text
stringlengths 0
2.67k
|
---|
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್ |
ವಿಕಿಪೀಡಿಯ |
ವಿಕಿಪೀಡಿಯ ಅನ್ನು ಹುಡುಕಿ |
[ಮರೆಮಾಡಲು] |
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ. |
ಜಕಣಾಚಾರಿ |
ಭಾರತೀಯ ಶಿಲ್ಪಿ |
ಭಾಷೆ |
Download PDF |
ವೀಕ್ಷಿಸಿ |
ಸಂಪಾದಿಸಿ |
ಅಮರಶಿಲ್ಪಿ ಜಕಣಾಚಾರಿ ಯವರು ಅತ್ಯಂತ ನಾಜೂಕಾದ ಹಲವಾರು ದೇವಾಲಯಗಳನ್ನು ನಿರ್ಮಿಸಿ ದಂತಕಥೆಯಾದ ಶಿಲ್ಪಿ,ಇವರು ಕಲ್ಯಾಣಿ ಚಾಲುಕ್ಯರ ಹಾಗೂ ಹೊಯ್ಸಳರ ಶೈಲಿಯ ದೇವಾಲಯಗಳನ್ನು ಬೇಲೂರು ಹಾಗೂ ಹಳೇಬೀಡಿನಲ್ಲಿ ನಿರ್ಮಿಸಿದ್ದಾರೆ. |
Entrance of Channakeshava Temple, Kaidala |
ಪರಿವಿಡಿ |
ಅವರ ಜೀವನ |
ಬದಲಾಯಿಸಿ |
Interior of Chennakeshava Temple, Kaidala |
Chennakeshava temple, Kaidala |
ಕರ್ನಾಟಕದ ತುಮಕೂರಿನಿಂದ ೯ ಕಿ.ಮೀ ದೂರದಲ್ಲಿರುವ ಕೈದಾಳೆಯಲ್ಲಿ ಜಕಣಾಚಾರಿಯವರು ಜನಿಸಿದರು. ಕೆಲವು ದಾಖಲೆಗಳ ಪ್ರಕಾರ ಈ ಊರಿನ ಮೂಲ ಹೆಸರು ಕ್ರೀಡಾಪುರ. ಅವರ ತಮ್ಮ ಜೀವನವನ್ನು ಕಲೆಗಾಗಿ ಮುಡಿಪಾಗಿಟ್ಟಿದ್ದರು. ಅವರು ತಮ್ಮ ವೃತ್ತಿ ಜೀವನವನ್ನು ನೃಪ ಹಯರು ಆ ಪ್ರದೇಶವನ್ನು ಆಳುತ್ತಿರುವಾಗ ಪ್ರಾರಂಭಿಸಿದರು. ತಮ್ಮ ಮದುವೆಯಾದ ನಂತರವೇ ಅವರು ಕೆಲಸ ಹುಡುಕುತ್ತಾ ಮನೆಬಿಟ್ಟು ಹೊರಟರು. ದೂರದ ಪ್ರಯಾಣ ಮಾಡಿದರು ಹಾಗೂ ಹಲವಾರು ದೇವಾಲಯಗಳನ್ನು ನಿರ್ಮಿಸುತ್ತ ಮುನ್ನಡೆದರು ಹಾಗೂ ತಮ್ಮ ಹೆಂಡತಿಯನ್ನು ಸಹ ತಮ್ಮ ಕೆಲಸದಲ್ಲಿ ಮರೆತರು. |
ಜಕಣಾಚಾರ್ಯ ಹಾಗೂ ಅವರ ಮಗ |
ಬದಲಾಯಿಸಿ |
ಜಕಣಾಚಾರ್ಯನ ಮಗನ ಹೆಸರು ಡಂಕಣಾಚಾರ್ಯ. ಡಂಕಣಾಚರ್ಯನು ಆತನ ತಂದೆಯನ್ನು ಹುಡುಕುವುದಕ್ಕಾಗಿ ತಾನೇ ಒಬ್ಬ ಪ್ರಖ್ಯಾತ ಶಿಲ್ಪಿಯಾಗಿ ಬೆಳೆದನು. ಬೇಲೂರಿನಲ್ಲಿ ಅವನು ಶಿಲ್ಪಿಯ ಕೆಲಸಕ್ಕಾಗಿ ನೇಮಿಸಲ್ಪಟ್ಟನು, ಮಹಾನ್ ಶಿಲ್ಪಿ ಜಕಣಾಚಾರಿ ನಿರ್ಮಿಸಿದ ಒಂದು ಶಿಲ್ಪದಲ್ಲಿ ಒಂದು ಒಡಕನ್ನು ಆತನು ಕಂಡನು. ಇದರಿಂದ ಕೋಪಗೊಂಡ ಜಕಣಾಚಾರ್ಯರು ಅವರು ಕೆತ್ತಿದ ಶಿಲ್ಪದಲ್ಲಿ ದೋಷವಿದ್ದರೆ ತನ್ನ ಬಲಗೈಯನ್ನು ಕತ್ತರಿಸಿಕೊಳ್ಳುವುದಾಗಿ ಆ ಯುವ ಶಿಲ್ಪಿಗೆ ಮಾತನ್ನಿತ್ತರು. ಆ ಶಿಲ್ಪವನ್ನು ಪರೀಕ್ಷಿಸಿದ ನಂತರ, ಆ ದೋಷವಿರುವುದು ನಿಜವೆಂದು ಗೊತ್ತಾಗಿ ಜಕಣಾಚಾರ್ಯರು ತಮ್ಮ ವಾಗ್ದಾನದಂತೆ ತಮ್ಮ ಬಲಗೈಯನ್ನು ಕತ್ತರಿಸಿಕೊಂಡರು. ಕೊನೆಯಲ್ಲಿ, ಆ ಇಬ್ಬರು ಶಿಲ್ಪಿಗಳು ಅವರಿಬ್ಬರೂ ತಂದೆ, ಮಗನೆಂಬ ಸಂಬಂಧವನ್ನು ತಿಳಿದುಕೊಂಡರು. |
ಚನ್ನಕೇಶವ ದೇವಾಲಯ |
ಬದಲಾಯಿಸಿ |
Krishna in relief at the entrnace of Channakeshava Temple, Kaidala |
Vishnu relief adorning entrance of Channakeshava Temple, Kaidala |
ಜಕಣಾಚಾರ್ಯರು ತಮ್ಮ ಹುಟ್ಟೂರಾದ ಕ್ರೀಡಾಪುರದಲ್ಲಿ ಚನ್ನಕೇಶವ ದೇವಾಲಯವನ್ನು ನಿರ್ಮಿಸುವ ಆಶೆ ಹೊಂದಿದರು. ಇದು ಮುಗಿದ ನಂತರ, ಅವರ ಬಲಗೈಯನ್ನು ದೇವರು ಕರುಣಿಸಿದನೆಂದು ದಂತಕಥೆ ಹೇಳುತ್ತದೆ. ಈ ಘಟನೆಯನ್ನು ಸಂತೋಷದಿಂದ ಆಚರಿಸಿದುದರ ನಂತರ ಈ ಕ್ರೀಡಾಪುರ ಊರಿಗೆ ಕೈದಾಳ ಎಂಬ ಹೆಸರು ಬಂತು ಎನ್ನಲಾಗಿದೆ. ಅದಕ್ಕಾಗಿ ಕೈ ಎನ್ನುವ ಪದವನ್ನು ಇಲ್ಲಿ ಬಳಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಸ್ಥಳೀಯ ಸರ್ಕಾರೇತರ ಸಂಸ್ಥೆಗಳು ಕೈದಾಳದಲ್ಲಿರುವ ಚನ್ನಕೇಶವ ದೇವಾಲಯವನ್ನು ರಕ್ಷಣೆಗಾಗಿ ಹಣ ಸಹಾಯ ಕೋರುತ್ತಿವೆ. |
ಜಕಣಾಚಾರಿ ಪ್ರಶಸ್ತಿ |
ಬದಲಾಯಿಸಿ |
ಕರ್ನಾಟಕ ಸರ್ಕಾರವು ಪ್ರತಿವರ್ಷ ಶಿಲ್ಪಕಲೆಗೆ ಅತಿ ಹೆಚ್ಚಿನ ಕೊಡುಗೆ ನೀಡುವ ಕಲೆಗಾರನಿಗೆ ಜಕಣಾಚಾರಿ ಪ್ರಶಸ್ತಿ ನೀಡಿ ಗೌರವಿಸುತ್ತದೆ. |
ಬಾಹ್ಯ ಕೊಂಡಿಗಳು |
ಬದಲಾಯಿಸಿ |
ಜಕಣಾಚಾರ್ಯರ ಜೀವನ ಚರಿತ್ರೆಯನ್ನೊಳಗೊಂಡ ಲೇಖನ |
ಜಕಣಾಚಾರ್ಯ ರಾಜ್ಯಪ್ರಶಸ್ತಿಯ ಲೇಖನ |
ಉಲ್ಲೇಖಗಳು |
ಬದಲಾಯಿಸಿ |
Last edited ೩ years ago by MalnadachBot |
ವಿಕಿಪೀಡಿಯ |
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. |
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್ |
ವಿಕಿಪೀಡಿಯ |
ವಿಕಿಪೀಡಿಯ ಅನ್ನು ಹುಡುಕಿ |
[ಮರೆಮಾಡಲು] |
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ. |
ಮದಕರಿ ನಾಯಕ |
ಚಿತ್ರದುರ್ಗದ ರಾಜ |
ಭಾಷೆ |
Download PDF |
ವೀಕ್ಷಿಸಿ |
ಸಂಪಾದಿಸಿ |
Learn more |
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. (November 2012) |
ದುರ್ಗದ ಹುಲಿ ಮದಕರಿ ನಾಯಕ , ಭಾರತ ದೇಶದಲ್ಲಿದ್ದ ಹಲವು ಸಂಸ್ಥಾನಗಳಲ್ಲಿ ಒಂದಾದ ಚಿತ್ರದುರ್ಗದ ಕೊನೆಯ ಆರಸನಾಗಿದ್ದ.[೧] ಹೈದರ್ ಅಲಿಯ ಮೈಸೂರಿನ ಸೇನೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ನಾಯಕನನ್ನು ಮಾತುಕತೆಗೆಂದು ರಾಜಿಸಂಧಾನವೆಂದು ಕರೆಸಿ ಮೋಸದಿಂದ ಹೈದರ್ ಅಲಿ ಬಂಧಿಸಿ ಶ್ರೀರಂಗಪಟ್ಟಣದ ಸೆರೆಮನೆಯಲ್ಲಿಟ್ಟು ಮತಾಂತರವಾದರೆ ರಾಜ್ಯವನ್ನು ವಾಪಸ್ಸು ನೀಡಿ ಬಿಡುಗಡೆ ಮಾಡುವುದಾಗಿ ಹೇಳಲು ಮದಕರಿ ಜೀವ ನೀಡುತ್ತಾನೆ ಹೊರತು ಧರ್ಮದ್ರೋಹ ಮಾಡುವುದಿಲ್ಲ ಎಂದು ಕೆಚ್ಚೆದೆಯಿಂದ ಹೇಳುತ್ತಾನೆ. ನಂತರ ಹೈದರ್ ಅಲಿಯ ಪುತ್ರ ಟಿಪ್ಪುಸುಲ್ತಾನ್ ಮೈಸೂರಿನ ಮತ್ತು ಚಿತ್ರದುರ್ಗದ ಬೇಡರ ಪಡೆಗಳು ಒಂದಾಗಿ ದಾಳಿ ಮಾಡಬಹುದೆಂಬ ಹೆದರಿ ಸೈನಿಕ ದಂಗೆಯಾದರೆ ನಮಗೆ ಸೋಲು ಖಚಿತವೆಂದು ಭಾವಿಸಿ ಯುದ್ಧಭಯದಿಂದ ಮದಕರಿ ಊಟದಲ್ಲಿ ವಿಷವಿಟ್ಟು ಕೊಲೆ ಮಾಡುತ್ತಾನೆ. |
ಮದಕರಿ ನಾಯಕ |
ಜನನ |
ಅಕ್ಟೋಬರ್ 13 1742 |
ಚಿತ್ರದುರಾಗ |
ಇತರೆ ಹೆಸರು |
ರಾಜ ವೀರ ಮದಕರಿ ನಾಯಕ ಅಥವಾ ಮದಕರಿ ನಾಯಕ V |
Known for |
ಚಿತ್ರದುರ್ಗದ ರಾಜ |
Predecessor |
ಎರಡನೇ ಕಸ್ತೂರಿ ರಂಗಪ್ಪ ನಾಯಕ |
ಮದಕರಿಯ ಆಳ್ವಿಕೆಯಲ್ಲಿದ್ದ ಚಿತ್ರದುರ್ಗದ ಕೋಟೆಯನ್ನು ಹೈದರ್ ಅಲಿಯ ಸೇನೆ ಮುತ್ತಿಗೆ ಹಾಕುತ್ತದೆ. ಹೀಗೆ ಹೈದರ್ ಅಲಿ ಚಿತ್ರದುರ್ಗದ ಕೋಟೆಯನ್ನು ಸುತ್ತುವರಿದಾಗ ಒನಕೆ ಓಬವ್ವ ಬಂಡೆಗಳ ನಡುವಿನ ಕಿಂಡಿಯ ಮೂಲಕ ಪ್ರವೇಶಿಸಿದ್ದನ್ನು ಗುರುತಿಸಿ, ತನ್ನ ಸೈನಿಕರನ್ನು ಆ ಮಾರ್ಗದ ಮೂಲಕ ಕಳುಹಿಸಿರುತ್ತಾನೆ. ಆ ಕಿಂಡಿಯ ಸಮೀಪ ಕಾವಲು ಕಾಯುತ್ತಿದ್ದ ಕೋಟೆಯ ಸೈನಿಕ ಊಟಮಾಡಲು ಮನೆಗೆ ಹೋಗಿರುತ್ತಾನೆ. ಆಕೆ, ಆ ಕಿಂಡಿಯ ಮೂಲಕ ಬರುತ್ತಿದ್ದ ಸೈನಿಕರನ್ನು ಗಮನಿಸುತ್ತಾಳೆ. ಕೂಡಲೇ ಜಾಗೃತಳಾಗಿ ತನ್ನ ಒನಕೆ ಯನ್ನು(ಭತ್ತ ಕುಟ್ಟಲು ಬಳಸುವ ಒಕ್ಕುಗೋಲು) ಬಳಸಿ ಅವರನ್ನು ಕೊಲ್ಲುತ್ತಾಳೆ. ಊಟ ಮುಗಿಸಿ ಹಿಂದಿರುಗಿದ ಬಳಿಕ, ಓಬವ್ವನ ರಕ್ತಸಿಕ್ತಗೊಂಡಿದ್ದ ಒನಕೆಯನ್ನು ನೋಡಿ ಆಕೆಯ ಪತಿಗೆ ಆಘಾತವಾಗುತ್ತದೆ. ಜೊತೆಗೆ ಅವಳಿಂದ ಹತರಾದ ನೂರಾರು ಸೈನಿಕರು ಅವಳೆದುರು ಶವವಾಗಿದ್ದನ್ನು ನೋಡುತ್ತಾನೆ. ತಣ್ಣೀರು ದೋಣಿಯ ಪಕ್ಕದಲ್ಲಿರುವ ಈ ಕಿಂಡಿಯು ಈ ಕಥೆಯ ಹೆಗ್ಗುರುತಾಗಿ ಈಗಲೂ ಉಳಿದುಕೊಂಡಿದೆ. ತಣ್ಣೀರು ದೋಣಿಯು ಒಂದು ಸಣ್ಣ ನೀರಿನ ಮೂಲವಾಗಿದ್ದು ವರ್ಷಪೂರ್ತಿ ಇಲ್ಲಿನ ನೀರು ತಂಪಾಗಿರುತ್ತದೆ. ಹೈದರ್ ಅಲಿ ೧೭೯೯ರಲ್ಲಿ ಮತ್ತೊಮ್ಮೆ ಆಕ್ರಮಣ ನಡೆಸಿ, ಕೋಟೆಯನ್ನು ತನ್ನ ವಶ ಮಾಡಿಕೊಳ್ಳುತ್ತಾನೆ. ಈ ಸ್ಥಳವು ತನ್ನ ಸುತ್ತಲಿನ ಕಲ್ಲಿನ ಕೋಟೆಗೆ ಪ್ರಸಿದ್ಧವಾಗಿದೆ.("ಕಲ್ಲಿನ ಕೋಟೆ ಇರುವ ಸ್ಥಳ") ಹಾಗು ಇದು ಏಳು ಸುತ್ತಿನ ಕೋಟೆ ಇರುವ ಸ್ಥಳವಾಗಿದೆ, ಇದು ದೊಡ್ಡ ದೊಡ್ಡ ಬಂಡೆಗಳಿಂದ ನಿರ್ಮಿತವಾಗಿದೆ. ತರಾಸು ಮತ್ತು ಬಿ.ಎಲ್.ವೇಣುರವರ ಕೃತಿಗಳು ಕೇವಲ ಅವರ ಕವಿಕಲ್ಪನೆಯಾಗಿದ್ದು ನೈಜ ಇತಿಹಾಸದ ಬದಲು ಕಲ್ಪನೆ ಮಾತ್ರ. |
ಪರಿವಿಡಿ |
ಚಿತ್ರದುರ್ಗದ ಪಾಳೆಗಾರ ಕುಟುಂಬದ ಇತಿಹಾಸ |
ಬದಲಾಯಿಸಿ |
ಚಿತ್ರದುರ್ಗದ ಪಾಳೆಗಾರ ಕುಟುಂಬದವರು ವಾಲ್ಮೀಕಿ ಸಮುದಾಯದ ಜಾತಿಗೆ ಸೇರಿದವರಾಗಿದ್ದರು. ಇವರಗಳನ್ನು ವಾಲ್ಮೀಕಿ ನಾಯಕರು ಹಾಗೂ ಬೇಡ ಎಂದೂ ಕರೆಯುತ್ತಾರೆ ಬೆಟ್ಟದ ಮೇಲೆ ವಾಸಿಸುತ್ತಿದ್ದ ಬುಡಕಟ್ಟು ಜನಾಂಗದವರಾಗಿದ್ದ ಇವರು ಬೇಟೆ ಹಾಗು ದನ ಕಾಯುವ ಮೂಲಕ ಜೀವನ ಸಾಗಿಸುತ್ತಿದ್ದರು. ಇವರ ಮೂಲದ ಬಗೆಗಿರುವ ವಿವರಣೆಯು ಅಸ್ಪಷ್ಟವಾಗಿದೆ. ಒಂದು ಸಾಂಪ್ರದಾಯಿಕ ನಂಬಿಕೆಯ ಪ್ರಕಾರ, ಮೂರು ಬೇಡ ಸಮುದಾಯದ ಕುಟುಂಬಗಳು, ತಿರುಪತಿಯ ಜಡಿಕಲ್-ದುರ್ಗದಿಂದ ವಲಸೆ ಬಂದು ಭರಮಸಾಗರದ ಸಮೀಪದ ನೀರ್ಥಡಿಯಲ್ಲಿ ಸುಮಾರು ೧೪೭೫ರಲ್ಲಿ ನೆಲೆಗೊಳ್ಳುತ್ತವೆ. ಇವರನ್ನು ಕಮಗೆತಿ ಕುಟುಂಬ ಹಾಗು ವಾಲ್ಮೀಕಿ ಗೋತ್ರ ಕ್ಕೆ ಸೇರಿದವರೆಂದು ಹೇಳಲಾಗುತ್ತದೆ. ಇವರಲ್ಲಿ ಮಗ ಹಾಗು ಮೊಮ್ಮಗ, ಹಿರೇ ಹನುಮಪ್ಪ ನಾಯಕ ಹಾಗು ತಿಮ್ಮಣ್ಣ ನಾಯಕ, ದಾವಣಗೆರೆ ತಾಲ್ಲೂಕಿನ ಮತ್ತಿಯಲ್ಲಿ ನೆಲೆಯಾಗುತ್ತಾರೆ. ಇವರಲ್ಲಿ ಕಮಗೇತಿ ತಿಮ್ಮಣ್ಣ ನಾಯಕನೆಂದು ಕರೆಯಲ್ಪಡುವ ಎರಡನೇಯವನನ್ನು ವಿಜಯನಗರದ ರಾಜನು ಮೊದಲು ಹೊಳಲ್ಕೆರೆಗೆ, ನಂತರ ಹಿರಿಯೂರಿಗೆ, ಹಾಗು ಅಂತಿಮವಾಗಿ ಚಿತ್ರದುರ್ಗದ ನಾಯಕನನ್ನಾಗಿ ನೇಮಿಸಿಕೊಳ್ಳುತ್ತಾನೆ. ಈತ ಚಿತ್ರದುರ್ಗದ ಬೆಟ್ಟವನ್ನು ಬಲಪಡಿಸಿ, ಅದನ್ನು ಯಾವ ರೀತಿ ನಿಭಾಯಿಸುತ್ತಾನೆಂದರೆ ಆತನ ವಿರುದ್ಧ ಸೆಣಸಲು ರಾಜನು ಸೈನ್ಯವನ್ನು ಕಳುಹಿಸುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮತ್ತೊಂದು ನಂಬಿಕೆ ಪ್ರಕಾರ, ತಿಮ್ಮಣ್ಣ ನಾಯಕನು ತಿರುಪತಿ ಸಮೀಪದ ಬೆಟ್ಟಗಳ ಕೆಳಗಿನ ಮದಕೇರಿ ಎಂಬ ಸ್ಥಳದಿಂದ ಒಂದು ಸಣ್ಣ ಸೈನ್ಯದೊಂದಿಗೆ ಇಲ್ಲಿಗೆ ಬಂದು ಬಸವಾಪಟ್ಟಣದ ಪಾಳೆಯಗಾರರಿಂದ ನೇಮಕಗೊಳ್ಳುತ್ತಾನೆ. ನಂತರದಲ್ಲಿ, ಆತ ಮತ್ತಿಯಲ್ಲಿ ಹೊಂದಿದ್ದ ಉಪಪತ್ನಿಗೆ ಸಂಬಂಧಿಸಿದ ಕೆಲ ಕಲಹಗಳು ಉಂಟಾಗುತ್ತವೆ. ಇದರಿಂದ ಆತ ಆ ಸ್ಥಳವನ್ನು ತೊರೆದು ಮಾಯಕೊಂಡದಲ್ಲಿ ಆಶ್ರಯ ಪಡೆಯುತ್ತಾನೆ. ಅಲ್ಲಿಂದಲೂ ಸ್ಥಳಾಂತರಗೊಂಡು, ಗುಂಟೂರಿನ ಸಮೀಪದ ಕಾಡಿನಲ್ಲಿ ತಲೆಮರೆಸಿಕೊಳ್ಳುತ್ತಾನೆ. ಅದಲ್ಲದೇ ತನ್ನದೇ ಆದ ತಂಡ ಕಟ್ಟಿಕೊಂಡ ನಂತರ, ಆ ಪ್ರದೇಶವನ್ನು ಲೂಟಿ ಮಾಡಲು ಆರಂಭಿಸಿದ. ಅಲ್ಲದೇ ಹಳೆಯೂರು ಸಮೀಪ ರಂಗಾಪಟ್ನವೆಂಬ ಒಂದು ಸಣ್ಣ ಕೋಟೆಯನ್ನು ನಿರ್ಮಿಸಿದ. ಈತ ಮಾಡುತ್ತಿದ್ದ ಲೂಟಿಯಿಂದ ಕೋಪಗೊಂಡ ಹರಪನಹಳ್ಳಿ, ನಿಡುಗಲ್, ಹಾಗು ಬಸವಾಪಟ್ಟಣದ ಪಾಳೆಯಗಾರರು, ಅವನ ವಿರುದ್ಧ ಒಂದಾಗಿ, ವಿಜಯನಗರದ ಕೆಲವು ಸೈನಿಕರೊಂದಿಗೆ, ರಂಗಾಪಟ್ನದೆಡೆಗೆ ಕ್ರಮಣ ಮಾಡುತ್ತಾರೆ. ತಿಮ್ಮಣ್ಣ ನಾಯಕನ ಸೈನ್ಯವು ಬಲವಂತದಿಂದ ಚಿತ್ರದುರ್ಗಕ್ಕೆ ಹಿಂದಿರುಗಬೇಕಾಗುತ್ತದೆ, ಅಲ್ಲಿ ಈತನ ಮೇಲೆ ಆಕ್ರಮಣ ಮಾಡಲಾಗುತ್ತದೆ. ಈ ಘಟನೆ ನಡೆದ ಸಂದರ್ಭದಲ್ಲೇ, ವಿಜಯನಗರದ ಅರಸರನ್ನು ಅವಲಂಬಿಸಿದ ನಾಯಕರುಗಳಲ್ಲಿ ಒಬ್ಬ ಎಂದು ಆತನನ್ನು ಪರಿಗಣಿಸಲಾಯಿತು. ಈ ಎಲ್ಲಾ ಘಟನೆಗಳು ನಡೆದದ್ದು ಸುಮಾರು ೧೫೬೨ ರ ಅವಧಿಯಲ್ಲಿ. |
ತಿಮ್ಮಣ್ಣ ನಾಯಕ |
ಬದಲಾಯಿಸಿ |
ತಿಮ್ಮಣ್ಣ ನಾಯಕನು, ತನ್ನ ವಿರುದ್ಧ ಸೈನ್ಯವನ್ನು ಕಳುಹಿಸಿದ ವಿಜಯನಗರದ ರಾಜಕುಮಾರ ಸಾಳುವ ನರಸಿಂಗ ರಾಯನ ಕುದುರೆಯನ್ನು ಅಪಹರಿಸುವ ಉದ್ದೇಶದಿಂದ ಕಗ್ಗತ್ತಲ ರಾತ್ರಿಯಲ್ಲಿ ಅವರ ಪಾಳೆಯಕ್ಕೆ ರಹಸ್ಯವಾಗಿ ನುಗ್ಗುವ ವಿಲಕ್ಷಣ ಸಾಹಸವೊಂದಕ್ಕೆ ಕೈ ಹಾಕುತ್ತಾನೆ. ರಾಜಕುಮಾರನು ಎಚ್ಚರಗೊಳ್ಳುತ್ತಾನೆ, ಹಾಗು ತಿಮ್ಮಣ್ಣ ಅವನ ಕಣ್ಣಿಗೆ ಬೀಳದಂತೆ ಒಣ ಹುಲ್ಲಿನಲ್ಲಿ ಅಡಗಿಕೊಳ್ಳುತ್ತಾನೆ. ರಾಜಕುಮಾರನು ನೆಲಕ್ಕೆ ಹಗ್ಗದ ಸಹಾಯದಿಂದ ಸಡಿಲುಗೊಂಡ ಕುದುರೆಯ ಗೂಟವನ್ನು ಮತ್ತೆ ಸರಿಮಾಡುತ್ತಾನೆ, ಹಾಗು ತಿಳಿಯದೆ ತಿಮ್ಮಣ್ಣನನ್ನೂ ಸೇರಿಸಿ ಅಲ್ಲಿ ಕಟ್ಟಿ ಹಾಕಿದಂತೆ ಬಂಧಿಸುತ್ತಾನೆ. ತಿಮ್ಮಣ್ಣ ನಿಶಬ್ದವಾಗಿ ಕೆಲಹೊತ್ತು ಹಾಗೇ ಅಡಗಿ ಕುಳಿತುಕೊಳ್ಳುತ್ತಾನೆ. ಅಲ್ಲದೇ ಮತ್ತೆ ಎಲ್ಲವೂ ಮತ್ತೆ ಮೊದಲಿನಂತಾದಾಗ, ಹಗ್ಗದ ಆಣಿಯಿಂದ ಬಂಧಿತನಾದ ಆತ ತನ್ನನ್ನು ತಾನು ಬಿಡುಗಡೆ ಮಾಡಿಕೊಂಡು ಕುದುರೆಯನ್ನು ಅಪಹರಿಸುತ್ತಾನೆ. ತಿಮ್ಮಣ್ಣನನ್ನು ಬೆದರಿಸಿ ಮುತ್ತಿಗೆ ಹಾಕಲು ಬಂದ ಸೈನ್ಯಕ್ಕೆ ಈ ಉದ್ದೇಶ ಸಫಲವಾಗುವುದಿಲ್ಲವೆಂಬುದು ಈ ಘಟನೆಯಿಂದ ತಿಳಿದುಬರುತ್ತದೆ. ಇದಾದ ನಂತರ, ಶಾಂತಿ ಸಂಧಾನದ ಮೂಲಕ ವ್ಯಾಜ್ಯ ಬಗೆಹರಿಸಲಾಗುತ್ತದೆ. ವಿಜಯನಗರದ ಅರಸನು ತಿಮ್ಮಣ್ಣನನ್ನು ರಾಜಧಾನಿಗೆ ಆಹ್ವಾನಿಸುತ್ತಾನೆ. ಅಲ್ಲದೇ ಆತನ ಸಾಹಸಕಾರ್ಯವನ್ನು ಮುಕ್ತಕಂಠದಿಂದ ಹೊಗಳುತ್ತಾನೆ. ರಾಜನ ಕೋರಿಕೆಯ ಮೇರೆಗೆ, ತಿಮ್ಮಣ್ಣ ನಾಯಕ ಗುಲ್ಬರ್ಗದ ಮೇಲೆ ಆಕ್ರಮಣ ನಡೆಸುತ್ತಾನೆ. ವಿಜಯನಗರ ಸೈನ್ಯವು ಗುಲ್ಬರ್ಗಕ್ಕೆ ಮುತ್ತಿಗೆ ಹಾಕಿದ ಆರು ತಿಂಗಳ ನಂತರವೂ ಅದನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿರುವುದಿಲ್ಲ. ಇದರಿಂದ ಸಂತುಷ್ಟನಾದ ಅರಸನು, ತಿಮ್ಮಣ್ಣನ್ನು ಆಸ್ಥಾನಕ್ಕೆ ಆಹ್ವಾನಿಸುತ್ತಾನೆ. ನಂತರದಲ್ಲಿ ತಿಮ್ಮಣ್ಣ, ಅರಸನ ಅಸಮಾಧಾನಕ್ಕೆ ಗುರಿಯಾಗುತ್ತಾನೆ. ಅಲ್ಲದೇ ವಿಜಯನಗರದ ಸೆರೆಮನೆಯಲ್ಲಿ ಬಂಧಿಯಾಗಿ ಅಲ್ಲಿಯೇ ಮರಣಹೊಂದುತ್ತಾನೆ. |
ತಿಮ್ಮಣ್ಣ ನಾಯಕನ ನಂತರ ಆತನ ಪುತ್ರ ಓಬಣ್ಣಾ ನಾಯಕ ಪಾಳೆಯಗಾರನಾಗುತ್ತಾನೆ. ಈತ ತನ್ನ ಹೆಸರನ್ನು ಮದಕರಿ ನಾಯಕನೆಂದು ಬದಲಿಸಿಕೊಂಡು ಪಟ್ಟಕ್ಕೆ ಬಂದ ಕೆಲವೇ ವರ್ಷಗಳಲ್ಲಿ, ವಿಜಯನಗರ ಸಾಮ್ರಾಜ್ಯದಿಂದ ಸ್ವಾತಂತ್ರ್ಯವನ್ನು ಘೋಷಿಸಿಕೊಳ್ಳುತ್ತಾನೆ. |
ಸುಮಾರು ೧೬೦೨ರಲ್ಲಿ, ಓಬಣ್ಣಾ ನಾಯಕನ ನಂತರ ಆತನ ಪುತ್ರ ಕಸ್ತೂರಿ ರಂಗಪ್ಪ ನಾಯಕ ಸಿಂಹಾಸನವನ್ನು ಅಲಂಕರಿಸುತ್ತಾನೆ. ಅವನ ಆಳ್ವಿಕೆಯು ಸಂಪೂರ್ಣವಾಗಿ ಘರ್ಷಣೆಗಳಿಂದ ಕೂಡಿದ್ದು, ತನ್ನ ನೆರೆಹೊರೆಯ ಮುಖ್ಯ ನಾಯಕರುಗಳೊಂದಿಗೆ ಸಂಘರ್ಷಕ್ಕಿಳಿಯುತ್ತಾನೆ. ಬಸವಾಪಟ್ಟಣದ ಪಾಳೆಯಗಾರರೊಂದಿಗೆ ಹಲವಾರು ಕದನಗಳು ಸಾಮಾನ್ಯವಾಗಿ ಮಾಯಕೊಂಡ, ಸಂತೇಬೆನ್ನೂರು, ಹೊಳಲ್ಕೆರೆ, ಅಣಜಿ, ಹಾಗು ಜಗಳೂರಿನಂತಹ ಸ್ಥಳಗಳಲ್ಲಿ ನಡೆಯುತ್ತವೆ. ಇವೆಲ್ಲವೂ ಅಂತಿಮವಾಗಿ ಚಿತ್ರದುರ್ಗ ಪ್ರದೇಶದ ಭಾಗಗಳಾಗುತ್ತವೆ. ೧೬೫೨ರಲ್ಲಿ, ಆತನ ಮರಣದ ಸಮಯದಲ್ಲಿ, ಓಬಣ್ಣನ ಸ್ವಾಮ್ಯದಲ್ಲಿ ೬೫,೦೦೦ ದುರ್ಗಿ ಪಗೋಡಗಳು ರಾಜ್ಯದ ಹುಟ್ಟುವಳಿಯಾಗಿರುತ್ತವೆ. |
ರಂಗಪ್ಪ ನಾಯಕನ ನಂತರ ಆತನ ಪುತ್ರ ಮದಕರಿ ನಾಯಕನು,೧೬೫೨ರಲ್ಲಿ ಅರಸನಾಗುತ್ತಾನೆ. ಈತನೂ ಸಹ ಹಲವಾರು ಕದನಗಳಲ್ಲಿ ಜಯಗಳಿಸಿರುತ್ತಾನೆ. ಅದರಲ್ಲೂ ವಿಶೇಷವಾಗಿ ಪೂರ್ವದ ರಾಜ್ಯಗಳ ಮೇಲೆ ಗೆಲುವು ಸಾಧಿಸುತ್ತಾನೆ. ಈ ಅವಧಿಯಲ್ಲಿ, ರಾಜ್ಯವು ನಾಲ್ಕು ಪ್ರದೇಶಗಳಾಗಿ ವಿಂಗಡಣೆಯಾಗುತ್ತದೆ. ಇವುಗಳ ಉಸ್ತುವಾರಿ ವಹಿಸಿದ್ದ ಸ್ಥಳೀಯ ಅಧಿಕಾರಿಗಳೆಂದರೆ ಹೊಟ್ಟೆ ಗುರುಕಣ್ಣ, ಕರಣಿಕ ಭುನಪ್ಪ, ಅಬ್ಬಿಗೆರೆ ಮಲ್ಲಣ್ಣ, ಹಾಗು ಕರಣಿಕ ಅಪ್ಪಣ್ಣ. ರಂಗಪ್ಪ ನಾಯಕ ೧೬೭೪ರಲ್ಲಿ ಮರಣಹೊಂದುವುದರ ಜೊತೆಗೆ ೧೦೦,೦೦೦ ದುರ್ಗಿ ಪಗೋಡಗಳನ್ನು ರಾಜ್ಯದ ಅಧಿಪತ್ಯದ ಹುಟ್ಟುವಳಿಯಾಗಿ ಬಿಟ್ಟು ಹೋಗಿರುತ್ತಾನೆ. |
ಚಿಕ್ಕಣ್ಣ ನಾಯಕ |
ಬದಲಾಯಿಸಿ |
ಮದಕರಿ ನಾಯಕನಿಗೆ ಮಕ್ಕಳಿಲ್ಲದ ಕಾರಣ, ಆತನ ದತ್ತುಪುತ್ರ ಓಬಣ್ಣಾ ನಾಯಕ, ಚಿತ್ರದುರ್ಗದ ಸಿಂಹಾಸನವನ್ನು ಏರುತ್ತಾನೆ. ಓಬಣ್ಣಾ ನಾಯಕ ದಳವಾಯಿಗಳಿಂದ ಹತನಾಗುತ್ತಾನೆ. ಬಹುಶಃ ಅವರಿಗೆ ಕಪ್ಪ ಕಾಣಿಕೆಗಳನ್ನು ಸಲ್ಲಿಸದಿರುವುದು ಇದಕ್ಕೆ ಮುಖ್ಯ ಕಾರಣವಿರಬಹುದು. ಚಿಕ್ಕಣ್ಣ ನಾಯಕ, ಮದಕರಿ ನಾಯಕನ ಕಿರಿಯ ಸಹೋದರ ೧೬೭೬ರಲ್ಲಿ ಸಿಂಹಾಸನಾರೂಢನಾಗುತ್ತಾನೆ. ಈ ಸಮಯದಲ್ಲಿ, ಹರಪನಹಳ್ಳಿಯ ನಾಯಕ ಅಣಜಿಗೆ ಮುತ್ತಿಗೆ ಹಾಕಿ ಸ್ಥಳೀಯ ಅಧಿಕಾರಿ ಭುನಪ್ಪನನ್ನು ಹತ್ಯೆ ಮಾಡುತ್ತಾನೆ. ಚಿಕ್ಕಣ್ಣ ನಾಯಕ ಅಣಜಿಗೆ ಹೋಗಿ, ಶತ್ರುಗಳು ಮುತ್ತಿಗೆ ಹಾಕುವುದನ್ನು ತಡೆಯುತ್ತಾನೆ. ಇದಾದ ಸ್ವಲ್ಪ ಸಮಯದಲ್ಲೇ, ಇವನು ಹರಿಹರಕ್ಕೆ ಹೋಗಿ ಅದು ಮುಸಲ್ಮಾನರಿಂದ ಆಕ್ರಮಿತವಾಗುವುದನ್ನು ತಪ್ಪಿಸಬೇಕಾಗುತ್ತದೆ. ಮುಸಲ್ಮಾನರು ಈ ಸ್ಥಳವನ್ನು ಶಂಷೇರ್ ಖಾನ್ ನ ಆಣತಿಯ ಮೇರೆಗೆ ಆಕ್ರಮಣ ಮಾಡಿರುತ್ತಾರೆ. ಆಗಿನ ದಾಳಿಯಿಂದ ರಕ್ಷಣೆಯು, ಈ ಕೆಳಕಂಡ ಯುದ್ಧತಂತ್ರದ ಮೂಲಕ ನಡೆಯುತ್ತಿರುತ್ತಿತ್ತು: ರಾತ್ರಿಯಾಗುತ್ತಿದ್ದಂತೆ ಹಲವಾರು ಲಾಂದ್ರಗಳನ್ನು ಹಚ್ಚಿ,ಮರದ ಕೊಂಬೆಗಳಿಗೆ ನೇತುಹಾಕಲಾಗುತ್ತಿತ್ತು. ಅಲ್ಲದೇ ಬರೆಗುಡ್ಡ ಬೆಟ್ಟದ ಮೇಲೆ ಬೀಡುಬಿಟ್ಟಿದ್ದ ಚಿಕ್ಕಣ್ಣನ ಸೈನ್ಯಕ್ಕಾಗಿ ಸಂಗೀತಗಾರರು ಎಂದಿನಂತೆ ತಮ್ಮ ವಾದ್ಯಗಳನ್ನು ನುಡಿಸುವಂತೆ ಹೇಳಲಾಗುತ್ತಿತ್ತು. ಶತ್ರುಗಳಿಗೆ ಸೈನ್ಯವು ಅಲ್ಲಿಂದ ಕಾಲ್ತೆಗೆದಿಲ್ಲವೆಂಬುದನ್ನು ತಿಳಿಯಪಡಿಸುವುದೇ ಈ ತಂತ್ರದ ಉದ್ದೇಶವಾಗಿತ್ತು. ನಾಯಕನು ತನ್ನ ಸಂಪೂರ್ಣ ಸೈನ್ಯವನ್ನು ಬಳಸು ಮಾರ್ಗಗಳ ಮೂಲಕ ಮುನ್ನಡೆಸಿ, ಕೋಟೆಯನ್ನು ಪಶ್ಚಿಮ ದಿಕ್ಕಿನಿಂದ ಆಕ್ರಮಿಸಿ, ಶತ್ರುಗಳನ್ನು ಹಿಮ್ಮೆಟ್ಟಿಸುತ್ತಾನೆ. ಚಿಕ್ಕಣ್ಣ, ರಾಯದುರ್ಗ ಹಾಗು ಬಸವಾಪಟ್ಟಣದ ನಾಯಕರುಗಳೊಂದಿಗೆ ವಿವಾಹದ ಮೂಲಕ ನೆಂಟಸ್ತಿಕೆ ಬೆಳಸಿಕೊಳ್ಳುತ್ತಾನೆ. ಚಿತ್ರದುರ್ಗದ ಕುಟುಂಬವು ಈ ನಾಯಕನ ಆಳ್ವಿಕೆಯಲ್ಲಿ ಎರಡು ಬಾರಿ ತಮ್ಮ ಧರ್ಮವನ್ನು ಬದಲಾವಣೆ ಮಾಡಿಕೊಂಡಿತೆಂದು ಹೇಳಲಾಗುತ್ತದೆ. ಮೊದಲಿಗೆ, ಸಂಪೂರ್ಣವಾಗಿ ಕುಟುಂಬವು ವೀರಶೈವ ಧರ್ಮವನ್ನು ಸ್ವೀಕರಿಸುತ್ತದೆ. ಅಲ್ಲದೇ ನಾಯಕರು ಕೋಟೆಯಲ್ಲಿ ಒಂದು ಮಠ ವನ್ನು ಸ್ಥಾಪಿಸುವ ಉದ್ದೇಶದ ಜೊತೆಗೆ ಉಗ್ರಚನ್ನವೀರದೇವ ಎಂಬ ವಿರಕ್ತ ಜಂಗಮರು ತಮ್ಮೆಲ್ಲರಿಗೂ ಗುರುವಾಗಬೇಕೆಂದೂ ಈ ಕುಟುಂಬ ಇಚ್ಛಿಸುತ್ತಿತ್ತೂ, ಎಂದು ಹೇಳಲಾಗುತ್ತದೆ. ನಂತರ, ಬಹುತೇಕ ಎಲ್ಲರೂ ತಮ್ಮ ಮೂಲ ಧರ್ಮಕ್ಕೇ ಹಿಂದಿರುಗಿದರೆಂದು ಹೇಳಲಾಗುತ್ತದೆ. ಈ ನಡುವೆ ಚಿಕ್ಕಣ್ಣ ನಾಯಕ ೧೬೮೬ರಲ್ಲಿ ವಿಧಿವಶನಾಗುತ್ತಾನೆ. |
Subsets and Splits