text
stringlengths
0
2.67k
ವಿಕಿಪೀಡಿಯ ಅನ್ನು ಹುಡುಕಿ
[ಮರೆಮಾಡಲು]
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.
ಅಂಗಡಿ (ಊರು)
ಭಾರತ ದೇಶದ ಗ್ರಾಮಗಳು
ಭಾಷೆ
Download PDF
ವೀಕ್ಷಿಸಿ
ಸಂಪಾದಿಸಿ
ಅಂಗಡಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಒಂದು ಪಟ್ಟಣ. ಈ ಸ್ಥಳದ ಪೂರ್ವನಾಮ ಸೊಸೆವೂರು. [೧][೨] ಈ ಗ್ರಾಮದಲ್ಲಿ ವಿದ್ಯಾರಣ್ಯ ಎಂಬ ಗುರುಗಳು ತಮ್ಮ ಶಿಷ್ಯರೊಂದಿಗೆ ನೆಲೆಸಿದ್ದರು. ಒಂದು ದಿನ ಆಕಸ್ಮಿಕವಾಗಿ ಆಶ್ರಮಕ್ಕೆ ಹುಲಿಯು ಬಂದಿತು. ಎಲ್ಲಾ ಶಿಷ್ಯರು ಹೆದರಿದರು. ಗುರುಗಳು ಸಳ ಎಂಬ ಶಿಷ್ಯನಿಗೆ ಹುಲಿಯನ್ನು ಕೊಲ್ಲಲು ಹೊಯ್ಸಳ ಎಂದು ಸೂಚನೆ ನೀಡಿದರು. ಆಗ ಸಳನು ಹುಲಿಯೊಂದಿಗೆ ಹೋರಾಟ ನಡೆಸಿ ಹುಲಿಯನ್ನು ಕೊಲ್ಲುತ್ತಾನೆ. ಅಂದಿನಿಂದ ಹೊಯ್ಸಳ ವಂಶದ ಲಾಂಛನ ಸಳ ಹುಲಿಯನ್ನು ಕೊಲ್ಲುತ್ತಿರುವ ಚಿತ್ರ ಲಾಂಛನವಾಗಿದೆ.
ಇತಿವೃತ್ತ
ಬದಲಾಯಿಸಿ
ಸಳನು ಇಲ್ಲಿನ ದೇವತೆಯಾದ ವಾಸಂತಿಕ ದೇವಿ ದೇವಾಲಯದಲ್ಲಿ ಜೈನ ಮುನಿ ಸುದತ್ತರ ಶಿಷ್ಯನಾಗಿ ವಿದ್ಯಾಭ್ಯಾಸ ಮಾಡುತಿದ್ದನು. ಆ ಸಮಯದಲ್ಲಿ ಹುಲಿಯೊಂದು ಅಕ್ರಮಣ ಮಾಡಲು, ಗುರುಗಳಾದ ಸುದತ್ತರು ಸಳನಿಗೆ 'ಹೊಯ್ ಸಳ' (ಹೊಯ್=ಹೊಡೆ, ಕೊಲ್ಲು) ಎನ್ನಲು, ಸಳನು ಆ ಹುಲಿಯನ್ನು ಕೊಂದನು.
ಮುಂದೆ ಸಳನು ಸ್ಥಾಪಿಸಿದ ಸಾಮ್ರಾಜ್ಯವು ಹೊಯ್ಸಳ ಸಾಮ್ರಾಜ್ಯ ಎಂದು ಪ್ರಸಿದ್ದಿಯಾಯಿತು. ಇಂದು ಅಲ್ಲಿ ಹೊಯ್ಸಳರ ಹಳೆಯ ರಾಜಧಾನಿಯ ಕುರುಹುಗಳಿವೆ. ಮುಂದೆ ಅವರು ಬೇಲೂರಿಗೆ ಹೋದುದರಿಂದ ಇದರ ಬಗ್ಗೆ ಗಮನ ಕಡಿಮೆಯಾಗಿತ್ತು.
ಅಂಗಡಿ ವೈಶಿಷ್ಟ್ಯ
ಬದಲಾಯಿಸಿ
ಘಟ್ಟದಿಂದ ಕರಾವಳಿಗೆ ಹೋಗುವ ಮಾರ್ಗದ ಮಧ್ಯದಲ್ಲಿರುವ ಈ ಸ್ಥಳದಲ್ಲಿದ್ದ ಅಂಗಡಿಗಳಿಂದಾಗಿ ಇದಕ್ಕೆ ಈ ಹೆಸರು ಬಂದಿದೆಯಂದು ಊಹಿಸಲಾಗಿದೆ. ೧೧-೧೨ ನೆಯ ಶತಮಾನದ ಶಾಸನಗಳಲ್ಲಿ ಇದನ್ನು ಸೊಸವೂರು ಎಂದು ಕರೆದಿದೆ. ಬುಕ್ಕರಾಯನ ಕಾಲದಲ್ಲೂ (೧೩೫೯) ಇದೇ ಹೆಸರಿತ್ತು. ಆದರೆ ಅಚ್ಚುತರಾಯನ ಕಾಲದ ಹೊತ್ತಿಗೆ (೧೫೩೯) ಅಂಗಡಿ ಎಂಬ ಹೆಸರು ಪ್ರಚಾರಕ್ಕೆ ಬಂದಿತ್ತು. ವಿಷ್ಣುವರ್ಧನನ ಕಾಲದ ಶಶಪುರ, ಶಶಕಪುರ ಎಂಬ ಹೆಸರುಗಳೂ ಈ ಊರನ್ನೇ ನಿರ್ದೇಶಿಸುತ್ತವೆ.
ಈ ಸೊಸವೂರು ಹೊಯ್ಸಳರ ಮೂಲಸ್ಥಾನವಾಗಿತ್ತು. ಸಳ ಇಲ್ಲಿ ಹುಲಿಯನ್ನು ಕೊಂದು ಹೊಯ್ಸಳ ವಂಶದ ಹೆಸರಿಗೆ ಕಾರಣನಾದ ಎಂದು ಅನೇಕ ಶಾಸಗಳು ತಿಳಿಸುತ್ತವೆ. ನೃಪಕಾಮ ಸೊಸವೂರಿನಿಂದ ಆಳುತ್ತಿದ್ದ. ಇವನ ಮಗ ವಿನಯಾದಿತ್ಯ ತನ್ನ ರಾಜಧಾನಿಯನ್ನು ದೋರ ಸಮುದ್ರಕ್ಕೆ ಬದಲಾಯಿಸಿದಂತೆ ತೋರುತ್ತದೆ. ಮುಂದೆ ಬಂದ ಹಲವು ಹೊಯ್ಸಳ ಅರಸರು ತಮ್ಮ ಪೂರ್ವಜರ ಹುಟ್ಟೂರಾದ ಅಂಗಡಿಗೆ ಹೋಗಿ ಬರುತ್ತಿದ್ದರೆಂದು ಅವರ ಶಾಸನಗಳಿಂದ ತಿಳಿದುಬರುತ್ತದೆ.
ಹೊಯ್ಸಳರ ಕುಲದೇವತೆಯಾದ ವಾಸಂತಿಕಾ ದೇವಿಯೇ ಇಲ್ಲಿನ ಮುಖ್ಯ ದೇವತೆಯಾದ ವಸಂತಮ್ಮ ಎಂದು ಹೇಳಲಾಗಿದೆ. ಅನೇಕ ಜೈನಯತಿಗಳು ಇಲ್ಲಿದ್ದು ಬಸದಿಗಳನ್ನುಕಟಿಸಿದ್ದರೆಂಬುದಕ್ಕೂ ಶಾಸನಾಧಾರಗಳಿವೆ. ಅಂಗಡಿಯ ಪಕ್ಕದಲ್ಲಿರುವ ಉಗ್ಗೇಹಳ್ಳಿಯಲ್ಲಿ ಕೋಟೆಹರವೆಂಬ ಪ್ರದೇಶವಿದೆ. ಇಲ್ಲಿರುವ ಒಂದು ಶಾಸನ ರಾಚಮಲ್ಲಪೆರ್ಮಾನಡಿಕಾಮ ಹೊಯ್ಸಳನ ಕಾಲದ್ದು.
ಇಲ್ಲಿರುವ ವಾಸಂತಿಕಾ ಗುಡಿ ಹೆಂಚು ಹೊದಿಸಿರುವ ಈಚಿನ ಕಟ್ಟಡ ಒಳಗೆ ಐದು ದೇವಿಯರ ಮೃಣ್ಮೂರ್ತಿಗಳಿವೆ. ಅವಕ್ಕೆ ಪಂಚಮುಖ ಅಥವಾ ತ್ರಿಮುಖಗಳಿವೆ. ಅವು ಶಕ್ತಿದೇವತೆಗಳಿಗೆ ವಿಶಿಷ್ಟವಾದ ಆಯುಧಗಳನ್ನು ಹಿಡಿದಿವೆ. ಇಲ್ಲಿ ಸು.೧೦-೧೧ ನೆಯ ಶತಮಾನದ ಎರ‌ಡು ಜೈನಬಸದಿಗಳ ಅವಶೇಷಗಳುಂಟು. ಇಲ್ಲಿರುವ ಕೇಶವ, ವೀರಭದ್ರ ಮತ್ತು ಶಿವ ದೇವಾಲಯಗಳೂ ಶಿಥಿಲವಾಗಿವೆ. ಕೇಶವ ದೇವಾಲಯದ ಮೂರ್ತಿ ಒಂದು ಉತ್ತಮ ಹೊಯ್ಸಳ ಶಿಲ್ಪ.
ಉಲ್ಲೇಖಗಳು
ಬದಲಾಯಿಸಿ
"ಆರ್ಕೈವ್ ನಕಲು". Archived from the original on 2017-12-13. Retrieved 2017-02-19. accessdate 19 February 2017
http://www.census2011.co.in/data/village/610011-angadi-karnataka.html
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
ಅಂಗಡಿ
Last edited ೧೦ months ago by InternetArchiveBot
ವಿಕಿಪೀಡಿಯ
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ.
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್
ವಿಕಿಪೀಡಿಯ
ವಿಕಿಪೀಡಿಯ ಅನ್ನು ಹುಡುಕಿ
[ಮರೆಮಾಡಲು]
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.
ಅಂತಃಪುರ ಗೀತೆಗಳು
ಭಾಷೆ
Download PDF
ವೀಕ್ಷಿಸಿ
ಸಂಪಾದಿಸಿ
ಇವು ಬೇಲೂರಿನ ಜಗತ್ಪ್ರಸಿದ್ಧ ಚನ್ನಕೇಶವ ದೇವಸ್ಥಾನದಲ್ಲಿ ನಿತ್ಯ ನಲಿಯುವ ಶಿಲಾಬಾಲಿಕೆಯರು. ಇವರ ಬಗೆಗೆ ದಾರ್ಶನಿಕ ಕವಿ ಡಿ.ವಿ.ಜಿ.ಯವರು ಅನ್ತಃಪುರಗೀತೆ ಎಂಬ ಕವನ ಸಂಕಲನವನ್ನೇ ಬರೆದಿದ್ದಾರೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು.
Last edited ೭ years ago by User unavailable826
ವಿಕಿಪೀಡಿಯ
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ.
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್
ವಿಕಿಪೀಡಿಯ
ವಿಕಿಪೀಡಿಯ ಅನ್ನು ಹುಡುಕಿ
[ಮರೆಮಾಡಲು]
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.
ಅಕ್ಕಾದೇವಿ
ಭಾಷೆ
Download PDF
ವೀಕ್ಷಿಸಿ
ಸಂಪಾದಿಸಿ
ಅಕ್ಕಾದೇವಿ ( ಕನ್ನಡದಲ್ಲಿ ಅಕ್ಕದೇವಿ, ಅಕ್ಕದೀವಿ, ಅಕ್ಕಾದೀವಿ), ೧೦೧೦-೧೦೬೪ CE [೧] ಕರ್ನಾಟಕದ ಚಾಲುಕ್ಯ ರಾಜವಂಶದ ರಾಜಕುಮಾರಿ ಮತ್ತು ಕಿಶುಕಾಡು(ಇಂದಿನ ಬೀದರ್, ಬಾಗಲಕೋಟೆ, ಬಿಜಾಪುರ ಜಿಲ್ಲೆಗಳು) ಎಂದು ಕರೆಯಲ್ಪಡುತ್ತಿದ್ದ ಪ್ರದೇಶದ ರಾಜ್ಯಪಾಲೆ ಆಗಿದ್ದರು. ಅವರು ಪಶ್ಚಿಮ ಚಾಲುಕ್ಯರ ರಾಜ ಜಯಸಿಂಹ II ರ ಸಹೋದರಿ ಮತ್ತು ಸೋಮೇಶ್ವರ I ರ ಚಿಕ್ಕಮ್ಮ.
ಅಕ್ಕಾದೇವಿ
ಚಾಲುಕ್ಯ
ಜನನ
೧೦೧೦
ಮರಣ
೧೦೬೪
ಅಕ್ಕಾದೇವಿ ಸಮರ್ಥ ಆಡಳಿತಗಾರ್ತಿ ಮತ್ತು ಸಮರ್ಥ ಸೇನಾಪತಿಯ೦ದು ಹೆಸರುವಾಸಿಯಾಗಿದ್ದರು. [೨] ಅವರನ್ನು ಗುಣದಬೆಡಂಗಿ("ಸದ್ಗುಣಗಳ ಸೌಂದರ್ಯ") ಎಂದೂ ಕರೆಯಲಾಗುತ್ತಿತ್ತು. [೩]
ಚಾಲುಕ್ಯರ ಆಳ್ವಿಕೆಯು ದಕ್ಷಿಣ ಭಾರತದ ಇತಿಹಾಸದಲ್ಲಿ ಒಂದು ಪ್ರಮುಖ ಮೈಲಿಗಲ್ಲು ಮತ್ತು ಕರ್ನಾಟಕದ ಇತಿಹಾಸದಲ್ಲಿ ಸುವರ್ಣಯುಗವನ್ನು ಗುರುತಿಸುತ್ತದೆ. ಚಾಲುಕ್ಯರು ೬೦೦ ವರ್ಷಗಳ ಕಾಲ ಭಾರತದ ಡೆಕ್ಕನ್ ಪ್ರಸ್ಥಭೂಮಿಯನ್ನು ಆಳಿದರು. ಅಕ್ಕಾದೇವಿಯು ಪಶ್ಚಿಮ ಚಾಲುಕ್ಯ ಸಾಮ್ರಾಜ್ಯದವರಾಗಿದ್ದರು. ಅವರು ಚೋಳರೊಂದಿಗೆ ಮತ್ತು ಅವರ ದೂರದ ಸೋದರಸಂಬಂಧಿಗಳಾದ ವೆಂಗಿಯ ಪೂರ್ವ ಚಾಲುಕ್ಯರೊಂದಿಗೆ ನಿರಂತರ ಸಂಘರ್ಷದಲ್ಲಿದ್ದರು.
ಅಕ್ಕಾದೇವಿಯ ಆಳ್ವಿಕೆಯ ಅವಧಿಯಲ್ಲಿ, ಅವರು ತಮ್ಮ ಪ್ರಾಂತ್ಯವನ್ನು ವಿಸ್ತರಿಸಿದರು, ಅನುದಾನದ ಮೂಲಕ ಶಿಕ್ಷಣವನ್ನು ಪ್ರೋತ್ಸಾಹಿಸಿದರು ಮತ್ತು ಜೈನ ಮತ್ತು ಹಿಂದೂ ದೇವಾಲಯಗಳಿಗೆ ಉದಾರವಾಗಿ ದಾನ ನೀಡಿದರು. [೪]
ಅಕ್ಕಾದೇವಿಯನ್ನು "ಮಹಾನ್ ಖ್ಯಾತಿ ಮತ್ತು ಪರಿಣಾಮದ ವ್ಯಕ್ತಿತ್ವ" ಎಂದು ಕರೆಯಲಾಗಿದೆ. [೫] ೧೦೨೨ ರ ಶಾಸನವು ಅವರನ್ನು ಯುದ್ಧದಲ್ಲಿ ಭೈರವಿಯಂತೆ ಧೈರ್ಯಶಾಲಿ ಎಂದು ಕರೆಯುತ್ತದೆ. [೬] ಸ್ಥಳೀಯ ದಂಗೆಯನ್ನು ಹತ್ತಿಕ್ಕಲು ಅವರು ಗೋಕಾಗೆ ಅಥವಾ ಗೋಕಾಕ್ ಕೋಟೆಗೆ ಮುತ್ತಿಗೆ ಹಾಕಿದರು. [೫] ಮತ್ತು ಬ್ರಾಹ್ಮಣರಿಗೆ ಅನುದಾನ ನೀಡುವ ಮೂಲಕ ಶಿಕ್ಷಣವನ್ನು ಪ್ರೋತ್ಸಾಹಿಸಿದರು ಎಂದು ಹೇಳಲಾಗುತ್ತದೆ.
ಉಲ್ಲೇಖಗಳು
ಬದಲಾಯಿಸಿ
RELATED PAGES
ಮಹಾರಾಷ್ಟ್ರದ ಇತಿಹಾಸ
ಮಧ್ಯಕಾಲೀನ ಭಾರತ
ಛಾಯಾ ಸೋಮೇಶ್ವರ ಸ್ವಾಮಿ ದೇವಾಲಯ
ವಿಕಿಪೀಡಿಯ
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ.
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್
ವಿಕಿಪೀಡಿಯ
ವಿಕಿಪೀಡಿಯ ಅನ್ನು ಹುಡುಕಿ
[ಮರೆಮಾಡಲು]
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.
ಅಚ್ಯುತರಾಯ
ಭಾಷೆ
Download PDF
ವೀಕ್ಷಿಸಿ
ಸಂಪಾದಿಸಿ
ಅಚ್ಯುತರಾಯ (೧೫೩೦-೧೫೪೨) ಅಥವಾ ಅಚ್ಚುತ ದೇವ ರಾಯ ಸುಪ್ರಸಿದ್ಧ ಕೃಷ್ಣದೇವರಾಯನ ಮರಣಾನಂತರ ವಿಜಯನಗರ ಸಾಮ್ರಾಜ್ಯವನ್ನಾಳಿದ ದೊರೆ. ಕೃಷ್ಣದೇವರಾಯನ ಆಳ್ವಿಕೆಯ ಕೊನೆಯ ವರ್ಷಗಳಲ್ಲಿ ಮಧುರೆಯ ಮಂಡಲಾಧಿಪತಿ ದಂಗೆಯೆದ್ದು ಸ್ವತಂತ್ರನಾಗಲು ಯತ್ನಿಸಿದ್ದ. ಅಚ್ಯುತರಾಯನು ಸಿಂಹಾಸನಕ್ಕೆ ಬಂದಕೂಡಲೆ ಅವನನ್ನು ಅಡಗಿಸಿ, ಅವನಿಗೆ ಸಹಾಯ ನೀಡಿದ್ದ ತಿರುವಾಂಕೂರು ದೊರೆಯನ್ನು ದಂಡಿಸಿದ. ಅನಂತರ ವಿಷಯಲೋಲುಪನಾಗಿ ಆಡಳಿತಕ್ಕೆ ಗಮನ ಕೊಡಲಿಲ್ಲ.