text
stringlengths
0
2.67k
ಅಚ್ಯುತರಾಯ
ರಾಜಾಧಿರಾಜ
Statues depicting Achyuta Deva Raya (left) and his queen (right)
Emperor of Vijayanagara
ಆಳ್ವಿಕೆ
1529 – 1542 CE
ಪಟ್ಟಾಭಿಷೇಕ
30 November 1529
Vijayanagara, Vijayanagara Empire
ಪೂರ್ವಾಧಿಕಾರಿ
ಕೃಷ್ಣದೇವರಾಯ
ಉತ್ತರಾಧಿಕಾರಿ
ವೆಂಕಟ I
Consorts
Varadambika
Tirumalamba
ಸಂತಾನ
ವೆಂಕಟ I
ತಂದೆ
ತುಳುವ ನರಸ ನಾಯಕ
ತಾಯಿ
ಓಬಾಂಬ[೧]
ಧರ್ಮ
ಹಿಂದೂ
ಆಡಳಿತ
ಬದಲಾಯಿಸಿ
ಅಚ್ಯುತರಾಯರು ಕನ್ನಡ ಕವಿ ಚಾಟು ವಿಟ್ಟಲನಾಥ, ಶ್ರೇಷ್ಠ ಸಂಯೋಜಕ ಮತ್ತು ಗಾಯಕ ಪುರಂದರದಾಸ, ಕರ್ನಾಟಕ ಸಂಗೀತದ ಪ್ರಮುಖ ಪ್ರತಿಪಾದಕರಲ್ಲಿ ಒಬ್ಬರು ಮತ್ತು ಸಂಸ್ಕೃತ ವಿದ್ವಾಂಸ ರಾಜನಾಥ ಡಿಂಡಿಮ II ಅವರನ್ನು ಪೋಷಿಸಿದರು. ರಾಜ್ಯಭಾರ ಸಂಬಂಧಿಗಳಾಗಿದ್ದ ತಿರುಮಲ ಸಹೋದರರ ಕೈಸೇರಿತು. ಅವರ ಉತ್ಕರ್ಷ, ದರ್ಪಗಳನ್ನು ಸೈರಿಸದೆ ಅರವೀಡು ಮನೆತನಕ್ಕೆ ಸೇರಿದ ಮಂಡಾಲಾಧಿಪತಿಗಳು ವಿರೋಧಪಕ್ಷವನ್ನು ಕಟ್ಟಿದರು. ಅತ್ತ ಬಿಜಾಪುರದ ಸುಲ್ತಾನ ದಂಡೆತ್ತಿಬಂದು ನಾಗಲಾಪುರವನ್ನು (ಈಗಿನ ಹೊಸಪೇಟೆ) ವಶಪಡಿಸಿಕೊಂಡು ವಿಜಯನಗರಕ್ಕೆ ಮುತ್ತಿಗೆ ಹಾಕಿದ ಅವನೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕಾಯಿತು. ಕೃಷ್ಣದೇವರಾಯ ಅಷ್ಟೊಂದು ಸಾಹಸ ದಕ್ಷತೆಗಳಿಂದ ಕಟ್ಟಿದ್ದ ಸಾಮ್ರಾಜ್ಯದ ಬಿಗಿ ಸಡಿಲವಾಯಿತು. ಮುಂದೆ ಬಂದ ರಕ್ಕಸತಂಗಡಿ ಅನಾಹುತಕ್ಕೆ ಮಂಡಲಾಧಿಪತಿಗಳ ಈ ವೈಮನಸ್ಯ ನಾಂದಿಯಾಯಿತು. ತಿರುವೆಂಗಲನಾಥ ಮಂದಿರವನ್ನು ಅಚ್ಚುತರಾಯರ ಕಾಲದಲ್ಲಿ ಕಟ್ಟಲಾಯಿತು.ಇದು ಅಚ್ಚುತರಾಯ ದೇವಾಲಯವೆಂದು ಪ್ರಸಿದ್ಧವಾಗಿದೆ.
ಅವರ ಮರಣದ ನಂತರ, ಉತ್ತರಾಧಿಕಾರ ವಿವಾದವಾಯಿತು. ಅವನ ಮಗ ವೆಂಕಟ I ಅವನ ಉತ್ತರಾಧಿಕಾರಿಯಾದನು ಆದರೆ ಬಹಳ ಕಡಿಮೆ ಅವಧಿಗೆ ಆಳಿದನು ಮತ್ತು ಅಸ್ತವ್ಯಸ್ತವಾಗಿರುವ ಉತ್ತರಾಧಿಕಾರ ವಿವಾದದಲ್ಲಿ ಕೊಲ್ಲಲ್ಪಟ್ಟನು, ಇದರಲ್ಲಿ ಸಿಂಹಾಸನದ ಅನೇಕ ಹಕ್ಕುದಾರರು ಕೊಲ್ಲಲ್ಪಟ್ಟರು. ಅವನ ಸೋದರಳಿಯ, (ಕಿರಿಯ ಸಹೋದರನ ಮಗ) ಸದಾಶಿವರಾಯನು ಅಂತಿಮವಾಗಿ ಇನ್ನೂ ಮಗುವಾಗಿದ್ದಾಗ, ಕೃಷ್ಣದೇವರಾಯನ ಅಳಿಯ ರಾಮರಾಯನ ಆಳ್ವಿಕೆಯಲ್ಲಿ ಚಕ್ರವರ್ತಿಯಾದಾಗ ವಿವಾದವು ಕೊನೆಗೊಂಡಿತು. ಅವನ ಹೆಂಡತಿಯ ಹೆಸರು ಬಹುಶಃ ವಸುಧಾದೇವಿ. ಸದಾಶಿವರಾಯರು ಪ್ರಾಯಶಃ ವಸುಧಾದೇವಿಯ ಸಹೋದರಿ ಹೇಮಾವತಿ ಮತ್ತು ಆಕೆಯ ಪತಿ ರಂಗರಾಯರ ಮಗ.
ಅಚ್ಯುತರಾಯನ ಆಳ್ವಿಕೆಯಲ್ಲಿ ಕ್ರಿ.ಶ. ೧೫೩೯ ರಲ್ಲಿ ತಿಮ್ಮಲಾಪುರದಲ್ಲಿ ನಿರ್ಮಾಣವಾದ ಶಿವದೇವಾಲಯ
ತಿಮ್ಮಲಾಪುರದ ಶಿವಮಂದಿರದಲ್ಲಿರುವ ಕ್ರಿ.ಶ ೧೫೩೯ ರ ಅಚ್ಯುತರಾಯನ ಕನ್ನಡ ಶಾಸನ
ಹಂಪೆಯ ವಿಟ್ಠಲ ದೆವಸ್ಥಾನದಲ್ಲಿರುವ ದೊರೆ ಅಚ್ಯುತದೇವರಾಯನ ಕಾಲದ ( ಕ್ರಿ.ಶ. ೧೫೩೬) ಕನ್ನಡ ಶಾಸನ
ಹಂಪೆಯ ವಿಟ್ಠಲ ದೆವಸ್ಥಾನದಲ್ಲಿರುವ ದೊರೆ ಅಚ್ಯುತದೇವರಾಯನ ಕಾಲದ ( ಕ್ರಿ.ಶ. ೧೫೩೬) ಕನ್ನಡ ಶಾಸನ
ಹಂಪೆಯ ಹತ್ತಿರ ತಿಮ್ಮಲಾಪುರದಲ್ಲಿ ದೊರೆ ಅಚ್ಯುತರಾಯನು ಕಟ್ಟಿಸಿದ ಶಿವದೇವಾಲಯ
ಉಲ್ಲೇಖಗಳು
ಬದಲಾಯಿಸಿ
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
ಅಚ್ಯುತರಾಯ
ವಿಕಿಪೀಡಿಯ
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ.
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್
ವಿಕಿಪೀಡಿಯ
ವಿಕಿಪೀಡಿಯ ಅನ್ನು ಹುಡುಕಿ
[ಮರೆಮಾಡಲು]
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.
ಅಜಿಲರು
ಭಾಷೆ
Download PDF
ವೀಕ್ಷಿಸಿ
ಸಂಪಾದಿಸಿ
ಅಜಿಲರು ತುಳುನಾಡಿನ ಅರಸುಮನೆತನಗಳಲ್ಲಿ ಒಂದು. ಇವರು ದಕ್ಷಿಣ ಕನ್ನಡ ಜಿಲ್ಲೆಯ ವೇಣೂರನ್ನು ಕೇಂದ್ರವನ್ನಾಗಿಸಿಕೊಂಡು ಆಡಳಿತ ನಡೆಸಿದರು. ಈ ವಂಶದ ಮೊದಲ ಉಲ್ಲೇಖ ಕಂಡುಬರುವುದು ೧೩೪೦ರ ತೆಂಕಕಾರಂದೂರು ಎಂಬಲ್ಲಿಯ ಶಾಸನದಲ್ಲಿ. ಹೊಯ್ಸಳರ ಆಳ್ವಿಕೆಯ ಅಧೀನದಲ್ಲಿದ್ದ ಇವರು ಮುಂದೆ ವಿಜಯನಗರದ ಆಡಳಿತವನ್ನು ಒಪ್ಪಿಕೊಂಡಿದ್ದರು ಎಂದು ತಿಳಿದುಬರುತ್ತದೆ.
ವೇಣೂರಿನಲ್ಲಿ ವೀರ ತಿಮ್ಮಣ್ಣಾಜಿಲರಿಂದ ಸ್ಥಾಪಿತವಾದ ಏಕಶಿಲಾ ಬಾಹುಬಲಿಯ ವಿಗ್ರಹ
ಪರಿವಿಡಿ
ಇತಿಹಾಸ
ಬದಲಾಯಿಸಿ
ಈಗ ತಿಳಿದಿರುವಂತೆ ೧೩೪೦ರ ಶಾಸನದಲ್ಲಿ ಈ ವಂಶಜರ ಬಗೆಗಿನ ಮೊದಲ ಉಲ್ಲೇಖವಿದೆ. ಅಲ್ಲಿಂದ ಮುಂದೆ ೧೭೫೦ರ ತನಕ ಸುಮಾರು ೧೩ ಮಂದಿ ಅರಸರ ಹೆಸರುಗಳು ವಿವಿಧ ಶಾಸನಗಳಲ್ಲಿ ಉಲ್ಲೇಖಗೊಂಡಿವೆ. ಈ ಪೈಕಿ ೧೬೦೦ರಿಂದ ೧೬೨೦ರ ತನಕ ರಾಜ್ಯವನ್ನಾಳಿದ ತಿಮ್ಮಾಣ್ಣಾಜಿಲ ಹೆಸರುವಾಸಿಯಾಗಿದ್ದಾನೆ. ಇವನು ೧೬೦೪ರಲ್ಲಿ ವೇಣೂರಿನಲ್ಲಿ ೩೫ ಅಡಿ ಎತ್ತರದ ಬಾಹುಬಲಿಯ ಏಕಶಿಲಾ ವಿಗ್ರಹವನ್ನು ಸ್ಥಾಪಿಸಿದ್ದಾನೆ. ಕಾಲಾನಂತರ ಇವರು ತಮ್ಮ ರಾಜಧಾನಿಯನ್ನು ಸಮೀಪದ ಅಳದಂಗಡಿ ಎಂಬಲ್ಲಿಗೆ ಸ್ಥಳಾಂತರಿಸಿದರು.
ವಿಜಯನಗರ ಸಾಮ್ರಾಜ್ಯದೊಂದಿಗೆ ತುಳುನಾಡು ವಿಲೀನಗೊಂಡ ಅನಂತರ ಅಲ್ಲಿ ತಲೆಯೆತ್ತಿದ ಹಲವು ಸ್ಥಳೀಕ ಮನೆತನಗಳಲ್ಲಿ ಒಂದು.[೧] ಮೊದಲು ವೇಣೂರಿನಿಂದ ಮತ್ತು ಅನಂತರ ಆಲದಂಗಡಿಯಿಂದ ಇವರು ಆಳಿದ ಸಂಸ್ಥಾನಕ್ಕೆ ಪೂಂಜಳಿ ಅಥವಾ ಪುಂಜಳಿಕೆಯ ರಾಜ್ಯ ಮತ್ತು ಅಳುವ ರಾಜ್ಯ ಎಂಬ ಹೆಸರುಗಳಿದ್ದುವು. ಇವರು ತಮ್ಮನ್ನು ಸಾಳುವ ವಂಶದವರೆಂದು ಕರೆದುಕೊಳ್ಳುತ್ತಿದ್ದರು. ವೇಣೂರಿನ ಮಹಾಲಿಂಗೇಶ್ವರ ಇವರ ಕುಲದೇವತೆಯಾದರೂ ಇವರು ಜೈನಧರ್ಮಾವಲಂಬಿಗಳಾಗಿದ್ದರು. 1408ರ ವಿಜಯನಗರದ ಶಾಸನವೊಂದರಲ್ಲಿ ಅಜಿಲರು ಬಂಗ ಮತ್ತು ಚೌಟ ಮನೆತನಗಳ ಅರಸುಗಳೊಂದಿಗೆ ಆಡಳಿತ ಕ್ಷೇತ್ರದಲ್ಲಿ ವಿಜಯನಗರ ರಾಜ್ಯಪಾಲನ ಸಹಾಯಕರಾಗಿ 1405ರಲ್ಲಿ ಕಾಣಿಸಿಕೊಳ್ಳುತ್ತಾರೆ.
ಅಜಿಲರ ಕೊಡುಗೆ
ಬದಲಾಯಿಸಿ
ಅಜಿಲ ಅರಸುಗಳ ಪೈಕಿ ಮುಖ್ಯನಾದವನು 4ನೆಯ ವೀರತಿಮ್ಮರಾಜ ಒಡೆಯ. ರಾಜಕುಮಾರನ ಅಳಿಯನೂ ಪಾಂಡ್ಯಕದೇವಿಯ ಮಗನೂ ಜೈನಗುರು ಚಾರುಕೀರ್ತಿದೇವರ ಪ್ರಿಯಾಗ್ರಶಿಷ್ಯನೂ ಆಗಿದ್ದ ಈ ತಿಮ್ಮರಾಜನೇ ವೇಣೂರಿನ ಗೊಮ್ಮಟ ಶಿಲಾಮೂರ್ತಿಯನ್ನು ಸ್ಥಾಪಿಸಿದ. ಇವನ ರಾಣಿ ಪಾಂಡ್ಯಕದೇವಿ ಅಥವಾ ವರ್ಧಮಾನಕ್ಕ ಗೊಮ್ಮಟನ ಎಡಭಾಗದಲ್ಲಿ ಚಂದ್ರನಾಥ ಚೈತ್ಯಾಲಯವನ್ನೂ ಇವನ ಮತ್ತೊಬ್ಬ ರಾಣಿ ಪಾರ್ಶ್ವದೇವಿ ಅಥವಾ ಬಿನಾಣೆ ಗೊಮ್ಮಟನ ಬಲಭಾಗದಲ್ಲಿ ಶಾಂತೀಶ್ವರ ಚೈತ್ಯಾಲಯವನ್ನೂ ಕಟ್ಟಿಸಿದರು. ಅಜಿಲರ ರಾಣಿ ಮದುರಕದೇವಿಯನ್ನು 1622ರ ಒಂದು ಶಾಸನದಲ್ಲಿ ಜೈನಗುರು ಲಲಿತಕೀರ್ತಿ ಭಟ್ಟಾರಕದೇವರ ಪ್ರಿಯಾಗ್ರಶಿಷ್ಯನೆಂದು ವರ್ಣಿಸಲಾಗಿದೆ. ಇವಳು ತನ್ನ ರಾಜಧಾನಿ ಆಲದಂಗಡಿಯಲ್ಲಿ ಒಂದು ಅರಮನೆಯನ್ನೂ ಒಂದು ಜೈನಬಸದಿಯನ್ನೂ ಅರ್ಧನಾರೀಶ್ವರ ಮತ್ತು ಸೋಮನಾಥ ದೇವಾಲಯಗಳನ್ನೂ ಕಟ್ಟಿಸಿದಳು. ವೇಣೂರಿನಲ್ಲಿ ಅಜಿಲರು ಕಟ್ಟಿಸಿಕೊಂಡಿದ್ದ ಅರಮನೆಗೆ ಏಳುಪ್ಪರಿಗೆಗಳಿದ್ದವೆಂಬ ಪ್ರತೀತಿಯಿದ್ದು, ಇಂದು ಆ ಅರಮನೆಯ ನಿವೇಶನದಲ್ಲಿ ತಳಪಾಯದ ಕುರುಹುಗಳೂ ಕಲ್ಲಿನ ಎರಡು ಆನೆಗಳೂ ಕಾಣಸಿಗುತ್ತವೆ. ಅಜಿಲಮೊಗರು ಎಂಬ ಸಣ್ಣ ಗ್ರಾಮದಲ್ಲಿರುವ ಮಸೀದಿಯ ನಿರ್ಮಾಪಕ ಒಬ್ಬ ಅಜಿಲ ಅರಸು ಎಂಬ ಐತಿಹ್ಯವಿದೆ. ಆ ಅರಸ ಯಾವುದೋ ರೋಗದಿಂದ ಬಳಲುತ್ತಿದ್ದಾಗ ಸೈಯದ್ ಬಾಬಾ ಫಕ್ರುದ್ದಿನ್ ಎಂಬ ಪಷಿರ್ಯ ದೇಶದ ಗುರು ಆ ರೋಗವನ್ನು ಗುಣಪಡಿಸಿದ ಕಾರಣ ಅಜಿಲ ಆ ಮಸೀದಿಯನ್ನು ಕಟ್ಟಿಸಿದನಂತೆ. ಹೈದರನ ಕಾಲದಲ್ಲಿ ಅಜಿಲರ ಆಳ್ವಿಕೆ ಕೊನೆಗಂಡಿತು. ಆಲದಂಗಡಿ ಮತ್ತು ಬಂಗಾಡಿ ಎಂಬೀ ಸ್ಥಳಗಳಲ್ಲಿ ಅಜಿಲ ವಂಶದವರು ಇಂದಿಗೂ ವಾಸಿಸುತ್ತಿದ್ದಾರೆ.[೨]
ಅಚರಣೆಗಳು
ಬದಲಾಯಿಸಿ
ಅಜಿಲರು ಜೈನ ಧರ್ಮಾವಲಂಬಿಗಳು.ಇವರಲ್ಲಿ ಅಳಿಯ ಸಂತಾನ ಪದ್ಧತಿ ರೂಢಿಯಲ್ಲಿತ್ತು. ಇವರು ಜೈನರಾಗಿದ್ದರೂ ಇವರ ಕುಲದೇವರು ಹಿಂದೂ ಧರ್ಮದ ಮಹಾಲಿಂಗೇಶ್ವರ. ಇವರು ವೀರಶೈವ ಧರ್ಮ ಕ್ಕೂ ತಕ್ಕ ಆಶ್ರಯ ಕೊಟ್ಟಿದ್ದರು.
ಹೆಚ್ಚಿನ ಓದಿಗೆ
ಬದಲಾಯಿಸಿ
ವೇಣೂರು
ಅಳದಂಗಡಿ
ಉಲ್ಲೇಖ
ಬದಲಾಯಿಸಿ
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಜಿಲರು
Last edited ೧ year ago by Vishwanatha Badikana
ವಿಕಿಪೀಡಿಯ
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ.
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್
ವಿಕಿಪೀಡಿಯ
ವಿಕಿಪೀಡಿಯ ಅನ್ನು ಹುಡುಕಿ
[ಮರೆಮಾಡಲು]
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.
ಅಣ್ಣಿಗೇರಿ
ಭಾಷೆ
Download PDF
ವೀಕ್ಷಿಸಿ