text
stringlengths
0
2.67k
೧೯೫೩-'ಸವಾಯಿ ಗಂಧರ್ವರ ಮೊದಲನೇ ಪುಣ್ಯ ತಿಥಿ ನಿಮಿತ್ತ ಸಂಗೀತ ಕಾರ್ಯಕರ್ಮ'
೧೯೫೪- 'ಆಕಾಶವಾಣಿ ಪ್ರಥಮ ರಾಷ್ಟ್ರೀಯ ಸಂಗೀತ ಕಾರ್ಯಕ್ರಮ'. 'ರಾಮೇಶ್ವರ ಮಂದಿರ' 'ಪುಣೆಯ ಬ್ರಹ್ಮವೃಂದದಿಂದ ಪಂಡಿತ ಬಿರುದು'.
೧೯೬೦- 'ಪ್ರಥಮ ಎಲ್.ಪಿ. ಮುದ್ರಿಕೆ'
೧೯೬೨ 'ಉಸ್ತಾದ್ ಬಡೇಗುಲಾಂ ಆಲೀಖಾನ್ ಪ್ರಶಸ್ತಿ
೧೯೬೪-ಗಾಯನಾಚಾರ್ಯ’ಅಖಿಲಭಾರತೀಯ ಪ್ರಶಸ್ತಿ. ಆಫ್ಘಾನೀಸ್ಥಾನಕ್ಕೆ ಪ್ರಥಮ ವಿದೇಶ ಯಾತ್ರೆ.ಭಾರತದ ಸಂಸ್ಕೃತಿಕ ತಂಡವಾಗದೇ ಹೋದರೂ ಅಲ್ಲಿಯ ರಾಜನ ವಿಶೇಷ ಆಮಂತ್ರಣವೂ ಇತ್ತು. ಗಂಧರ್ವ ಮಹಾವಿದ್ಯಾಲಯದಿಂದ ಪ್ರಶಸ್ತಿ.
೧೯೭೦-’ಸ್ವರ ಭಾಸ್ಕರ ಪ್ರಶಸ್ತಿ'’
೧೯೭೨-'ಶ್ರೀ.ರಾಘವೇಂದ್ರ ಸ್ವಾಮಿ ಪೀಠದಿಂದ ಸಂಗೀತ ರತ್ನ ಗೌರವ', ಭಾರತ ಸರ್ಕಾರದ 'ಪದ್ಮಶ್ರೀ' ಗೌರವಕ್ಕೆ ಭಾಜನ, ಕರ್ನಾಟಕ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪ್ರಥಮ 'ಸಂತವಾಣಿ ಕಾರ್ಯಕ್ರಮ'
೧೯೭೪ 'ಮಿಯಾತಾನ್ ಸೇನ್ ಪ್ರಶಸ್ತಿ', ಜಯಪುರದ ಗಂಧರ್ವ ಮಹಾವಿದ್ಯಾಲಯದ ’ಸಂಗೀತಾಚಾರ್ಯ ಬಿರುದು’
೧೯೭೫-'ನ್ಯಾಷನಲ್ ಫಿಲಂ ಫೆಸ್ಟಿವಲ್' ನಲ್ಲಿ 'ಸರ್ವೋತ್ತಮ ಪಾರ್ಷ್ವ ಗಾಯನ', ಮಹಾರಾಷ್ಟ್ರ ವಿಧಾನ ಪರಿಷತ್ ನಿಂದ ಸನ್ಮಾನ.
'ಶ್ರೀಕೋನಾ' ರವರಿಂದ 'ಸ್ಕೂಲ್ ಆಫ್ ಆನರ್ ಗೌರವ'
೧೯೭೬-ಶ್ರೀಮಾನ್ ಪ್ರಭಾಕರ್ ರಾವ್ ರವರಿಂದ ಸನ್ಮಾನ. ಗುಲ್ಬರ್ಗಾ ವಿದ್ಯಾಪೀಠದಿಂದ ಡಿ.ಲಿಟ್ ಪದವಿಪ್ರದಾನ.
೧೯೭೮-ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ,ಕೊಲ್ಕತ್ತದಿಂದ ದಕ್ಷಿಣ ಬಾರ್ತಾಸಂಸ್ಥೆಯಿಂದ ಗೌರವ.
೧೯೭೯-ಭಾರತ ಸರಕಾರದ ಪದ್ಮವಿಭೂಷಣ ಗೌರವ, ಕಾನ್ಪುರ ಮಹಾನಗರ ಪಾಲಿಕೆಇಂದ ಅಭಿನಂದನಾ ಪತ್ರ.
೧೯೯೦-ಮಹಾರಾಷ್ಟ್ರ ಸರಕಾರದಿಂದ ಗೌರವ ಪುರಸ್ಕಾರ'
೧೯೯೧-'ತಾನ್ಸೇನ್ ಪುರಸ್ಕಾರ'. 'ಸುನಂದಾ ಭೀಮಸೇನ್ ಜೋಷಿ' ಯವರ ನಿಧನ,
೧೯೯೨-'ದೀನಾನಾಥ್ ಮಂಗೆಶ್ಕರ್ ಪುರಸ್ಕಾರ'
೧೯೯೩-'ದೇಶಿಕೋತ್ತಮ ಪ್ರಶಸ್ತಿ'
೧೯೯೪-ಮಹಾರಾಷ್ಟ್ರದ ತಿಲಕ್ ವಿದ್ಯಾಪೀಠದಿಂದ ಡಿ.ಲಿಟ್ ಪದವಿ.
೧೯೯೬-ಪುಣೆ ಮಹಾನಗರ ಪಾಲಿಕೆಯಿಂದ ಸನ್ಮಾನ, ಪುಣ್ಯಭೂಷಣ ಪ್ರಶಸ್ತಿ
೧೯೯೭-’ಸ್ವರಾಧಿರಾಜ ಗ್ರಂಥದ ಬಿಡುಗಡೆ'
೧೯೯೯- ಭಾರತ ಸರಕಾರದಿಂದ ಪದ್ಮ ವಿಭೂಷಣ ಗೌರವ
೨೦೦೧-ಪುಣೆ ವಿಶ್ವ ವಿದ್ಯಾಲಯದಲ್ಲಿ 'ಭೀಮಸೇನ್ ಜೋಶಿ ಪೀಠ ಸ್ಥಾಪನೆ'
೨೦೦೨-ಮಹಾರಾಷ್ಟ್ರ ಸರಕಾರದ ಅತ್ಯುನ್ನತ ಪ್ರಶಸ್ತಿ ಮಹಾರಾಷ್ಟ್ರ ಭೂಷಣ ಗೌರವ, ಕೇರಳದ ಅತುನ್ನತ ಸ್ವಾತಿ ತಿರುನಾಳ ಪ್ರಶಸ್ತಿ ಪ್ರದಾನ , ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಗೌರವ ಡಿ.ಲಿಟ್ ಪ್ರಶಸ್ತಿ ಪ್ರದಾನ'. ಕರ್ನಾಟಕದ ಅತ್ಯುನ್ನತ ಪ್ರಶಸ್ತಿ,'ಕರ್ನಾಟಕ ರತ್ನ ಪ್ರದಾನ'.
೨೦೦೫ 'ವತ್ಸಲಾ ಜೋಶಿಯವರ ನಿಧನ'.
೨೦೦೭-'ಸ್ವಾಮಿ ಹರಿವಲ್ಲಭದಾಸ್ ಪುರಸ್ಕಾರ'
೨೦೦೮-ಭಾರತದ ಅತ್ಯುನ್ನತ ಪ್ರಶಸ್ತಿ ಭಾರತ ರತ್ನ ಭಾಜನರಾದರು.
೨೦೦೯-ದೆಹಲಿ ಸರಕಾರದ, 'ಜೀವನ ಗೌರವ ಪುರಸ್ಕಾರ'
೨೦೧೦-'ರಾಮ ಸೇವಾ ಮಂಡಳಿ', ಬೆಂಗಳೂರು,ಇವರಿಂದ,'ಎಸ್.ವಿ.ನಾರಾಯಣ ಸ್ವಾಮಿ ರಾವ್, ರಾಷ್ಟ್ರೀಯ ಪುರಸ್ಕಾರ'
೨೦೧೧- ಪುಣೆಯ ಆಸ್ಪತ್ರೆಯಲ್ಲಿ ನಿಧನ
ಉಲ್ಲೇಖಗಳು
ಬದಲಾಯಿಸಿ
sankalp ’ಗಾನ ಸೂರ್ಯ ಅಸ್ತಂಗತ,’ 'ಕಾವೆಂಶ್ರೀ', 'ಸುಧಾ, ೧೦, ಫೆ, ೨೦೧೧, ಪು. ೪೦
"ಆರ್ಕೈವ್ ನಕಲು". Archived from the original on 2011-01-27. Retrieved 2011-01-24.
Last edited ೫ months ago by Mahaveer Indra
ವಿಕಿಪೀಡಿಯ
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ.
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್
ವಿಕಿಪೀಡಿಯ
ವಿಕಿಪೀಡಿಯ ಅನ್ನು ಹುಡುಕಿ
[ಮರೆಮಾಡಲು]
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.
ರಾಜ್‌ಕುಮಾರ್
ಭಾರತೀಯ ಕನ್ನಡ ನಟ
ಭಾಷೆ
Download PDF
ವೀಕ್ಷಿಸಿ
ಸಂಪಾದಿಸಿ
ಡಾ. ರಾಜ್‌ಕುಮಾರ್, ಅಣ್ಣಾವ್ರು ಎಂದೇ ಖ್ಯಾತರಾದ ಕನ್ನಡ ಚಲನಚಿತ್ರರಂಗ ಮತ್ತು ರಂಗಭೂಮಿಯ ಮೇರುನಟ. ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು. ನಟನೆ, ಗಾಯನ ಮತ್ತು ಚಿತ್ರ ನಿರ್ಮಾಣದ ಮೂಲಕ. ವರನಟ,ನಟಸಾರ್ವಭೌಮ ಮೊದಲಾದ ಬಿರುದುಗಳು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದ ಮೊದಲ ನಟ ಇವರು.[೭][೮] ಭಾರತೀಯ ಚಿತ್ರರಂಗ ನೂರು ವರ್ಷ ಪೂರೈಸಿದ ಸಂದರ್ಭದಲ್ಲಿ ಫೋರ್ಬ್ಸ್ ಪತ್ರಿಕೆಯು ಪ್ರಕಟಿಸಿರುವ 25 ಅತ್ಯದ್ಭುತ ನಟನೆಗಳ ಪಟ್ಟಿಯಲ್ಲಿ ಡಾ. ರಾಜ್ ಕುಮಾರ್ ಅವರ ಬಂಗಾರದ ಮನುಷ್ಯ ಚಿತ್ರದ ನಟನೆಯೂ ಒಂದಾಗಿದೆ.[೯]
ಇದೊಂದು ವಿಶೇಷ ಲೇಖನ
ರಾಜ್‌ಕುಮಾರ್
ಜನನ
ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜು
೨೪ ಏಪ್ರಿಲ್, ೧೯೨೯
ಗಾಜನೂರು, ಮೈಸೂರು ಸಂಸ್ಥಾನ,[೧][೨][೩] ಬ್ರಿಟಿಷ್ ಭಾರತ
ಮರಣ
12 ಏಪ್ರಿಲ್ 2006 (ವಯಸ್ಸು - 76)
ಬೆಂಗಳೂರು, ಕರ್ನಾಟಕ, ಭಾರತ
Monuments
ಕಂಠೀರವ ಸ್ಟುಡಿಯೋಸ್[೪]
ಇತರೆ ಹೆಸರು
ರಾಜ್‌ಕುಮಾರ್, ಅಣ್ಣಾವ್ರು
ವೃತ್ತಿ(ಗಳು)
ನಟ, ಗಾಯಕ
Years active
1954–2005
Title
ನಟಸಾರ್ವಭೌಮ, ಕರ್ನಾಟಕ ರತ್ನ, ವರನಟ,ಅಣ್ಣಾವ್ರು
Movement
ಗೋಕಾಕ್ ಚಳುವಳಿ[೫]
ಸಂಗಾತಿ
ಪಾರ್ವತಮ್ಮ ರಾಜ್‌ಕುಮಾರ್
ಮಕ್ಕಳು
ಶಿವರಾಜ್‍ಕುಮಾರ್
ಪುನೀತ್ ರಾಜ್‍ಕುಮಾರ್
ರಾಘವೇಂದ್ರ ರಾಜ್‍ಕುಮಾರ್
ಪೂರ್ಣಿಮ
ಲಕ್ಷ್ಮಿ[೬]
ಪರಿವಿಡಿ
ಜೀವನ
ಬದಲಾಯಿಸಿ
ನಟಸಾರ್ವಭೌಮ ಡಾ. ರಾಜ್‌ಕುಮಾರ್ (ಜನನ: ಏಪ್ರಿಲ್ ೨೪, ೧೯೨೯ - ಮರಣ: ಏಪ್ರಿಲ್ ೧೨, ೨೦೦೬) ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾದ ಪ್ರಸಿದ್ಧ ನಟ, ಗಾಯಕ. ೧೯೫೪-೨೦೦೫ರವರೆಗೆ ೫ ದಶಕದಗಳ ಚಿತ್ರರಂಗದ ಬದುಕಿನಲ್ಲಿ, ೨೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ ಹೆಗ್ಗಳಿಕೆ ಡಾ. ರಾಜ್ ರದ್ದು.
ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ. ನಟಸಾರ್ವಭೌಮ ಬಿರುದು, ೧೯೭೩ರಲ್ಲಿಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದಿದ್ದಾರೆ. ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿ ಮತ್ತು ಚಿತ್ರರಂಗದಲ್ಲಿನ ಜೀವಮಾನದ ಸಾಧನೆ ಗಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳು ಸಹ ಲಭಿಸಿವೆ.
ಕರ್ನಾಟಕ ಸರ್ಕಾರದಿಂದ ಕರ್ನಾಟಕ ರತ್ನ ಪಡೆದ ಎರಡನೆಯ ವ್ಯಕ್ತಿ ೨೦೦೦ನೇ ವರ್ಷದಲ್ಲಿ ಕುಖ್ಯಾತ ದಂತಚೋರ ವೀರಪ್ಪನ್‌ನಿಂದ ಅಪಹರಣವಾಗಿದ್ದ ರಾಜ್‌ಕುಮಾರ್, ೧೦೮ ದಿನಗಳ ನಂತರ ಬಿಡುಗಡೆಯಾಗಿದ್ದರು. ೨೦೦೬ ಏಪ್ರಿಲ್ ೧೨ರಂದು ಬೆಂಗಳೂರಿನಲ್ಲಿ, ಹೃದಯಾಘಾತದಿಂದ ಮರಣ ಹೊಂದಿದರು.
ಹಿನ್ನೆಲೆ
ಬದಲಾಯಿಸಿ
ಡಾ. ರಾಜ್‌ಕುಮಾರ್
ಕನ್ನಡ ರಂಗಭೂಮಿಯ ಹೆಸರಾಂತ ಪ್ರತಿಭೆ ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮತ್ತು ಲಕ್ಷ್ಮಮ್ಮ ದಂಪತಿಗಳ ಹಿರಿಯ ಮಗನಾಗಿ, ಚಾಮರಾಜನಗರ ಜಿಲ್ಲೆಯ ಗಡಿಭಾಗದಲ್ಲಿರುವ ದೊಡ್ಡ ಗಾಜನೂರಿನಲ್ಲಿ ೧೯೨೯ರ ಏಪ್ರಿಲ್ ೨೪ರಂದು ರಾಜ್‌ಕುಮಾರ್ ಹುಟ್ಟಿದರು. ನಾಮಕರಣಗೊಂಡ ಹೆಸರು ಮುತ್ತುರಾಜು(ಮುತ್ತಣ್ಣ).
ಡಾ. ರಾಜ್ ಅವರಿಗೆ ವರದರಾಜ್ ಎಂಬ ಸಹೋದರರೂ, ಶಾರದಮ್ಮ ಎಂಬ ತಂಗಿಯೂ ಇದ್ದರು. ೧೯೫೩ ಜೂನ್ ೨೫ರಂದು ಪಾರ್ವತಿಯವರೊಡನೆ ಲಗ್ನವಾಯಿತು. ಪಾರ್ವತಿಯವರು ಮುಂದೆ ಪಾರ್ವತಮ್ಮ ರಾಜ್‌ಕುಮಾರ್ ಎಂದೇ ಕನ್ನಡದ ಜನತೆಗೆ ಚಿರ ಪರಿಚಿತರಾಗಿ ಕನ್ನಡ ಚಿತ್ರರಂಗದ ಪ್ರಮುಖ ಚಿತ್ರ ನಿರ್ಮಾಪಕರಲ್ಲೊಬ್ಬರಾದರು. ವಜ್ರೇಶ್ವರಿ ಸಂಸ್ಥೆಯ ಅಡಿಯಲ್ಲಿ ಹಲವಾರು ಕನ್ನಡ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಡಾ. ರಾಜ್ ದಂಪತಿಗಳಿಗೆ ೫ ಜನ ಮಕ್ಕಳು. ಮೂರು ಜನ ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು. ಗಂಡು ಮಕ್ಕಳಾದ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಕನ್ನಡ ಚಿತ್ರರಂಗದ ನಾಯಕ ನಟರು. ಹೆಣ್ಣು ಮಕ್ಕಳು ಪೂರ್ಣಿಮಾ ಹಾಗು ಲಕ್ಷ್ಮಿ. ಹಿರಿಯ ಅಳಿಯ ಪಾರ್ವತಮ್ಮನವರ ತಮ್ಮನಾದ ಗೋವಿಂದರಾಜು ಹಾಗು ಕಿರಿಯ ಅಳಿಯ ಚಿತ್ರನಟ ರಾಮ್‌ಕುಮಾರ್. ಒಟ್ಟು ಹನ್ನೆರಡು ಮೊಮ್ಮಕ್ಕಳಿದ್ದು, ಶಿವರಾಜ್‌ಕುಮಾರ್ ಪುತ್ರಿಯಾದ ನಿವೇದಿತಾ, ಅಂಡಮಾನ್ ಮುಂತಾದ ಕೆಲವು ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದ್ದಾಳೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಡಾ. ರಾಜ್ ಅವರ ಬೀಗರು. ಬಂಗಾರಪ್ಪನವರ ಪುತ್ರಿಯಾದ ಗೀತಾ, ಶಿವರಾಜ್‌ಕುಮಾರ್ ಅವರ ಪತ್ನಿ.
ಅಪಹರಣ
ಬದಲಾಯಿಸಿ
೩೦ ಜುಲೈ ೨೦೦೦ರಂದು, ಕುಖ್ಯಾತ ದಂತಚೋರ, ನರಹಂತಕ ವೀರಪ್ಪನ್‌ನಿಂದ ಡಾ. ರಾಜ್ ಅವರು ಗಾಜನೂರಿನಲ್ಲಿರುವ ತಮ್ಮ ತೋಟದ ಮನೆಯಿಂದ ಅಪಹರಣವಾದರು. ಡಾ. ರಾಜ್ ಅವರೊಂದಿಗೆ ಅವರ ಅಳಿಯ ಗೋವಿಂದರಾಜು ಮತ್ತು ನಾಗಪ್ಪ ಮಾರಡಗಿ ಅವರೂ ಕೂಡ ಅಪಹರಣಕ್ಕೊಳಗಾದರು.
ಅಪಹರಣದ ನಂತರದ ದಿನಗಳಲ್ಲಿ, ಕ್ಯಾಸೆಟ್ಟುಗಳ ಮೂಲಕ, ಪತ್ರಗಳ ಮೂಲಕ ಕರ್ನಾಟಕ ಹಾಗು ತಮಿಳುನಾಡು ಸರ್ಕಾರಗಳನ್ನು ಸಂಪರ್ಕಿಸುತ್ತಿದ್ದ ವೀರಪ್ಪನ್ ಡಾ. ರಾಜ್ ಅವರನ್ನು ಒತ್ತೆಯಾಳಗಿಟ್ಟುಕೊಂಡು, ಹಲವಾರು ಬೇಡಿಕೆಗಳನ್ನು ಮುಂದಿಟ್ಟಿದ್ದನು. ನೂರೆಂಟು ದಿನಗಳ ಕಾಲ ಅಪಹೃತರಾಗಿ, ಅರಣ್ಯವಾಸ ಅನುಭವಿಸಿದ್ದ ಡಾ. ರಾಜ್, ೧೫ ನವೆಂಬರ್ ೨೦೦೦ರಂದು ಬಿಡುಗಡೆಗೊಂಡರು.
ಅಪಹರಣದ ಅವಧಿಯಲ್ಲಿ ಕರ್ನಾಟಕದ ಪೋಲಿಸ್ ಮಹಾನಿರ್ದೇಶಕರಾದ(ಡಿಜಿಪಿ) ಪಿ. ದಿನಕರ್ ಅವರು ಅಪಹರಣದ ಬಗ್ಗೆ "Veerappan's Prize Catch: Dr.Rajkumar" ಎಂಬ ಪುಸ್ತಕವನ್ನು ಬರೆದಿದ್ದಾರೆ. ಆ ಪುಸ್ತಕವನ್ನು ರವಿ ಬೆಳಗೆರೆ ಯವರು "ರಾಜ ರಹಸ್ಯ" ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ.
ನಿಧನ
ಬದಲಾಯಿಸಿ