text
stringlengths
0
2.67k
ಬದಲಾಯಿಸಿ
ಕನ್ನಂಬಾಡಿ ಎನ್ನುವುದು ಕಾವೇರಿನದಿ ತೀರದ ಒಂದು ಗ್ರಾಮ. ಇಲ್ಲಿ ಕಣ್ವ ಮಹರ್ಷಿಗಳು ತಪಸ್ಸು ಮಾಡಿದ್ದರು ಎಂಬ ಐತಿಹ್ಯವಿದೆ. ಕಣ್ವರಿಂದಾಗಿಯೇ ಈ ಗ್ರಾಮಕ್ಕೆ ಕಣ್ವಪುರಿ, ಕಣ್ಣಂಬಾಡಿ, ಕನ್ನಂಬಾಡಿ ಎಂಬ ಹೆಸರು ಬಂತು ಎನ್ನಲಾಗುತ್ತದೆ. ಈ ಕನ್ನಂಬಾಡಿಯನ್ನು ದೊಡ್ಡಯ್ಯ ಪ್ರಭು ಎಂಬ ಪಾಳೇಗಾರ ಆಳುತ್ತಿದ್ದನು. ಕ್ರಿ.ಶ.೧೬೦೦ ರಲ್ಲಿ ಮೈಸೂರು ದೊರೆ ರಾಜ ಒಡೆಯರ್ ಅವರು ಇದನ್ನು ಗೆದ್ದುಕೊಂಡರು. ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಅಣೆಕಟ್ಟು ನಿರ್ಮಾಣವಾಗಿದ್ದು ಕಾವೇರಿ ನದಿಗೆ. ಚೋಳ ಸಾಮ್ರಾಜ್ಯದ ಕರಿಕಾಲ ಚೋಳ ಎಂಬ ಅರಸು ಪ್ರಥಮ ಬಾರಿಗೆ ಕಾವೇರಿ ನದಿಗೆ ಅಣೆಕಟ್ಟು ನಿರ್ಮಿಸಿದ. ಕ್ರಿ.ಶ. ೧೦೬೮ ರಲ್ಲಿ ತಮಿಳುನಾಡಿನ ಕಲ್ಲಣೈ ಎಂಬಲ್ಲಿ ಕಾವೇರಿ ನದಿಗೆ ಅಡ್ಡವಾಗಿ ಕಟ್ಟೆ ನಿರ್ಮಿಸಿದ ಎಂದು ಇತಿಹಾಸ ಹೇಳುತ್ತದೆ.
ಅಣೆಕಟ್ಟು
ಬದಲಾಯಿಸಿ
ಮೈಸೂರು ಮತ್ತು ಮಂಡ್ಯ ಜಿಲ್ಲೆಗಳ ಜೀವನದಿಯಾದ ಕಾವೇರಿ ನದಿಗೆ ಅಡ್ಡಲಾಗಿ ಈ ಅಣೆಕಟ್ಟನ್ನು ಕಟ್ಟಲಾಗಿದೆ. ಇದನ್ನು ಕಟ್ಟಿದ ಸಮಯದಲ್ಲಿ ಇದು ಭಾರತದಲ್ಲಿ ಅತಿ ದೊಡ್ಡ ಅಣೆಕಟ್ಟಾಗಿತ್ತು. ಇದನ್ನು ಸ್ವತಂತ್ರ ಪೂರ್ವದಲ್ಲಿ ನಿರ್ಮಿಸಲಾಯಿತು
ಕೃಷ್ಣರಾಜಸಾಗರ ಅಣೆಕಟ್ಟಿನ ಮುಖ್ಯ ಉದ್ದೇಶಗಳೆಂದರೆ ನೀರಾವರಿ ಮತ್ತು ನೀರು ಸರಬರಾಜು. ಈ ಅಣೆಕಟ್ಟು ೮೬೦೦ ಅಡಿ ಉದ್ದವಿದ್ದು ೧೩೦ ಅಡಿ ಎತ್ತರವಿದೆ. ಸ್ವಯಂಚಾಲಿತ ಸ್ಲ್ಯೂಸ್ ಗೇಟ್ ಗಳನ್ನು ಉಪಯೋಗಿಸಿದ ಪ್ರಪಂಚದ ಮೊದಲ ಅಣೆಕಟ್ಟುಗಳಲ್ಲಿ ಇದೂ ಒಂದು. ಕೃಷ್ಣರಾಜ ಸಾಗರಕ್ಕೆ ಮೂರು ಪ್ರಮುಖ ನಾಲೆಗಳಿವೆ.
ಅದರಲ್ಲಿ ಮುಖ್ಯವಾಗಿದ್ದು ವಿಶ್ವೇಶ್ವರಯ್ಯ ನಾಲೆ ೪೫ ಕಿ.ಮೀ.ನಷ್ಟಿದೆ. ೩೨ ಕಿ.ಮೀ.ಗಳ ಬಲದಂಡೆ ಮತ್ತು ೨೧ ಕಿ.ಮೀ.ನ ಎಡದಂಡೆ ನಾಲೆ ಇದೆ. ೧೨೪ ಅಡಿ ನೀರು ನಿಲ್ಲಿಸಲು ೧೩೦ ಅಡಿ ಎತ್ತರದ ಅಣೆಕಟ್ಟು ನಿರ್ಮಿಸಲಾಗಿದೆ. ಇಷ್ಟೊಂದು ಎತ್ತರದ ಅಣೆಕಟ್ಟಿಗಾಗಿ ೧೧೧ ಅಡಿ ಆಳದಲ್ಲಿ ತಳಪಾಯ ಹಾಕಲಾಗಿದೆ. ಅಂದರೆ ಈ ಅಣೆಕಟ್ಟು ೪೧೦೦ ಚದರ ಮೈಲಿಯಷ್ಟು ಜಲಾನಯನ ಭೂಮಿಯನ್ನು ಆಕ್ರಮಿಸಿಕೊಂಡಿದೆ.
ಬೃಂದಾವನ ಉದ್ಯಾನವನ
ಬದಲಾಯಿಸಿ
ಬೃಂದಾವನ ಉದ್ಯಾನವನ ಕೃಷ್ಣರಾಜಸಾಗರ ಅಣೆಕಟ್ಟಿಗೆ ಹೊಂದಿಕೊಂಡಂತೆ ಕಟ್ಟಲಾದ ಸುಂದರ ಉದ್ಯಾನ. ಇದರ ತುಂಬ ಆಕರ್ಷಕವಾದ ನೀರಿನ ಕಾರಂಜಿಗಳಿವೆ. ಇಲ್ಲಿನ ಪ್ರಸಿದ್ಧ ಸಂಗೀತ ಕಾರಂಜಿ ಪ್ರವಾಸಿಗಳನ್ನು ಅನೇಕ ದಶಕಗಳಿಂದ ಆಕರ್ಷಿಸಿದೆ. ಇದಲ್ಲದೆ ಅನೇಕ ಜೀವಶಾಸ್ತ ಸಂಶೋಧನಾ ಇಲಾಖೆಗಳು ಇಲ್ಲಿಯೇ ಕೆಲಸ ನಡೆಸುತ್ತವೆ. ಪ್ರವಾಸಿಗಳಿಗೆ ಒಂದು ತಂಗುದಾಣವನ್ನು ಬೃಂದಾವನ ಉದ್ಯಾನದಲ್ಲಿ ಕಟ್ಟಿಸಲಾಗಿದೆ.
ಹೀಗೆ ಬೃಹದಾಕಾರವಾಗಿ ಬೆಳೆದು ನಿಂತ ಕನ್ನಂಬಾಡಿ ಕಟ್ಟೆ ೧.೨೫ ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಿದೆ. ಬರಡಾಗಬೇಕಾಗ್ದಿದ ಈ ಪ್ರದೇಶದ್ಲಲಿ ಹಸಿರು ನಳನಳಿಸುವಂತೆ ಮಾಡಿದೆ. ಈ ಅಣೆಕಟ್ಟು ಲಕ್ಷಾಂತರ ರೈತರ ಪಾಲಿಗೆ ದೇವತೆಯಾದರೂ ಪ್ರವಾಸಿಗರು ಮಾತ್ರ ಇಲ್ಲಿಗೆ ಬರತೊಡಗಿದ್ದು ಇಲ್ಲಿ ಬೃಂದಾವನ ಉದ್ಯಾನ ನಿರ್ಮಾಣವಾದ ಮೇಲೆ.
ಸರ್ ಮಿರ್ಜಾ ಇಸ್ಮಾಯಿಲ್ ಅವರ ಕನಸಿನ ಕೂಸಾದ ಬೃಂದಾವನದ ಸಂಗೀತ ಕಾರಂಜಿ, ವಿವಿಧ ಕಾರಂಜಿಗಳು, ವಿದ್ಯುದೀಪಾಲಂಕಾರದ ಬೆಳಕಿನ್ಲಲಿ ಕಣ್ಮನ ಸೆಲೆಯುತ್ತವೆ. ಮೈಸೂರಿಗೆ ಬಂದವರೆಲ್ಲರು ಕೃಷ್ಣರಾಜ ಸಾಗರಕ್ಕೆ ಹೋಗಲೇ ಬೇಕು ಎನ್ನುವ ವಾತಾವರಣವನ್ನು ಸೃಷ್ಟಿಸಿದೆ. ೭೫ರ ಹರೆಯದ ಕನ್ನಂಬಾಡಿ ಕಟ್ಟೆ ನಮ್ಮ ರಾಜ್ಯದ ಹಾಗೂ ದೇಶದ ಇತರ ಅಣೆಕಟ್ಟುಗಳು ನಾಚುವಂತೆ ಎದೆಯುಬ್ಬಿಸಿ ನಿಂತಿದೆ.
ಚರಿತ್ರೆ
ಬದಲಾಯಿಸಿ
ಕೃಷ್ಣರಾಜಸಾಗರ ಅಣೆಕಟ್ಟು ಮತ್ತು ಬೃಂದಾವನ ಉದ್ಯಾನವನ್ನು ಕಟ್ಟುವ ಯೋಜನೆ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಆರಂಭವಾದದ್ದು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯ ಕಾಲದಲ್ಲಿ ಅಣೆಕಟ್ಟೆಯ ಕೆಲಸವನ್ನು ಪೂರ್ತಿಗೊಳಿಸಿದರು. ಅಣೆಕಟ್ಟನ್ನು ೧೯೩೨ ರಲ್ಲಿ ಕಟ್ಟಿ ಮುಗಿಸ ಲಾಯಿತು.[೩] ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು ಮುಂತಾದ ಪ್ರಾಂತ್ಯಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಇರುವ ಕಾಲದಲ್ಲಿ ಹಸಿರು ಎನ್ನುವುದು ಇಲ್ಲಿ ಮರೀಚಿಕೆಯಾದ ಸಂದರ್ಭ ರೂಪುಗೊಂಡಿದ್ದು ಈ ಮಹಾನ್ ಯೋಜನೆ.
ಅದನ್ನು ಸಾಕಾರಗೊಳಿಸಲು ಮುಖ್ಯ ಇಂಜಿನಿಯರ್ ಮ್ಯಾಕ್ ಹಚ್, ಕ್ಯಾ.ಡೇವಿಸ್, ಸರ್ ಎಂ.ವಿಶ್ವೇಶ್ವರಯ್ಯ, ಸರ್ದಾರ್ ಎಂ.ಕಾಂತರಾಜ ಅರಸ್, ಆಲ್ಬಿಯನ್ ರಾಜಕುಮಾರ್ ಬ್ಯಾನರ್ಜಿ, ಎಂ.ಇಸ್ಮಾಯಿಲ್, ಕರ್ಪೂರ ಶ್ರೀನಿವಾಸರಾವ್, ಕೆ.ಕೃಷ್ಣ ಅಯ್ಯಂಗಾರ್, ಬಿ.ಸುಬ್ಬಾರಾವ್,ಸಿ.ಕಡಾಂಬಿ, ಜಾನ್ ಬೋರ್, ಕೆ.ಆರ್.ಶೇಷಾಚಾರ್, ಎಚ್.ಪಿ.ಗಿಬ್ಸ್ ಮುಂತಾದವರು ಶ್ರಮಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಕೃಷ್ಣರಾಜ ಸಾಗರ ನಿಮಾ೯ಣದಲ್ಲಿ ದುಡಿದ ೧೦ ಸಾವಿರಕ್ಕೂ ಹೆಚ್ಚು ಮಂದಿ ಕಾರ್ಮಿಕರು ಹಾಗೂ ಮುಳುಗಡೆಯಲ್ಲಿ ತಮ್ಮ ಆಸ್ತಿ ಪಾಸ್ತಿ ಕಳೆದುಕೊಂಡ ಜನರು ಸ್ಮರಣೀಯರು.
ಯೋಜನೆಯ ಹಂತಗಳು
ಬದಲಾಯಿಸಿ
ಮುಂಬೈಯಲಿ ಎಂಜಿನಿಯರ್ ಆಗಿದ್ದ ಸರ್ ಎಂ.ವಿಶ್ವೇಶ್ವರಯ್ಯ ಅವರನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ೧೯೦೯ ರಲ್ಲಿ ಮೈಸೂರಿಗೆ ಕರೆಸಿಕೊಂಡರು. ಅಷ್ಟರಲ್ಲಾಗಲೆ ಕೃಷ್ಣರಾಜ ಸಾಗರ ಅರ್ಥಾತ್ ಕನ್ನಂಬಾಡಿ ಕಟ್ಟೆಯ ಕೆಲಸ ಶುರುವಾಗಿ ಮೂರು ವರ್ಷವಾಗಿತ್ತು. ವಿಶ್ವೇಶ್ವರಯ್ಯ ಅವರು ಬರುವುದಕ್ಕಿಂತ ಮೊದಲು ಇಂಜಿನಿಯರ್ ಆಗಿದ್ದ ಕ್ಯಾ.ಡೇವಿಸ್ ಅವರ ಅಕಾಲಿಕ ಮರಣದಿಂದ ತೆರವಾದ ಸ್ಥಾನಕ್ಕೆ ಬಂದರು .
ಇದರ ಪ್ರಕಾರ ಮೈಸೂರಿನಿಂದ ೧೨ ಮೈಲಿ ಮತ್ತು ಶ್ರೀರಂಗಪಟ್ಟಣದಿಂದ ೯ ಮೈಲಿ ದೂರದಲ್ಲಿರುವ ಕನ್ನಂಬಾಡಿಯಲ್ಲಿ ಜಲಾಶಯ ನಿರ್ಮಿಸಲು ಯೋಜಿಸಲಾಯಿತು. ಈ ಯೋಜನೆಯಿಂದ ೨೫ ಹಳ್ಳಿಗಳು, ೯೨೫೦ ಎಕರೆ ನೀರಾವರಿ ಪ್ರದೇಶ, ೧೩,೨೯೩ ಎಕರೆ ಖುಷ್ಕಿ ಪ್ರದೇಶ, ೮೫೦೦ ಎಕರೆ ಸರ್ಕಾರಿ ಭೂಮಿ ಮುಳುಗಡೆಯಾಗುತ್ತದೆ ಎಂದು ಅಂದಾಜಿಸಲಾಯಿತು.
ಮೊದಲ ಹಂತಕ್ಕೆ ೯೫ ಲಕ್ಷ ರೂಪಾಯಿ ಬೇಕು ಎಂದು ಅಂದಾಜಿಸಲಾಗಿತ್ತು. ೯೭ ಅಡಿ ಎತ್ತರದ ಅಣೆಕಟ್ಟು ಕಟ್ಟಿ ೮೦ ಅಡಿ ನೀರು ನಿಲ್ಲಿಸಲು ಉದ್ದೇಶಿಸಲಾಗಿತ್ತು. ಆದರೆ ಅಪಾರ ಪ್ರಮಾಣದ ಹಣ ವ್ಯಯವಾಗುವುದು ಹಾಗೂ ಮದ್ರಾಸ್ ಸರ್ಕಾರದ ಆಕ್ಷೇಪದಿಂದಾಗಿ ಈ ಯೋಜನೆಯ ಬಗ್ಗೆ ಆಗಿನ ದಿವಾನರಾಗಿದ್ದ ಟಿ.ಆನಂದರಾಯರು ಹೆಚ್ಚಿನ ಗಮನ ಕೊಡಲಿಲ್ಲ.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅಣೆಕಟ್ಟಯ ಕೆಲಸಕ್ಕೆ ವೇಗವನ್ನು ನೀಡಲು ವಿಶ್ವೇಶ್ವರಯ್ಯ ಅವರನ್ನು ಕರೆಸಿಕೊಂಡು ಸಮಾಲೋಚನೆ ನಡೆಸಿ ಯೋಜನೆಯನ್ನು ಮುಂದುವರೆಸಿದರು. ತಮ್ಮ ಬಳಿ ಇದ್ದ ನಾಲ್ಕು ಮೂಟೆ ಚಿನ್ನದ ಆಭರಣ, ಬೆಳ್ಳಿ ನಾಣ್ಯಗಳನ್ನು ಮಾರಾಟ ಮಾಡಿ ೮೦ ಲಕ್ಷ ರೂಪಾಯಿ ಒದಗಿಸುವುದರೊಂದಿಗೆ೧೯೧೧ ಅಣೆಕಟ್ಟೆಯ ಯೋಜನೆ ಯಶಸ್ವಿಯಾಗಿ ಮುಂದುವರೆಯಿತು.
ಮೂರು ಹಂತದ ಯೋಜನೆ
ಬದಲಾಯಿಸಿ
ಅಣೆಕಟ್ಟು ನಿರ್ಮಾಣ ಯೋಜನೆಯನ್ನು ಮೂರು ಹಂತಗಳಲ್ಲಿ ಅನುಷ್ಠಾನಗೊಳಿಸಲು ನಿರ್ಧರಿಸಲಾಯಿತು. ಮೊದಲ ಹಂತದಲ್ಲಿ ಕಟ್ಟೆ ನಿರ್ಮಾಣ,ಎರಡನೇ ಹಂತದಲ್ಲಿ ಕಾಲುವೆ ನಿರ್ಮಾಣ, ಮೂರನೇ ಹಂತದಲ್ಲಿ ಜಲ ವಿದ್ಯುತ್ ಘಟಕ ಸ್ಥಾಪನೆ. ಸುಮಾರು ೧೦ ಸಾವಿರ ಕಾರ್ಮಿಕರು ನಿರಂತರ ದುಡಿದ ಕಾರಣ ೧೯೧೫ರಲ್ಲಿ ೬೫ ಅಡಿ ಕಟ್ಟೆ ನಿರ್ಮಿಸಲಾಯಿತು. ೧೯೧೯ರಲ್ಲಿ ೧೦೭ ಅಡಿ ಕಟ್ಟೆ ನಿರ್ಮಾಣವಾಯಿತು. ಅಲ್ಲಿಯವರೆಗೆ ಸುಮಾರು ೧೫೫ ಲಕ್ಷ ರೂಪಾಯಿ ವೆಚ್ಚವಾಗಿತ್ತು.
ಮೊದಲ ಹಂತದ ಯೋಜನೆ ಮುಗಿದಿದ್ದು ೧೯೨೧ರಲ್ಲಿ. ಆ ವೇಳೆಗಾಗಲೇ ೨೧೧ ಲಕ್ಷ ರೂಪಾಯಿ ಖರ್ಚಾಗಿತ್ತು. ೧೯೨೪ ರಲ್ಲಿ ಕಟ್ಟೆಯ ಜೊತೆಗೇ ಕಾಲುವೆ ನಿರ್ಮಾಣ ಕಾರ್ಯ ಕೂಡ ಆರಂಭವಾಯಿತು. ೧೯೨೮ ರಲ್ಲಿ ಯೋಜಿಸಿದಂತೆ ಅಣೆಕಟ್ಟೆಯ ಎತ್ತರ ೧೩೦ ಅಡಿಗೆ ಮುಟ್ಟಿತು.೧೯೧೧ರಲ್ಲಿ ಆರಂಭಿಸಿದ ಕಾಮಗಾರಿ ೧೯೩೨ರಲ್ಲಿ ಮುಕ್ತಾಯವಾದಾಗ ಒಟ್ಟು ಖರ್ಚಾದ ಹಣ ೩ ಕೋಟಿ, ೨೩ ಲಕ್ಷ ೪೭ ಸಾವಿರ ರೂಪಾಯಿಗಳು.
ಸಮುದ್ರಮಟ್ಟದಿಂದ ೨೩೪೪ ಅಡಿ ಎತ್ತರದಲ್ಲಿರುವ ಈ ಅಣೆಕಟ್ಟೆಯಲ್ಲಿ ೪೮.೩೩ ಟಿ‌ಎಂಸಿ ನೀರನ್ನು ಸಂಗ್ರಹಿಸಬಹುದು. ೮೬೦೦ ಅಡಿ ಉದ್ದದ ಈ ಕಟ್ಟೆ ತಳಪಾಯದಿಂದ ೧೪೦ ಅಡಿ ಎತ್ತರದಲ್ಲಿದೆ. ಅಣೆಕಟ್ಟೆಯ ಮೇಲ್ಭಾಗದಲ್ಲಿ ೧೪.೫ ಅಡಿ ಅಗಲದ ರಸ್ತೆ ಇದು ಹಿನ್ನೀರಿನ ಸರಾಸರಿ ಉದ್ದ ೨೫ ಮೈಲಿ. ಅಗಲ ೫ ಮೈಲಿ. ಮದ್ರಾಸ್ ಸರ್ಕಾರದ ಕಿರಿಕಿರಿಯನ್ನು ಸಹಿಸಿಕೊಂಡು ಧೈರ್ಯ ಮಾಡಿ ಅಂದು ಈ ಕಟ್ಟೆಯನ್ನು ಕಟ್ಟದೇ ಹೋಗಿದ್ದರೆ ಹಳೆ ಮೈಸೂರು ಪ್ರಾಂತ್ಯ ಈಗಲೂ ಕುಗ್ರಾಮಗಳಿಂದಲೇ ತುಂಬಿರುತ್ತಿತ್ತು.
ಊರುಗಳ ಮುಳುಗಡೆ ಕೃಷ್ಣರಾಜ ಸಾಗರ ಜಲಾಶಯ ಕಟ್ಟಿದ್ದರಿಂದ 13,923 ಎಕರೆ ಖುಷ್ಕಿ ಭೂಮಿ, 9,520 ಎಕರೆ ತರೀ ಭೂಮಿ ಹಾಗೂ 8,500 ಎಕರೆ ಸರ್ಕಾರಿ ಭೂಮಿ ಮುಳುಗಡೆಯಾಯಿತು. 25 ಗ್ರಾಮಗಳು ನೀರಿನಲ್ಲಿ ಮುಳುಗಡೆಯಾದವು. ಇದರಿಂದ 15 ಸಾವಿರ ಮಂದಿ ನಿರ್ವಸತಿಗರಾದರು. ಸಂತ್ರಸ್ತರಿಗೆ ಮೈಸೂರು ಸರ್ಕಾರವು ಮನೆ ನಿರ್ಮಿಸಿಕೊಳ್ಳಲು ಮುಫತ್ತಾಗಿ ನಿವೇಶನ ಒದಗಿಸಿತಲ್ಲದೆ ರಸ್ತೆ, ಬಾವಿ, ಪಾಠಶಾಲೆ, ಮಂದಿರಗಳನ್ನು ಕಟ್ಟಿಸಿಕೊಡಲಾಯಿತು.
ಸಮಸ್ಯೆ
ಬದಲಾಯಿಸಿ
ಈ ಅಣೆಕಟ್ಟೆ ನಿರ್ಮಾಣ ಕಾಮಗಾರಿ 1906ರಲ್ಲಿ ಆರಂಭವಾಯಿತಾದರೂ ನೀರಿನ ಹಂಚಿಕೆ ವಿಷಯದಲ್ಲಿ ಮೈಸೂರು ಮತ್ತು ಮದರಾಸು ಸರ್ಕಾರಗಳ ನಡುವೆ ವಿವಾದ ಉಂಟಾಗಿ ಕಾಮಗಾರಿಗೆ ತೊಡಕಾಗಿತ್ತು. 1924ರ ಅಖೈರು ಒಪ್ಪಂದದೊಡನೆ ವಿವಾದ ಬಗೆಹರಿದು ಕಾಮಗಾರಿ ಪುನಾರಂಭಗೊಂಡಿತು.
1924ರಲ್ಲಿ ಮದರಾಸು ಮತ್ತು ಮೈಸೂರು ಸರ್ಕಾರಗಳ ನಡುವೆ ನಡೆದ ಕಾವೇರಿ ನದಿ ನೀರು ಹಂಚಿಕೆ ಒಪ್ಪಂದದ ಪ್ರಕಾರ ಪ್ರತಿ ವರ್ಷ ಮೇ ತಿಂಗಳ 28ನೇ ತಾರೀಖಿನಿಂದ ಅದರ ಮುಂದಿನ ಜನವರಿ 27ರವರೆಗೆ ಪ್ರತಿ ದಿನ ಜಲಾಶಯಕ್ಕೆ ಬರುವ ನೀರಿನಲ್ಲಿ ದಿನವಹಿ ಫಲಾನಾ ಪರಿಮಾಣವೆಂದು ಗೊತ್ತಾಗಿರುವಷ್ಟು ಜಲಾಶಯದಿಂದ ಹರಿದು ಹೋಗಲು ಅವಕಾಶ ಮಾಡಿಕೊಟ್ಟು ಹೆಚ್ಚಾಗಿ ಬಂದ ನೀರನ್ನು ಜಲಾಶಯದಲ್ಲಿ ಶೇಖರಿಸಿಟ್ಟುಕೊಳ್ಳುವ ತೀರ್ಮಾನವಾಯಿತು. ಆದರೆ ಅದೇ ವರ್ಷ ನದಿಯಲ್ಲಿ ಭಾರಿ ಪ್ರವಾಹ ಬಂದು ಕೆಲವು ವಾರಗಳ ಕಾಲ ಕಾಮಗಾರಿ ಸ್ಥಗಿತಗೊಂಡಿತ್ತು.[೨]
ನೀರಾವರಿ
ಬದಲಾಯಿಸಿ
ಉತ್ತರ ದಡದ ಮೇಲ್ಮಟ್ಟದ ನಾಲೆಗೆ ಜಲಾಶಯದಿಂದ ನೀರು ಹರಿಯಬಿಡಲು ನದಿ ಮಟ್ಟದಿಂದ 60 ಅಡಿ ಎತ್ತರದಲ್ಲಿ 6 ಅಡಿ ಅಗಲ, 12 ಅಡಿ ಎತ್ತರವುಳ್ಳ ಮೂರು ತೂಬುಗಳನ್ನು ಅಳವಡಿಸಲಾಗಿದ್ದು, 1.20ಲಕ್ಷ ಎಕರೆ ಕೃಷಿ ಭೂಮಿಗೆ ನೀರುಣಿಸುವಂತೆ ಯೋಜಿಸಲಾಗಿದ್ದು, ಈಗ ಅದರ ವಿಸ್ತಾರ ಹೆಚ್ಚಿದೆ. ಕೆಆರ್‌ಎಸ್‌ ಅಚ್ಚುಕಟ್ಟು ಪ್ರದೇಶದಲ್ಲೇ ದೊಡ್ಡದಾದ, ಆರಂಭದಲ್ಲಿ ‘ಆರ್ವಿನ್‌ ನಾಲೆ’ ಎಂದು ಕರೆಯಲಾಗುತ್ತಿದ್ದ ಈ ನಾಲೆಗೆ ನಂತರ ‘ವಿಶ್ವೇಶ್ವರಯ್ಯ ನಾಲೆ’ ಎಂದು ನಾಮಕರಣ ಮಾಡಲಾಗಿದೆ. ದಿವಾನ್‌ ಬಹದ್ದೂರ್‌ ಕೆ.ಆರ್‌. ಶೇಷಾಚಾರ್ಯ ಈ ನಾಲೆಯ ಯೋಜನೆ ರೂಪಿಸಿದ್ದು, ಮಂಡ್ಯ ಜಿಲ್ಲೆಯ ಮಂಡ್ಯ, ಮದ್ದೂರು, ಮಳವಳ್ಳಿ ಮತ್ತು ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷಿ ಭೂಮಿಗೆ ನೀರುಣಿಸುತ್ತದೆ. ಎಡದಂಡೆ ನಾಲೆ 1,500 ಹಾಗೂ ಬಲದಂಡೆ ನಾಲೆ 3,500 ಎಕರೆಗೆ ನೀರು ಒದಗಿಸುತ್ತವೆ. ಅಣೆಕಟ್ಟೆ ನಿರ್ಮಾಣಕ್ಕೆ ರೂ. 2.5 ಕೋಟಿ ಹಾಗೂ ಬಲದಂಡೆ (ಸರ್‌.ಎಂ. ವಿಶ್ವೇಶ್ವರಯ್ಯ) ಮತ್ತು ಎಡದಂಡೆ ನಾಲಾ ಕಾಮಗಾರಿಗಳಿಗೆ ಒಟ್ಟು ರೂ. 1.6 ಕೋಟಿ ಹಣವನ್ನು ಮೈಸೂರು ಸರ್ಕಾರ ಖರ್ಚು ಮಾಡಿದೆ.[೨]
ವಿವಿಧ ತೂಬುಗಳು
ಬದಲಾಯಿಸಿ
ಜಲಾಶಯದ ಬೇರೆ ಬೇರೆ ಮಟ್ಟದಲ್ಲಿ ವಿವಿಧ ಅಳತೆಯ ಒಟ್ಟು 171 ತೂಬುಗಳನ್ನು ಅಳವಡಿಸಲಾಗಿದೆ. ಪ್ರವಾಹದ ನೀರು ಹೊರ ಹರಿಯಲು, ಕೆಸರು ಕೊಚ್ಚಿ ಹೋಗುವಂತೆ ಮಾಡಲು ಹಾಗೂ ವಿದ್ಯುತ್‌ ಉತ್ಪಾದನಾ ಘಟಕಕ್ಕೆ ನೀರು ಹರಿಸಲು ಪ್ರತ್ಯೇಕ ತೂಬುಗಳನ್ನು ಅಳವಡಿಸಲಾಗಿದೆ. ದಕ್ಷಿಣ ದ್ವಾರದ ಆಚೆಗೆ 8 ಅಡಿ ಅಗಲ7 ಮತ್ತು 12 ಅಡಿ ಎತ್ತರ ಇರುವ 40 ತೂಬುಗಳಿವೆ. ನೆಲಮಟ್ಟದಿಂದ 106 ಅಡಿ ಎತ್ತರದಲ್ಲಿ ಈ ತೂಬುಗಳನ್ನು ಅಳವಡಿಸಲಾಗಿದೆ.
ಈ ತೂಬುಗಳ ಆಚೆಗೆ 10 ಅಡಿ ಅಗಲ ಮತ್ತು 8 ಅಡಿ ಎತ್ತರದ 48 ತೂಬುಗಳಿದ್ದು, ನದಿ ಪಾತ್ರದ 103 ಅಡಿಗಳ ಮಟ್ಟದಲ್ಲಿ ಇವುಗಳನ್ನು ಇಡಲಾಗಿದೆ. ಈ ತೂಬು ಬಾಗಿಲುಗಳ ಮೇಲೆ 10 ಅಡಿ ಅಗಲ ಮತ್ತು 10 ಅಡಿ ಎತ್ತರದ 48 ತೂಬುಗಂಡಿಗಳಿವೆ. ನೆಲಮಟ್ಟದಿಂದ 114 ಅಡಿಗಳ ಎತ್ತರದಲ್ಲಿರುವ ಈ ತೂಬುಗಂಡಿಗಳಿಗೆ ಸ್ವಯಂ ಚಾಲಿತ ಬಾಗಿಲುಗಳನ್ನು ಜೋಡಿಸಲಾಗಿದೆ. ಈ ತಂತ್ರಜ್ಞಾನಕ್ಕೆ ಸರ್‌.ಎಂ. ವಿಶ್ವೇಶ್ವರಯ್ಯ ಅವರು ಹಕ್ಕುಸ್ವಾಮ್ಯ ಪಡೆದಿದ್ದರು. ಜಲಾಶಯದ ಮಟ್ಟ 124 ಅಡಿಗೆ ಮುಟ್ಟುತ್ತಿದ್ದಂತೆ ಇವು ತಾವಾಗಿಯೇ ತೆರೆದುಕೊಳ್ಳುತ್ತವೆ.
ಈ ತೂಬುಗಳ ಜತೆಗೆ 80 ಅಡಿ ಎತ್ತರದಲ್ಲಿ 10 ಅಡಿ ಅಗಲ ಮತ್ತು 20 ಅಡಿ ಎತ್ತರವಿರುವ 16 ತೂಬುಗಳಿವೆ. ಇವುಗಳಲ್ಲದೆ ಅಣೆಕಟ್ಟೆಯ ಮಧ್ಯಭಾಗದಲ್ಲಿ 6 ಅಡಿ ಅಗಲ ಮತ್ತು 15 ಅಡಿ ಎತ್ತರದ 11 ತೂಬುಗಳಿದ್ದು, ಕ್ರ್ಯಾಬ್‌ವಿಂಚ್‌ ಸಾಧನ ಬಳಸಿ ಮೇಲಕ್ಕೇರಿಸುವ ಮತ್ತು ಕೆಳಕ್ಕೆ ಇಳಿಸುವ ಮೂಲಕ ಜಲಾಶಯದ ಕೆಸರನ್ನು ಹೊರ ಹಾಕಬಹುದಾಗಿದೆ.
ಜಲಾಶಯದ ಈ ಎಲ್ಲ ತೂಬುಗಳನ್ನು ಒಮ್ಮೆಲೇ ತೆರೆದರೆ 3.50 ಲಕ್ಷ ಕ್ಯೂಸೆಕ್‌ (ಒಂದು ಸೆಕೆಂಡ್‌ಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್‌ ಆಗುತ್ತದೆ) ಹೊರ ಹರಿಯುತ್ತದೆ. 80 ಅಡಿ ಮಟ್ಟದ 31 ತೂಬುಗಳ ಬಾಗಿಲುಗಳು ಇಂಗ್ಲೆಂಡ್‌ನ ರಾನ್‌ಸಮ್ಸ ಕಂಪೆನಿಯಿಂದಲೂ, ಉಳಿದ ತೂಬುಗಳ ಬಾಗಿಲುಗಳು ಭದ್ರಾವತಿಯ ಕಬ್ಬಿಣದ ಕಾರ್ಖಾನೆಯಲ್ಲಿ ಬೀಡು ಕಬ್ಬಿಣದಿಂದಲೂ ತಯಾರಿಸಲಾಗಿದೆ.[೨]
ಕೆ.ಆರ್.ಎಸ್.ಅಣೆಕಟ್ಟೆಯ ವಿವರ
ಬದಲಾಯಿಸಿ
ವಿಷಯ ವಿವರ[೨]
ಅಣೆಕಟ್ಟೆ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು 1906
ಕಾಮಗಾರಿ ಪ್ರಾರಂಭ 1906
ಕಾಮಗಾರಿ ಪೂರ್ಣಗೊಂಡಿದ್ದು 1932
ಜಲಾನಯನ ಪ್ರದೇಶದ ವಿಸ್ತೀರ್ಣ 14100ಮೈಲಿಗಳು
ಅಣೆಕಟ್ಟೆ ಬಳಿನದಿಯ ಅಗಲ 910ಅಡಿಗಳು
ಅಣೆಕಟ್ಟೆ ಏರಿಯ ಉದ್ದ 8800 ಅಡಿಗಳು
ಅಣೆಕಟ್ಟೆಯ ಪರಮಾವಧಿ ಎತ್ತರ 140 ಅಡಿಗಳು
ಅಣೆಕಟ್ಟೆಯ ತಳಪಾಯದ ಅಗಲ 111 ಅಡಿಗಳು
ಜಲಾಶಯದ ಆಳ 124 ಅಡಿಗಳು.
ಜಲಾಶಯದ ನೀರು ಹರವಿನ ವಿಸ್ತೀರ್ಣ 124 ಅಡಿಗಳು
ಗರಿಷ್ಟ ಮಟ್ಟದಲ್ಲಿ ನೀರು ನಿಲ್ಲುವ ಉದ್ದ 25 ಮೈಲಿಗಳು
ಜಲಾಶಯದ ನೀರುಸಂಗ್ರಹ ಸಾಮರ್ಥೈ 4,83,350ಲಕ್ಷ ಘನ ಅಡಿಗಳು
ಬಾಹ್ಯ ಸಂಪರ್ಕಗಳು
ಬದಲಾಯಿಸಿ
೧. ಮಾಹಿತಿ ನೆರವು ಪ್ರಜಾವಾಣಿ, ಲೇಖಕರು : ರವೀಂದ್ರ ಭಟ್ಟ
೨.ಮಾಹಿತಿ ನೆರವು ಪ್ರಜಾವಾಣಿ.೧೦-೨-೨೦೧೫
ಕೃಷ್ಣರಾಜಸಾಗರ Archived 2004-12-11 ವೇಬ್ಯಾಕ್ ಮೆಷಿನ್ ನಲ್ಲಿ.
ಶತಮಾನದ ನಾಲೆಯಲಿ ಉಕ್ಕುತಿದೆ ನೀರು...(ಚಿಕ್ಕದೇವರಾಯ ಸಾಗರ ನಾಲೆ)[೧] Archived 2016-07-27 ವೇಬ್ಯಾಕ್ ಮೆಷಿನ್ ನಲ್ಲಿ.
ತುಂಗಭದ್ರಾ ಅಣೆಕಟ್ಟು
ಉಲ್ಲೇಖ
ಬದಲಾಯಿಸಿ
ವಿಕಿಪೀಡಿಯ
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ.
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್
ವಿಕಿಪೀಡಿಯ
ವಿಕಿಪೀಡಿಯ ಅನ್ನು ಹುಡುಕಿ
[ಮರೆಮಾಡಲು]
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.
ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ
ಭಾಷೆ
Download PDF
ವೀಕ್ಷಿಸಿ
ಸಂಪಾದಿಸಿ
ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ (ಕೃ.ಭಾ.ಜ.ನಿ.ನಿ.) ಕರ್ನಾಟಕ ರಾಜ್ಯದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು (ಕೃ.ಮೇ.ಯೋ.) ಕಾರ್ಯಗತಗೊಳಿಸುವ ಉದ್ದೇಶದಿಂದ, ಕರ್ನಾಟಕ ಸರ್ಕಾರವು ಪೂರ್ಣ ಸ್ವಾಮ್ಯ ಹೊಂದಿರುವ ಒಂದು ನಿಗಮವಾಗಿ 1994ರ ಆಗಸ್ಟ್ 19ರಂದು ನಿಗಮಗಳ ಕಾಯಿದೆ 1956ರ ಅನುಸಾರ ಸ್ಥಾಪಿಸಲಾಗಿದೆ.
ಈ ನಿಗಮವು ಕೃ.ಮೇ.ಯೋ. ವ್ಯಾಪ್ತಿಯ ಎಲ್ಲಾ ನೀರಾವರಿ ಯೋಜನೆಗಳ ರಚನಾಕ್ರಮ, ತನಿಖೆ, ಅಂದಾಜು, ನೆರವೇರಿಕೆ, ಕಾಯಾಚರಣೆ ಮತ್ತು ನಿರ್ವಹಣೆಗೆ ಹೊಣೆಯಾಗಿರುತ್ತದೆ. ಭಾರತ ಸರ್ಕಾರದಿಂದ ಅನುಮತಿ ಪಡೆಯುವುದು ಮತ್ತು ಯು.ಕೆ.ಪಿ.ಯ ನಿರ್ವಹಣೆ ಕೂಡ ನಿಗಮದ ಹೊಣೆಯಾಗಿರುತ್ತದೆ. ಈ ಯೋಜನೆಯಿಂದಾಗಿ ಬಾಧಿತರಾದ ಜನರ ಪನರ್ವಸತಿಯ ಹೊಣೆಯು ನಿಗಮದ ಜವಾಬ್ದಾರಿಯಾಗಿದೆÉ. ನಿಗಮವು ನೀರಿನ ಮಾರಾಟ ಮಾಡುವ ಮತ್ತು ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಪಟ್ಟಣಗಳು, ನಗರಸಭೆ, ಪುರಸಭೆ ಮತ್ತು ಕೈಗಾರಿಕೋದ್ಯಮಗಳಿಂದ, ವ್ಯಕ್ತಿಗಳಿಂದ, ರೈತರ ಗುಂಪುಗಳಿಂದ ನೀರಿನ ಕರ ವಸೂಲು ಮಾಡುವ ಅಧಿಕಾರ ಹೊಂದಿರುತ್ತದೆ.
ಕರ್ನಾಟಕದ ಹಲವು ಪ್ರಧೇಶಗಳು ಮಳೆಯ ಕೊರತೆ ಲಕ್ಷಣವುಳ್ಳ ಪಶ್ಚಿಮ ಘಟ್ಟಗಳ ಬರ ಪೀಡಿತ ನೆರಳಿನಲ್ಲಿದೆ. ಈಶಾನ್ಯ ಕರ್ನಾಟಕದ ಬರ ಪೀಡಿತ ಭಾಗಗಳಾದ, ಬೆಂಗಳೂರಿನಿಂದ ಸುಮಾರು 456 ಕಿ.ಮಿ. ದೂರದಲ್ಲಿರುವ ಗುಲಬರ್ಗಾ, ಯಾದಗಿರ್, ರಾಯಚೂರು, ಬಾಗಲಕೋಟೆ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ಯು.ಕೆ.ಪಿ. ಮತ್ತಿತರ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಇದು ಕೃಷ್ಣಾ ಮತ್ತು ಭೀಮಾ ನದಿಗಳ ನಡುವಿದ್ದು ಒಂದು ತ್ರಿಕೋನಾಕೃತಿಯ ಪ್ರದೇಶವನ್ನು ಆವರಿಸುತ್ತದೆ. ಈ ಪ್ರದೇಶದಲ್ಲಿರುವ ಜನರು ತಮ್ಮ ಜೀವನೋಪಾಯಕ್ಕಾಗಿ ಮುಖ್ಯವಾಗಿ ಕೃಷಿಯನ್ನು ಅವಲಂಬಿಸಿರುವರು. ಈ ಪ್ರದೇಶವು ಮಳೆಯ ಅಭಾವ ಹೊರತಾಗಿಯೂ, ಬಹಳ ಫಲವತ್ತಾದ ಭೂಮಿಯನ್ನು ಹೊಂದಿರುವುದು. ಈ ಪ್ರದೇಶವನ್ನು ನೀರಾವರಿ ಸೌಲಭ್ಯ ಕಲ್ಪಿಸಿರುವುದರಿಂದ ಈ ಪ್ರದೇಶದ ಆರ್ಥಿಕ ಚಿತ್ರಣವು ಬದಲಾಗುವುದು. ಇದು ನೇರವಾಗಿ ಈ ಪ್ರದೇಶದ ಅಭಿವೃದ್ಧಿಗೆ ಮತ್ತು ಪರೋಕ್ಷವಾಗಿ ಕರ್ನಾಟಕ ರಾಜ್ಯದ ಅಭಿವೃದ್ಧಿಗೆ ಬಹಳಷ್ಟು ಮಟ್ಟಿಗೆ ಸಹಕಾರಿಯಾಗುವುದು.
ಸಂಕ್ಷಿಪ್ತ ಇತಿಹಾಸ ಮತ್ತು ನಿಗಮದ ಹಿನ್ನೆಲೆ
ಕೃಷ್ಣಾ ನದಿಯು ಪರ್ಯಾಯದ್ವೀಪದ ಭಾರತದಲ್ಲಿ ಅತಿ ದೊಡ್ಡ ನದಿಗಳಲ್ಲಿ ಎರಡನೆಯದು ಹಾಗೂ ಇದು ಪಶ್ಚಿಮ ಘಟ್ಟಗಳ ಮಹದೇವ ವ್ಯಾಪ್ತಿಯಲ್ಲಿ ಜನ್ಮತಾಳುತ್ತದೆ. ಇದು ಮಹಾರಾಷ್ಟ್ರದ ಮಹಾಬಲೇಶ್ವರದ ಹತ್ತಿರ ಪಶ್ಚಿಮ ಘಟ್ಟಗಳಲ್ಲಿ ಸಮುದ್ರ ಮಟ್ಟದ ಮೇಲೆ 1,336.49 ಮೀ. ಎತ್ತರದಲ್ಲಿ ಜನ್ಮ ತಾಳುತ್ತದೆ ಮತ್ತು ಬಂಗಾಳದ ಕೊಲ್ಲಿಯ ಪಾಲಾಗುವ ಮುನ್ನ ಪರ್ಯಾಯದ್ವೀಪದುದ್ದಕ್ಕೆ ಪಶ್ಚಿಮದಿಂದ ಪೂರ್ವಕ್ಕೆ ಸುಮಾರು 1,392 ಕಿ.ಮಿ.ಗಳಷ್ಟು ಹರಿಯುತ್ತದೆ. ತನ್ನ 304 ಕಿ.ಮಿ.ಗೆ ಇದು ಕರ್ನಾಟಕ ರಾಜ್ಯವನ್ನು ಪ್ರವೇಶಿಸುತ್ತದೆ ಹಾಗೂ 480 ಕಿ.ಮಿ.ಗಳಷ್ಟು ರಾಜ್ಯದ ಮೂಲಕ ಹಾದುಹೋಗಿ, ಕೊನೆಗೆ ಆಂಧ್ರ ಪ್ರದೇಶದ ಬಪಟ್ಲಾ ಎಂಬ ಸ್ಥಳದ ಹತ್ತಿರ ಬಂಗಾಳದ ಕೊಲ್ಲಿಗೆ ಧುಮುಕುತ್ತದೆ. ಈ ನದಿಯು ಮೂರು ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ಹರಿಯುವ ಅಂತರರಾಜ್ಯ ನದಿಯಾಗಿರುತ್ತದೆ. ನದಿಯ ಜಲಾನಯನ ಪ್ರದೇಶವು 2.57 ಲಕ್ಷ ಚದರ ಕಿ.ಮಿ ಆಗಿದ್ದು, ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ಪ್ರದೇಶ ರಾಜ್ಯಗಳು ಅನುಕ್ರಮವಾಗಿ 68,800 ಚದರ ಕಿ.ಮಿ (26.8%), 1,12,600 ಚದರ ಕಿ.ಮಿ (43.8%) ಮತ್ತು 75,600 ಚದರ ಕಿ.ಮಿ (29.4%) ಪ್ರಮಾಣದಲ್ಲಿರುತ್ತದೆ. ಮೂಲತ: ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಹಿಂದಿನ ಹೈದರಾಬಾದ್ ರಾಜ್ಯವು ಕೆಳದಂಡೆ ಕೃಷ್ಣಾ ಯೋಜನೆಯೊಡನೆ (ಈಗ ನಾಗಾರ್ಜುನಸಾಗರ ಯೋಜನೆ ಎಂದು ಕರೆಯಲ್ಪಡುತ್ತದೆ) ಪ್ರಾರಂಭಿಸಲಾಯಿತು. ಆರಂಭದಲ್ಲಿ ಈ ಯೋಜನೆಯನ್ನು ಜಾರಿಗೆ ತರಲು ಆಗಿರಲಿಲ್ಲ ಏಕೆಂದರೆ ಮುಳುಗುವಿಕೆಯು ಬಹುಮಟ್ಟಿಗೆ ಬಿಜಾಪುರ ಜಿಲ್ಲೆಯಲ್ಲಿತ್ತು, ಆ ಸಮಯದಲ್ಲಿ ಬಿಜಾಪುರವು ಮೈಸೂರು ರಾಜ್ಯದ (ಕರ್ನಾಟಕ) ಭಾಗವಾಗಿರಲಿಲ್ಲ. ರಾಜ್ಯಗಳ ಪುನರ್ಸಂಘಟನೆಯ ನಂತರ ಯೋಜನೆಯ ವ್ಯಾಪ್ತಿ ಬದಲಾವಣೆ ಮಾಡಿ ಎರಡು ಸಂಗ್ರಹಣಾ ಜಲಾಶಯಗಳು ಸೇರಿಸಲಾಯಿತು. 1973ಯಲ್ಲಿ ಕೃಷ್ಣಾ ಜಲ ವಿವಾದದ ನ್ಯಾಯಮಂಡಳಿ (ಕೃಜವಿನ್ಯಾ) ಕೃಷ್ಣಾ ನದಿ ನೀರನ್ನು ನದಿತೀರದ ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ಪ್ರದೇಶದ ನಡುವೆ ಹಂಚುವ ಬಗ್ಗೆ ತೀರ್ಪು ಪ್ರಕಟಿಸಿತ್ತು. ಕೃಜವಿನ್ಯಾ-1, ಡಿಸೆಂಬರ್ 24, 1973ರ ತನ್ನ ಅಂತಿಮ ತೀರ್ಪಿನಲ್ಲಿ ಕೃಷ್ಣಾ ನೀರಿನ 2060 ಟಿಎಂಸಿಯ 75% ಹರಿಯುವಿಕೆಗಳನ್ನು ಮೂರು ನದಿತೀರದ ರಾಜ್ಯಗಳಿಗೆ ಹಂಚಲಾಗಿದೆ ಹಾಗೂ ಕರ್ನಾಟಕ ರಾಜ್ಯದ ಪಾಲು ಒಟ್ಟಾರೆ 734 ಸಾವಿರ ದಶಲಕ್ಷ ಘನ ಅಡಿ (ಖಿಒಅ) ಯಷ್ಟು ಆಗುತ್ತದೆ. ದಿನಾಂಕ ಮೇ 27, 1976ರ ನ್ಯಾಯಮಂಡಳಿಯ ಮುಂದಿನ ವರದಿಯು, ಕಾಯ್ದೆಯ ಪರಿಚ್ಛೇದ 5(3)ರ ಅಡಿಯಲ್ಲಿ ವಿವಿಧ ರಾಜ್ಯಗಳು ಮಾಡಿದ ಉಲ್ಲೇಖಗಳ ಆಧಾರದ ಮೇಲೆ ಅಂತಿಮ ಪರಿಪೂರ್ಣ ಆದೇಶವು ಕೂಡ ಹೊಂದಿತ್ತು. ಕೇಂದ್ರ ಸರಕಾರವು ಮೇಲ್ಕಂಡ ಆದೇಶವನ್ನು ನ್ಯಾಯಮಂಡಳಿಯ ಆದೇಶವೆಂದು ವ್ಯಾಖ್ಯಾನಿಸಿತು ಮತ್ತು ಅಂತೆಯೇ ಅದನ್ನು ಎಕ್ಸ್‍ಸ್ಟಾರ್ಡಿನರಿ ಗಜೆಟ್ ದಿನಾಂಕ ಮೇ 31, 1976ರಲ್ಲಿ ಪ್ರಕಟಗೊಳಿಸಿತು ಹಾಗೂ ಇಂಥ ಪ್ರಕಟಣೆಯ ಮೇರೆಗೆ ಈ ಅಂತಿಮ ತೀರ್ಪು ಶಾಸನಬದ್ಧವಾಗಿ ಅಂತಿಮವಾಗಿದೆ ಮತ್ತು ವಿವಾದದ ಸಂದರ್ಭದಲ್ಲಿ ಇರುವ ಎಲ್ಲಾ ವ್ಯಕ್ತಿಗಳ ಮೇಲೆ ಬದ್ಧವಾಗಿರುತ್ತದೆ. ಈ ತೀರ್ಪಿನ ಅನುಷ್ಠಾನಕ್ಕಾಗಿ, ಕರ್ನಾಟಕ ಸರಕಾರವು ಹಲವು ಯೋಜನೆಗಳನ್ನೊಳಗೊಂಡ ಒಂದು ಮಾಸ್ಟರ್ ಪ್ಲಾನ್ ರೂಪಿಸಿತು. ಕೃಷ್ಣಾ ಮೇಲ್ದಂಡೆ ಯೋಜನೆಯು ಇವುಗಳಲ್ಲಿ ಒಂದು, ಇದರಲ್ಲಿ 173 ಟಿಎಂಸಿ ನೀರಿನ ಬಳಕೆಯನ್ನು ಪ್ರಸ್ತಾಪಿಸಲಾಯಿತು. ಕನಿಷ್ಠ ಸಮಯದಲ್ಲಿ ಗರಿಷ್ಠ ಲಾಭ ಪಡೆಯುವ ಸಲುವಾಗಿ, 119 ಟಿಎಂಸಿ ನೀರನ್ನು ಹಂತ 1ರಲ್ಲಿ ಮತ್ತು 54 ಟಿಎಂಸಿ ಹಂತ 2ರಲ್ಲಿ ಬಳಸಲು ಈ ಯೋಜನೆಯನ್ನು ಹಲವು ಹಂತಗಳಲ್ಲಿ ಕಾರ್ಯರೂಪಕ್ಕೆ ತರಲಾಗಿದೆ.
ಕೃಷ್ಣಾ ಜಲ ವಿವಾದದ ನ್ಯಾಯಮಂಡಳಿ-2 ಕೃಷ್ಣಾ ನೀರು ಹಂಚಿಕೆ ವಿಧಾನವನ್ನು 30-12-2010ರಂದು ಆದೇಶ ಪ್ರಕಟಿಸಿತ್ತು. ಹೆಚ್ಚುವರಿ ಹರಿವುಗಳಿಗಾಗಿ ನದಿತೀರದ ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ಪ್ರದೇಶಕ್ಕೆ ಕೃಷ್ಣಾ ಜಲ ವಿವಾದದ ನ್ಯಾಯಮಂಡಳಿ-2 ಮಾಡಿದ ನೀರಿನ 65% ಹಂಚಿಕೆಯು ಈ ಕೆಳಗಿನಂತಿದೆ:
1 ಮಹಾರಾಷ್ಟ್ರ - 81 ಟಿಎಮ್‍ಸಿ 2 ಕರ್ನಾಟಕ -177 ಟಿಎಮ್‍ಸಿ 3 ಆಂಧ್ರ ಪ್ರದೇಶ -190 ಟಿಎಮ್‍ಸಿ
ಕೃಜವಿನ್ಯಾ-2, ಕರ್ನಾಟಕ ರಾಜ್ಯಕ್ಕೆ ಕೊಟ್ಟಿರುವ 177 ಟಿಎಮ್‍ಸಿಯಲ್ಲಿ, 130.90 ಟಿಎಮ್‍ಸಿಯು ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಹಂಚಿಕೆ ಮಾಡಿಲಾಗಿದೆ.
ಕೃಷ್ಣಾ ಮೇಲ್ದಂಡೆ ಯೋಜನೆ
ಕೃಷ್ಣಾ ಮೇಲ್ದಂಡೆ ಯೋಜನೆಯು ಕೃಷ್ಣಾ ನದಿಯ ಉದ್ದಗಲಕ್ಕೆ ಎರಡು ಆಣೆಕಟ್ಟುಗಳು ಮತ್ತು ಕಾಲುವೆಗಳ ಜಾಲ ಹೊಂದಿರುತ್ತದೆ. ಘಟಪ್ರಭಾ ನದಿ ಮತ್ತು ಕೃಷ್ಣಾ ನದಿಗಳ ಸಂಗಮದಿಂದ ಕೆಲವು ಕಿ.ಮಿ ಕೆಳದಿಕ್ಕಿನಲ್ಲಿ ಅಲಮಟ್ಟಿ ಜಲಾಶಯವು ಪ್ರಮುಖ ಶೇಖರಣೆ ಜಲಾಶಯವಾಗಿದೆ. ಮಲಪ್ರಭಾ ನದಿ ಮತ್ತು ಕೃಷ್ಣಾ ನದಿಗಳ ಸಂಗಮದಿಂದ ಕೆಲವು ಕಿ.ಮಿ ಕೆಳದಿಕ್ಕಿನಲ್ಲಿ ನಾರಾಯಣಪುರದಲ್ಲಿ ಸ್ಥಿತವಿರುವ ಕೆಳಭಾಗದ ಅಣೆಕಟ್ಟು, ನಾರಾಯಣಪುರ ಆಣೆಕಟ್ಟು, ದಿಕ್ಪರಿವರ್ತನಾ ಆಣೆಕಟ್ಟಾಗಿ ಕಾರ್ಯನಿರ್ವಹಿಸುವುದು. ಈ ಯೋಜನೆಯನ್ನು ವಿವಿಧ ಹಂತಗಳು ಮತ್ತು ಘಟಕಗಳಲ್ಲಿ ಅಳವಡಿಸಲು ಉದ್ದೇಶಿಸಲಾಗಿದೆ. ಯೋಜನೆಯ ಹಂತ-1, 119 ಟಿಎಂಸಿ ನೀರನ್ನು ಉಪಯೋಗಿಸಿ 4,25,000 ಹೆಕ್ಟೇರುಗಳ ಪ್ರದೇಶವನ್ನು ನೀರಾವರಿಯಾಗಿ ಪರಿವರ್ತಿಸಲು ಆಲೋಚಿಸಿದೆ ಹಾಗೂ ಹಂತ-2ರಲ್ಲಿ, 54 ಟಿಎಂಸಿ ನೀರನ್ನು ಬಳಸಿ 1,97,120 ಹೆಕ್ಟೇರುಗಳ ಪ್ರದೇಶವನ್ನು ನೀರಾವರಿಯಾಗಿ ಪರಿವರ್ತಿಸಲು ಯೋಜಿಸಲಾಗಿದೆ. ಉತ್ತರ ಕರ್ನಾಟಕದ ಬರ ಪೀಡಿತ ಜಿಲ್ಲೆಗಳ ಅಚ್ಚುಕಟ್ಟು ಪ್ರದೇಶಗಳಾದ ಗುಲಬರ್ಗಾ, ಯಾದಗಿರ್, ರಾಯಚೂರು, ಬಿಜಾಪುರ ಮತ್ತು ಬಾಗಲಕೋಟೆ, ಈ ಸ್ಥಳಗಳಿಗೆ ಕೃಮೇಯೋ ಹಂತ 1 ಮತ್ತು 2ರ ಕೆಳಗೆ ಒಟ್ಟು 173 ಟಿಎಂಸಿ ನೀರಿನ ಬಳಕೆಯೊಂದಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಈಗಾಗಲೇ, ಕೃಮೇಯೋ ಹಂತ-1 ಮತ್ತು 2ರ ಯೋಜನೆ ಬಹಳಷ್ಟು ಪೂರ್ಣಗೊಂಡಿದ್ದು 6.08 ಲಕ್ಷ ಹೆಕ್ಟೇರುಗಳಿಗೆ ನೀರಾವರಿ ಸೌಲಭ್ಯ ಒದಗಿಸಲಾಗಿದೆ.