text
stringlengths
0
2.67k
ಜುಲೈ 2016 ಕರ್ನಾಟಕದಲ್ಲಿ ಕೃಷಿ
ಬದಲಾಯಿಸಿ
2-8-2016ರ ವರೆಗಿನ ಸಮೀಕ್ಷೆಯಂತೆ ರಾಜ್ಯದ ಕರಾವಳಿಯಲ್ಲಿ ಈ ವರ್ಷ ವಾಡಿಕೆಗಿಂತ ಶೇ 18ರಷ್ಟು ಹಾಗೂ ಮಲೆನಾಡಿನಲ್ಲಿ ಶೇ 26ರಷ್ಟು ಮಳೆ ಕೊರತೆ ಉಂಟಾಗಿದೆ. ಇದರಿಂದಾಗಿ ಭತ್ತದ ಬಿತ್ತನೆಗೆ ಭಾರಿ ಹಿನ್ನಡೆಯಾಗಿದೆ.
ರಾಜ್ಯದಲ್ಲಿ ಈ ವರ್ಷ 73 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯ ಗುರಿ ಇರಿಸಿಕೊಳ್ಳಲಾಗಿತ್ತು. ಈವರೆಗೆ 50.87 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿ ಶೇ 70ರಷ್ಟು ಸಾಧನೆಯಾಗಿದೆ. ಒಟ್ಟು 10.56 ಲಕ್ಷ ಹೆಕ್ಟೇರ್‌ನಲ್ಲಿ ಭತ್ತ ಬಿತ್ತನೆ ಗುರಿ ಇದೆ. ಆದರೆ, ಈವರೆಗೆ 3 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ.
ಅಂದರೆ ಕೇವಲ ಶೇ 28ರಷ್ಟು ಗುರಿ ಸಾಧನೆಯಾಗಿದೆ. ಭತ್ತದ ಕೃಷಿ ಹೆಚ್ಚಿರುವ ಪ್ರದೇಶಗಳಲ್ಲಿ ನಿರೀಕ್ಷಿತ ಮಳೆಯಾಗದಿರುವುದು ಹಾಗೂ ಜಲಾಶಯಗಳು ಭರ್ತಿಯಾಗದೆ ಇರುವುದು ಇದಕ್ಕೆ ಕಾರಣ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ವಿಶ್ಲೇಷಿಸುತ್ತಾರೆ.(2-8-2016)
ಧಾನ್ಯ ಬಿತ್ತನೆ ಬಿತ್ತನೆ ವಾಡಿಕೆ ಬಿತ್ತನೆ ಬಿತ್ತನೆ ಪುನರ್ವಿಮರ್ಶಿತ 2016
2015 2016 2-8-2016> ಗುರಿ ಒಟ್ಟು ಶೇಕಡಾ
ಲಕ್ಷ ಹೆಕ್ಟೇರ್‍ಗಳಲ್ಲಿ
ಭತ್ತ 1.42 1.30 13ಲಕ್ಷ ಹೆ.-> 10.56 2.99 28
ಏಕದಳ ಧಾನ್ಯ 6.88 7.52 ಜೋಳ 1.52 1.05 69
ಎಣ್ಣೆಕಾಳು 3.98 4.92 ಶೇಂಗಾ 6.31 4.12 65
ತೊಗರಿ 1.74 3.72 -> 8.51 10.22 120
ಉದ್ದು 0.55 0.51 ಮೆಕ್ಕೆಜೋಳ 11.91 11 92
ಹೆಸರು 2.16 2.32 ಸೂರ್ಯಕಾಂತಿ 2 1.09 54
ಹತ್ತಿ 0.68 1.03 -> 5.77 3.72 65
ಕಬ್ಬು 3.63 2.84 -> 4.62 3.63 79
ಒಟ್ಟು 17.06 19.24 ರಾಗಿ (11ಲಕ್ಷ ಹೆ.) 7.34 1.15 16
ಕೇಂದ್ರ ಕೃಷಿ ಸಚಿವಾಲಯ ಮಾಹಿತಿ:2-7-2016&2-8-2016:ಪ್ರಜಾವಾಣಿ,ವರದಿ.
ಬರ ನಿರೋಧಕ ತಳಿ ಸಂಶೋಧನೆ
ಬದಲಾಯಿಸಿ
ಸತತ ಬರಗಾಲದಿಂದ ಬೆಳೆ ನಷ್ಟ ಅನುಭವಿಸಿ ಕಂಗೆಟ್ಟಿರುವ ರೈತ ಸಮುದಾಯಕ್ಕೆ ಬರ ಮತ್ತು ರೋಗ ನಿರೋಧಕ ಶಕ್ತಿ ಹೊಂದಿದ ತಳಿಯ ಬಿತ್ತನೆ ಬೀಜ ಪೂರೈಸಲು ಕರ್ನಾಟಕ ರಾಜ್ಯ ಸರ್ಕಾರ ಉದ್ದೇಶಹೊಂದಿದೆ.
ಹೈದರಾಬಾದ್‌ನಲ್ಲಿರುವ ಇಂಟರ್ ನ್ಯಾಷನಲ್ ಕ್ರಾಪ್ ರೀಸರ್ಚ್ ಇನ್ ಸ್ಟಿಟ್ಯೂಟ್ ಫಾರ್ ಸೆಮಿ-ಆರಿಡ್ ಟಾಪಿಕ್ಸ್ (ಐಸಿಆರ್ಎಸ್‌ಎಟಿ)ಯು ಈ ಸಂಶೋಧನೆಯಲ್ಲಿ ತೊಡಗಿದೆ. ಕರ್ನಾಟಕ ಸರ್ಕಾರದ ಕೃಷಿ ಇಲಾಖೆ ಈ ಸಂಶೋಧನೆಗೆ ರೂ.25 ಕೋಟಿ ನೀಡಿದೆ.
ದೇಶದಲ್ಲಿಯೇ ಅತಿ ಹೆಚ್ಚು ಒಣಭೂಮಿ ಪ್ರದೇಶವನ್ನು ಹೊಂದಿರುವ ರಾಜ್ಯಗಳ ಪೈಕಿ ಎರಡನೆಯ ರಾಜ್ಯ ಕರ್ನಾಟಕ. ಇಲ್ಲಿ ಶೇ 70ಕ್ಕಿಂತ ಹೆಚ್ಚಿನ ರೈತರು ಬೇಸಾಯಕ್ಕೆ ಮಳೆಯನ್ನೆ ನೆಚ್ಚಿಕೊಂಡಿದ್ದಾರೆ. ಎಷ್ಟೇ ಅತ್ಯುತ್ತಮ ಗುಣಮಟ್ಟದ ಬೀಜ ಬಿತ್ತಿದರೂ ಅವು ಸಸಿಯಾಗಿ, ಗಿಡವಾಗುವಷ್ಟರಲ್ಲಿ ಮಳೆ ಕಾಣೆಯಾಗುವುದರಿಂದಾಗಿ ರೈತ ಸಮುದಾಯಕ್ಕೆ ನಷ್ಟ ಸ್ಥಿತಿ ತಪ್ಪಿದ್ದಿಲ್ಲ.
ಐಸಿಆರ್ಎಸ್‌ಐಟಿಯ ಅಭಿವೃದ್ಧಿ ಕೇಂದ್ರದ ನಿರ್ದೇಶಕ ಡಾ. ಸುಹಾಸ್ ಪಿ ವಾನಿ ಅವರ ನೇತೃತ್ವದಲ್ಲಿ ಬರ ನಿಗ್ರಹ, ರೋಗ ನಿರೋಧಕ ಸಂಶೋಧನೆ ಅಂತಿಮ ಹಂತದಲ್ಲಿದೆ. ಈ ವರ್ಷ ಧಾರವಾಡ ಮತ್ತು ಬೆಂಗಳೂರು ಕೃಷಿ ವಿ.ವಿ. ವ್ಯಾಪ್ತಿಯಲ್ಲಿ ಕ್ಷೇತ್ರ ಪ್ರಯೋಗ ಆರಂಭವಾಗಲಿದೆ. ಕರ್ನಾಟಕದ ಒಣಭೂಮಿ ಪ್ರದೇಶದ ರೈತರು ಹೆಚ್ಚಾಗಿ ಬೆಳೆಯುವ ರಾಗಿ, ಸಜ್ಜೆ, ಬಿಳಿಜೋಳ, ತೊಗರಿ, ಶೇಂಗಾ ಹೀಗೆ ಐದು ತಳಿಗಳ ಸಂಶೋಧನೆ ನಡೆಯುತ್ತಿದೆ.
ವಿಧಾನ: ಜಿನೋಮ್ ಸೀಕ್ವೆನ್ಸಿಂಗ್(ವಂಶವಾಹಿ ಸರಪಳಿ ಜೋಡಣೆ)ಎಂಬ ವೈಜ್ಞಾನಿಕ ತಂತ್ರಜ್ಞಾನ ಬಳಸಿ ಬರ ಮತ್ತು ರೋಗ ನಿರೋಧಕ ತಳಿ ಸೃಷ್ಟಿಸುವ ಯತ್ನದಲ್ಲಿ ಸಂಶೋಧನಾ ತಂಡ ನಿರತವಾಗಿದೆ.
‘ಕರ್ನಾಟಕದಲ್ಲಿ ಅತ್ಯುತ್ತಮ ಇಳುವರಿ ನೀಡುವ ರಾಗಿ, ತೊಗರಿ ತಳಿಗಳನ್ನು ರೈತರು ಬೆಳೆಯುತ್ತಿದ್ದಾರೆ. ಆದರೆ ಬರ ಮತ್ತು ರೋಗವನ್ನು ನಿಗ್ರಹಿಸಿ, ಮಳೆ ಕೊರತೆಯಾದರೂ ತಾಳಿಕೊಳ್ಳುವ ಶಕ್ತಿ ಈ ತಳಿಗಳಿಗೆ ಇಲ್ಲದೇ ಇರುವುದರಿಂದ ರೈತರು ಪ್ರತಿವರ್ಷ ಬೆಳೆನಷ್ಟ ಅನುಭವಿಸುವಂತಾಗಿದೆ. ಈ ಕಾರಣಕ್ಕೆ ಬರ, ರೋಗ ನಿರೋಧಕ ತಳಿಗಳನ್ನು ಅಭಿವೃದ್ಧಿ ಪಡಿಸಿ, ರೈತರಿಗೆ ವಿತರಿಸಲು ಸರ್ಕಾರ ಮುಂದಾಗಿದೆ’ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
ಡಾ. ಸುಹಾಸ್ ಪಿ ವಾನಿ ಅವರು, ‘ಇಳುವರಿ ಕಡಿಮೆ ಇದ್ದರೂ ಬರ ನಿಗ್ರಹ ಮತ್ತು ರೋಗ ನಿರೋಧಕ ಶಕ್ತಿ ಇರುವ ತಳಿಗಳ ವರ್ಣತಂತು ಮತ್ತು ವಂಶವಾಹಿ ಗಳನ್ನು ತೆಗೆದು, ಇಳುವರಿ ಹೆಚ್ಚಿನ ಪ್ರಮಾಣದಲ್ಲಿರುವ ತಳಿಗಳಿಗೆ ಸೇರಿಸುವ ಮೂಲಕ ಹೊಸ ತಳಿ ಸೃಷ್ಟಿ ಮಾಡಲಾಗುವುದು. ಇದನ್ನು ಜಿನೋಮ್ ಸೀಕ್ವೆನ್ಸಿಂಗ್ ಎಂದು ಕರೆಯುತ್ತೇವೆ’ ಎಂದು ತಿಳಿಸಿದರು.
‘ರೋಗ ನಿಗ್ರಹ, ಬರ ನಿರೋಧಕ ಶಕ್ತಿ ಇರುವ ತಳಿಗಳ ಡಿಎನ್ಎ ಮ್ಯಾಪಿಂಗ್ ಮಾಡಲಾಗುತ್ತದೆ. ಸಸ್ಯದ ಯಾವ ವಂಶವಾಹಿಯಲ್ಲಿ ಈ ಶಕ್ತಿ ಇದೆ ಎಂಬುದನ್ನು ಪ್ರಯೋಗಾಲಯದಲ್ಲಿ ಪತ್ತೆ ಹಚ್ಚಿ, ಈ ವಂಶವಾಹಿಯನ್ನು ತೆಗೆದು, ಗರಿಷ್ಠ ಇಳುವರಿ ನೀಡುವ ತಳಿಯ ವಂಶವಾಹಿ ಸರಪಳಿಗೆ ಸೇರ್ಪಡೆ ಮಾಡಲಾಗುತ್ತದೆ’ ಎಂದು ಹೇಳಿದರು.
‘ಈ ಕ್ರಮದಲ್ಲಿ ಒಂದೇ ತಳಿ ಅಭಿವೃದ್ಧಿ ಪಡಿಸುವುದಿಲ್ಲ. ಐದು ತಳಿಗಳನ್ನು ಸಂಶೋಧಿಸಿ, ವೈಜ್ಞಾನಿಕ ವಾಗಿ ದೃಢಪಡಿಸಿಕೊಂಡ ಮೇಲೆ, ಅದನ್ನು ಕೃಷಿ ಕ್ಷೇತ್ರದಲ್ಲಿ ಪರೀಕ್ಷಾ ಪ್ರಯೋಗ (ಫೀಲ್ಡ್ ಟ್ರಯಲ್)ಕ್ಕೆ ಗುರಿ ಪಡಿಸಲಾಗುವುದು. ಈ ಐದು ತಳಿಗಳಲ್ಲಿ ಬರ ಮತ್ತು ರೋಗ ನಿರೋಧಕ ಶಕ್ತಿಯನ್ನು ಯಾವ ತಳಿ ಸದೃಢವಾಗಿ ಪಡೆದಿರುತ್ತದೋ ಅಂತಹ ತಳಿಯನ್ನು ಬಿತ್ತನೆ ಬೀಜ ಉತ್ಪಾದನೆಗೆ ಯೋಗ್ಯ ತಳಿ ಎಂದು ಶಿಫಾರಸು ಮಾಡಲಾಗುವುದು. ಸಂಕರ ತಳಿ ತಂತ್ರಜ್ಞಾನದಲ್ಲಿ ಆರೇಳು ವರ್ಷಗಳು ಬೇಕಾಗುವ ಹೊಸ ತಳಿಯ ಸೃಷ್ಟಿ ಪ್ರಕ್ರಿಯೆ, ಜಿನೋಮ್‌ ಸೀಕ್ವೆನ್ಸಿಂಗ್‌ ತಂತ್ರಜ್ಞಾನದಲ್ಲಿ ಮೂರು ವರ್ಷ ತೆಗೆದುಕೊಳ್ಳುತ್ತದೆ. ಹೊಸ ತಳಿ ಬೀಜವನ್ನು ರೈತರಿಗೆ ಬೇಗ ತಲುಪಿಸುವ ಈ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ ಎಂದು ಡಾ. ಸುಹಾಸ್ ಪಿ ವಾನಿ ಹೇಳಿದ್ದಾರೆ.
‘ಕುಲಾಂತರಿ ತಳಿ(ಜಿನೆಟಿಕಲಿ ಮಾಡಿ ಫೈಡ್-ಜಿಎಂ)ಹಾಗೂ ಜಿನೋಮ್ ಸೀಕ್ವೆ ನ್ಸಿಂಗ್ ತಂತ್ರಜ್ಞಾನದಲ್ಲಿ ಸಿದ್ಧಪಡಿ ಸಿದ ತಳಿಗೆ ಸಾಕಷ್ಟು ವ್ಯತ್ಯಾಸವಿದೆ. ಈ ತಂತ್ರ ಜ್ಞಾನದಲ್ಲಿ ಒಂದೇ ಪ್ರಬೇಧಕ್ಕೆ ಸೇರಿದ ಅಂದರೆ ರಾಗಿ ತಳಿಗೆ ಮತ್ತೊಂದು ರಾಗಿ ತಳಿಯ ವಂಶವಾಹಿ ಸರಪಳಿಯನ್ನು ಜೋಡಿಸಲಾಗುವುದು, ಇದರಿಂದ ತಳಿ ಸಾಮರ್ಥ್ಯ ಮತ್ತು ನಿಗ್ರಹ ಶಕ್ತಿ ಹೆಚ್ಚುತ್ತದೆ ವಿನಃ ಮನುಷ್ಯನ ಆರೋಗ್ಯಕ್ಕೆ ಹಾನಿ ಕಾರಕವಲ್ಲ’ ಎಂದು ವಾನಿ ತಿಳಿಸಿದರು. ತಳಿ ಸಂಶೋಧನೆಗೆ ಸರ್ಕಾರ ನೆರವು ನೀಡಿದೆ. ಒಂದೂವರೆ ವರ್ಷದಲ್ಲಿ ಹೊಸತಳಿ ಬಿತ್ತನೆ ಬೀಜ ರೈತರಿಗೆ ಲಭ್ಯವಾಗಲಿದೆ ಎಂದು ಕೃಷಿ ಸಚಿವಕೃಷ್ಣ ಬೈರೇಗೌಡ ಹೇಳಿದ್ದಾರೆ.
ಕರ್ನಾಟಕದಲ್ಲಿ ಬೆಳೆಗಳ ವಿಸ್ತೀರ್ಣ
ಬದಲಾಯಿಸಿ
ಬೆಳೆ ವಿಸ್ತೀರ್ಣ(ಲಕ್ಷ ಹೆಕ್ಟೇರ್‌)
ಜೋಳ 10.47
ರಾಗಿ 7.20
ಶೇಂಗಾ 7.21
ತೊಗರಿ 7.13
ಸಜ್ಜೆ 2.46
[೪]
ಹಿಂಗಾರು ಬಿತ್ತನೆ ಅಲ್ಪ ಇಳಿಕೆ
ಬದಲಾಯಿಸಿ
6 Nov, 2016
ಹಿಂಗಾರು ಹಂಗಾಮು ಅವಧಿಯ ಬಿತ್ತನೆ ಕಾರ್ಯ ಆರಂಭವಾಗಿದ್ದು, ಕಳೆದ ವರ್ಷಕ್ಕಿಂತ 5 ಲಕ್ಷ ಹೆಕ್ಟೇರ್‌ಗಳಷ್ಟು ಕಡಿಮೆ ಪ್ರದೇಶದಲ್ಲಿ ಬಿತ್ತನೆಯಾಗಿದೆ. ನವೆಂಬರ್‌ 4 ರವರೆಗೆ ಒಟ್ಟು 4.28 ಲಕ್ಷ ಹೆಕ್ಟೇರ್‌ಗಳಲ್ಲಿ ಗೋಧಿ ಬಿತ್ತನೆ ಕಾರ್ಯ ನಡೆದಿದೆ. ಕಳೆದ ವರ್ಷ 2.76 ಲಕ್ಷ ಹೆಕ್ಟೇರ್‌ಗಳಲ್ಲಿ ಬಿತ್ತನೆ ನಡೆದಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಬಿತ್ತನೆ ಪ್ರಮಾಣ ಶೇ 55 ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ಮಾಹಿತಿ ನೀಡಿದೆ. ಕೇಂದ್ರ ಸರ್ಕಾರ ಹಿಂಗಾರು ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿದ ಬಳಿಕ ಯಾವ ಬೆಳೆಗಳನ್ನು ಬೆಳೆಯಬೇಕು ಎನ್ನುವ ನಿರ್ಧಾರಕ್ಕೆ ಬರಲು ರೈತರು ಕಾಯುತ್ತಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಭತ್ತ, ಎಣ್ಣೆಕಾಳುಗಳ ಬಿತ್ತನೆ ಹೆಚ್ಚಾಗಿದೆ. ಆದರೆ, ಬೆಳೆಕಾಳುಗಳ ಬಿತ್ತನೆ ನಿರೀಕ್ಷಿತ ಪ್ರಮಾಣದಲ್ಲಿ ನಡೆದಿಲ್ಲ. ಕಳೆದ ವರ್ಷ 30. ಲಕ್ಷ ಹೆಕ್ಟೇರ್‌ಗಳಲ್ಲಿ ಬಿತ್ತನೆಯಾಗಿತ್ತು. ಈ ಬಾರಿ 24.16 ಲಕ್ಷ ಹೆಕ್ಟೇರ್‌ಗಳಲ್ಲಿ ಬಿತ್ತನೆಯಾಗಿದೆ.
ಸಾರಾಂಶ
ಬದಲಾಯಿಸಿ
6 Nov, 2016'ನವೆಂಬರ್ ವರೆಗೆ:'
ಧಾನ್ಯ ಬಿತ್ತನೆ : ಲಕ್ಷ ಹೆಕ್ಟೇರುಗಳು: ಬಿತ್ತನೆ : ಲಕ್ಷ ಹೆಕ್ಟೇರುಗಳು:
2015 2016
ಗೋಧಿ 2.76 4.28
ಭತ್ತ 6.25 9.51
ಬೇಳೆಕಾಳು 30.07 24.16
ಏಕದಳ ಧಾನ್ಯಗಳು 29.92 13.84
ಎಣ್ಣೆಕಾಳುಗಳು 19.91 29.89
ಒಟ್ಟು 88.91 81.58
[೫]
[೬]
ಕರ್ನಾಟಕದ ನೀರಾವರಿ ಕ್ಷೇತ್ರ
ಬದಲಾಯಿಸಿ
17-11-2016
ರಾಜ್ಯದ ಅಂತರ್ಜಲ ಮಟ್ಟ ತೀವ್ರ ಕಳವಳಕಾರಿಯಾಗಿದೆ. 176 ತಾಲ್ಲೂಕುಗಳ ಪೈಕಿ 30 ತಾಲ್ಲೂಕುಗಳು ಅಂತರ್ಜಲವನ್ನು ಮಿತಿ ಮೀರಿ ಬಳಸಿವೆ. 13 ತಾಲ್ಲೂಕುಗಳ ಶೇ 90ರಷ್ಟು ಅಂತರ್ಜಲ ಕಲುಷಿತ ಮತ್ತು ವಿಷಯುಕ್ತವಾಗಿದ್ದು ಪರಿಸ್ಥಿತಿ ಅಪಾಯಕಾರಿ ಮಟ್ಟ ಮುಟ್ಟಿದೆ. 63 ತಾಲ್ಲೂಕುಗಳಲ್ಲಿ ಅಂತರ್ಜಲದ ಮಟ್ಟ ಮಿಶ್ರ ಸ್ಥಿತಿಯಲ್ಲಿದ್ದು, ಕೆಲವು ಕಡೆಗಳಲ್ಲಿ ಮಾತ್ರ ಬಳಕೆಗೆ ಯೋಗ್ಯವಾಗಿಲ್ಲ. ಉಳಿದ 70 ತಾಲ್ಲೂಕುಗಳಲ್ಲಿ ಅಂತರ್ಜಲದ ಗುಣಮಟ್ಟ ಸುರಕ್ಷಿತವಾಗಿದೆ.
ನೀರಿನ ಮೂಲಗಳು -> ಕಾಲುವೆ ಕೆರೆ ಬಾವಿ ಕೊಳವೆ ಭಾವಿ ಏತ ನೀರಾವರಿ ಇತರ ಮೂಲ ಒಟ್ಟು
ನೀರಾವರಿ ಕ್ಷೇತ್ರ (ಲಕ್ಷ ಹೆಕ್ಟೇರ್ಗಳಲ್ಲಿ 14.73 1.96 4.75 15.40 1.17 3.36 41.37
[೭]
ರಾಜ್ಯಕ್ಕೆ ನದೀ ನೀರಿನ ಲಭ್ಯತೆ-ಬಳಕೆ
ಬದಲಾಯಿಸಿ
ಟಿಎಂಸಿ ಅಡಿ ಗಳಲ್ಲಿ
ಕ್ರ.ಸಂ. ನದಿ (ವಿವಾದದ್ದು) ಹಂಚಿಕೆ ಬಳಕೆ ಬಳಸದೆ ಇರುವುದು ಜಲಾಶಯ ಹೂಳು
1 ಕೃಷ್ಣಾ ನದಿ ತೀರ್ಪು 1 734 650 84 ತುಂಗಭದ್ರಾ 28.13
2 ಗೋದಾವರಿ ನದಿ 45.37 45.37 ನಾರಾಯಣಪುರ 10.15
3 ಕೃಷ್ಣಾ ನದಿ ತೀರ್ಪು 2 173 173 173 ಆಲವೆಟ್ಟಿ 5.31
4 ಕಾವೇರಿ 270 270 ಮಲಪ್ರಭಾ 2.77
5 ದಕ್ಷಿಣ ಉತ್ತರ ಪಿನಾಕಿನಿ ಪಾಲಾರ್ ನದಿಮೂಲ 25.99 25.99 ಭದ್ರಾ 2.15
6 ಒಟ್ಟು ಮೇಲ್ಮೈ ನೀರು ಲಭ್ಯತೆ 1248.36 991.36 257 ಕೆ.ಆರ್.ಎಸ್. 1.05
7 ಒಟ್ಟು ಜಲ ಮೂಲಗಳು ಜಲಾಶಯಗಳು:143 ಕೆರೆಗಳು-> 13,743 ಹಿಪ್ಪರಗಿ 0.13
8 ಒಟ್ಟು 50
ಕರ್ನಾಟಕದ ನೀರಾವರಿಗೆ ಅನುದಾನ, ನದೀಕಣಿವೆ ಮತ್ತು ನಿಗಮಗಳು
ಬದಲಾಯಿಸಿ
ನೀರಾವರಿಗೆ ಆಯವ್ಯಯದಲ್ಲಿ ಅನುದಾನ ಬಿಡುಗಡೆ & ವೆಚ್ಚ*ಕೋಟಿರೂ.ಗಳಲ್ಲಿ[೭]
ಸಾಲು ಬಜೆಟ್-ಅನುದಾನ ಬಿಡುಗಡೆ ವೆಚ್ಚ
2011-12 6,044.27 4,393.3 5,229.5
2012-13 8,402.96 7,090.82 6,730.2
2013-14 10,000.90 9383.55 9,820.6
2014-15 11515.42 9,050.02 8,732.3
20115-16 12619.00
ಕರ್ನಾಟಕದ ಸಪ್ತ ನದಿಕಣಿವೆಗಳು
ಕೃಷ್ಣಾ
ಕಾವೇರಿ
ಗೋದಾವರಿ
ಪಶ್ಚಿಮ ವಾಹಿನಿ
ಉತ್ತರ ಪಿನಾಕಿನಿ
ದಕ್ಷಿಣ ಪಿನಾಕಿನಿ
ಪಾಲಾರ್
ನೀರಾವರಿ ನಿಗಮಗಳು
ಕಾವೇರಿ ನೀರಾವರಿ ನಿಗಮ
ಕನಾಟಕ ನೀರಾವರಿ ನಿಗಮ
ಕೃಷ್ಣಾ ಭಾಗ್ಯ ಜಲ ನಿಗಮ