text
stringlengths 0
2.67k
|
---|
ಪರಿವಿಡಿ |
ಜನನ ಮತ್ತು ಆರಂಭಿಕ ಜೀವನ |
ಬದಲಾಯಿಸಿ |
ಅನಂತಕೃಷ್ಣ ಅಯ್ಯರ್ ಹಾಗೂ ಅವರ ಎರಡನೆಯ ಪತ್ನಿ ವೆಂಕಟಲಕ್ಷ್ಮಿಯವರಿಗೆ ಶೇಷಾದ್ರಿ ಅಯ್ಯರ್ ಅವರು ೧೮೪೫ ಜೂನ್ ೧ರಂದು ಕೇರಳದ ಪಾಲ್ಘಾಟ್ ಸಮೀಪದ ಕುಮಾರಪುರಂನಲ್ಲಿ ಜನಿಸಿದರು. ಮೂಲತಃ ತಮಿಳುನಾಡಿನ ತಂಜಾವೂರು ಜಿಲ್ಲೆಯ ಗಣಪತಿ ಅಗ್ರಹಾರದವರಾದವರು. ಇವರ ಪೂರ್ವಿಕರಾದ ಗೌರಿ ಶೇಷಾದ್ರಿ ಅಯ್ಯರ್ ಎಂಬುವರು ೨೦೦ ವರ್ಷಗಳ ಹಿಂದೆ ೧೭೮೪ ರಲ್ಲಿ ಕುಮಾರಪಟ್ಣಂಗೆ ವಲಸೆ ಬಂದಿದ್ದರು. ಜನಿಸಿದ ಕೆಲವೇ ತಿಂಗಳುಗಳಲ್ಲೇ ತಮ್ಮ ತಂದೆ ಅನಂತಕೃಷ್ಣರವರನ್ನು ಕಳೆದುಕೊಂಡರು. ಬಳಿಕ ಅನಂತಕೃಷ್ಣ ಅಯ್ಯರ್ ಅವರ ಮೊದಲ ಪತ್ನಿ ನಾರಾಯಣಿಯವರ ಪುತ್ರ ವೆಂಕಟ ಸುಬ್ರಹ್ಮಣ್ಯ ಅಯ್ಯರ್, ಅಂದರೆ ಶೇಷಾದ್ರಿ ಅಯ್ಯರ್ ಅವರ ಮಲ ಅಣ್ಣ ಇವರ ಪೋಷಣೆಯ ಹೊಣೆಯನ್ನು ಹೊತ್ತರು. ತನ್ನ ನಾಲ್ಕನೇ ವರ್ಷದಿಂದ ಹನ್ನೊಂದನೇ ವರ್ಷದವರೆಗೆ ಖಾಸಗಿಯಲ್ಲಿಯೇ ಪಂಡಿತರಿಂದ ಸಂಸ್ಕೃತ, ತಮಿಳು ಹಾಗೂ ವೇದಾಧ್ಯಯನವನ್ನು ಕೊಚ್ಚೀನಿನಲ್ಲಿ ನಡೆಸಲಾಯ್ತು. ನಂತರ ಕೊಚಿನ್ ನ ಫ್ರೀ ಚರ್ಚ್ ಮಿಷನ್ ನ ಖಾಸಗಿ ಶಾಲೆಯಲ್ಲಿ ಶಿಕ್ಷಣ ಪಡೆದು. ತಮ್ಮ ಹೈಸ್ಕೂಲ್ ಶಿಕ್ಷಣವನ್ನು ತಿರುವನಂತಪುರದಲ್ಲಿ ಪಡೆದ ಇವರು ೧೮೬೩ರಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲಿ ಇಡೀ ಮದ್ರಾಸ್ ಪ್ರಾಂತ್ಯಕ್ಕೆ ಮೊದಲಿಗರಾಗಿ ತೇರ್ಗಡೆಯಾದರು.[೨]ಇದಕ್ಕಾಗೆ ಇವರು ಕಾನ್ನೋಲಿ ವಿಧ್ಯಾರ್ಥಿ ವೇತನಕ್ಕೆ ಆಯ್ಕೆಯಾದರು. ಮದರಾಸಿನ ಪ್ರಸಿಡೆನ್ಸಿ ಕಾಲೇಜಿನಲ್ಲಿ, ವಿಶ್ವವಿದ್ಯಾಲಯಕ್ಕೇ ಮೊದಲಿಗರಾಗಿ ೧೮೬೬ರಲ್ಲಿ ತಮ್ಮ ಬಿ.ಎ. ಪದವಿ ಪಡೆದುಕೊಂಡರು. |
ವೃತ್ತಿಜೀವನ |
ಬದಲಾಯಿಸಿ |
ಬಿ.ಎ. ಪದವಿ ಮುಗಿಸಿ ಮದರಾಸ್ ನಲ್ಲಿ ಕೆಲಸಮಾಡುತ್ತಿರುವಾಗಲೇ ಆ ಸಮಯದಲ್ಲಿ ಮಮೈಸೂರು ದೀವಾನಾರಾಗಿದ್ದ ಸಿ.ವಿ.ರಂಗಾಚಾರ್ಲುರವರಿಗೆ ಪರಿಚಿತರಾದರು. ೧೮೬೮ ರಲ್ಲಿ ಮೈಸೂರ್ ಸಾಮ್ರಾಜ್ಯದ ಕಾರ್ಯಕಲಾಪಗಳನ್ನು ನೋಡಿಕೊಳ್ಳಲು ರಂಗಾಚಾರ್ಲುರವರು ಶೇಷಾದ್ರಿ ಅಯ್ಯರ್ ರವರನ್ನು ಮೈಸೂರಿಗೆ ಕರೆಸಿಕೊಂಡರು. ರಂಗಾಚಾರ್ಲುರವರು ಆ ಸಂದರ್ಭದಲ್ಲಿ ಆಡಳಿತಕ್ಕೆ ಸಂಬಂಧಿಸಿದಂತೆ ಸೂಕ್ತ ತರಬೇತಿಯನ್ನು ನೀಡಿದರು. ಬಳಿಕ ಶೇಶಾದ್ರಿ ಅಯ್ಯರ್ ರವರು ಮೈಸೂರು ಸಂಸ್ಥಾನದಲ್ಲಿ ಹಲವು ಆಡಳಿತಾತ್ಮಕ ಹುದ್ದೆಗಳನ್ನು ನಿರ್ವಹಿಸಿದರು. ಈ ಮಧ್ಯದಲ್ಲೇ ೧೮೭೪ರಲ್ಲಿ ಮದ್ರಾಸ್ ವಿಸ್ವವಿದ್ಯಾಲಯದಿಂದ ನ್ಯಾಯ ಶಾಸ್ತ್ರದಲ್ಲಿ ಬಿ.ಎಲ್. ಪದವಿಯನ್ನು ಪಡೆದರು. |
ರಂಗಾಚಾರ್ಲು ಅವರ ಕರೆಯ ಮೇರೆಗೆ ಮೈಸೂರಿಗೆ ಆಗಮಿಸಿದ ಅಯ್ಯರ್ ಮೊದಲು ಅಷ್ಟಗ್ರಾಮವಿಭಾಗದ ಶಿರಸ್ತೆದಾರ್ ಆಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ತಮ್ಮ ದಕ್ಷತೆಯಿಂದ ಬಹಳ ಒಳ್ಳೆಯ ಹೆಸರು ಪಡೆದು ಕ್ಷಿಪ್ರವಾಗಿ ಮುಂಬಡ್ತಿಯನ್ನು ಪಡೆಯುತ್ತಾ ಹೋದರು. |
ನಿರ್ವಹಿಸಿದ ಹುದ್ದೆಗಳು |
ಬದಲಾಯಿಸಿ |
ಮೈಸೂರ್ ಸಂಸ್ಥಾನದ ಅಷ್ಟಗ್ರಾಮ್ ಡಿವಿಶನ್ ನ ಶಿರಸ್ತೆದಾರ |
ಕಾನೂನು ಕಾರ್ಯದರ್ಶಿ |
ಪ್ರಧಾನ ಶಿರಸ್ತೆದಾರ |
ಕೋರ್ಟ್ ಆಫ್ ದ ಜುಡಿಶಿಯಲ್ ಕಮೀಶನರ್. |
ಉಪ ಜಿಲ್ಲಾಧಿಕಾರಿ |
ಮೈಸೂರಿನ ಜಿಲ್ಲಾಧಿಕಾರಿ' |
ಜಿಲ್ಲಾ ನ್ಯಾಯಾಧೀಶ |
ತುಮಕೂರು ನ ಸೆಶನ್ ಜಡ್ಜ್ ಆಫ್ ಅಷ್ಟಗ್ರಾಮ್ ಡಿವಿಶನ್' |
ಬಳಿಕ ೧೯೮೩ರಲ್ಲಿ ರಂಗಾಚಾರ್ಲುರವರ ನಿಧನದ ಬಳಿಕ ದಿವಾನ ಹುದ್ದೆಯನ್ನು ಸ್ವೀಕರಿಸಿದರು. |
ಸಾಧನೆ |
ಬದಲಾಯಿಸಿ |
ರೈಲ್ವೆಕ್ಷೇತ್ರ |
ಬದಲಾಯಿಸಿ |
ಇವರು ೧೮೮೩ ರಲ್ಲಿ ಬೆಂಗಳೂರು ಮತ್ತು ಗುಬ್ಬಿಯಲ್ಲಿ ,೧೮೮೯ ರಲ್ಲಿ ಬೆಂಗಳೂರು,ಹಿಂದೂಪುರ,ಹರಿಹರ ಮತ್ತು ಕೆಜಿಎಫ್ ಹಾಗೂ ೧೮೮೯ ರಲ್ಲಿ ಮೈಸೂರು ಮತ್ತು ನಂಜನಗೂಡು,ಬೇಲೂರು ಮತ್ತು ಶಿವಮೊಗ್ಗಗಳಲ್ಲಿ ರೈಲು ಮಾಗ೯ಗಳನ್ನು ನಿಮಿ೯ಸದ್ದಾರೆ. |
ವಿದ್ಯುತ್ ಕ್ಷೇತ್ರ |
ಬದಲಾಯಿಸಿ |
೧೯೦೦ ರಲ್ಲಿ ಶಿವನ ಸಮುದ್ರದಲ್ಲಿ ವಿದ್ಯುತ್ ಉತ್ಪಾದಿಸಲು ಯೋಜನೆ ಕಾಯಾ೯ರಂಭ ಮಾಡಿತು.ವಿದ್ಯುತ್ ಅನ್ನು ಮೊದಲ ಕೆಜಿಎಫ್ ಗೆ ೧೯೦೨ ರಲ್ಲಿ ಪೂರೈಸಲಾಯಿತು.ಬಳಿಕ ೧೦೯೫ ರಲ್ಲಿ ಬೆಂಗಳೂರು ನಗರಕ್ಕೆ ಪೂರೈಸಲಾಯಿತು.ದೇಶದಲ್ಲೇ ಮೋದಲ ವಿದ್ಯುತ್ ಸಂಪರ್ಕ ಪಡೆದ ನಗರ ಎಂಬ ಖ್ಯಾತಿ ಬೆಂಗಳೂರಿಗಿದೆ.ಖಾಸಗಿಯಾಗಿ ಮೊದಲ ವಿದ್ಯುತ್ ಅನ್ನು ೧೮೮೭ ಗೋಕಾಕ್ ಜಲಪಾತದಲ್ಲಿ ಉತ್ಪಾದಿಸಲಾಯಿತು.ಆದರೆ ಸಕಾ೯ರಿ ಸ್ವಾಮ್ಯದಲ್ಲಿ ವಿದ್ಯುತ್ ಉತ್ಪಾದನೆ ಆರಂಭವಾಗಿದ್ದು ಶಿವನ ಸಮುದ್ರಲ್ಲಿ ೧೯೦೦ ಆಗಸ್ಟ್ ೧೦ ರಂದು.[೩] |
ನೀರಾವರಿಕ್ಷೇತ್ರ |
ಬದಲಾಯಿಸಿ |
ಬೆಂಗಳೂರು ನಗರಕ್ಕೆ ಹೆಸರುಘಟ್ಟದ ಕೆರೆಯಿಂದ ನೀರು ಪೂರೈಸಲಾಯಿತು.ಚಿತ್ರದುಗ೯ದ ಹಿರಿಯೂರಿನಲ್ಲಿಮಾರಿ ಕಣಿವೆ ಜಲಾಶಯವನ್ನು ೩೯ ಲಕ್ಷ ವೆಚ್ಛದಲ್ಲಿ ನಿಮಿ೯ಸಿದರು.ಹೇಮಾವತಿ ನದಿಗೆ ಮತ್ತು ಭದ್ರಾವತಿ ಪಟ್ಟಣ ಸೇರಿದಂತೆ ಅನೇಕ ಕಡೆ ಸೇತುವೆಗಳನ್ನು ಹಾಗೂ ೨೫ ಕೆರೆಗಳನ್ನು ನಿಮಿ೯ಸಲಾಯಿತು. |
ಮೈಸೂರು ರಾಜ್ಯದಲ್ಲಿ ಸೇವೆ |
ಬದಲಾಯಿಸಿ |
೧೮೭೪ ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದಿಂದ ಬಿ.ಎಲ್. ಪದವಿಯನ್ನು ಪಡೆದರು. ೧೮೮೧ ರಿಂದ ೧೮೮೩ ರವರೆಗೆ ಅವರು ಮೈಸೂರಿನಲ್ಲಿ ವಿಶೇಷ ಕರ್ತವ್ಯದ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ೧೮೮೩ ರಲ್ಲಿ, ರಂಗಚಾರ್ಲುವಿನ ಅವಧಿಯು ಅಂತ್ಯಗೊಂಡಿತು,ಶೇಷಾದ್ರಿ ಅಯ್ಯರ್ ಮೈಸೂರು ದಿವಾನ್ ಆಗಿ ನೇಮಕಗೊಂಡರು.೧೮೮೩ ರಲ್ಲಿ ಮೈಸೂರು ದಿವಾನ್ ಆಗಿ ಹದಿನೆಂಟು ವರ್ಷಗಳ ಕಾಲ ಮೈಸೂರು ಆಡಳಿತ ನಡೆಸಿದರು.ಮೈಸೂರು ಸಿವಿಲ್ ಸರ್ವಿಸ್ನಲ್ಲಿ ಕಂದಾಯ ಕಮಿಷನರ್ ಆಗಿ ಕೆಲಸ ಮಾಡಿದ್ದಾರೆ. ಅವರು ೧೮೮೧ ರಿಂದ ೧೮೯೧ ರವರೆಗೆ ಶೇಷಾದ್ರಿ ಅಯ್ಯರ್ ಅವರ ಖಾಸಗಿ-ಕಾರ್ಯದರ್ಶಿಯಾಗಿದ್ದರು. ಅವರು ರಾಜರ ಸಂಸ್ಥಾನದ ಸುದೀರ್ಘ ಸೇವೆ ಸಲ್ಲಿಸಿದ ದಿವಾನರಾಗಿದ್ದಾರೆ. ಕರ್ನಾಟಕದ ಕೋಲಾರ ಚಿನ್ನದ ಕ್ಷೇತ್ರಗಳು ಅವರ ಅವಧಿಯಲ್ಲಿ ಸ್ಥಾಪಿಸಲ್ಪಟ್ಟವು. ಅವರು ೧೮೮೯ ರಲ್ಲಿ ಲಾಲ್ಬಾಗ್ನಲ್ಲಿ ಪ್ರಸಿದ್ಧ ಗ್ಲಾಸ್ ಹೌಸ್ ಅನ್ನು ಹಾಗು ೧೯೦೦ ರಲ್ಲಿ ಬೆಂಗಳೂರಿನಲ್ಲಿ ವಿಕ್ಟೋರಿಯಾ ಆಸ್ಪತ್ರೆಯನ್ನು ನಿಮಿ೯ಸಿದರು. [೪] |
ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿರುವ ಶೇಷಾದ್ರಿ ಅಯ್ಯರ್ ಅವರ ಪ್ರತಿಮೆ |
ವೈವಾಹಿಕ ಜೀವನ |
ಬದಲಾಯಿಸಿ |
೧೮೬೫ ರಲ್ಲಿ ಶೇಷಾದ್ರಿ ಅಯ್ಯರ್ ಧರ್ಮಸಮವರ್ಧಿನಿ ಅವರನ್ನು ವಿವಾಹವಾದರು. ದಂಪತಿಗೆ ನಾಲ್ಕು ಗಂಡು ಮಕ್ಕಳು (ಕೆ. ಎಸ್. ಡೋರೆಸ್ವಾಮಿ ಅಯ್ಯರ್,ಕೆ.ಎಸ್.ಕೃಷ್ಣ ಐಯರ್,ಕೆ. ಎಸ್. ವಿಶ್ವನಾಥ ಅಯ್ಯರ್ ಮತ್ತು ಕೆ.ಎಸ್. ರಾಮಸ್ವಾಮಿ ಅಯ್ಯರ್) ಮತ್ತು ಇಬ್ಬರು ಹೆಣ್ಣುಮಕ್ಕಳಿದ್ದರು. ೧೩ ಸೆಪ್ಟೆಂಬರ್ ೧೯೦೧ ರಂದು ಶೇಷಾದ್ರಿಯವರ ಮರಣದ ಮೊದಲು ಕೆಲವೇ ದಿನಗಳಲ್ಲಿ ಧರ್ಮಸಮವರ್ಧಿನಿ ನಿಧನರಾದರು. |
ಉಲ್ಲೇಖಗಳು |
ಬದಲಾಯಿಸಿ |
ವಿಕಿಪೀಡಿಯ |
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. |
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್ |
ವಿಕಿಪೀಡಿಯ |
ವಿಕಿಪೀಡಿಯ ಅನ್ನು ಹುಡುಕಿ |
[ಮರೆಮಾಡಲು] |
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ. |
ಟಿಪ್ಪು ಸುಲ್ತಾನ್ |
ಭಾಷೆ |
Download PDF |
ವೀಕ್ಷಿಸಿ |
ಮೂಲವನ್ನು ನೋಡು |
ಟಿಪ್ಪು ಸುಲ್ತಾನನು (ಸುಲ್ತಾನ್ ಫತೇಹ್ ಅಲಿ ಸಾಹಬ್ ಟಿಪ್ಪು; 1 ಡಿಸೆಂಬರ್ 1751 – 4 ಮೇ 1799), ಸಾಮಾನ್ಯವಾಗಿ ಶೇರ್-ಎ-ಮೈಸೂರ್ ಅಥವಾ "ಮೈಸೂರು ಹುಲಿ" ಎಂದು ಉಲ್ಲೇಖಿಸಲಾದವನು, ದಕ್ಷಿಣ ಭಾರತದ ಮೈಸೂರು ರಾಜ್ಯದ ಮುಸಲ್ಮಾನ ದೊರೆ. ಭಾರತ. ಅವನು ರಾಕೆಟ್ ಫಿರಂಗಿಗಳ ಪ್ರವರ್ತಕರಾಗಿದ್ದನು. ಅವನು ತನ್ನ ಆಡಳಿತದ ಅವಧಿಯಲ್ಲಿ ಹೊಸ ನಾಣ್ಯ ವ್ಯವಸ್ಥೆ ಮತ್ತು ಕ್ಯಾಲೆಂಡರ್, ಮತ್ತು ಹೊಸ ಭೂಕಂದಾಯ ವ್ಯವಸ್ಥೆಯನ್ನು ಒಳಗೊಂಡಂತೆ ಹಲವಾರು ಆಡಳಿತಾತ್ಮಕ ಆವಿಷ್ಕಾರಗಳನ್ನು ಪರಿಚಯಿಸಿದನು, ಇದು ಮೈಸೂರು ರೇಷ್ಮೆ ಉದ್ಯಮದ ಬೆಳವಣಿಗೆಯನ್ನು ಪ್ರಾರಂಭಿಸಿತು. ಚನ್ನಪಟ್ಟಣದ ಆಟಿಕೆಗಳನ್ನು ಪರಿಚಯಿಸುವಲ್ಲಿ ಟಿಪ್ಪು ಕೂಡ ಪ್ರವರ್ತಕನಾಗಿದ್ದ. ಅವರು ಕಬ್ಬಿಣಕವಚದ ಮೈಸೂರಿ ರಾಕೆಟ್‌ಗಳನ್ನು ವಿಸ್ತರಿಸಿದನು ಮತ್ತು ಮಿಲಿಟರಿ ಕೈಪಿಡಿ ಫತುಲ್ ಮುಜಾಹಿದೀನನ್ನು ನಿಯೋಜಿಸಿದರು, ಅವರು ಪೊಲ್ಲಿಲೂರ್ ಕದನ ಮತ್ತು ಶ್ರೀರಂಗಪಟ್ಟಣದ ಮುತ್ತಿಗೆಯಲ್ಲಿ ಆಂಗ್ಲಮೈಸೂರು ಯುದ್ಧಗಳ ಸಮಯದಲ್ಲಿ ಬ್ರಿಟಿಷ್ ಪಡೆಗಳು ಮತ್ತು ಅವರ ಮಿತ್ರರ ಪ್ರಗತಿಯ ವಿರುದ್ಧ ರಾಕೆಟ್‌ಗಳನ್ನು ನಿಯೋಜಿಸಿದನು. |
ಟಿಪ್ಪು ಸುಲ್ತಾನ |
ಬಾದಶಹ |
ನಸೀಬುದ್ದೌಲ |
ಸುಲ್ತಾನ ಫತೇಹ್ ಅಲಿ ಖಾನ್ ಬಹಾದುರ್ ಟಿಪ್ಪು |
ಸುಲ್ತಾನನು of ಮೈಸೂರು |
ಆಳ್ವಿಕೆ |
29 ಡಿಸೆಂಬರ್ 1782 – 4 ಮೈ 1799 |
ಪಟ್ಟಾಭಿಷೇಕ |
29 ಡಿಸೆಂಬರ್ 1782 |
ಪೂರ್ವಾಧಿಕಾರಿ |
ಹೈದರ್ ಅಲಿ |
ಉತ್ತರಾಧಿಕಾರಿ |
ಮುಮ್ಮಡಿ ಕೃಷ್ಣರಾಜ ಒಡೆಯರ್ III |
ಪೂರ್ಣ ಹೆಸರು |
ಸುಲ್ತಾನ್ ಫತೇಹ್ ಅಲಿ ಸಾಹಬ್ ಟಿಪ್ಪು |
ತಂದೆ |
ಹೈದರ್ ಅಲಿ |
ತಾಯಿ |
ಫ಼ಾತಿಮ ಫಖ್ರು಼ನ್ನಿಸ |
ಜನನ |
ಟೆಂಪ್ಲೇಟು:ಜನನ ದಿನಾಂಕ[೧] |
ದೇವನಹಳ್ಳಿ, ಪ್ರಸ್ತುತ ವಾಗಿ ಬೆಂಗಳೂರು, ಕರ್ನಾಟಕ |
ಮರಣ |
ಟೆಂಪ್ಲೇಟು:ಮರಣ ದಿನಾಂಕ ಮತ್ತು ವಯಸ್ಸು |
ಶ್ರೀರಂಗಪಟ್ಟಣ, ಪ್ರಸ್ತುತವಾಗಿ ಮಂಡ್ಯ,ಕರ್ನಾಟಕ |
Burial |
{{ಸಮಾಧಿ ಸ್ಥಳ|df=yes|ಶ್ರೀರಂಗಪಟ್ಟಣ, ಪ್ರಸ್ತುತ |
ಧರ್ಮ |
ಇಸ್ಲಾಮ್ |
ಪರಿವಿಡಿ |
ಪರಿಚಯ |
ಇಮ್ಮಡಿ ಕೃಷ್ಣರಾಜ ಒಡೆಯರ್ ಮರಣದ ನಂತರ, ಹೈದರ್ ಅಲಿ, ಮೈಸೂರು ಸೇನೆಯ ಮಹಾದಂಡನಾಯಕ, ಪ್ರಾಂತದ ಅಧಿಕಾರವನ್ನು ವಹಿಸಿಕೊಂಡ, ಹೈದರ್ ಅಲಿಯ ಮರಣದ ನಂತರ ಆಳ್ವಿಕೆ ಅವನ ಪುತ್ರ ಟಿಪ್ಪುಸುಲ್ತಾನನಿಗೆ ಸಿಕ್ಕಿತು. ಮೈಸೂರಿನ ಹುಲಿ ಎಂದೇ ಪ್ರಖ್ಯಾತವಾದ ಟಿಪ್ಪುಸುಲ್ತಾನ್, ದಕ್ಷಿಣ ಭಾರತದಲ್ಲಿ ಯುರೋಪಿಯನ್ ವಿಸ್ತರಣೆ ತಡೆಗಟ್ಟಲು, ನಾಲ್ಕು ಯುದ್ದಗಳನ್ನು ಮಾಡಿದ ಆಂಗ್ಲೋ-ಮೈಸೂರು ಯುದ್ದಗಳು, ಕೊನೆಯದರಲ್ಲಿ ಅವನು ಮರಣವನ್ನಪ್ಪಿದ. |
ಮೈಸೂರು ರಾಜ್ಯ ಬ್ರಿಟಿಷ್ ರಾಜ್ಯ ಏಕೀಕರಣವಾಯಿತು.[೨] ಟಿಪ್ಪು ಸೇನಾ ತಂತ್ರಗಳನ್ನು ತನ್ನ ತಂದೆ, ಹೈದರಾಲಿಯೊಂದಿಗೆ ಇದ್ದ ಫ್ರೆಂಚ್ ಅಧಿಕಾರಿಗಳಿಂದ ಪಡೆದನು. ೧೭೬೭ ರ ಕರ್ನಾಟಕ ಯುದ್ಧದಲ್ಲಿ ಒಂದು ಅಶ್ವದಳದ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದನು. ಸೇನಾನಾಯಕನಾಗಿ ಟಿಪ್ಪು ಪ್ರಸಿದ್ದಿ ಪಡೆದದ್ದು ೧೭೭೫-೭೯ ರ ಆಂಗ್ಲೋ-ಮರಾಠಾ ಯುದ್ಧದಲ್ಲಿ. |
Subsets and Splits
No saved queries yet
Save your SQL queries to embed, download, and access them later. Queries will appear here once saved.