text
stringlengths 0
2.67k
|
---|
ಮಂಗಳೇಶ |
ಉತ್ತರಾಧಿಕಾರಿ |
೧ನೇ ವಿಕ್ರಮಾದಿತ್ಯ |
ವಂಶ |
ಚಾಲುಕ್ಯ ಸಾಮ್ರಾಜ್ಯ |
ತಂದೆ |
೧ನೇ ಕೀರ್ತಿವರ್ಮ |
ಮಹಾರಾಜ ಇಮ್ಮಡಿ ಪುಲಿಕೇಶಿಯ ಹೆಂಡತಿಯು ಅಳುಪ (ಆಳ್ವಾ) ವಂಶದವರು. ಪುಲಿಕೇಶಿಯು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಥೈಲ್ಯಾಂಡ್ ಮತ್ತು ಕಾಂಬೋಡಿಯಾ ದೇಶದ ನಡುವೆ ದೇವಾಲಯ ನಿರ್ಮಿಸಿದ್ದಾರೆ. ಬಾದಾಮಿಯ ಭೂತನಾಥ ದೇವಾಲಯ ಬನವಾಸಿ ಮಾದರಿಯಲ್ಲಿ ಕೆತ್ತಲಾಗಿದೆ. ಮೂರನೇ, ನಾಲ್ಕನೇ ಗುಹಾಂತರ ದೇವಾಲಯದಲ್ಲಿ ಜೈನ ಧರ್ಮದ ದೇವರುಗಳು, ನಾಲ್ಕನೇ ಗುಹಾಂತರ ದೇವಾಲಯ ಸಂಪೂರ್ಣ ಜಿನೇಂದ್ರ ದೇವಾಲಯವಿದೆ. ಚಾಲುಕ್ಯ ಅರಸರಿಗೆ ಕುದುರೆ ಮತ್ತು ಆನೆಗಳನ್ನು ಥೈಲ್ಯಾಂಡ್ ಮತ್ತು ಕಾಂಬೋಡಿಯಾ ಆಮದು ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. |
ಪರಿವಿಡಿ |
ಹೆಸರುಗಳು ಮತ್ತು ಬಿರುದುಗಳು |
ಪುಲಕೇಶಿಯ ಹೆಸರಿನ ಎರಡು ರೂಪಾಂತರಗಳು ಚಾಲುಕ್ಯರ ದಾಖಲೆಗಳಲ್ಲಿ ಕಂಡುಬರುತ್ತವೆ: "ಪುಲಿಕೇಶಿನ್" ಮತ್ತು "ಪೊಲೆಕೇಶಿನ್"[೧] "ಎರೆಯ" ಎಂಬುದು ಅವನ ಇನ್ನೊಂದು ಹೆಸರು ಎಂದು ತೋರುತ್ತದೆ: ಪೆದ್ದವಡುಗೂರು ಶಾಸನವು ಅವನನ್ನು "ಎರೆಯಾತಿಯಾಡಿಗಳ್"[೨] (ಅಥವಾ "ಎರೆಯಿತಿಯಾದಿಗಳ್"[೩]) ಎಂದು ಸಂಬೋಧಿಸುತ್ತವೆ, ಮತ್ತು ಬಿಜಾಪುರ-ಮುಂಬೈ ಶಾಸನವು "ಎರಜ" ಎಂಬ ರೂಪಾಂತರವನ್ನು ಉಲ್ಲೇಖಿಸುತ್ತದೆ.[೪] ಎರೆಯ ಎಂಬುದು ಪುಲಕೇಶಿನ ಪಟ್ಟಾಭಿಷೇಕದ ಪೂರ್ವದ ಹೆಸರು ಎಂಬುದು ಇತಿಹಾಸಕಾರ ಕೆ.ವಿ.ರಮೇಶರ ಸಿದ್ಧಾಂತ.[೫] |
ಸತ್ಯಾಶ್ರಯ, ಪುಲಕೇಶಿಯ ಆನುವಂಶಿಕ ಬಿರುದು, ಸಾಮಾನ್ಯವಾಗಿ ರಾಜವಂಶದ ದಾಖಲೆಗಳಲ್ಲಿ ಅವನ ಹೆಸರಿಗೆ ಪರ್ಯಾಯವಾಗಿ ಬಳಸಲಾಗುತ್ತಿತ್ತು.[೧] ಅವರು ರಾಜವಂಶದ ಅತ್ಯಂತ ಪ್ರಸಿದ್ಧ ಆಡಳಿತಗಾರರಾಗಿದ್ದರು, ಈ ಕಾರಣದಿಂದಾಗಿ ನಂತರದ ಆಡಳಿತಗಾರರು ತಮ್ಮ ರಾಜವಂಶವನ್ನು ಸತ್ಯಾಶ್ರಯ-ಕುಲ ಎಂದು ಕರೆದರು.[೬] |
ಪುಲಕೇಶಿಯ ಸಾಮ್ರಾಜ್ಯಶಾಹಿ ಬಿರುದುಗಳಲ್ಲಿ "ಭಟ್ಟರಕ" ಮತ್ತು "ಮಹಾರಾಜಾಧಿರಾಜ" ಸೇರಿವೆ. ಜೊತೆಗೆ, ಅವರು ಶ್ರೀ-ಪೃಥ್ವಿ-ವಲ್ಲಭ, ವಲ್ಲಭ, ಮತ್ತು ಶ್ರೀ-ವಲ್ಲಭ ಎಂಬ ಕುಟುಂಬದ ವಿಶೇಷಣಗಳನ್ನು ಸಹ ಬಳಸಿದ್ದಾರೆ.[೧] ಹರ್ಷನನ್ನು ಸೋಲಿಸಿದ ನಂತರ ಪುಲಕೇಶಿಯು ಪರಮೇಶ್ವರ ಎಂಬ ಬಿರುದನ್ನು ಪಡೆದರು, ಇದು ಅವರ ಬಿಜಾಪುರ-ಮುಂಬೈ ಶಾಸನದಿಂದ ದೃಢೀಕರಿಸಲ್ಪಟ್ಟಿದೆ.[೪] |
ಚೀನೀ ಪ್ರವಾಸಿ ಕ್ಸುವಾನ್‌ಜಾಂಗ್ ಅವನನ್ನು ಪು-ಲೋ-ಕಿ-ಶೆ ಎಂದು ಕರೆಯುತ್ತಾನೆ.[೪] ಪರ್ಷಿಯನ್ ಇತಿಹಾಸಕಾರ ಅಲ್-ತಬರಿ ಅವನನ್ನು "ಪರಮೇಸ" ಅಥವಾ "ಫಾರ್ಮಿಸ್" ಎಂದು ಕರೆಯುತ್ತಾನೆ, ಬಹುಶಃ ಅವನ ಬಿರುದು ಪರಮೇಶ್ವರನ ಪರ್ಷಿಯನ್ ಪ್ರತಿಲೇಖನ.[೧] |
ಹರ್ಷವರ್ಧನನನ್ನು ಎದುರಿಸಿದ್ದು |
ಇವನ ಕಾಲದಲ್ಲಿಯೇ ಸಕಲೋತ್ತರಾಪಥೇಶ್ವರನೆಂದು ಕರೆದು ಕೊಳ್ಳುತ್ತಿದ್ದ ಹರ್ಷವರ್ಧನನು ದಕ್ಷಿಣಾಪಥವನ್ನು ಜಯಿಸಬೇಕೆಂಬ ಮಹದಾಕಾಂಕ್ಷೆಯಿಂದ ವಿಂಧ್ಯಪರ್ವತದ ಸಮೀಪದಲ್ಲಿ ರೇವಾನದಿಯ ತೀರದಲ್ಲಿ ಬೀಡುಬಿಟ್ಟಿದ್ದನು. ಇದನ್ನು ಸಹಿಸಲಾರದೆ ಇಮ್ಮಡಿ ಪೊಲೆಕೇಶಿಯು ಹರ್ಷವರ್ಧನನನ್ನು ಎದುರಿಸಿ ಅವನ ಸೈನ್ಯವನ್ನು ಧ್ವಂಸಮಾಡಿ ಅವನನ್ನು ಹೊಡೆದಟ್ಟಿ ಪರಮೇಶ್ವರನೆಂಬ ಬಿರುದನ್ನು ಪಡೆದು, ದಕ್ಷಿಣಾಪಥಸ್ವಾಮಿ/ದಕ್ಷಿಣಾಪಥೇಶ್ವರ ಎಂಬ ಬಿರುದನ್ನು ಧರಿಸಿ, ಪಶ್ಚಿಮ ಸಮುದ್ರದಿಂದ ಬಂಗಾಳ ಕೊಲ್ಲಿಯವರೆಗೂ, ನರ್ಮದಾನದಿಯಿಂದ ದಕ್ಷಿಣ ಸಮುದ್ರದವರೆಗೂ ತನ್ನ ಸಾರ್ವಭೌಮತ್ವವನ್ನು ಸ್ಥಾಪಿಸಿ, ಬಾದಾಮಿ ರಾಜಧಾನಿಯಿಂದ ಈ ಸಾಮ್ರಾಜ್ಯವನ್ನು ಆಳುತ್ತಿದ್ದನೆಂದು ಇವನ ಸುಪ್ರಸಿದ್ಧ ಐಹೊಳೆ ಶಾಸನವು (ಕ್ರಿ.ಶ.೬೩೪) ತಿಳಿಸುತ್ತದೆ. ಇವನ ಖ್ಯಾತಿಯು ಭಾರತದಲ್ಲಿ ಮಾತ್ರವಲ್ಲದೆ ಪರದೇಶಗಳಲ್ಲಿಯೂ ಹಬ್ಬಿತ್ತು. |
ಇವನ ಸಮಕಾಲೀನನಾಗಿ ಇರಾನ್ ದೇಶದ ದೊರೆಯಾಗಿದ್ದ ಎರಡನೆಯ ಖುಸ್ರುವು ತನ್ನ ರಾಯಭಾರಿಯ ಕೈಯಲ್ಲಿ ಅನೇಕ ಬೆಲೆಬಾಳುವ ಬಹುಮಾನಗಳನ್ನು ಪುಲಕೇಶಿಗೆ ಕಳುಹಿಸಿಕೊಟ್ಟನೆಂದೂ, ಇವರಿಬ್ಬರಿಗೂ ಆಗಿಂದಾಗ್ಗೆ ಪತ್ರವ್ಯವಹಾರವು ನಡೆಯುತ್ತಿದ್ದಿತೆಂದೂ ತಿಳಿದುಬಂದಿದೆ. ಪುಲಕೇಶಿಯ ಕಾಲದಲ್ಲಿ ಭಾರತದಲ್ಲಿ ಸಂಚಾರ ಮಾಡಿದ ಹ್ಯೂಯೆನ್‌ತ್ಸಾಂಗ್ ಎಂಬ ಚೀನಾ ದೇಶದ ಯಾತ್ರಿಕನು ಪುಲಕೇಶಿಯ ರಾಜ್ಯವನ್ನು ಅತಿವಿವರವಾಗಿ ವರ್ಣಿಸಿದ್ದಾನೆ. |
ಇಮ್ಮಡಿ ಪುಲಿಕೇಶಿಯ ಕಾಲದಲ್ಲಿ ವಿಸ್ತರಿಸಿದ್ದ ಚಾಲುಕ್ಯ ಸಾಮ್ರಾಜ್ಯದ ವಿಸ್ತಾರತೆ, ಇತಿಹಾಸಕಾರ ಸೂರ್ಯಕಾಂತ್ ಯು. ಕಾಮತ್ ರ ಅಭಿಪ್ರಾಯದಂತೆ |
ಹುಲಿಯ ಕೂದಲನ್ನು ಹೋಲುವ ಕೂದಲುಳ್ಳವ |
ಇಂತಹ ಕೀರ್ತಿವಂತರಾದ ರಾಜರ ಹೆಸರಿನ ಅರ್ಥವನ್ನು ವಿದ್ವಾಂಸರು ಬೇರೆ ಬೇರೆ ವಿಧವಾಗಿ ಹೇಳಿದ್ದಾರೆ. ಮೊದಮೊದಲಿಗೆ ಹುಟ್ಟಿದ ಈ ವಂಶದ ಶಾಸನಗಳಲ್ಲಿ ಈ ಹೆಸರಿನ ರೂಪವು ಪೊಲೆಕೇಶಿ ಎಂದೇ ಕಾಣಬರುತ್ತಿದ್ದರೂ, ಪುಲಿಕೇಶಿ, ಪುಲಕೇಶಿ ಮೊದಲಾದ ರೂಪಾಂತರಗಳೂ ಶಾಸನಗಳಲ್ಲಿ ಸಿಕ್ಕುತ್ತವೆ. ಬಹುಮಂದಿ ವಿದ್ವಾಂಸರು ಈ ಹೆಸರಿನ ಪೂರ್ವಾರ್ಧವನ್ನು “ಪುಲಿ” ಎಂದರೆ ಹುಲಿ ಎಂದೂ, “ಕೇಶಿನ್” ಎಂದರೆ ಕೂದಲುಳ್ಳವ ನೆಂದೂ, ಈ ಎರಡು ಪದಗಳೂ ಸೇರಿ “ಹುಲಿಯ ಕೂದಲನ್ನು ಹೋಲುವ ಕೂದಲುಳ್ಳವ” ನೆಂದೂ ಅರ್ಥ ಮಾಡಿದ್ದಾರೆ. ಆದರೆ ಹನ್ನೊಂದನೆಯ ಶತಮಾನದ ಈ ಮನೆತನದ ಶಾಸನಗಳಲ್ಲಿ ಈ ರಾಜರ ವಂಶಾವಳಿಯನ್ನು ಕೊಡುವ ಪದ್ಯಗಳಲ್ಲೊಂದು ಇಮ್ಮಡಿ ಪುಲಕೇಶಿಯನ್ನು ಈ ರೀತಿ ವರ್ಣಿಸುತ್ತದೆ : |
ವಯಮಪಿಪುಲಕೇಶಿಕ್ಷ್ಮಾಪತಿಂ ವರ್ಣಯಂತಃ |
ಪುಲಕಕಲಿತದೇಹಾಃ ಪಶ್ಯತಾದ್ಯಾಪಿಸಂತಃ | |
ಅಂದರೆ “ಪುಲಕೇಶಿ ರಾಜನನ್ನು ವರ್ಣಿಸುತ್ತಿದ್ದರೆ ನಮ್ಮ ಶರೀರವು ಸಂತೋಷದಿಂದ ಪುಲಕಾಂಕಿತವಾಗುತ್ತದೆ” ಎಂದಿರುವುದರಿಂದ, ಹನ್ನೊಂದನೇ ಶತಮಾನದಲ್ಲಿಯೇ ಆಸ್ಥಾನ ಕವಿಗಳು ಈ ಪುಲಕೇಶಿ ಎಂಬ ಪದವು “ಪುಲಕ” ಎಂಬ ಶಬ್ದದಿಂದ ಹುಟ್ಟಿರಬಹುದೆಂದು ಭಾವಿಸಿದ್ದರೆಂದು ತೋರುತ್ತದೆಯೆ ವಿನಾ ಪುಲಿ=ಹುಲಿ ಎಂಬ ಮಾತಿಗೂ ಈ ಪದಕ್ಕೂ ಸಂಬಂಧವನ್ನು ಅವರು ಕಲ್ಪಿಸಿದ್ದಂತೆ ಕಾಣುವುದಿಲ್ಲ. ಈ ಶ್ಲೋಕವು ಈ ಮನೆತನದ ಬೇರೆ ಬೇರೆ ಮೂವರು ರಾಜರ (ಐದನೆಯ ವಿಕ್ರಮಾದಿತ್ಯ ಕ್ರಿ.ಶ. ೧೦೯೯ ಇಮ್ಮಡಿ ಜಯಸಿಂಹ‑ ೧೦೨೪; ಆರನೆಯ ವಿಕ್ರಮಾದಿತ್ಯ ೧೦೭೭) ಶಾಸನಗಳಲ್ಲಿ ದೊರಕುವುದರಿಂದ, ಈ ಶ್ಲೋಕವನ್ನೊಳಗೊಂಡ ವಂಶಾವಳಿಯು ರಾಜರಿಂದ ಅನುಮೋದಿಸಲ್ಪಟ್ಟು ಅರಮನೆಯ ಕೋಷ್ಠಾಗಾರದಲ್ಲಿ ಇಟ್ಟಿದ್ದು ಅವಶ್ಯಕವಾದಾಗಲೆಲ್ಲಾ ಉಪಯೋಗಿಸಲ್ಪಡುತ್ತಿದ್ದಿತೆಂದು ತಿಳಿಯುತ್ತದೆ. ಕ್ರಿ.ಶ. ೧೦೭೭ರ ಆರನೆಯ ವಿಕ್ರಮಾದಿತ್ಯನ ಯೇವೂರು ಶಾಸನದಲ್ಲಿ ವಂಶಾವಳಿಯ ಕೊನೆಯಲ್ಲಿ “ಇದು ತಾಮ್ರ ಶಾಸನದೊಳಿಱ್ದ ಚಾಳುಕ್ಯ ಚಕ್ರವರ್ತಿಗಳ ವಂಶದ ರಾಜ್ಯಂಗೆಯ್ದರಸುಗಳ ರಾಜಾವಳಿ” ಎಂದು ಕೊಟ್ಟಿರುವ ವಾಕ್ಯವು ಈ ಅಂಶವನ್ನು ಸ್ಪಷ್ಟಗೊಳಿಸುತ್ತದೆ. ಪ್ರೊ. ನೀಲಕಂಠಶಾಸ್ತ್ರಿಗಳು ಮಾತ್ರ ಈ ಹೆಸರಿನ ಪೂರ್ವಾರ್ಧವು ಸಂಸ್ಕೃತ “ಪುಲ್” ಎಂದರೆ “ಅಭಿವೃದ್ದಿಗೊಳ್ಳು” ಅಥವಾ “ಹಿರಿಮೆಯನ್ನು ಪಡೆ” ಎಂಬ ಧಾತುವಿನಿಂದ ಹುಟ್ಟಿದ್ದೆಂದೂ ಉತ್ತರಾರ್ಧವಾದ “ಕೇಶಿನ್” ಅಂದರೆ “ಸಿಂಹ”ವೆಂದೂ ತೆಗೆದುಕೊಂಡು ಈ ಹೆಸರಿನ ಅರ್ಥವನ್ನು ಶ್ರೇಷ್ಠವಾದ ಸಿಂಹವೆಂದು ವಿವರಿಸಿದ್ದಾರೆ. ಅವರು ಈ ಹೆಸರಿಗೂ ಪುಲಿ =ಹುಲಿಗೂ ಸಂಬಂಧವಿದ್ದಿತೆಂಬುದನ್ನು ಒಪ್ಪುವುದಿಲ್ಲ.ಆದರೆ ಮೇಲೆಯೇ ಹೇಳಿರುವಂತೆ ಈ ವಂಶದ ಅತಿ ಪ್ರಾಚೀನವಾದ ಶಾಸನಗಳಲ್ಲಿರುವ ಈ ಹೆಸರಿನ ರೂಪವಾದ “ಪೊಲೆಕೇಶಿ”ಯೇ ಮೂಲರೂಪವಿರಬೇಕೆಂದು ಡಾ.ಫ್ಲೀಟ್ ಹೇಳಿದ್ದಾರೆ. ಈ ರೂಪವನ್ನೇ ಶಾಸನ ಪರಿಶೋಧಕರಲ್ಲಿ ಅಗ್ರಗಣ್ಯರಾದ ಡಾ.ಕೀಲ್‌ಹಾರ್ನ್ ಅವರೂ ಸಹ ಬಳಸಿದ್ದಾರೆ. ಮೊಟ್ಟಮೊದಲಿನ ಈ ಹೆಸರಿನ ರೂಪವಾದ “ಪೊಲೆಕೇಶಿ” ಎಂಬ ಪದವು ನನ್ನ ಅಭಿಪ್ರಾಯದಂತೆ ಪೊಲೆ ಮತ್ತು ಕೇಶಿ ಎಂಬ ಶುದ್ಧ ಕನ್ನಡ ಶಬ್ದಗಳ ಸಂಯೋಗದಿಂದ ಉಂಟಾದ ಪದ. ಇದರ ಪೂರ್ವಾರ್ಧವಾದ “ಪೊಲೆ” ಎಂಬುದಕ್ಕೆ “ಹೊಲೆಮನೆ” ಎಂದರ್ಥ. “ಕೇಶಿ” ಎಂಬುದು “ಕೇಶವ” ಎಂಬ ಹೆಸರಿನ ಸಂಕ್ಷಿಪ್ತರೂಪ. ಈ ರೂಪದಲ್ಲಿ ಈ ಪದವು ಕನ್ನಡ ಸಾಹಿತ್ಯದಲ್ಲಿಯೂ ಶಾಸನಗಳಲ್ಲಿಯೂ ಸಿಕ್ಕುತ್ತದೆ. “ಶಬ್ದಮಣಿದರ್ಪಣ”ವನ್ನು ರಚಿಸಿದ ಕೇಶಿರಾಜನು ತನ್ನ ಹೆಸರಿನ ಕೇಶಿ, ಕೇಶವ ಎಂಬ ಎರಡು ರೂಪಗಳನ್ನೂ ಈ ಗ್ರಂಥದಲ್ಲಿ ಕೊಟ್ಟಿದ್ದಾನೆಂಬುದು ಗಮನಾರ್ಹವಾಗಿದೆ. ಇದೇ ರೀತಿಯಲ್ಲಿ ಶಾಸನಗಳಲ್ಲಿ ಕೇಶವ ಎಂಬ ಹೆಸರುಳ್ಳ ಅನೇಕ ಸಾಮಂತಾದಿಗಳು ಕೇಶಿರಾಜ, ಕೇಶಿಗೌಂಡ, ಕೇಶಿಮಯ್ಯ ಎಂಬ ಹೆಸರುಗಳಿಂದಲೂ ತಮ್ಮನ್ನು ಕರೆದುಕೊಂಡಿದ್ದಾರೆ. ಆದುದರಿಂದ “ಪೊಲೆಕೇಶಿ” ಎಂದರೆ ಹೊಲೆಮನೆಯಲ್ಲಿದ್ದಾಗಿನಿಂದಲೇ ಕೇಶವ(ಶ್ರೀಕೃಷ್ಣ)ನಂತೆ ಅಪರಿಮಿತ ಪ್ರಭಾವಶಾಲಿ ಎಂದರ್ಥ. ಈ ಸಂದರ್ಭದಲ್ಲಿ ಮೇಲೆ ಉಲ್ಲೇಖಿಸಿರುವ ಹನ್ನೊಂದನೇ ಶತಮಾನದ ಚಾಲುಕ್ಯ ಶಾಸನವು ಇಮ್ಮಡಿ ಪುಲಕೇಶಿಯನ್ನು, “ಪುಲಕೇಶಿ ಕೇಶಿ ನಿಪೂದನಸಮೋ,” ಅಂದರೆ ಪುಲಕೇಶಿಯು ಕೇಶಿ ಎಂಬ ರಾಕ್ಷಸನನ್ನು ಸಂಹರಿಸಿದ ಶ್ರೀಕೃಷ್ಣನಿಗೆ ಸಮಾನನಾದವನು ಎಂದು ವರ್ಣಿಸುತ್ತದೆ ಎಂಬ ಅಂಶವನ್ನು ಗಮನಿಸಬಹುದು. ಹೊಲೆಮನೆಯಲ್ಲಿದ್ದಾಗಿನಿಂದಲೇ ಶ್ರೀಕೃಷ್ಣನು ಅದ್ಭುತವಾದ ಸಾಹಸಗಳನ್ನು ತೋರಿದನೆಂಬ ವಿಷಯವನ್ನು ಪುರಾಣಗಳು ವರ್ಣಿಸುತ್ತವೆ. ಆದುದರಿಂದ ಚಿಕ್ಕಂದಿನಿಂದಲೇ ಶ್ರೀಕೃಷ್ಣನಂತೆ ಅದ್ಭುತವಾದ ಕಾರ್ಯಗಳನ್ನು ಸಾಧಿಸಿದ ಪುರುಷನೆಂದು “ಪೊಲೆಕೇಶಿ” ಎಂಬ ಪದದ ಅರ್ಥ. ಇದು ಬಾಲ್ಯದಿಂದಲೇ ಮಹತ್ಕಾರ್ಯಗಳನ್ನು ಸಾಧಿಸಿದ ಪೊಲೆಕೇಶಿ ಎಂಬ ಹೆಸರಿನ ಇಬ್ಬರು ಚಾಲುಕ್ಯ ರಾಜರಿಗೆ (ಮುಖ್ಯವಾಗಿ ಇಮ್ಮಡಿ ಪೊಲೆಕೇಶಿಗೆ) ಅರ್ಥವತ್ತಾಗಿದ್ದು ಎಷ್ಟು ಚೆನ್ನಾಗಿ ಒಪ್ಪುತ್ತದೆ! ಹೆಸರಿಗೆ ತಕ್ಕ ಶೌರ್ಯ, ಪರಾಕ್ರಮ ಸಾಹಸ, ಕೀರ್ತಿ! |
ಉಲ್ಲೇಖಗಳ ವಿವರ |
ಉಲ್ಲೇಖಗಳು |
ವಿಕಿಪೀಡಿಯ |
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. |
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್ |
ವಿಕಿಪೀಡಿಯ |
ವಿಕಿಪೀಡಿಯ ಅನ್ನು ಹುಡುಕಿ |
[ಮರೆಮಾಡಲು] |
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ. |
ಐಹೊಳೆ |
ಮಲಪ್ರಭಾ ನದಿಯ ದಂಡೆಯಲ್ಲಿ ಇರುವ ಯಾತ್ರಾ ಸ್ಥಳ, ಕರ್ನಾಟಕ |
ಭಾಷೆ |
Download PDF |
ವೀಕ್ಷಿಸಿ |
ಸಂಪಾದಿಸಿ |
ಭಾರತೀಯ ಶಿಲ್ಪಕಲೆಯ ತೊಟ್ಟಿಲು ಎನಿಸಿರುವ ಐಹೊಳೆಯು, ಬೆಂಗಳೂರಿನಿಂದ ೪೮೩ ಕಿ. ಮೀ ಹಾಗೂ ಹುನಗುಂದ ದಿಂದ ೩೫ ಕಿ.ಮಿ ಗಳ ದೂರದಲ್ಲಿ ಮಲಪ್ರಭಾ ನದಿಯ ದಂಡೆಯಲ್ಲಿದೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿಗೆ ಸೇರಿದ ಐಹೊಳೆ ಬಾದಾಮಿ ಚಾಲುಕ್ಯ ವಾಸ್ತುಶಿಲ್ಪ ಶೈಲಿಯ ಒಂದು ದೊಡ್ಡ ಕೇಂದ್ರವಾಗಿದೆ. |
ಐಹೊಳೆ |
ಐಹೊಳೆ ನಗರದ ಪಕ್ಷಿನೋಟಐಹೊಳೆಯ ದುರ್ಗಾ ದೇವಾಲಯ |
ಐಹೊಳೆ |
ರಾಜ್ಯ |
- ಜಿಲ್ಲೆ |
ಕರ್ನಾಟಕ |
- ಬಾಗಲಕೋಟೆ |
ನಿರ್ದೇಶಾಂಕಗಳು |
16.019167° N 75.881944° E |
ವಿಸ್ತಾರ |
{{{area_total}}} km² |
ಸಮಯ ವಲಯ |
IST (UTC+5:30) |
ಜನಸಂಖ್ಯೆ |
- ಸಾಂದ್ರತೆ |
- {{{population_density}}}/ಚದರ ಕಿ.ಮಿ. |
ಕೋಡ್‍ಗಳು |
- ಪಿನ್ ಕೋಡ್ |
- ಎಸ್.ಟಿ.ಡಿ. |
- ವಾಹನ |
- 587138 |
- +08351 |
- |
ಪರಿವಿಡಿ |
ಇತಿಹಾಸ |
ಬದಲಾಯಿಸಿ |
ಐಹೊಳೆಯು ಬಾದಾಮಿ ಚಾಲುಕ್ಯರ ಮೊದಲ ರಾಜಧಾನಿಯಾಗಿದ್ದಿತು. ಈ ಸ್ಥಳದ ದೇವಾಲಯಗಳು ಹಾಗೂ ದೇವಾಲಯದ ಶಿಲ್ಪಗಳು ಅತಿ ಹೆಚ್ಚು ಪ್ರಾಚೀನವಾದವುಗಳಾಗಿವೆ. ಇದು ಚಾಲುಕ್ಯರ ಕಾಲದಲ್ಲಿ ವಿದ್ಯಾಕೇಂದ್ರವಾಗಿತ್ತು. ಐಹೊಳೆ ಒಂದು "ಅಧಿ ಷ್ಠಾನ". ಅಂದರೆ ಸರಕಾರದ ಆಡಳಿತಾಕಾರದ ಒಂದು ಕೇಂದ್ರ ಅಥವಾ ರಾಜಧಾನಿನಗರವಾಗಿತ್ತು. ಐಹೊಳೆಯ ಹೆಸರು ಶಾಸನಗಳಲ್ಲಿ ಆರ್ಯಪುರ' ಎಂದು ಉಲ್ಲೇಖಿಸಲ್ಪಟ್ಟಿದೆ. ಆರ್ಯಪುರವಾಗಿದ್ದ ಸ್ಥಳ ಕಾಲಾನುಕ್ರಮದಲ್ಲಿ ಆಡುಭಾಷೆಯಲ್ಲಿಐಹೊಳೆ ಯಾಯಿ ತು. ಐಹೊಳೆ ಅತ್ಯಂತ ಪ್ರಾಚೀನ ಗ್ರಾಮ. ಐಹೊಳೆಗೆ ಭಾರತೀಯ ಇತಿಹಾಸದಲ್ಲಿ ತುಂಬ ಮಹತ್ವದ ಸ್ಥಾನವಿದೆ. ಇದನ್ನು ದೇವಾಲಯ ವಾಸ್ತು ನಿರ್ಮಾಣದ ತೊಟ್ಟಿಲು ಎಂದು ಕರೆಯುತ್ತಾರೆ. 6ರಿಂದ 8ನೇ ಶತಮಾನದವರೆಗೆ ಗುಹಾಲಯ ಹಾಗು ದೇವಾಲಯಗಳ ನಿರ್ಮಾಣದಲ್ಲಿ ಅನೇಕ ರೀತಿಯ ಪ್ರಯೋಗಗಳು ನಡೆದದ್ದನ್ನು ಕಾಣುತ್ತೇವೆ. ಶಾಸನದಲ್ಲಿ ಈ ಸ್ಥಳವನ್ನು ಅಯ್ಯವೊಳೆ-ಆಯಿವೊಳೆ-ಐಯಾವೊಳಿ-ಆರ್ಯಪುರ ಮುಂತಾಗಿ ಉಲ್ಲೇಖಿಸಲಾಗಿದ್ದು ಬರುಬರುತ್ತ ಐಹೊಳೆ ಆಗಿರುವ ಸಾಧ್ಯತೆ ಇದೆ. ಇದಲ್ಲದೇ ಐನೂರು ಪಂಡಿತರು ಇದ್ದದ್ದರಿಂದ ಐಹೊಳೆ ಎಂದಾಯ್ತೆಂತಲೂ ಪರುಶುರಾಮನು ಕ್ಷತ್ರಿಯರನ್ನು ನಿರ್ನಾಮ ಮಾಡಿ ರಕ್ತ ಸಿಕ್ತ ಪರಶುವನ್ನು ಇಲ್ಲಿನ ಹೊಳೆಯೊಂದರಲ್ಲಿ ತೊಳೆದಾಗ ಇಡೀ ನದಿ ನೀರೆ ಕೆಂಪಾಯ್ತತಂತೆ. ಇದನ್ನು ಕಂಡು ಊರಿನ ಮಹಿಳೆಯರು 'ಅಯ್ಯಯ್ಯೋ ಹೊಳಿ' ಎಂದು ಉದ್ಗರಿಸಿದ್ದೇ ಮುಂದೆ ಬರುಬರುತ್ತ ಐಹೊಳೆಯಾಯ್ತೆಂಬ ಪೌರಾಣಿಕ ಐತಿಹ್ಯಗಳೂ ಈ ಊರಿನ ಹೆಸರಿನೊಂದಿಗೆ ತಳಕು ಹಾಕಿಕೊಂಡಿವೆ. |
ಇಲ್ಲಿ ಕ್ರಿ.ಪೂ. ೬-೭ನೇ ಶತಮಾನದಲ್ಲಿ ಅಂದರೆ 'ಕಬ್ಬಿಣದ ಯುಗ'ದಲ್ಲೇ ಇಲ್ಲಿ ಜನವಸತಿ ಇತ್ತೆಂದು ಪ್ರಾಗೈತಿಹಾಸಿಕ ಸಂಶೋಧಕರು ಅಂದಾಜು ಮಾಡಿದ್ದಾರೆ. ಇಲ್ಲಿ ಉಸಗು ಕಲ್ಲಿನಿಂದ ಮತ್ತು ಕತ್ತರಿಸಿದ ಬಂಡೆಗಳನ್ನು ಗಾರೆ, ಮಣ್ಣಿನ ನೆರವಿಲ್ಲದೆ ಒಂದರ ಮೇಲೊಂದು ಇಟ್ಟು ನಿರ್ಮಿಸಿದ ಕೋಟೆಯಿದೆ. ಇದನ್ನು ಸುಮಾರು ಕ್ರಿ.ಶ. ೬ನೇ ಶತಮಾನದಲ್ಲಿ ನಿರ್ಮಿಸಿರಬಹುದು ಎಂದು ಹೇಳಲಾಗಿದ್ದು ಕರ್ನಾಟಕದಲ್ಲಿ ಉಳಿದಿರುವ ಶಿಲಾಕೋಟೆಗಳ ಪೈಕಿ ಇದು ಅತ್ಯಂತ ಪ್ರಾಚೀನವಾದದ್ದಾಗಿದೆ. ಕೋಟೆಯ ಸುತ್ತ ಕಂದಕ ಇರುವುದನ್ನು ಈಗಲೂ ಗುರುತಿಸಬಹುದಾಗಿದ್ದು, ಕೋಟೆಯ ಅವಶೇಷಗಳನ್ನು ಕಾಣಬಹುದು. |
ವಾಸ್ತುಶಿಲ್ಪ |
ಬದಲಾಯಿಸಿ |
ವಾಸ್ತುಶಿಲ್ಪ: ಇಲ್ಲಿ ಸುಮಾರು 120 ದೇವಾಲಯ ಹಾಗು 4 ಗುಹಾಲಯಗಳನ್ನು ಕಾಣಬಹುದು. ಇವನ್ನೆಲ್ಲ ಬೇರೆ ಬೇರೆ ಕಾಲಘಟ್ಟಗಳಲ್ಲಿ ನಿರ್ಮಿಸಲಾಗಿದ್ದು ಪ್ರತಿಯೊಂದರ ವಾಸ್ತು ಭಿನ್ನವಾಗಿವೆ. ಇವನ್ನು ಸ್ಥಳೀಯವಾಗಿ ಸಿಗುವ ಕೆಂಪು ಮರಳು ಶಿಲೆಯಲ್ಲಿ ನಿರ್ಮಿಸಿದ್ದರಿಂದ ಅನೇಕ ದೇವಾಲಯಗಳು ಕಾಲನ ಹೊಡೆತಕ್ಕೆ ಸಿಕ್ಕು ಹಾಳಾಗಿವೆ. ಅಲ್ಲದೇ ಮುಸ್ಲಿಂ ದಾಳಿಯಿಂದ ಹಾಗು ಜನರಲ್ಲಿರುವ ಇತಿಹಾಸ ಪ್ರಜ್ಷೆಯ ಕೊರತೆಯಿಂದ ಮತ್ತು ನಿಧಿಯ ಆಶೆಯಿಂದಲೂ ಅನೇಕ ದೇವಾಲಯಗಳು ಹಾಳಾಗಿರುವ ಕನ್ನಡ ಸಾಹಿತ್ಯ. ಹಾಗೂ ಇಲ್ಲಿ ಅನೇಕ ಜನರು ಈ ಕಟ್ಟಡಗಳನ್ನು ನೋಡಲು ಬಂದಾಗಲೂ ಶಿಲೆಗಳನ್ನು ಮುಟ್ಟಿ ಹಾಳಾಗಿವೆ, ಎಂದು ಹೇಳಲಾಗಿದೆ. |
ದೇವಾಲಯಗಳು |
ಬದಲಾಯಿಸಿ |
ಇಲ್ಲಿನ ದೇವಾಲಯಗಳ ನಿರ್ಮಾಣದಲ್ಲಿ ಔತ್ತರೇಯ ಪದ್ಧತಿಯ ಪ್ರಭಾವವು ಕಂಡು ಬರುತ್ತದೆ. ಐಹೊಳೆಯ ದೇವಾಲಯಗಳನ್ನು ಪುರಾತತ್ವ ಸರ್ವೇಕ್ಷಣ ಇಲಾಖೆ ೨೨ ವಿಭಾಗಳಾಗಿ ವಿಂಗಡಿಸಿದೆ. ಇದರಲ್ಲಿ ಹುಚ್ಚಿಮಲ್ಲಿಗುಡಿ, ಲಡಖಾನ್ ಗುಡಿ, ಹುಚ್ಚಪ್ಪಯ್ಯಮಠ, ಗಳಗನಾಥ, ರಾವಲ್ ಪಹಡಿ, ಗುಹಾಂತರ ದೇವಾಲಯ, ಜೈನರ ಮೇಗುತಿ ದೇವಾಲಯ, ಎರಡು ಅಂತಸ್ತಿನ ಜೈನ ದೇವಾಲಯ ಪ್ರಮುಖ ಆಕರ್ಷಣೆ. |
ಇಲ್ಲಿನ ದೇವಾಲಯಗಳ ವಿಚಿತ್ರ ಹೆಸರುಗಳಿಗೆ ಐತಿಹಾಸಿಕವಾಗಿ ಯಾವ ಸಮರ್ಥನೆಯೂ ಸಿಗುವುದಿಲ್ಲ. ಬಹುಶ: ಬ್ರಿಟಿಷರ ಕಾಲದಲ್ಲಿ ಸರ್ವೇ ಮಾಡಲು ಪ್ರಾರಂಭಿಸಿದಾಗ ಆಯಾ ದೇವಾಲಯಗಳಲ್ಲಿ ಆಗ ವಾಸವಾಗಿದ್ದ ವ್ಯಕ್ತಿಗಳಿಂದ ಇಂಥ ಹೆಸರುಗಳು ಬಂದಿರುವ ಸಾಧ್ಯತೆ ಇದೆ. |
೧. ಇಲ್ಲಿನ ದೇವಾಲಯಗಳಲ್ಲಿ ದುರ್ಗಾ ದೇವಾಲಯ ಅತ್ಯಂತ ಪ್ರಮುಖವಾದದ್ದು. ಇದು ಮೂಲತ: ಸೂರ್ಯದೇವಾಲಯವಾಗಿದ್ದು |
ಕೋಟೆ ಅಂದರೆ ದುರ್ಗಕ್ಕೆ ಹತ್ತಿರವಿರುವುದರಿಂದ ದುರ್ಗ ದೇವಾಲಯವೆಂದು ಪ್ರಸಿದ್ಧವಾಗಿದೆ. ಕ್ರಿ ಶ 742ರಲ್ಲಿ 2ನೇ ವಿಕ್ರಮಾದಿತ್ಯನ |
Subsets and Splits
No saved queries yet
Save your SQL queries to embed, download, and access them later. Queries will appear here once saved.