಿಎಂಸಿ ಅಡಿ ಇದೆ, ಲಿಂಗನ ಮಕ್ಕಿ ಮತ್ತು ಕಾಳಿ ನದಿಗಳ ಅಣೆಕಟ್ಟುಗಳು ವಿದ್ಯುತ್ ಉತ್ಪಾದನೆಗೆ ಮಾತ್ರ ಮೀಸಲು.
ಇಂದಿನ ಮಟ್ಟ 11-7-2014:ಕಳೆದ ವರ್ಷ-11-7-2013
ಜಲಾಶಯ ಗರಿಷ್ಟ ಮಟ್ಟ ಇಂದಿನ ಮಟ್ಟ ಕಳೆದ ವರ್ಷದ ಮಟ್ಟ
ಹಾರಂಗಿ 2859.00; 2824.08 2857.14
ಹೇಮಾವತಿ 2922.00 2875.49 2888.00
ಕೆ.ಆರ್.ಸಾಗರ 124.80; 81.05 91.30
ಕಬಿನಿ 2284.00; 2269.54 2269.66
ಭದ್ರ 2158.00; 2111.04 2108.41
ತುಂಗಭದ್ರ 1633.00; 1594.28 1602.33
ಘಟಪ್ರಭ 2175.00; 2068.65 2094.36
ಮಲಪ್ರಭ 2079.50; 2035.76 2039.90
ಆಲಮಟ್ಟಿ 1704.81; 1664.62 1681.84
ನಾರಾಯಣಪುರ 1615.00 1301.04 1599.47
ಕರ್ನಾಟಕದಲ್ಲಿ ಅಣೆಕಟ್ಟೆಗಳು
ಬದಲಾಯಿಸಿ
ಗುಲಾಬಿ ಬಣ್ಣದಲ್ಲಿರುವುದು ಕೇವಲ ವಿದ್ಯತ್ ಉತ್ಪಾದನೆಗೆ ಮಾತ್ರಾ ಉಪಯೋಗ:
ಕ್ರ.ಸಂ ಅಣೆಕಟ್ಟೆ ಹೆಸರು ನದಿ ಹೆಸರು. ನದಿ ವ್ಯವಸ್ಥೆ ಜಲ ಸಂಗ್ರಹ; (ಟಿಎಂಸಿ.ಅಡಿ)
1 ಲಿಂಗನ ಮಕ್ಕಿ ಶರಾವತಿ ಪಶ್ಚಿಮಕ್ಕೆ ಹರಿವು 156.62
2 ಸೂಪ ಅಣೆಕಟ್ಟು ಕಾಳಿ ಪಶ್ಚಿಮಕ್ಕೆ ಹರಿವು 149
3 ಆಲಮಟ್ಟಿ ಕೃಷ್ಣಾ ಕೃಷ್ಣಾ ಪೂರ್ವಕ್ಕೆ 123.25
4 ಹೊಸಪೇಟೆ ತುಂಗಭದ್ರಾ ಕೃಷ್ಣಾ 100
5 ಭದ್ರಾ ಅಣೆಕಟ್ಟೆ ಭದ್ರಾ ಕೃಷ್ಣಾ 71.5
6 ಘಟಪ್ರಭಾ ಘಟಪ್ರಭಾ ಕೃಷ್ಣಾ 51
7 ಕೆ.ಆರ್.ಎಸ್. ಕಾವೇರಿ ಕಾವೇರಿ 49.45
8 ಬಸವಸಾಗರ ಕೃಷ್ಣಾ ಕೃಷ್ಣಾ 37.96
9 ಮಲಪ್ರಭಾ ಮಲಪ್ರಭಾ ಕೃಷ್ಣಾ 37.73
10 ಹೇಮಾವತಿಡ್ಯಾಮು ಹೇಮಾವತಿ ಕಾವೇರಿ 37
11 ಮಾಣಿ ವರಾಹಿ ಪಶ್ಚಿಮಕ್ಕೆ ಹರಿವು 31
12 ಕಬಿನಿ ಕಬಿನಿ ಕಾವೇರಿ 17
ಒಟ್ಟು 704.89
ವಿದ್ಯುತ್ ಯೋಜನೆ ನೀರು 336.62-ಟಿಎಂಸಿ.ಅಡಿ ಉಳಿದ ನೀರು 368.27
ಒಂಭತ್ತು ಅಣೆಕಟ್ಟೆಯ 368.27 ಟಿಎಂಸಿ ಅಡಿ ನೀರಿನಲ್ಲೂ ಕೆಲವು ಭಾಗ ವಿದ್ಯುತ್‍ಉತ್ಪಾದನೆಗೆ ಉಪಯೋಗವಾಗುವುದು.
[೧]
ಜಲಾಶಯಗಳಲ್ಲಿ ಹೂಳು ಸಮಸ್ಯೆ
ಬದಲಾಯಿಸಿ
2014
ಕುಡಿಯುವ ನೀರು, ನೀರಾವರಿ, ವಿದ್ಯುತ್‌ ಉತ್ಪಾದನೆ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ನಿರ್ಮಿಸಲಾಗಿರುವ ರಾಜ್ಯದ ಪ್ರಮುಖ ಜಲಾಶಯಗಳು ಹೂಳಿನ ಸಮಸ್ಯೆಯನ್ನು ಎದುರಿಸುತ್ತಿವೆ. ಇದರಿಂದಾಗಿ ಅವುಗಳ ನೀರಿನ ಸಂಗ್ರಹ ಸಾಮರ್ಥ್ಯ ಕಡಿಮೆಯಾಗುತ್ತಿವೆ.
ವಿಧಾನಮಂಡಲದ ಪ್ರಸಕ್ತ ೨೦೧೪/2014 ರ ಡಿಸೆಂಬರ್, ಅಧಿವೇಶನದಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅವರು ನೀಡಿರುವ, ರಾಜ್ಯದ ವಿವಿಧ ಜಲಾಶಯಗಳಲ್ಲಿ ಶೇಖರಣೆಯಾಗಿರುವ ಹೂಳಿನ ಪ್ರಮಾಣದ ಮಾಹಿತಿಯನ್ನು ಅವಲೋಕಿಸಿದರೆ ಈ ವಿಷಯ ಸ್ಪಷ್ಟವಾಗುತ್ತದೆ. ನೀರಾವರಿ ಯೋಜನೆ(ದೊಡ್ಡ ಮತ್ತು ಚಿಕ್ಕ ಪ್ರಮಾ¬ಣದ್ದು) ಉದ್ದೇಶಗಳಿಗೆ ನಿರ್ಮಿಸಲಾಗಿರುವ 57 ಜಲಾ¬ಶಯಗಳ ಪೈಕಿ 14ರಲ್ಲಿ ಹೂಳಿನ ಸಮಸ್ಯೆ ಇದೆ. ಇವುಗಳಲ್ಲಿ ಕೆಲವು ಜಲಾಶಯಗಳಲ್ಲಿನ ಸಮಸ್ಯೆ ಗಂಭೀರ ಸ್ವರೂಪದ್ದಾಗಿದೆ.
ತುಂಗಭದ್ರೆಗೆ ಮೊದಲ ಸ್ಥಾನ
ಹೂಳಿನ ಸಮಸ್ಯೆ ಎದುರಿಸುತ್ತಿರುವ ಜಲಾಶಯಗಳ ಪಟ್ಟಿಯಲ್ಲಿ ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯಕ್ಕೆ ಮೊದಲ ಸ್ಥಾನ. ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಅಂದಾಜು 12 ಲಕ್ಷ ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಉದ್ದೇಶದಿಂದ ನಿರ್ಮಿಸಲಾ¬ಗಿ¬ರುವ ಈ ಜಲಾಶಯದಲ್ಲಿ ಬರೋಬ್ಬರಿ 31.616 ಟಿಎಂಸಿ ಅಡಿ ಹೂಳಿದೆ. 1953ರಲ್ಲಿ ಬಳಕೆಗೆ ಮುಕ್ತವಾದಾಗ 133 ಟಿಎಂಸಿ ಅಡಿಗಳಷ್ಟು ನೀರನ್ನು ಸಂಗ್ರ¬ಹಿಸುವ ಸಾಮರ್ಥ್ಯ ಹೊಂದಿದ್ದ ಈ ಜಲಾಶಯದಲ್ಲಿ ಈಗ ಕೇವಲ 100.855 ಟಿಎಂಸಿ ಅಡಿ ನೀರು ಸಂಗ್ರಹವಾಗುತ್ತಿದೆಯಷ್ಟೇ.
ಯಾದಗಿರಿ ಜಿಲ್ಲೆಯಲ್ಲಿರುವ ನಾರಾಯಣಪುರ ಜಲಾಶಯದಲ್ಲಿ 10 ಟಿಎಂಸಿ ಅಡಿಗಳಷ್ಟು ಕೆಸರು ಮಣ್ಣು ತುಂಬಿದೆ. ಸದ್ಯ ಇದರ ನೀರಿನ ಸಂಗ್ರಹ ಸಾಮರ್ಥ್ಯ 32.313 ಟಿಎಂಸಿ ಅಡಿ.
ಕೃಷ್ಣೆಯ ಮಡಿಲಲ್ಲಿ
ಉತ್ತರ ಕರ್ನಾಟಕ ಜನರ ಜೀವನಾಡಿಯಾಗಿರುವ ಆಲಮಟ್ಟಿ ಜಲಾಶಯವೂ ಈ ಸಮಸ್ಯೆ¬ಯಿಂದ ಹೊರ¬ತಾಗಿಲ್ಲ. 123.081 ಟಿಎಂಸಿ ಅಡಿಗಳಷ್ಟು ನೀರನ್ನು ಹಿಡಿದಿಡುವ ತಾಕತ್ತಿರುವ ಈ ಜಲಾಶಯದ ತಳದಲ್ಲಿ 5 ಟಿಎಂಸಿ ಅಡಿಗಳಷ್ಟು ಹೂಳು ಕೂತಿದೆ. ಮುಂದಿನ ಕೆಲವು ವರ್ಷಗಳಲ್ಲಿ ಈ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ ಎಂಬ ಆತಂಕ ಈ ಭಾಗದ ಜನರದ್ದು. 49.5 ಟಿಎಂಸಿ ನೀರು ಅಡಿಯಷ್ಟು ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಮಂಡ್ಯ ಜಿಲ್ಲೆಯ ಕೃಷ್ಣ¬ರಾಜ ಸಾಗರ ಜಲಾಶಯದಲ್ಲೂ ಮೂರು ಟಿಎಂಸಿ ಅಡಿ ಹೂಳಿದೆ.
ಹೂಳು ತೆರವು ಸವಾಲು: ಜಲಾಶಯಗಳಲ್ಲಿ ತುಂಬಿರುವ ಹೂಳನ್ನು ತೆಗೆಯುವುದು ಬಹು ದೊಡ್ಡ ಸವಾಲು. ತುಂಗಭದ್ರಾ ಜಲಾಶಯದಲ್ಲಿ ಶೇಖರವಾಗಿರುವ ಭಾರಿ ಪ್ರಮಾಣದ ಹೂಳನ್ನು ತೆಗೆಯುವ ಬಗ್ಗೆ ರಾಜ್ಯ ಸರ್ಕಾರ ಹಲವು ವರ್ಷಗಳಿಂದ ಚಿಂತನೆ ನಡೆಸುತ್ತಿದೆ. ಇದಕ್ಕಾಗಿ ಅಧ್ಯಯನವನ್ನೂ ನಡೆಸಿದೆ. ಕೆಲವು ಖಾಸಗಿ ಕಂಪೆನಿಗಳ ಸಹಕಾರವನ್ನು ಈ ಹಿಂದೆ ಕೇಳಿತ್ತು. ಆದರೆ, ಪ್ರಾಯೋಗಿಕವಾಗಿ ಇದು ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಅದೇ ಕಾರಣಕ್ಕೆ ಯಾವ ಕಂಪೆನಿಗಳೂ ಮುಂದೆ ಬರುತ್ತಿಲ್ಲ ಎಂದು ನೀರಾವರಿ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ
ಆದರೂ, ರಾಜ್ಯ ಸರ್ಕಾರ ಈ ಯೋಚನೆ ಕೈ ಬಿಟ್ಟಿಲ್ಲ. ಜಲಾ¬ಶಯದ ಸಂಗ್ರಹಣಾ ಸಮಾರ್ಥ್ಯವನ್ನು ಮರುಸ್ಥಾಪಿಸಲು ಪರ್ಯಾಯ ತಾಂತ್ರಿಕ ಪರಿ¬ಹಾರ¬ಗಳನ್ನು ಒದಗಿಸಲು ಮತ್ತು ಪರ್ಯಾಯ ಪ್ರಸ್ತಾವನೆಗಳ ವಿವರ¬ವಾದ ಯೋಜನಾ ವರದಿಯನ್ನು ತಯಾರಿಸಲು ಜಾಗತಿಕ ಮಟ್ಟದ ಕಂಪನಿಗಳಿಗೆ ಆಹ್ವಾನಿಸಲಾಗಿದೆ ಎಂದು ಎಂ.ಬಿ. ಪಾಟೀಲ ಹೇಳಿದ್ದಾರೆ.
ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಈ ವಿಷಯದ ಬಗ್ಗೆ ಮಾತನಾಡಿದ್ದ ಅವರು, ಒಂದು ವೇಳೆ ತುಂಗಭದ್ರಾ ಜಲಾಶಯದಿಂದ ಹೂಳನ್ನು ತೆಗೆದರೆ ಅದನ್ನು ಹಾಕಲು 60 ಸಾವಿರ ಎಕರೆ ಜಮೀನು ಬೇಕು ಎಂದು ಹೇಳಿದ್ದರು.
ಪರ್ಯಾಯ ಮಾರ್ಗ ಅಗತ್ಯ
ಜಲಾಶಯಗಳಲ್ಲಿ ಹೂಳು ತುಂಬುವುದು ಸಹಜ. ಸಣ್ಣ ಪ್ರಮಾಣದಲ್ಲಿ ಹೂಳಿದ್ದರೆ ತೆರವುಗೊಳಿಸಬಹುದು. ಆದರೆ, ಭಾರಿ ಪ್ರಮಾಣದಲ್ಲಿದ್ದರೆ ಅದಕ್ಕೆ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡಬೇಕಾಗುತ್ತದೆ. ಜೊತೆಗೆ ಹೂಳು ಹಾಕಲು ನೂರಾರು ಎಕರೆ ಜಮೀನೂ ಬೇಕಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದಕ್ಕೆ ಖರ್ಚು ಮಾಡುವ ವೆಚ್ಚದಲ್ಲಿ ಹೊಸ ಅಣೆಕಟ್ಟೆಯನ್ನೇ ನಿರ್ಮಿಸಬಹುದು ಎಂಬ ಸಲಹೆಯನ್ನೂ ಅವರು ನೀಡುತ್ತಾರೆ.
ಹೂಳಿನ ಕಾರಣದಿಂದಾಗಿ ಜಲಾಶಯದಿಂದ ಹೋಗುವ ನೀರನ್ನು ಸಂಗ್ರಹಿಸಲು ಸಣ್ಣ ಅಣೆಕಟ್ಟೆಗಳನ್ನು ನಿರ್ಮಿಸುವುದು, ಜಲಾಶಯದಲ್ಲಿ ಹೂಳು ತುಂಬುವಿಕೆಯನ್ನು ತಡೆ¬ಯುವ ನಿಟ್ಟಿನಲ್ಲಿ ನದಿ ಪಾತ್ರದಲ್ಲಿ ಗಿಡಗಳನ್ನು ನೆಡುವುದು (ಇದ¬ರಿಂದ ಮಣ್ಣಿನ ಸವೆತ ಅಥವಾ ಕೊರೆತ ನಿಯಂತ್ರಿಸ¬ಬಹುದು) ಸೇರಿದಂತೆ ಇತರ ಪರ್ಯಾಯ ಮಾರ್ಗಗಳತ್ತ ಸರ್ಕಾರ ಚಿಂತಿಸುವ ಅಗತ್ಯ ಇದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ೨.
ಜಲಾಶಯದಲ್ಲಿ ನೀರು ಮತ್ತು ಹೂಳು೨
ಬದಲಾಯಿಸಿ
ಕುಡಿಯುವ ನೀರು, ನೀರಾವರಿ, ವಿದ್ಯುತ್‌ ಉತ್ಪಾದನೆ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ನಿರ್ಮಿಸಲಾಗಿರುವ ರಾಜ್ಯದ ಪ್ರಮುಖ ಜಲಾಶಯಗಳು ಹೂಳಿನ ಸಮಸ್ಯೆಯನ್ನು ಎದುರಿಸುತ್ತಿವೆ. ಇದರಿಂದಾಗಿ ಅವುಗಳ ನೀರಿನ ಸಂಗ್ರಹ ಸಾಮರ್ಥ್ಯ ಕಡಿಮೆಯಾಗುತ್ತಿವೆ.ತುಂಗ¬ಭದ್ರಾ ಜಲಾಶಯದಲ್ಲಿ ಶೇಖರವಾಗಿ¬ರುವ ಭಾರಿ ಪ್ರಮಾಣದ ಹೂಳನ್ನು ತೆಗೆ¬ಯುವ ಬಗ್ಗೆ ರಾಜ್ಯ ಸರ್ಕಾರ ಹಲವು ವರ್ಷ¬ಗ¬ಳಿಂದ ಚಿಂತನೆ ನಡೆಸುತ್ತಿದೆ.
ಅದರ ಪಟ್ಟಿ ಕೆಳಗೆ ಕೊಟ್ಟಿದೆ
(ಪ್ರಜಾವಾಣಿಯಲ್ಲಿ ಕೊಟ್ಟಿರುವ ಈ ನೀರು ಸಂಗ್ರಹದ ಅಂಕಿ ಅಂಶಗಳಲ್ಲಿ ಕೆಲವು ಸರಯಿಲ್ಲ)
ಕ್ರಮ ಸಂಖ್ಯೆ ಜಲಾಶಯ ನೀರಿನ ಸಂಗ್ರಹ ಸಾಮರ್ಥ್ಯ ತುಂಬಿರುವ ಹೂಳು
. . ಟಿ.ಎಂ.ಸಿ.ಗಳಲ್ಲಿ ಟಿ.ಎಂ.ಸಿ.ಗಳಲ್ಲಿ
1 ತುಂಗಭದ್ರಾ 100.855 31.616
2 ಆಲಮಟ್ಟಿ 32.315 10.157
3 ಕೃಷ್ಣರಾಜ ಸಾಗರ 49.452 5.309
4 ಮಲಪ್ರಭಾ 37.73 2.744
5 ಹೇಮಾವತಿ 37.103 2.689
6 ಭದ್ರಾ 71.535 2.125
7 ಹಾರಂಗಿ 8.50 0.833
8 ಕಬಿನಿ 19.52 0.814
9 ವಾಟೆಹೊಳೆ 1.50 0.235
10 ಮಾರ್ಕೋನಹಳ್ಳಿ 2.401 0.136
11 ಹಿಪ್ಪರಗಿ 6.00 0.126
12 ತೀತಾ 0.242 0.005
ಒಟ್ಟು 367.153 56.789
1 ಟಿಎಮ್`ಸಿ ಅಡಿ ಎಂದರೆ(Tmcft is equal to): 28,316,846,592 ಲೀಟರ್`ಗಳು (liters)
1,000,000,000 ಘನ ಅಡಿ (cubic ft or) ಅಥವಾ 28,000,000 m3 -ಘನ ಮೀಟರ್.
22,956.841139 acre feet
2016 ಕೃಷಿ ಜಮೀನು ಕ್ಷೀಣ
ಬದಲಾಯಿಸಿ
8-3-2016
ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಟಿ.ಎನ್‌. ಪ್ರಕಾಶ್‌ ಕಮ್ಮರಡಿ ಹೇಳಿಕೆ:
ರಾಜ್ಯದಲ್ಲಿ ಪ್ರತಿವರ್ಷ 40 ರಿಂದ 50 ಸಾವಿರ ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯುವುದನ್ನು ಕೈ ಬಿಡಲಾಗುತ್ತಿದೆ. ಇದು ಆತಂಕಕಾರಿ ಬೆಳವಣಿಗೆ’; ಕಳೆದ 10 ವರ್ಷಗಳಲ್ಲಿ ರಾಜ್ಯದ 1.59 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಬೆಳೆ ಕಡಿಮೆಯಾಗಿದೆ. ವೈಜ್ಞಾನಿಕ ಹಾಗೂ ಒಟ್ಟು ಸಂಶೋಧನೆ ಮೂಲಕ ಬೆಳೆ ಬೆಳೆಯಬೇಕಿದೆ. ಕಾರ್ಮಿಕರ ಸಮಸ್ಯೆಗೆ ಪರಿಹಾರ ಹುಡುಕದೇ ಇದ್ದರೆ ಭತ್ತದ ಬೇಸಾಯ ಸೇರಿದಂತೆ ಒಣಬೇಸಾಯ ಉಳಿಯುವುದು ಕಷ್ಟ. ಕೇರಳದಲ್ಲಿ ಆದ ಪ್ರಯೋಗ ನಮ್ಮಲ್ಲಿ ಬಳಕೆಗೆ ಬಂದಿದ್ದೇ ಆದರೆ, ಅದರ ಉಪಯೋಗ ಸಿಕ್ಕಂತಾಗುತ್ತದೆ. ದೇಸೀ ತಳಿಯ ಜೀವವೈವಿಧ್ಯ ಇಲ್ಲಿನ ಭತ್ತದ ತಳಿಗಳಿಗಿದೆ. ಈ ಕುರಿತು ರಾಜ್ಯ, ದೇಶ ಚಿಂತಿಸಿದರೆ ಸಾಲದು ಜಗತ್ತೇ ಯೋಚಿಸಬೇಕಿದೆ.[೨]
2015-16 ಉತ್ಪಾದನೆ
ಬದಲಾಯಿಸಿ
ಮಾಹಿತಿ:ರಾಜ್ಯ ಆರ್ಥಿಕ ಸಮೀಕ್ಷೆ ೨೦೧೫-೧೬
2015-16 ಉತ್ಪಾದನೆ ಏಕದಳ ಧಾನ್ಯ ದ್ವಿದಳ ಧಾನ್ಯ ಒಟ್ಟು ಧಾನ್ಯ ಎಣ್ಣೆ ಕಾಳು -
ಬಿತ್ತನೆ ಪ್ರದೇಶ(ಲಕ್ಷ ಹೆಕ್ಟೇರು) 46 30 76 14 6
ಉತ್ಪಾದನೆ (ಲಕ್ಷ ಟನ್) 97.5 12.5 110 10 505
ಅನುದಾನ ಬಿಡುಗಡೆ 2014-15 2265 ಲಕ್ಷ
ಅನುದಾನ ವಚ್ಚ 2181ಲಕ್ಷ
[೩]