text
stringlengths
0
2.67k
ಚಿಕ್ಕಣ್ಣ ನಾಯಕನ ನಂತರ ಆತನ ಹಿರಿಯ ಸಹೋದರ ಲಿಂಗಣ್ಣ ನಾಯಕ ರಾಜನಾಗುತ್ತಾನೆ. ಈತನೂ ಸಹ ಮದಕೇರಿ ನಾಯಕ III ಎಂಬ ಹೆಸರಿನಿಂದ ಪರಿಚಿತನಾಗುತ್ತಾನೆ. ಈ ಸಮಯದಲ್ಲಿ ದಳವಾಯಿಗಳ ನಡುವೆ ಸಿಂಹಾಸನಕ್ಕೆ ನ್ಯಾಯಸಮ್ಮತವಾದ ಉತ್ತರಾಧಿಕಾರಿಯನ್ನು ನೇಮಿಸುವ ಬಗ್ಗೆ ತೀವ್ರವಾದ ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ. ಪಂಚಮಾರ ಮುದ್ದಣ್ಣ ನೇತೃತ್ವ ವಹಿಸಿದ ಒಂದು ಗುಂಪು ಲಿಂಗಣ್ಣ ನಾಯಕನನ್ನು ಬಂಧಿಸಿ ನಂತರ ಆತನನ್ನು ಹತ್ಯೆಗೈಯ್ಯುತ್ತದೆ. ಅಲ್ಲದೇ ದೊಣ್ಣೆ ರಂಗಪ್ಪ ನಾಯಕನನ್ನು ರಾಜನನ್ನಾಗಿ ಮಾಡುತ್ತದೆ. ದಳವಾಯಿ ಭರಮಪ್ಪ ನೇತೃತ್ವ ವಹಿಸಿದ ಮತ್ತೊಂದು ಒಳಗುಂಪು ಅಧಿಕಾರ ವಹಿಸಿಕೊಳ್ಳುವವರೆಗೂ, ಮುದ್ದಣ್ಣ ಚಿತ್ರದುರ್ಗದ ಅತ್ಯಂತ ಪ್ರಬಲ ನಾಯಕನಾಗಿ ಉಳಿಯುತ್ತಾನೆ. ಮುದ್ದಣ್ಣ ಹಾಗು ಆತನ ಸಹೋದರರ ಅಸ್ತಿತ್ವವನ್ನು ಶೀಘ್ರದಲ್ಲೇ ಕೊನೆಗೊಳಿಸಿ, ದೊಣ್ಣೆ ರಂಗಪ್ಪನನ್ನು ಸೆರೆಮನೆಯಲ್ಲಿಡಲಾಗುತ್ತದೆ.
ಭರಮಪ್ಪ ನಾಯಕ
ಬದಲಾಯಿಸಿ
ದಳವಾಯಿ ಭರಮಪ್ಪ ರಾಜ್ಯದ ಒಗ್ಗೂಡಿಕೆಯಲ್ಲಿನ ಸಮಗ್ರತೆಯಲ್ಲಿ ತನ್ನ ಆಸಕ್ತಿ ತೋರುತ್ತಾನೆ. ಸಿಂಹಾಸನಕ್ಕೆ ನೇರವಾದ ಉತ್ತಾರಾಧಿಕಾರಿ ಇರದ ಕಾರಣ, ಆತನು ಸಂಸ್ಥಾನದ ಇತರ ಹಿರಿಯರೊಂದಿಗೆ ಸಮಾಲೋಚಿಸಿ, ದೂರದ ಸಂಬಂಧಿ ಭರಮಪ್ಪ ನಾಯಕನನ್ನು ತನ್ನ ಉತ್ತರಾಧಿಕಾರಿಯನ್ನಾಗಿ ನೇಮಿಸಿಕೊಳ್ಳುತ್ತಾನೆ. ಈ ಹೊಸ ನಾಯಕನು ಸುಮಾರು ೧೬೮೯ರಲ್ಲಿ ಸಿಂಹಾಸನವನ್ನು ಏರುತ್ತಾನೆ. ಈ ಅವಧಿಯಲ್ಲಿ ರಾಜ್ಯವು ಸಾಕಷ್ಟು ಕಷ್ಟ-ಕೋಟಲೆ,ಸಮಸ್ಯೆಗಳನ್ನು ಎದುರಿಸಿತ್ತು. ಈ ಅವಧಿಯಲ್ಲಿ ಮುಘಲರು ಬಿಜಾಪುರದ ಸಂಪತ್ತನ್ನು ಅತಿಕ್ರಮಿಸಿ ಕೈವಶ ಮಾಡಿ, ಸಿರಾದಲ್ಲಿ ತಮ್ಮ ಆಳ್ವಿಕೆಯನ್ನು ಸ್ಥಾಪಿಸುತ್ತಾರೆ. ಇದಕ್ಕೆ ಬಸವಾಪಟ್ಟಣ ಹಾಗು ಬೂದಿಹಾಳಗಳನ್ನು ತಮ್ಮ ಪರಗಣಗಳನ್ನಾಗಿ ಮಾಡಿಕೊಂಡರಲ್ಲದೇ ಜೊತೆಗೆ ಚಿತ್ರದುರ್ಗ ಹಾಗು ಪಾಳೆಯಗಾರರ ಇತರ ನೆರೆಯ ರಾಜ್ಯಗಳನ್ನು ಅದರ ಅಧೀನರಾಜ್ಯಗಳನ್ನಾಗಿ ಮಾಡಿಕೊಂಡರು. ಈ ನಾಯಕನ ಆಳ್ವಿಕೆಯಲ್ಲಿ ಹಲವಾರು ಕದನಗಳು ಈ ಎರಡರ ಮಧ್ಯೆ ಅಂದರೆ ಚಿತ್ರದುರ್ಗ ಹಾಗು ಹರಪನಹಳ್ಳಿ ನಡುವೆ, ಅಲ್ಲದೇ ರಾಯದುರ್ಗ ಹಾಗು ಬಿಜಾಪುರಗಳ ನಡುವೆ ನಡೆಯುತ್ತವೆ. ನಾಯಕನು ಈ ಎಲ್ಲ ಕದನಗಳಲ್ಲಿ ಯಶಸ್ವಿಯಾಗಿ ಜಯಶಾಲಿಯಾಗುತ್ತಾನೆ. ಆತನ ೩೩ ವರ್ಷಗಳ(೧೬೮೯–೧೭೨೧) ಸುದೀರ್ಘ ಆಳ್ವಿಕೆಯಲ್ಲಿ ತನ್ನ ದಾನಧರ್ಮಗಳಿಂದಲೂ ಸಮಾನವಾಗಿ ಜನೋಪಕಾರಿಯಾಗಿ, ಭರಮಪ್ಪ ನಾಯಕ ಗಮನ ಸೆಳೆದಿದ್ದಾನೆ. ಈತ ತನ್ನ ಪ್ರಾದೇಶಿಕ ಆಡಳಿತದಲ್ಲಿ ತನ್ನ ರಾಜ್ಯದುದ್ದಕ್ಕೂ ಸುಮಾರು ೩೦ ದೇವಾಲಯಗಳು, ಮೂರು ಅಥವಾ ನಾಲ್ಕು ಅರಮನೆಗಳು, ಐದು ಪ್ರಬಲವಾದ ಕೋಟೆಗಳು, ಕಡಿಮೆಯೆಂದರೆ ೨೦ ಕೆರೆಗಳನ್ನು ನಿರ್ಮಿಸಿದ್ದನೆಂದು ಹೇಳಲಾಗುತ್ತದೆ. ಚಿತ್ರದುರ್ಗ ಕೋಟೆಯ ಒಂದು ಭಾಗ ಹಾಗು ಹಲವಾರು ಗೋಪುರ ಮಹಾದ್ವಾರಗಳು ಹಾಗು ಕಾಯುವ ಬುರುಜು ಕೋಟೆಗಳ ನಿರ್ಮಾಣಕ್ಕೂ ಸಹ ಈತ ಕಾರಣನಾಗಿದ್ದಾನೆ. ಈತನ ಆಳ್ವಿಕೆಯಲ್ಲಿ ಜನರು ಅನುಭವಿಸಿದ ಏಕೈಕ ತೊಂದರೆಯೆಂದರೆ ೧೭೦೩ರಲ್ಲಿ ಕಾಡಿದ ಪ್ಲೇಗು ಮಹಾಮಾರಿ; ಇದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಲಿಯಾಗುವುದರ ಜೊತೆಗೆ ಬಹುತೇಕ ಸಂಪೂರ್ಣವಾಗಿ ಕೆಲವು ದಿನಗಳ ಕಾಲ ರಾಜಧಾನಿಯೇ ಬರಿದಾಗಿತ್ತು.
ಆ ವೇಳೆಗೆ ೧೭೨೧ರಲ್ಲಿ ಈತನ ಮರಣದ ನಂತರ, ಭರಮಪ್ಪ ನಾಯಕನ ಪುತ್ರ ಹಿರಿ ಮದಕೆರಿ ನಾಯಕ ಗದ್ದುಗೆಯೇರುತ್ತಾನೆ. ಪಟ್ಟಕ್ಕೆ ಬಂದ ಎರಡು ಅಥವಾ ಮೂರು ವರ್ಷಗಳಲ್ಲೇ, ಯುವರಾಜನು, ಬರಗಾಲ ಹಾಗು ಪಿರಾಜಿ ನೇತೃತ್ವದ ಮರಾಠ ಆಕ್ರಮಣವನ್ನು ಎದುರಿಸಬೇಕಾಗುತ್ತದೆ. ಆತನ ಆಳ್ವಿಕೆಯನ್ನು ಹರಪನಹಳ್ಳಿ, ಸವಣೂರು, ಬಿದನೂರು ಹಾಗು ಮರಾಠಾದ ಆತನ ವೈರಿಗಳು ಅಸಂಖ್ಯಾತ ಬಾರಿ ತಡೆಗಟ್ಟಿ ಅಡ್ಡಿಮಾಡುತ್ತಾರೆ. ಈತ ಸಾಮಾನ್ಯವಾಗಿ ಯುದ್ಧದಲ್ಲಿ ಜಯಶಾಲಿಯಾಗುತ್ತಾನೆ. ಅಲ್ಲದೇ ಈಶಾನ್ಯದಲ್ಲಿ ಮೊಳಕಾಲ್ಮೂರು ಪ್ರದೇಶವನ್ನೂ ದಾಟಿ ಅದರಾಚೆಗೆ ವಿಸ್ತರಿಸಿ ಒಂದು ದೊಡ್ಡ ಪ್ರದೇಶದ ಭಾಗವನ್ನು ಸ್ವಾಧೀನಪಡಿಸಿಕೊಳ್ಳುತ್ತಾನೆ. ಆಗ ೧೭೪೭–೪೮ರ ನಡುವೆ ಮಾಯಕೊಂಡದಲ್ಲಿ ಚಿತ್ರದುರ್ಗ ಹಾಗು ಬಿದನೂರು, ರಾಯದುರ್ಗ, ಹರಪನಹಳ್ಳಿ, ಹಾಗು ಸವಣೂರು ಇವುಗಳ ಒಕ್ಕೂಟದ(ಮೈತ್ರಿಕೂಟದ) ಸೈನ್ಯಗಳ ನಡುವೆ ಭಾರೀ ಕದನ ನಡೆಯುತ್ತದೆ. ಚಿತ್ರದುರ್ಗ ಸೈನ್ಯವು ದುರಂತದೊಂದಿಗೆ ಪರಾಜಯಗೊಳ್ಳುತ್ತದೆ. ಅದಲ್ಲದೇ ನಾಯಕನನ್ನು ಹರಪನಹಳ್ಳಿಯ ಸೋಮಶೇಖರ ನಾಯಕ ಹತ್ಯೆಮಾಡುತ್ತಾನೆ. ಈ ನಾಯಕನ ಆಳ್ವಿಕೆಯಲ್ಲಿ, ಚಿತ್ರದುರ್ಗ ಅಭಿವೃದ್ಧಿ ಹೊಂದುತ್ತದೆ; ರಾಜ್ಯದ ಆದಾಯವು ೩೦೦,೦೦೦ ದುರ್ಗಿ ಪಗೋಡಗಳ ವರೆಗೆ ತಲುಪುತ್ತದೆ. ನಾಯಕನು ಹಲವಾರು ದೇವಾಲಯಗಳನ್ನು ನಿರ್ಮಿಸಿ ಖ್ಯಾತಿಯನ್ನು ಪಡೆದಿರುವುದರ ಜೊತೆಗೆ ಹಲವಾರು ಪೂಜಾ ಕೈಂಕರ್ಯಗಳನ್ನೂ ಹಾಗು ವಿವಿಧ ದೇವಾಲಗಳಲ್ಲಿ ಹಬ್ಬಗಳ ಆಚರಣೆಗೆ ವ್ಯವಸ್ಥೆ ಮಾಡಿದ್ದನು.
ಕಸ್ತೂರಿ ರಂಗಪ್ಪ ನಾಯಕ II
ಬದಲಾಯಿಸಿ
ಈತನ ನಂತರ ಆತನ ಪುತ್ರ ಕಸ್ತೂರಿ ರಂಗಪ್ಪ ನಾಯಕ II, ರಾಜನಾಗಿ, ಮಾಯಕೊಂಡವನ್ನು ಮರುಸ್ವಾಧೀನಪಡಿಸಿಕೊಳ್ಳುತ್ತಾನೆ. ಮರಾಠ ಸರದಾರ ಮುರಾರಿ ರಾವ್ ಹಾಗು ಅದ್ವಾನಿಯ ಸುಬೇದಾರ ಇವರುಗಳ ಸಹಾಯದಿಂದ ಈತನು ಮಾಯಕೊಂಡವನ್ನು ಮರುವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾನೆ. ಕಸ್ತೂರಿ ರಂಗಪ್ಪ ನಾಯಕ ಉತ್ತರ ಹಾಗು ದಕ್ಷಿಣದಲ್ಲಿ ಹಲವಾರು ದಂಡಯಾತ್ರೆಗಳನ್ನು ಮಾಡಿದ್ದನೆಂದು ಹೇಳಲಾಗುತ್ತದೆ. ಅದಲ್ಲದೇ ನಂತರದ ಅದೇ ದಿಶೆಗಳಲ್ಲಿನ ಆತನ ದಂಡಯಾತ್ರೆಗಳಲ್ಲಿ ಬೂದಿಹಾಳ್ ಪ್ರದೇಶದಲ್ಲಿನ ಕೆಲವನ್ನು ಸ್ವಾಧೀನ ಪಡೆಯುವಲ್ಲಿ ಯಶಸ್ಸು ಗಳಿಸುತ್ತಾನೆ. ಸಿರಾದ ಸುಬೇದಾರನೊಂದಿಗೆ ಈತ ಸ್ನೇಹ ಸಂಬಂಧವನ್ನೂ ಸಹ ಹೊಂದಿದ್ದನೆಂದು ಹೇಳಲಾಗುತ್ತದೆ. ಈತ ತನ್ನ ಬದಲಿಗೆ ಯಾವುದೇ ಉತ್ತರಾಧಿಕಾರಿಯನ್ನು ನೇಮಿಸದೇ ೧೭೫೪ರಲ್ಲಿ ಮರಣ ಹೊಂದುತ್ತಾನೆ. ಅಲ್ಲದೇ ಜನಕಲ್-ದುರ್ಗದ ಒಂದನೇ ಭರಮಪ್ಪ ನಾಯಕನ ಪುತ್ರ, ಕಡೆಯ ಮದಕೆರಿ ನಾಯಕನೆಂದು ಕರೆಯಲ್ಪಡುವ ಮದಕರಿ ನಾಯಕನು ಆತನ ಉತ್ತರಾಧಿಕಾರಿಯಾಗುತ್ತಾನೆ.
ರಾಜಾ ವೀರ ಮದಕರಿ ನಾಯಕ
ಬದಲಾಯಿಸಿ
ಚಿತ್ರದುರ್ಗದ ನಾಯಕರಲ್ಲಿ ಕಡೆಯ ನಾಯಕನಾದ, ಮದಕರಿ ನಾಯಕ, ಚಿತ್ರದುರ್ಗದ ಸಿಂಹಾಸನವನ್ನು ಅಲಂಕರಿಸಿದಾಗ ಹನ್ನೆರಡು ವರ್ಷ ವಯಸ್ಸಿನವನಾಗಿದ್ದನು. ಚಿತ್ರದುರ್ಗದ ವೈರಿಗಳು ಮತ್ತೊಮ್ಮೆ ಅದನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಬೇಡರ ಸಮುದಾಯ ತಮ್ಮ ನಾಯಕನಿಗೆ ನಿಷ್ಠಾವಂತರಾಗಿ ಉಳಿದು ಆತನನ್ನು ರಕ್ಷಿಸುತ್ತಾರೆ. ಕಲ್ಯದುರ್ಗ ಒಬ್ಬನೇ ಅದನ್ನು ಆಕ್ರಮಿಸಲು ಮತ್ತೊಮ್ಮೆ ಪ್ರಯತ್ನಿಸಿ ಸೋಲುತ್ತಾನೆ. ನಂತರ ೧೭೫೯–೬೦ರಲ್ಲಿ, ರಾಯದುರ್ಗ, ಹರಪನಹಳ್ಳಿ, ಹಾಗು ಸವಣೂರಿನ ಏಕೀಕೃತ ಮೈತ್ರಿಕೂಟ ಶತ್ರುಸೈನ್ಯವು ಆಕ್ರಮಣ ನಡೆಸಿತು. ಐಹೊಸ್ಕೆರೆ ಸಮೀಪ ಈ ಕದನ ನಡೆಯುತ್ತದೆ. ಇದರಲ್ಲಿ ಕೆಲವನ್ನು ಕಳೆದುಕೊಂಡರೂ, ಈ ಹಾನಿಯೊಂದಿಗೆಯೇ ಚಿತ್ರದುರ್ಗ ಸೈನ್ಯ ಜಯ ಗಳಿಸುತ್ತದೆ. ಇದರ ನಂತರ ರಾಜ್ಯದ ಗಡಿ ಪ್ರದೇಶಗಳಾದ ತರಿಕೆರೆ ಹಾಗು ಜರಿಮಲೆಯ ನಾಯಕರುಗಳು ಉಂಟುಮಾಡಿದ ಕುಕೃತ್ಯಗಳಿಂದಾಗಿ ಕೆಲವು ಸಣ್ಣಪುಟ್ಟ ಗಲಾಟೆಗಳು ಸಂಭವಿಸುತ್ತವೆ.
ತದನಂತರ ಚಿತ್ರದುರ್ಗವು, ದಕ್ಷಿಣದಲ್ಲಿ ಒಂದು ಬಲಶಾಲಿ ಸೈನ್ಯವಾಗುತ್ತದೆ. ಪರಿಣಾಮವಾಗಿ ಪ್ರಬಲವಾಗಿದ್ದ ಹೈದರ್ ಅಲಿ ಹಾಗು ಪೇಶ್ವೆಗಳು ಪರಸ್ಪರ ಕದನಕ್ಕೆ ಇದರ ಸಹಾಯ ಯಾಚಿಸುತ್ತಾರೆ. ನಾಯಕನು, ಬಂಕಾಪುರ, ನಿಜಗಲ್, ಬಿದನೂರು, ಹಾಗು ಮರಾಠರ ವಿರುದ್ಧದ ಕದನಗಳಲ್ಲಿ ಮೊದಲ ಬಾರಿಗೆ ಹೈದರ್ ಅಲಿಗೆ ಸಹಾಯ ಮಾಡಿರುತ್ತಾನೆ. ಇದರ ಹೊರತಾಗಿಯೂ, ನವಾಬನು ಚಿತ್ರದುರ್ಗವನ್ನು ಆಕ್ರಮಿಸಲು ಸೂಕ್ತ ಸಮಯಕ್ಕಾಗಿ ಕಾಯುತ್ತಿರುತ್ತಾನೆ. ೧೭೭೭ರಲ್ಲಿ, ಮರಾಠ ಹಾಗು ನಿಜಾಮರ ಮಿತ್ರಕೂಟ ಸೈನ್ಯದಿಂದ ಹೈದರ್, ಭಯಾನಕ ಆಕ್ರಮಣವನ್ನು ಎದುರಿಸಬೇಕಾಗುತ್ತದೆ. ಈ ನಡುವೆ ಚಿತ್ರದುರ್ಗದ ನಾಯಕನು ತನ್ನ ಸ್ವಾಮಿನಿಷ್ಠೆಯನ್ನು ಬದಲಿಸುತ್ತಾನೆ. ಅಲ್ಲದೇ ನಾಯಕನು ದೊಡ್ಡ ಮೊತ್ತದ ಕಪ್ಪವನ್ನು ಸಲ್ಲಿಸುವ ಪ್ರಸ್ತಾಪದ ಹೊರತಾಗಿಯೂ, ಹೈದರ್ ಅದನ್ನು ನಿರಾಕರಿಸಿ ಚಿತ್ರದುರ್ಗದೆಡೆಗೆ ದಾಳಿಗಾಗಿ ಕ್ರಮಣ ಮಾಡುತ್ತಾನೆ. ಕೋಟೆಯನ್ನು ಪ್ರವೇಶಿಸಲು ಸೂಕ್ತ ತಯಾರಿಯನ್ನು ಮಾಡಿಕೊಳ್ಳುವವರೆಗೂ ಕೆಲವು ತಿಂಗಳುಗಳ ಕಾಲ ಮುತ್ತಿಗೆ ನಿಷ್ಫಲವಾಗುತ್ತದೆ. ಅಲ್ಲದೇ ಹದಿಮೂರು ಲಕ್ಷಗಳ ಪಗೋಡಗಳನ್ನು ಮುಖ್ಯಸ್ಥ, ನಾಯಕನಿಂದ ಕಪ್ಪವಾಗಿ ಪಡೆಯಲಾಗುತ್ತದೆ. ಮರಾಠ ಸೈನ್ಯದ ಕಾರ್ಯಾಚರಣೆ ಮುಗಿದ ನಂತರ, ಹೈದರ್ ಮತ್ತೊಮ್ಮೆ ಚಿತ್ರದುರ್ಗದ ನಾಯಕನೊಂದಿಗೆ ಪ್ರಸ್ತಾಪ ಮಾಡುತ್ತಾನೆ. ಆದರೆ ಈ ಸಂದರ್ಭದಲ್ಲಿ ಹೈದರ್ ನ ವಿರುದ್ಧ ಸೈನ್ಯವು ತಿಂಗಳುಗಟ್ಟಲೇ ತನ್ನ ಪ್ರತಿರೋಧವನ್ನು ಮುಂದುವರೆಸುತ್ತದೆ. ಪಾಳೆಯಗಾರರ ಸೇವೆಯಲ್ಲಿದ್ದ ವಿಶ್ವಾಸಘಾತುಕ ಮುಸಲ್ಮಾನ ಅಧಿಕಾರಿಗಳ ಸಹಾಯದೊಂದಿಗೆ, ಚಿತ್ರದುರ್ಗವನ್ನು ೧೭೭೯ರಲ್ಲಿ ವಶಪಡಿಸಿಕೊಳ್ಳಲಾಯಿತು. ಮದಕೆರಿ ನಾಯಕ ಹಾಗು ಆತನ ಕುಟುಂಬವನ್ನು ಶ್ರೀರಂಗಪಟ್ಟಣಕ್ಕೆ ಬಂಧಿಸಿ ಸೆರೆಮನೆಗೆ ಕಳುಹಿಸಲಾಯಿತು. ಚಿತ್ರದುರ್ಗದ ೨೦,೦೦೦ ಬೇಡ ಸಮುದಾಯದ ಸೈನಿಕರನ್ನು ಶ್ರೀರಂಗಪಟ್ಟಣ ದ್ವೀಪಕ್ಕೆ(ಮೈಸೂರು)ಕಳುಹಿಸಲಾಯಿತು. ಇದರ ಏಕೈಕ ಉದ್ದೇಶವೆಂದರೆ ಅವರ ಬಲವನ್ನು ಮುರಿಯುವುದೇ ಆಗಿತ್ತು. ನಾಯಕನ ಮರಣಾನಂತರ, ಚಿತ್ರದುರ್ಗದ ಬೊಕ್ಕಸವು ಹೈದರಾಲಿಯ ವಶಕ್ಕೆ ಬಂದಿತೆಂದು ಹೇಳಲಾಗುತ್ತದೆ. ಇತರ ಸಂಪತ್ತಿನೊಂದಿಗೆ , ಈ ಕೆಳಕಂಡ ಪ್ರಮಾಣದಲ್ಲಿ ನಾಣ್ಯಗಳು ದೊರಕಿತೆಂದು ಹೇಳಲಾಗುತ್ತದೆ: ೪೦೦,೦೦೦ ರಜತ; ೧೦೦,೦೦೦ ರಾಜನಾಣ್ಯ; ೧,೭೦,೦೦೦ ಅಶ್ರಾಫಿ; ೨,೫೦೦,೦೦ ದಬೋಲಿಕದಲಿ; ಹಾಗು ೧,೦೦೦,೦೦೦ ಚವುರಿ ಇತ್ಯಾದಿ.
ಇವರು ಹಲವಾರು ದೇವಾಲಯಗಳನ್ನು ಕಟ್ಟಿಸಿದರು. ಭರಮಸಾಗರ ಮತ್ತು ಭಿಮಸಾಗರ ಜಲಾಶಯಗಳು ಇವರ ಕೊಡುಗೆಗಳಾಗಿವೆ.
ಮೂಲಗಳು
ಬದಲಾಯಿಸಿ
ಭಾರತದ ಭೂವಿವರ ನಿಘಂಟು, ಚಿತ್ರದುರ್ಗ ಜಿಲ್ಲೆ, ೧೯೬೭.
ಮೈಸೂರಿನ ಭೂವಿವರ ನಿಘಂಟು B. L. ರೈಸ್ ರಿಂದ
ಉಲ್ಲೇಖಗಳು
ಬದಲಾಯಿಸಿ
Madakari Nayaka ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್‌ನಲ್ಲಿ ಲಭ್ಯವಿದೆ.
ERROR: type should be string, got " https://netfiles.uiuc.edu/blewis/www/chitradurga.htm"
Last edited ೩ months ago by Shiva Tej Patil
ವಿಕಿಪೀಡಿಯ
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ.
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್
ವಿಕಿಪೀಡಿಯ
ವಿಕಿಪೀಡಿಯ ಅನ್ನು ಹುಡುಕಿ
[ಮರೆಮಾಡಲು]
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.
ರಾಣಿ ಅಬ್ಬಕ್ಕ
ಭಾಷೆ
Download PDF
ವೀಕ್ಷಿಸಿ
ಮೂಲವನ್ನು ನೋಡು
ಅಬ್ಬಕ್ಕ ರಾಣಿ ಅಥವಾ 'ಅಬ್ಬಕ್ಕ ಮಹಾದೇವಿ' ತುಳುನಾಡಿನ ರಾಣಿಯಾಗಿದ್ದಳು. ಇವಳು ೧೬ನೇ ಶತಮಾನದ ದ್ವಿತೀಯಾರ್ಧದಲ್ಲಿ ಪೋರ್ಚುಗೀಸರೊಡನೆ ಹೋರಾಡಿದಳು. ರಾಣಿಯು ದೇವಾಲಯಗಳ ನಗರಿ ಮೂಡುಬಿದಿರೆಯ ಪ್ರದೇಶ ವನ್ನಾಳಿದ ಚೌಟ ವಂಶಕ್ಕೆ ಸೇರಿದವಳು. ಬಂದರು ನಗರಿ ಉಳ್ಳಾಲವು ಈಕೆಯ ರಾಜಧಾನಿಯಾಗಿದ್ದಿತು. ಆಯಕಟ್ಟಿನ ಪ್ರದೇಶವಾದ ಉಳ್ಳಾಲವನ್ನು ವಶಪಡಿಸಿಕೊಳ್ಳಲು ಪೋರ್ಚುಗೀಸರು ಅನೇಕ ಯತ್ನಗಳನ್ನು ನೆಡೆಸಿದರು. ಆದರೆ ರಾಣಿಯು ಅವರ ಪ್ರಯತ್ನವನ್ನು ನಾಲ್ಕು ದಶಕಗಳ ಕಾಲ ಹಿಮ್ಮೆಟ್ಟಿಸಿದಳು. ಅವಳ ಧೈರ್ಯದಿಂದಾಗಿ ಅಭಯ ರಾಣಿ ಎಂದು ಹೆಸರಾಗಿದ್ದಳು[೪][೫] ಈಕೆ ವಸಾಹತುಶಾಹಿಗಳ ವಿರುದ್ಧ ಹೋರಾಡಿದ ಮೊದಲ ಭಾರತೀಯರಲ್ಲಿ ಒಬ್ಬಳು ಮತ್ತು ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಆಗಿದ್ದಳು.[೬][೭][೮]
ರಾಣಿ ಅಬ್ಬಕ್ಕ
ಉಳ್ಳಾಲದ ರಾಣಿ[೧]
ಉಳ್ಳಾಲದಲ್ಲಿ ರಾಣಿ ಅಬ್ಬಕ್ಕನ ಪ್ರತಿಮೆ
ಆಳ್ವಿಕೆ
೧೫೨೫ - ೧೫೭೦ [೨]
ಪೂರ್ವಾಧಿಕಾರಿ
ತಿರುಮಲ ರಾರ ಚೌಟ
ಗಂಡ/ಹೆಂಡತಿ
ಬಂಗಾ ಲಕ್ಷ್ಮಪ್ಪ ಅರಸ[೩]
ಧರ್ಮ
ಬಂಟ
ಪರಿವಿಡಿ
ಹಿಂದಿನ ಜೀವನ
ಚೌಟರು ಅಳಿಯ ಸಂತಾನವನ್ನು ಅನುಸರಿಸುವರು. ಹೀಗಾಗಿ ಮಾವ ತಿರುಮಲರಾಯನು ಅಬ್ಬಕ್ಕನನ್ನು ರಾಣಿಯನ್ನಾಗಿ ಪಟ್ಟಕಟ್ಟಿದನು ಮತ್ತು ಮಂಗಳೂರಿನ ಪ್ರಬಲ ಅರಸನಾಗಿದ್ದ ಲಕ್ಷ್ಮಪ್ಪಅರಸನೊಂದಿಗೆ ವಿವಾಹ ನೆರವೇರಿಸಿದನು. ತಿರುಮಲರಾಯನು ಅಬ್ಬಕ್ಕಳಿಗೆ ಯುದ್ಧತಂತ್ರಗಳನ್ನೂ ಮತ್ತು ಸೈನಿಕ ಕೌಶಲ್ಯಗಳನ್ನೂ ಹೇಳಿಕೊಟ್ಟನು. ಆದರೆ ಆ ವಿವಾಹವು ಬಹಳ ಕಾಲ ಉಳಿಯಲಿಲ್ಲ. ಅಬ್ಬಕ್ಕ ಉಳ್ಳಾಲಕ್ಕೆ ಹಿಂತಿರುಗಿದಳು. ಈ ಕಾರಣದಿಂದಾಗಿ ಮುಂದೆ ಪೋರ್ಚುಗೀಸರ ವಿರುದ್ಧದ ಅಬ್ಬಕ್ಕನ ಹೋರಾಟದಲ್ಲಿ ಪತಿಯು ಅಬ್ಬಕ್ಕನ ವಿರುದ್ಧ ಸೇಡು ತೀರಿಸಿಕೊಳ್ಳಲು ಪೋರ್ಚುಗೀಸರ ಪರ ಸೇರಿಕೊಂಡನು. ಜನವರಿ ೧೫, ೨೦೦೩ ರಂದು ಭಾರತ ಸರಕಾರವು ರಾಣಿ ಅಬ್ಬಕ್ಕನ ಚಿತ್ರವುಳ್ಳ ಪೋಸ್ಟಲ್ ಸ್ಟಾಂಪ್ ಬಿಡುಗಡೆ ಮಾಡಿತು
ಐತಿಹಾಸಿಕ ಹಿನ್ನೆಲೆ
ಗೋವಾವನ್ನು ಆಕ್ರಮಿಸಿಕೊಂಡ ನಂತರ ಮತ್ತು ಅದರ ಮೇಲೆ ಹಿಡಿತ ಸಾಧಿಸಿದ ನಂತರ, ಪೋರ್ಚುಗೀಸರು ತಮ್ಮ ಗಮನವನ್ನು ದಕ್ಷಿಣಕ್ಕೆ ಮತ್ತು ಕರಾವಳಿಯತ್ತ ತಿರುಗಿಸಿದರು. ಅವರು ಮೊದಲು ೧೫೨೫ ರಲ್ಲಿ ದಕ್ಷಿಣ ಕೆನರಾ ಕರಾವಳಿಯ ಮೇಲೆ ದಾಳಿ ಮಾಡಿ ಮಂಗಳೂರು ಬಂದರನ್ನು ನಾಶಪಡಿಸಿದರು. ಉಲ್ಲಾಳ ಸಮೃದ್ಧ ಬಂದರು ಮತ್ತು ಪಶ್ಚಿಮಕ್ಕೆ ಅರೇಬಿಯಾ ಮತ್ತು ಇತರ ದೇಶಗಳಿಗೆ ಮಸಾಲೆ ವ್ಯಾಪಾರದ ಕೇಂದ್ರವಾಗಿತ್ತು. ಅದು ಲಾಭದಾಯಕ ವ್ಯಾಪಾರ ಕೇಂದ್ರವಾಗಿದ್ದರಿಂದ, ಪೋರ್ಚುಗೀಸ್[೯], ಡಚ್ ಮತ್ತು ಬ್ರಿಟಿಷರು ಈ ಪ್ರದೇಶದ ನಿಯಂತ್ರಣಕ್ಕಾಗಿ ಮತ್ತು ವ್ಯಾಪಾರ ಮಾರ್ಗಗಳಿಗಾಗಿ ಪರಸ್ಪರ ಪೈಪೋಟಿ ನಡೆಸಿದರು. ಆದಾಗ್ಯೂ, ಸ್ಥಳೀಯ ಮುಖ್ಯಸ್ಥರ ಪ್ರತಿರೋಧವು ತುಂಬಾ ಪ್ರಬಲವಾಗಿದ್ದರಿಂದ ಅವರಿಗೆ ಹೆಚ್ಚು ಮುನ್ನಡೆಯಲು ಸಾಧ್ಯವಾಗಲಿಲ್ಲ. ಸ್ಥಳೀಯ ಆಡಳಿತಗಾರರು ಜಾತಿ ಮತ್ತು ಧಾರ್ಮಿಕ ಮಾರ್ಗಗಳನ್ನು ಮೀರಿ ಮೈತ್ರಿ ಮಾಡಿಕೊಂಡರು.
ಅಬ್ಬಕ್ಕನ ಆಡಳಿತದಲ್ಲಿ ಜೈನರು, ಹಿಂದೂಗಳು ಮತ್ತು ಮುಸ್ಲಿಮರು ಚೆನ್ನಾಗಿ ಪ್ರತಿನಿಧಿಸುತ್ತಿದ್ದರು. ಐತಿಹಾಸಿಕ ಸಂಶೋಧನೆಯು ೧೬ ನೇ ಶತಮಾನದಲ್ಲಿ ತನ್ನ ಆಳ್ವಿಕೆಯಲ್ಲಿ, ಬ್ಯಾರಿ ಪುರುಷರು ನೌಕಾಪಡೆಯ ನೌಕಾಪಡೆಯಾಗಿ ಸೇವೆ ಸಲ್ಲಿಸಿದ್ದರು ಎಂದು ತಿಳಿಸುತ್ತದೆ. ರಾಣಿ ಅಬ್ಬಕ್ಕ ಅವರು ಮಲಾಲಿಯಲ್ಲಿ ಅಣೆಕಟ್ಟು ನಿರ್ಮಾಣವನ್ನು ವೈಯಕ್ತಿಕವಾಗಿ ನೋಡಿಕೊಳ್ಳುತ್ತಿದ್ದಳು. ಅವಳು ಬೌಲ್ಡರ್ ಕೆಲಸಕ್ಕಾಗಿ ಬ್ಯಾರಿಯವರನ್ನು ನೇಮಿಸಿದ್ದಳು. ಅವಳ ಸೈನ್ಯವು ಎಲ್ಲಾ ಪಂಗಡಗಳು ಮತ್ತು ಜಾತಿಗಳ ಜನರನ್ನು ಒಳಗೊಂಡಿತ್ತು. ಅವಳು ಕ್ಯಾಲಿಕಟ್ ಮೊ ನ ಜಮೋರಿನ್ ನ ಜೊತೆ ಮೈತ್ರಿ ಮಾಡಿಕೊಂಡಳು. ಒಟ್ಟಾಗಿ, ಅವಳು ಪೋರ್ಚುಗೀಸರನ್ನು ಕೊಲ್ಲಿಯಲ್ಲಿ ಇಟ್ಟುಕೊಂಡಳು. ನೆರೆಯ ಬಂಗಾ ರಾಜವಂಶದೊಂದಿಗಿನ ವೈವಾಹಿಕ ಸಂಬಂಧವು ಸ್ಥಳೀಯ ಆಡಳಿತಗಾರರ ಮೈತ್ರಿಗೆ ಮತ್ತಷ್ಟು ಬಲವನ್ನು ನೀಡಿತು. ಅವಳು ಬಿಂದೂರ್ ನ ಪ್ರಬಲ ರಾಜ ವೆಂಕಟಪ್ಪನಾಯಕನಿಂದ ಬೆಂಬಲವನ್ನು ಪಡೆದಳು ಮತ್ತು ಪೋರ್ಚುಗೀಸ್ ಪಡೆಗಳ ಬೆದರಿಕೆಯನ್ನು ನಿರ್ಲಕ್ಷಿಸಿದರು.[೧೦]
ಇವನ್ನೂ ನೋಡಿ
ಉಳ್ಳಾಲ
ತುಳುನಾಡು
ಉಲ್ಲೇಖ
"RANI ABBAKKA is the forgotten Warrior Queen of Ullal, Karnataka". www.esamskriti.com (in ಅಮೆರಿಕನ್ ಇಂಗ್ಲಿಷ್). Retrieved 22 March 2020.
ERROR: type should be string, got " https://www.hindujagruti.org/history/21216.html"
ERROR: type should be string, got " https://www.asianage.com/india/all-india/121119/rani-abbakka-chowta-was-indias-first-woman-freedom-fighter.html"
"Queen Abbakka's triumph over western colonisers". Press Information Bureau, Govt., of India. Retrieved 2007-07-25.
"The Intrepid Queen-Rani Abbakka Devi of Ullal". Archived from the original on 2007-08-07. Retrieved 2007-07-25.
.rediff.com/news/2003/feb/17tara.htm "Include Tulu in Eighth Schedule: Fernandes". Rediff.com. Retrieved 2007-07-25. {{cite web}}: Check |url= value (help)
[http:/ /timesofindia.indiatimes.com/articleshow/29664181.cms "Blend past and present to benefit future"]. Times of Indiaತಿರುಮಲರಾಯನು. Retrieved 2007-07-25. {{cite news}}: Check |url= value (help)
"Abbakka Rani : The Warrior Queen who defeated the Portuguese". Hindu Janajagruti Samiti. Retrieved 22 March 2020.
Beth, Sapphira (12 March 2018). "Rani Abbakka Chowta: The Queen Who Made Portuguese Colonisers Miserable | #IndianWomenInHistory". Feminism In India. Retrieved 22 March 2020.
http://ignca.gov.in/PDF_data/Abbakka_Rani.pdf
ಟಿಪ್ಪಣಿಗಳು
Abbakka Rani - The unsung warrior queen Archived 2007-09-27 ವೇಬ್ಯಾಕ್ ಮೆಷಿನ್ ನಲ್ಲಿ.
Queen Abbakka's triumph over Western colonisers
ಹೊರಗಿನ ಕೊಂಡಿಗಳು
ಮೆನಸಿನ ರಾಣಿ ಅಬ್ಬಕ್ಕ Archived 2007-08-06 ವೇಬ್ಯಾಕ್ ಮೆಷಿನ್ ನಲ್ಲಿ.
ಉಳ್ಳಾಲದ ರಾಣಿ ಅಬ್ಬಕ್ಕದೇವಿ Archived 2007-08-07 ವೇಬ್ಯಾಕ್ ಮೆಷಿನ್ ನಲ್ಲಿ.
ಅಬ್ಬಕ್ಕ, ಕರ್ನಾಟಕದ ಕ್ಷತ್ರಿಯ ರಾಣಿ
Rani Abbakka has not been given her due Archived 2006-03-07 ವೇಬ್ಯಾಕ್ ಮೆಷಿನ್ ನಲ್ಲಿ.
Brave Abbakka still awaiting her due
Historian Dr. Jyotsna Kamat's Article on Abbakka
Last edited ೫ months ago by InternetArchiveBot
ವಿಕಿಪೀಡಿಯ
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ.
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್
ವಿಕಿಪೀಡಿಯ