text
stringlengths 0
2.67k
|
---|
೧೯೭೧ರಲ್ಲಿ ಜೋಷಿಯವರು |
ಜನನ |
ಭೀಮಸೇನ್ ಗುರುರಾಜ ಜೋಷಿ |
೪ ಫೆಬ್ರವರಿ ೧೯೨೨ |
ರೋಣ ತಾಲೂಕು, ಗದಗ ಜಿಲ್ಲೆ, ಕರ್ನಾಟಕ ರಾಜ್ಯ |
ಮರಣ |
24 January 2011 (aged 88) |
ಪುಣೆ, ಮಹಾರಾಷ್ಟ್ರ |
ರಾಷ್ಟ್ರೀಯತೆ |
ಭಾರತೀಯ |
ವೃತ್ತಿ |
ಹಿಂದೂಸ್ತಾನಿ ಸಂಗೀತ ಹಾಡುಗಾರ |
Years active |
೧೯೪೧–೨೦೦೦ |
ಪೋಷಕ(ರು) |
ಗುರುರಾಜ ರಾವ್ ಜೋಷಿ (ತಂದೆ) |
ರಮಾ ಬಾಯಿ (ತಾಯಿ) |
Awards |
ಪದ್ಮಶ್ರೀ (೧೯೭೨) |
ಪದ್ಮಭೂಷಣ (೧೯೮೫) |
ಸಂಗೀತ ಮತ್ತು ನಾಟಕ ಅಕಾಡೆಮಿ ಫೆಲೋಶಿಪ್ (೧೯೯೮) |
ಪದ್ಮವಿಭೂಷಣ (೧೯೯೯) |
ಮಹಾರಾಷ್ಟ್ರ ಭೂಷಣ (೨೦೦೨) |
ಕರ್ನಾಟಕ ರತ್ನ (೨೦೦೫) |
ಭಾರತ ರತ್ನ (೨೦೦೯) |
Musical career |
ಸಂಗೀತ ಶೈಲಿ |
ಖಯಾಲ್ಅಭಂಗ |
ವಾದ್ಯಗಳು |
ಗಾಯನಹಾರ್ಮೋನಿಯಮ್ತಾನ್ಪುರ |
ಪರಿವಿಡಿ |
'ಬಹು-ದೊಡ್ಡ ಪರಿವಾರದಲ್ಲಿ ಜನನ' |
ಬದಲಾಯಿಸಿ |
ಭೀಮಸೇನ ಜೋಷಿಯವರು, ೪, ಫೆಬ್ರವರಿ ,೧೯೨೨ ರಲ್ಲಿ, 'ರಥಸಪ್ತಮಿಯ ತಿಥಿ'ಯಂದು,(ಹಿಂದೆ ಧಾರವಾಡ ಜಿಲ್ಲೆ) ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿ ಜನಿಸಿದರು. ಭೀಮಸೇನರ ಪೂರ್ವಜರು, ಮೂಲತಃ ಗದಗ ಜಿಲ್ಲೆಯ ’ಹೊಂಬಳ’ ಗ್ರಾಮದವರು. ಇವರ ತಂದೆ ಗುರುರಾಜ ಜೋಶಿ ಸಂಸ್ಕೃತದಲ್ಲಿ ಪಂಡಿತರು. ಗದುಗಿನ ಮುನಿಸಿಪಲ್ ಶಾಲೆಯಲ್ಲಿ ಶಿಕ್ಷಕರಾಗಿ, ಬಾಗಿಲುಕೋಟೆಯ ’ಬಸವೇಶ್ವರ ಹೈಸ್ಕೂಲ್’ನಲ್ಲಿ ಮುಖ್ಯೋಪಾಧ್ಯಾರರಾಗಿ ಸೇವೆಸಲ್ಲಿಸಿದ್ದರು. ಗುರುರಾಜರ ಇಬ್ಬರು ಪತ್ನಿಯರಲ್ಲಿ ಮೊದಲನೆಯವರಾದ ರಮಾಬಾಯಿಯವರಿಗೆ ೭ ಜನ ಮಕ್ಕಳು, ಹಾಗೂ ಎರಡನೆಯ ಪತ್ನಿ, ಗೋದುಬಾಯಿಯವರಿಗೆ ೯ ಜನ ಮಕ್ಕಳು. ಇಬ್ಬರನ್ನೂ 'ಗೋದುಬಾಯಿ'ಯೆಂದೇಸಂಬೋಧಿಸುತ್ತಿದ್ದರು. ಹಿರಿಯಮಗ,ಭೀಮಸೇನರ ನಂತರ, ಜನಿಸಿದವರು, ’ವನಮಾಲ’, ’ನಾರಾಯಣ’, ’ವೆಂಕಣ್ಣ’, ’ಹೇಮಕ್ಕ’, ’ಮದ್ದು’, ’ಮಾಧು’, ’ದಾಮೋದರ’, ’ಪರಿಮಳ’, ’ವಿಶಾಲ ’ಪ್ರಕಾಶ’,ಜಯತೀರ್ಥ, ಸುಶೀಲೇಂದ್ರ, ಪ್ರಾಣೇಶ, ವಾದಿರಾಜ, ಮತ್ತು ’ಜ್ಯೋತಿ.’ ’ಸುಶೀಲೆಂದ್ರ’, ಗದುಗಿನಲಿ ಅಭಿನಯ ರಂಗವೆಂಬ ಸಂಸ್ಥೆಯನ್ನು ಹುಟ್ಟುಹಾಕಿ ರಂಗಕಾರ್ಯಕ್ರಮವನ್ನು ನೀಡುತ್ತಿದ್ದಾರೆ. ’ಜಯತೀರ್ಥ’ ಸಹಿತ, ರಂಗಭೂಮಿಗೆ ತಮ್ಮನ್ನು ಅರ್ಪಿಸಿಕೊಂಡು ಅದರಲ್ಲಿ ಕೃಷಿಮಾಡಿದರು. |
ಗುರುವಿಗಾಗಿ ಹುಡುಕಾಟ |
ಬದಲಾಯಿಸಿ |
ಚಿಕ್ಕಂದಿನಲ್ಲಿ ಸೈಕಲ್ ಸವಾರಿ ಇವರ ನೆಚ್ಚಿನ ಹವ್ಯಾಸವಾಗಿತ್ತು. ಏನಾದರೂ ತರಲು ಬಝಾರಿಗೆ ಕಳಿಸಿದರೆ, ಗಂಟೆಗಟ್ಟಲೆ ಮನೆಗೆ ಬರುತ್ತಿರಲಿಲ್ಲ. ಚಿಕ್ಕಂದಿನಿಂದಲೀ ಅತಿಯಾದ ಸಂಗೀತದ ಗೀಳಿದ್ದ ಜೋಷಿಯವರು ತಮ್ಮ ಹನ್ನೊಂದನೆಯ ವಯಸ್ಸಿನಲ್ಲಿಯೇ ಮನೆ ಬಿಟ್ಟು ಮುಂಬಯಿಗೆ ಹೋದರು.ಮುಂಬಯಿತಲುಪಿದ ಬಾಲಕ ಜೋಷಿಯವರಲ್ಲಿ ಹಣಕಾಸು ಇರಲಿಲ್ಲ. ಪುಟ್ಟ ಭೀಮಸೇನರು ಕೂಲಿ ನಾಲಿ ಮಾಡಿ, ಪುಟ್ಪಾತ್ ನಲ್ಲಿ ಮಲಗಿ ದಿನ ಕಳೆದಿದ್ದರು.ಹಸಿವು ನೀರಡಿಕೆ ಅವರನ್ನು ಮತ್ತೆ ತನ್ನ ಹುಟ್ಟೂರಿಗೆ ಬರುವಂತೆ ಮಾಡಿತು.ಸಂಗೀತ ಕಲಿಯಲೇಬೇಕೆಂಬ ಆಸೆ ಮತ್ತು ಹಠ ಅವರನ್ನು ಎರಡನೆ ಬಾರಿಗೆ ಮನೆ ಬಿಡುವಂತೆ ಮಾಡಿ ಗ್ವಾಲಿಯರ್ ಗೆ ಬರುವಂತೆ ಮಾಡಿತು.ಅಲ್ಲಿ ಗಾಯಕ ವಿನಾಯಕ್ ರಾವ್ ಪಟವರ್ಧನ್ ಇವರ ನಿರ್ದೇಶನದಂತೆ ಸವಾಯಿ ಗಂಧರ್ವರಲ್ಲಿ ಸಂಗೀತ ಸಾಧನೆಗೆ ಮರಳಿ ಬಂದರು ಧಾರವಾಡ ಜಿಲ್ಲೆಗೆ ಹಿಂದಿರುಗಿ ಕುಂದಗೋಳದ ಪ್ರಸಿದ್ಧ ಗಾಯಕರಾದ ಸವಾಯಿ ಗಂಧರ್ವರ ಅಪ್ಪಟ ಶಿಷ್ಯರಾದರು. ಹಿಂದುಸ್ತಾನಿ ಸಂಗೀತದ ಒಂದು ಪದ್ಧತಿಯಾದ ಕಿರಾಣಾ ಘರಾನಾದಲ್ಲಿ ಪರಿಣತರಾದ ಭೀಮಸೇನ ಜೋಷಿಯವರು ಕಳೆದ ಐದು ದಶಕಗಳ ಕಾಲ ಕಛೇರಿಗಳನ್ನು ನಡೆಸುತ್ತಾ ಬಂದಿದ್ದಾರೆ. |
'ಗುರುರಾಜ ಜೋಶಿ ಪರಿವಾರದ ಸದಸ್ಯರು' |
ಬದಲಾಯಿಸಿ |
ಪಂ.'ಭೀಮ್ ಸೆನ್ ಜೋಶಿ'ಯವರ ತಮ್ಮನ ಮಕ್ಕಳಲ್ಲೊಬ್ಬರು, 'ಭಾರತೀಯ ಕ್ರಿಕೆಟ್ ತಂಡದ ಸದಸ್ಯ'ರಲ್ಲೊಬ್ಬರಾದ ’ಸುನಿಲ್ ಜೊಶಿ’, ಮತ್ತು ’ಅನಿರುದ್ಧ ಜೋಶಿ, ಕಿರಿಯರ ಕ್ರಿಕೆಟ್ ತಂಡದ ಆಟಗಾರರು, ಚಿಕ್ಕಪ್ಪ, ’ಗೋವಿಂದಾಚಾರ್ಯ’ರು, ’ಜಡಭರತ’ ಎಂಬ ಕಾವ್ಯನಾಮದಿಂದ, ಹೆಸರಾಗಿದ್ದಾರೆ. ಇವರು ಸುಪ್ರಸಿದ್ಧ ಲೇಖಕರು ಮತ್ತು ನಾಟಕಕಾರರು, ’ಮನೋಹರ ಗ್ರಂಥಮಾಲೆ’ಯೆಂಬ ಪ್ರಕಾಶನ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಒಟ್ಟಾರೆ ಜೋಶಿಮನೆತನ ಸಂಗೀತ, ಸಾಹಿತ್ಯ, ಮತ್ತು ಕ್ರೀಡೆಗಳಿಗೆ ಹೆಸರುವಾಸಿಯಾಗಿದೆ. ಅಜ್ಜ ಕೀರ್ತನಕಾರರು. ಮೊಮ್ಮಗ, 'ಭೀಮಸೇನ', ಭಜನಾಮೇಳದವರೊಡನೆ ಸೇರಿಕೊಂಡು ದಾಸರ ಪದಗಳನ್ನು ಕೇಳುತ್ತಾ, ಹಾಡುತ್ತಾ ಮೈಮರೆಯುತ್ತಿದ್ದರು. ಹೀಗೆ ಮುಂದುವರೆದು 'ದಾಸವಾಣಿ-ಶಾಸ್ತ್ರೀಯ ಸಂಗೀತವಲಯ'ದಲ್ಲಿ ಅಪ್ರತಿಮ ಸಾಧನೆಮಾಡಿದರು; ಸಂಗೀತವನ್ನೂ ಬೆಳೆಸಿದರು. |
ಭೀಮಸೇನ ಜೋಷಿಯವರ ಪರಿವಾರ |
ಬದಲಾಯಿಸಿ |
ಸನ್,೧೯೪೪ ರಲ್ಲಿ, ಪಂಡಿತ್‌ಜೀಯವರ ಪ್ರಥಮ ಪತ್ನಿ, ಸುನಂದಾರವರ ಜೊತೆ ವಿವಾಹದಿಂದ ನಾಲ್ಕು ಮಕ್ಕಳು ಜನಿಸಿದರು. ಅವರೇ, ರಾಘವೇಂದ್ರ, ಉಷಾ, ಸುಮಂಗಲ, ಹಾಗೂ ಕಿರಿಯ ಮಗ ಆನಂದ. ಸುನಂದಾರವರ ನಿಧನಬಳಿಕ, ೨ನೇ ವಿವಾಹ,ವತ್ಸಲಾ ರವರೊಡನೆ ನಡೆದು, ಅವರಿಗೆ ಮೂರು ಮಕ್ಕಳು ಜನಿಸಿದರು; ಅವರೇ, ಜಯಂತ, ಶುಭದಾ ಹಾಗೂ ಶ್ರೀನಿವಾಸ. ತಂದೆಯ ಪರಮ ಶಿಷ್ಯನಾದ 'ಶ್ರೀನಿವಾಸ', ಈಗ ಪ್ರಬುದ್ಧ ಗಾಯಕರಾಗಿದ್ದಾರೆ. |
ಗದಗದೊಂದಿಗೆ ಅವಿನಾಭಾವ ಸಂಬಂಧ |
ಬದಲಾಯಿಸಿ |
ಗದುಗಿನ ’ಖಡಕ್ ರೊಟ್ಟಿ’ ಮತ್ತು ಝುಣಕ ಬಲುಪ್ರೀತಿ. ತಮ್ಮ ಊರಿನ ಜನತೆಗೆ ಅನೇಕ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿ ರಸದೌತಣನೀಡಿದ್ದರು. ೧೯೮೩ ರಲ್ಲಿ, ’ವೆಂಕಟೇಶ ಚಿತ್ರಮಂದಿರ’ದಲ್ಲಿ, ’ಹತ್ತಿಕಾಳ್ ಕೂಟ’ದಲ್ಲಿ, ೧೯೮೫-೮೬ ರಲ್ಲಿ ’ಕಾಟನ್ ಮಾರ್ಕೆಟ್’ ನಲ್ಲಿ, ೧೯೯೨ ರಲ್ಲಿ, ’ಅಭಿನಯರಂಗ ವಿದ್ಯಾದಾನ ಸಮಿತಿ ಹೈಸ್ಕೂಲ್’ ಅವರಣದಲ್ಲಿ, ’ಕರ್ನಾಟಕ ಚಿತ್ರಮಂದಿರ’ದಲ್ಲಿ. ಅದರಲ್ಲಿ ಶೇಖರವಾದ ಹಣದಲ್ಲಿ ನಗರದ ವಿವಿಧ ಶಾಲೆಗಳ ಕೊಠಡಿ ನಿರ್ಮಾಣ ಕಾರ್ಯಗಳಿಗೆ ಮತ್ತು ದೇವಾಲಯಕ್ಕೆ ದೇಣಿಗೆ ನೀಡಿದ್ದರು. |
ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ದಿಗ್ಗಜರಾದರು |
ಬದಲಾಯಿಸಿ |
ಕೊಲ್ಕತ್ತಾಕ್ಕೆ ಅವರು ವರ್ಷದಲ್ಲಿ ಸುಮಾರು ೨೦ ಬಾರಿಯಾದರೂ ಹೋಗಿಬರುತ್ತಿದ್ದರು. ಕೊಲ್ಕತ್ತಾದಲ್ಲಿನ ಹಲವಾರು ಹಿಂದೂಸ್ತಾನೀ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಒಂದು ಪ್ರತಿಷ್ಠೆಯ ಸಂಕೇತವಾಗಿತ್ತು. ಭೀಮಸೇನರಿಗೆ ಅಲ್ಲಿಂದ ತಪ್ಪದೆ ಆಮಂತ್ರಣ ಬರುತ್ತಿತ್ತು. ಹಾಗೆಯೇ ಆ ನಗರದಲ್ಲಿ ಹಲವಾರು ಸಂಗೀತ ಸಮ್ಮೇಳನಗಳು ವರ್ಷಪೂರ್ತಿ ಆಯೋಜಿತಗೊಳ್ಳುತ್ತಿದ್ದವು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ, |
'ಆಲ್ ಬೆಂಗಾಲ್ ಮ್ಯೂಸಿಕ್ ಕಾನ್ಫರೆನ್ಸ್', |
'ತಾನ್ಸೇನ್ ಮ್ಯೂಸಿಕ್ ಕಾನ್ಪರೆನ್ಸ್', |
'ಡೋವರ್ ಲೇನ್ ಮ್ಯೂಸಿಕ್ ಕಾನ್ಪರೆನ್ಸ್', |
ಹಿಂದುಸ್ತಾನಿ ಸಂಗೀತದ ಖಯಾಲ್ ಕೃತಿಗಳ ಹಾಡುಗಾರಿಕೆಗೆ ಜೋಷಿಯವರು ಪ್ರಸಿದ್ಧರು.ಕನ್ನಡ ಭಾಷೆಯ ದಾಸಪದವಾದ ಭಾಗ್ಯದ ಲಕ್ಷ್ಮಿ ಬಾರಮ್ಮ ಭೀಮಸೇನ ಜೋಷಿಯವರ ಹೆಸರಿನೊಂದಿಗೆ ಐಕ್ಯವಾಗುವಷ್ಟು ಪ್ರಸಿದ್ಧವಾಗಿದೆ. ಕನ್ನಡದಲ್ಲಿ ಭೀಮಸೇನ್ ಜೋಷಿಯವರ ಮುಖ್ಯ ಆಲ್ಬಮ್ ಗಳೆಂದರೆ ದಾಸವಾಣಿ ಮತ್ತು ಎನ್ನ ಪಾಲಿಸೊ ಹಾಗೆಯೇ ಹಿಂದಿ ಭಜನೆಗಳು, ಮರಾಠಿ ಅಭಂಗ ಮತ್ತು ನಾಟ್ಯಗೀತೆಗಳನ್ನು ಸಹ ಬಹಳಷ್ಟು ಹಾಡಿದ್ದಾರೆ. |
ಪಂಡಿತ್ ಜಿಯವರ ಸ್ವಭಾವ |
ಬದಲಾಯಿಸಿ |
ಭೀಮಸೇನರು,ಸ್ವಭಾವತಃ ಮಹಾಮೌನಿಗಳು. ಅವರಿಂದ ಯಾವ ಪ್ರಶ್ನೆಗಳಿಗೂ ಉತ್ತರಗಳನ್ನು ನಿರೀಕ್ಷಿಸುವುದು ದುಸ್ಸಾಧ್ಯವಾಗಿತ್ತು. ಆದರೆ ಅವರ ವಾಚಾಳಿತನವನ್ನು ಶ್ರೋತೃಗಳು ಅವರು ಪ್ರಸ್ತುತಪಡಿಸುತ್ತಿದ್ದ,'ಬೃಂದಾವನ ಸಾರಂಗದಲ್ಲೋ,' ಭೀಮ ಪಲಾಸಿನಲ್ಲೋ',ಅಥವಾ ಮತ್ಯಾವುದೋ ಮುದಕೊಡುವ ರಾಗಗಳಲ್ಲಿ ಕಂಡುಕೊಳ್ಳುತ್ತಿದ್ದರು. ಅಸ್ಮಿತೆ ಅವರಲ್ಲಿ ನಿರಂತರವಾಗಿ ಹರಿಯುವ ತೊರೆಯಾಗಿತ್ತು. ಅವರ ಮೈಮನಗಳಲ್ಲಿ ಸಂಗೀತ ಉಕ್ಕಿಹರಿಯುತ್ತಿತ್ತು. ಯವತ್ತೂ ಅವರ ಮನೋಲೋಕದಲ್ಲೆಲ್ಲಾ ಆವರಿಸಿದ್ದು,'ಸಂಗೀತ'; 'ಕೇವಲ ಸಂಗೀತ,' ಹಾಗೂ ಅಪಾರ ಗುರುಭಕ್ತಿ,ಮಾತ್ರ. |
'ನಾದಪುತ್ರ ಹುಟ್ಟಿದ,' ಗುರುರಾಜರು ಬರೆದ ಪುಸ್ತಕ |
ಬದಲಾಯಿಸಿ |
ಭೀಮಸೇನರಬಗ್ಗೆ ಅವರ ತಂದೆ, ಗುರುರಾಜರು ಬರೆದ ಅಪರೂಪದ ಪುಸ್ತಕ, ಭೀಮಸೇನ ಜೋಷಿಯವರ ಬಾಲ್ಯದ, ಮತ್ತು ಅವರ ಸಂಗೀತದ ಹುಚ್ಚಿನ ಹತ್ತು-ಹಲವು ಮುಖಗಳನ್ನು ಪರಿಚಯಿಸುವ ಒಂದು ಸುಂದರ ಪುಸ್ತಕ. ಭೀಮಸೇನರ ಸಂಗೀತ-ಕಲೋಪಾಸನೆಗೆ ತಾವೇ ಅಡ್ಡಿಬಂದ ಸಂದರ್ಭದಲ್ಲಿ ವಿಧಿ, ಹೇಗೆ ಅವರ ನಿರ್ಧಾರಗಳನ್ನು ಬದಲಾಯಿಸಿ, ಅವರ ಮಗನನ್ನು 'ಭಾರತದ ಮಹಾನ್ ಗಾಯಕ'ನಾಗುವ ಅವಕಾಶವನ್ನು ತಂದೊಡ್ಡಿತು, ಎನ್ನುವ ವಿಚಾರ, ಅವರನ್ನು ದಿಗ್ಭ್ರಮೆಗೊಳಿಸುತ್ತದೆ. |
ಭೀಮಸೇನರ ಸಂಗೀತದ, ಧ್ವನಿಸುರಳಿಗಳು |
ಬದಲಾಯಿಸಿ |
ಭೀಮಸೇನ ಜೋಶಿಯವರ ಸಂಗೀತದ, ಧ್ವನಿಸುರಳಿಗಳು ಮತ್ತು ಧ್ವನಿಮುದ್ರಿಕೆಗಳು, ಪ್ರತಿಯೊಬ್ಬರ ಮನೆ-ಮನವನ್ನು ತಲುಪಿವೆ. ಸಂಗೀತದಲ್ಲಿ ’ಕಲಾಶ್ರೀ' ರಾಗವನ್ನು ರಚಿಸಿದ ಅವರು ಮರಾಠಿ ಅಭಂಗ, ನಾಟ್ಯ ಸಂಗೀತ, ಹಿಂದಿ ಭಜನ್, ಕನ್ನಡದಲ್ಲಿ ದೇವರನಾಮ ಗಳನ್ನು ಹಾಡಿ, ಹಲವು ಚಲನಚಿತ್ರಗಳಿಗೂ ತಮ್ಮ ಕಂಠದಾನಮಾಡಿದ್ದಾರೆ. ಇವರ 'ಸಂತವಾಣಿ ಕಾರ್ಯಕ್ರಮ' ಅತ್ಯಂತ ಜನಪ್ರಿಯತೆಯನ್ನು ಪಡೆದಿದೆ. |
ಪುಣೆಯ ವಾಸಿ |
ಬದಲಾಯಿಸಿ |
ಪುಣೆಯಲ್ಲಿ ವಾಸಿಸುವ ಭೀಮಸೇನ ಜೋಷಿ, ತಮ್ಮ ಗುರುಗಳ ನೆನಪಿನಲ್ಲಿ ೧೯೫೨ರಿಂದ ಪ್ರತಿ ವರ್ಷವೂ ಅಲ್ಲಿ "ಸವಾಯಿ ಗಂಧರ್ವ ಸಂಗೀತ ಮಹೋತ್ಸವ"ವನ್ನು ನಡೆಸುತ್ತಾ ಬ೦ದಿದ್ದಾರೆ. ಹುಬ್ಬಳ್ಳಿಯ ಹಾನಗಲ್ ಮ್ಯೂಸಿಕ್ ಸಂಸ್ಥೆ, ೧೨, ಅಕ್ಟೋಬರ್, ೨೦೦೭ ರಂದು, ಪಂ. ಭೀಮಸೇನ ಜೋಷಿಯವರಿಗೆ ಪುಣೆಯಲ್ಲಿ, ಡಾ. ಗಂಗೂಬಾಯಿ ಹಾನಗಲ್ ರವರ ಅಮೃತಹಸ್ತದಿಂದ, "ಸಂಗೀತಕಲಾನಿಧಿ"ಯೆಂಬ ಪ್ರಶಸ್ತಿಯನ್ನು ಕೊಟ್ಟು ಸನ್ಮಾನಿಸಿತು. . ಕಾರನ್ನು ವೇಗವಾಗಿ ಓಡಿಸುವ ಖಯಾಲಿ ಇವರಿಗಿತ್ತು. |
ಪ್ರಮುಖ ಶಿಷ್ಯರು |
ಬದಲಾಯಿಸಿ |
ಪಂಡಿತ್‌ಜೀಯವರ ಶಿಷ್ಯತ್ವ ಪಡೆದವರಲ್ಲಿ, ಮಾಧವ ಗುಡಿ, ಶ್ರೀಕಾಂತ್ ದೇಶಪಾಂಡೆ, ವಿನಾಯಕ ತೊರವಿ' ಉಪೇಂದ್ರ ಭಟ್' 'ಶ್ರೀನಿವಾಸ ಜೋಶಿ, ಸ೦ಜೀವ ಜಹಗೀರದಾರ, ರಾಜೇಂದ್ರ ಕಂದಲ್ಗಾವ್ಕರ್,ಆನಂದ ಭಾಟೆ, ವಿನಾಯಕ್.ಪಿ.ಪ್ರಭು, ರಾಮಕೃಷ್ಣ ಪಟವರ್ಧನ್, ಶ್ರೀಪತಿ ಪಾಡಿಗಾರ, ಪಳಯಾರ ವರಾಜ್, ರಶೀದ ಖಾನ್, ಅಶುತೋಷ ಮುಖರ್ಜಿ ಮುಂತಾದವರು ಮುಖ್ಯರು.. |
ಮರಣ |
ಬದಲಾಯಿಸಿ |
ದಿನಾಂಕ ೨೪-೧-೨೦೧೧ 'ಪೂನಾದ ಆಸ್ಪತ್ರೆ'ಯಲ್ಲಿ ೮೯ರ ಇಳಿವಸ್ಸಿನ 'ಭೀಮಸೇನ್ ಜೋಶಿ' ಕೊನೆಯುಸಿರೆಳೆದರ[೧]ು. |
ಜೀವನದ ಮಹತ್ವದ ಘಟನೆಗಳು |
ಬದಲಾಯಿಸಿ |
೧೯೨೨, ಫೆಬ್ರವರಿ,೪-ತಾಯಿ ರಮಾಬಾಯಿ ಅಕ್ಕನ ಮನೆ ’ರೋಣ’ದಲ್ಲಿ ಜನನ. |
೧೯೩೧-ಗದುಗಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಜವಹರಲಾಲ್ ನೆಹರೂ ಎದುರು ’ವಂದೇ ಮಾತರಂ ಗಾಯನ’ |
೧೯೩೩-ಮನೆ ಬಿಟ್ಟು ಹೋಗಿದ್ದು, ಬಿಜಾಪುರದಿಂದ ಹಿಂದಿರುಗಿ ಬಂದದ್ದು(ಎರಡೂವರೆ ತಿಂಗಳುಗಳ ನಂತರ) ಮತ್ತೆ ಮನೆ ಬಿಟ್ಟದ್ದು. |
೧೯೩೬-' ಪುಣೆ, ಮುಂಬಯಿ,ಗ್ವಾಲಿಯರ್, ಕೊಲ್ಕತ್ತಾ, ಜಲಂಧರ್, ಮುಂತಾದಕಡೆ ಸಂಗೀತಾಭ್ಯಾಸಕ್ಕಾಗಿ ಅಲೆದಾಟ. |
೧೯೩೮ ರಿಂದ ೧೯೪೨ -ಕುಂದಗೋಳದ ಸವಾಯಿ ಗಂಧರ್ವರ ಮನೆಯಲ್ಲಿ ಗುರುಕುಲ ಪದ್ಧತಿಯಲ್ಲಿ ಶಿಕ್ಷಣ |
೧೯೪೧-ಸವಾಯಿ ಗಂಧರ್ವರಿಂದ "ಗಂಡಾಬಂಧನ". |
೧೯೪೧-೪೨-ಲಖನೌ ಆಕಾಶವಾಣಿ ಕೇಂದ್ರ'ದಲ್ಲಿ ನೌಕರಿ. |
೧೯೪೩-'ಮುಂಬಯಿ ಮತ್ತು 'ನಿಜಾಮ ರೇಡಿಯೊ'ದೊಡನೆ ಹಾಡಿನ ಒಪ್ಪಂದ. 'ಸುನಂದಾ ಕಟ್ಟಿ' ಯವರ ಜೊತೆ ಮೊದಲ ವಿವಾಹ |
೧೯೪೬-'ಸವಾಯಿ ಗಂಧರ್ವರ ಷಷ್ಠ್ಯಬ್ಧ ಸಮಾರಂಭದ ನಿಮಿತ್ತ ಪುಣೆಯಲ್ಲಿ ಗಾಯನ. ೩ ನಿಮಿಷಗಳ ರಾಗ ಸಂಗೀತ ಕನ್ನಡ ಗೀತೆಗಳ ಧ್ವನಿಮುದ್ರಣ. |
೧೯೪೮-ಮಂಗಳೂರಿನಲ್ಲಿ ಗಾಯನ. ಶ್ರೀಧರ ಸ್ವಾಮಿಗಳಆಶೀರ್ವಾದ |
೧೯೪೮-೪೯- ಕೊಲ್ಕತ್ತಾದಲ್ಲಿ ಪ್ರಥಮಬಾರಿಗೆ ಗಾಯನ |
೧೯೪೮-೫೦-ಕನ್ನಡ ಸಂಗೀತ ನಾಟಕಗಳಲ್ಲಿ ನಾಯಕನ ಪಾತ್ರ, ಯಶಸ್ವಿ ಪ್ರಯೋಗಗಳು |
೧೯೫೧-'ವತ್ಸಲಾ ಮುಧೋಳ್ಕರ್'ರವರ ಜೊತೆ ಎರಡನೆಯ ಮದುವೆ |
Subsets and Splits
No community queries yet
The top public SQL queries from the community will appear here once available.